For Quick Alerts
ALLOW NOTIFICATIONS  
For Daily Alerts

EXPLAINER: NPS ಕಾರ್ಪೊರೇಟ್ ಬಾಂಡ್ ಫಂಡ್ಸ್ ಮತ್ತು 5 ವರ್ಷದ ರಿಟರ್ನ್ಸ್

|

ರಾಷ್ಟ್ರೀಯ ಪಿಂಚಣಿ ಯೋಜನೆ (The National Pension System -NPS)ಯಡಿ ಅರ್ಹ ಚಂದಾದಾರರು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (Central Record Keeping Agency -CRA) ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವಾಗ, ಪೆನ್ಷನ್ ಫಂಡ್ ಮ್ಯಾನೇಜರ್ ಹಾಗೂ ಸ್ಕೀಮ್ ಆಪ್ಷನ್ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಎರಡು ಹೂಡಿಕೆಯ ಆಯ್ಕೆಗಳು (ಆಟೊ ಆಯ್ಕೆ ಅಥವಾ ಆ್ಯಕ್ಟಿವ್ ಆಯ್ಕೆ), ಮತ್ತು ನಾಲ್ಕು ಅಸೆಟ್ ವರ್ಗಗಳು (ಇಕ್ವಿಟಿ, ಕಾರ್ಪೊರೇಟ್ ಡೆಬ್ಟ್, ಸರ್ಕಾರಿ ಬಾಂಡ್‌ಗಳು, ಮತ್ತು ಪರ್ಯಾಯ ಹೂಡಿಕೆ ಫಂಡ್‌ಗಳು) ಹೀಗೆ ಎನ್‌ಪಿಎಸ್‌ನಲ್ಲಿ ಹಲವಾರು ಫಂಡ್ ಮ್ಯಾನೇಜರ್ ಆಯ್ಕೆಗಳಿವೆ.

ಚಂದಾದಾರನೊಬ್ಬ ಆರಂಭದಲ್ಲಿ ಫಂಡ್ ಮ್ಯಾನೇಜರ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ಹೂಡಿಕೆಯ ಯಾವುದೇ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಳೆದೊಂದು ವರ್ಷದಿಂದ NPS ಸ್ಕೀಮ್ C ಅಥವಾ ಕಾರ್ಪೊರೇಟ್ ಡೆಬ್ಟ್ ಫಂಡ್ ನಿಯಮಿತವಾಗಿ ಭಾರಿ ರಿಟರ್ನ್ಸ್ ನೀಡಿದೆ ಹಾಗೂ ಕಳೆದ ಮೂರು ವರ್ಷಗಳ ಬೆಂಚ್ಮಾರ್ಕ್ ಅನ್ನು ಮೀರಿಸಿದೆ. NPS ಸ್ಕೀಮ್ Tier-I ಮತ್ತು NPS ಸ್ಕೀಮ್ Tier-II ಗಳ ರಿಟರ್ನ್ಸ್ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

NPS ಸ್ಕೀಮ್ C Tier-1 ರಿಟರ್ನ್ಸ್

NPS ಸ್ಕೀಮ್ C Tier-1 ರಿಟರ್ನ್ಸ್

NPS ಟ್ರಸ್ಟ್ ಪ್ರಕಾರ, NPS ಸ್ಕೀಮ್ C Tier-1 ನಲ್ಲಿ ಎಚ್‌ಡಿಎಫ್‌ಸಿ ಪೆನ್ಷನ್ ಫಂಡ್ ಅತಿಹೆಚ್ಚು ರಿಟರ್ನ್ಸ್ ನೀಡಿದೆ. ಅಕ್ಟೋಬರ್ 15, 2021ರಲ್ಲಿದ್ದಂತೆ ಈ ಫಂಡ್ ವರ್ಷಕ್ಕೆ ಶೇ 7.06, ಮೂರು ವರ್ಷಕ್ಕೆ ಶೇಕಡಾ 11.53 ಮತ್ತು ಐದು ವರ್ಷಕ್ಕೆ ಶೇಕಡಾ 8.78 ರಷ್ಟು ರಿಟರ್ನ್ಸ್ ನೀಡಿದೆ.

(ಕೆಳಗೆ ನೀಡಲಾದ ಅಂಕಿ-ಅಂಶಗಳನ್ನು -- ಪೆನ್ಷನ್ ಫಂಡ್, AUM (ಕೋಟಿ ರೂ.ಗಳಲ್ಲಿ), ಚಂದಾದಾರರು, NAV, ರಿಟರ್ನ್ಸ್ 1 ವರ್ಷಕ್ಕೆ, ರಿಟರ್ನ್ಸ್ 3 ವರ್ಷಕ್ಕೆ, ರಿಟರ್ನ್ಸ್ 5 ವರ್ಷಕ್ಕೆ -- ಈ ಕ್ರಮದಲ್ಲಿ ಓದಿಕೊಳ್ಳುವುದು.)

 

NPS ಸ್ಕೀಮ್ C Tier-1 ರಿಟರ್ನ್ಸ್
ಪೆನ್ಷನ್ ಫಂಡ್AUM (ಕೋಟಿ ರೂ.ಗಳಲ್ಲಿ)ಚಂದಾದಾರರುNAVರಿಟರ್ನ್ಸ್ 1 ವರ್ಷಕ್ಕೆರಿಟರ್ನ್ಸ್ 3 ವರ್ಷಕ್ಕೆರಿಟರ್ನ್ಸ್ 5 ವರ್ಷಕ್ಕೆ
ಆದಿತ್ಯ ಬಿರ್ಲಾ ಸನ್ ಲೈಫ್ ಪೆನ್ಷನ್ ಮ್ಯಾನೇಜ್‌ಮೆಂಟ್ ಲಿಮಿಟೆಡ್97.5320,65214.56926.38%10.88%NA
ಎಚ್‌ಡಿಎಫ್‌ಸಿ ಪೆನ್ಷನ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್4332.138,78,00122.37737.06%11.53%8.78%
ಐಸಿಐಸಿಐ ಪ್ರುಡೆನ್ಷಿಯಲ್ ಪೆನ್ಷನ್ ಫಂಡ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್2005.523,86,36234.00746.66%10.86%8.53%
ಕೋಟಕ್ ಮಹೀಂದ್ರಾ ಪೆನ್ಷನ್ ಫಂಡ್ ಲಿಮಿಟೆಡ್364.6853,98932.73626.43%10.04%7.75%
ಎಲ್ಐಸಿ ಪೆನ್ಷನ್ ಫಂಡ್ ಲಿಮಿಟೆಡ್1071.542,42,88322.09236.37%11.31%8.42%
ಎಸ್‌ಬಿಐ ಪೆನ್ಷನ್ ಫಂಡ್ಸ್ ಪ್ರೈ. ಲಿಮಿಟೆಡ್3946.618,94,26334.16536.49%11.08%8.53%
ಯುಟಿಐ ರಿಟೈರ್‌ಮೆಂಟ್ ಸಲ್ಯುಶನ್ಸ್ ಲಿಮಿಟೆಡ್540.2494,78530.32495.94%10.63%8.10%
15-10-2021 ರಲ್ಲಿದ್ದಂತೆ ಬೆಂಚ್ ಮಾರ್ಕ್ ರಿಟರ್ನ್ಸ್‌----------7.66%12.07%8.75%

 

NPS ಸ್ಕೀಮ್ C Tier-II ರಿಟರ್ನ್ಸ್

NPS ಸ್ಕೀಮ್ C Tier-II ರಿಟರ್ನ್ಸ್

NPS ಸ್ಕೀಮ್ C Tier-II ನಲ್ಲಿ ಎಲ್‌ಐಸಿ ಪೆನ್ಷನ್ ಫಂಡ್ ಲಿಮಿಟೆಡ್ ಕಳೆದ ವರ್ಷದಲ್ಲಿ ಅತಿ ಹೆಚ್ಚು ಅಂದರೆ ಶೇ 10.05 ರಷ್ಟು ರಿಟರ್ನ್ಸ್ ನೀಡಿದೆ. ಇದು ಮೂರು ವರ್ಷಕ್ಕೆ ಶೇ 11.99 ರಷ್ಟು ರಿಟರ್ನ್ಸ್ ನೀಡಿದೆ. NPS ಸ್ಕೀಮ್ C Tier-II ನಲ್ಲಿ ಬೆಂಚ್ ಮಾರ್ಕ್ ರಿಟರ್ನ್‌ಗಳು ಕಳೆದ ವರ್ಷ ಶೇ 7.66, ಕಳೆದ ಮೂರು ವರ್ಷಗಳಲ್ಲಿ ಶೇ 12.07 ಮತ್ತು ಕಳೆದ ಐದು ವರ್ಷಗಳಲ್ಲಿ ಶೇ 8.75 ರಷ್ಟು ರಿಟರ್ನ್ಸ್ ನೀಡಿವೆ.

(ಕೆಳಗೆ ನೀಡಲಾದ ಅಂಕಿ-ಅಂಶಗಳನ್ನು -- ಪೆನ್ಷನ್ ಫಂಡ್, AUM (ಕೋಟಿ ರೂ.ಗಳಲ್ಲಿ), ಚಂದಾದಾರರು, NAV, ರಿಟರ್ನ್ಸ್ 1 ವರ್ಷಕ್ಕೆ, ರಿಟರ್ನ್ಸ್ 3 ವರ್ಷಕ್ಕೆ, ರಿಟರ್ನ್ಸ್ 5 ವರ್ಷಕ್ಕೆ -- ಈ ಕ್ರಮದಲ್ಲಿ ಓದಿಕೊಳ್ಳುವುದು.)

NPS ಸ್ಕೀಮ್ C Tier-II ರಿಟರ್ನ್ಸ್
ಪೆನ್ಷನ್ ಫಂಡ್AUM (ಕೋಟಿ ರೂ.ಗಳಲ್ಲಿ)ಚಂದಾದಾರರುNAVರಿಟರ್ನ್ಸ್ 1 ವರ್ಷಕ್ಕೆರಿಟರ್ನ್ಸ್ 3 ವರ್ಷಕ್ಕೆರಿಟರ್ನ್ಸ್ 5 ವರ್ಷಕ್ಕೆ
ಆದಿತ್ಯ ಬಿರ್ಲಾ ಸನ್ ಲೈಫ್ ಪೆನ್ಷನ್ ಮ್ಯಾನೇಜ್‌ಮೆಂಟ್ ಲಿಮಿಟೆಡ್8.077,40514.56926.38%10.88%NA
ಎಚ್‌ಡಿಎಫ್‌ಸಿ ಪೆನ್ಷನ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್244.61,31,17120.98096.53%11.21%8.69%
ಐಸಿಐಸಿಐ ಪ್ರುಡೆನ್ಷಿಯಲ್ ಪೆನ್ಷನ್ ಫಂಡ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್119.8357,47031.52196.40%10.71%8.42%
ಕೋಟಕ್ ಮಹೀಂದ್ರಾ ಪೆನ್ಷನ್ ಫಂಡ್ ಲಿಮಿಟೆಡ್26.7416,05728.63595.99%10.61%8.10%
ಎಲ್ಐಸಿ ಪೆನ್ಷನ್ ಫಂಡ್ ಲಿಮಿಟೆಡ್52.0442,32621.009410.05%11.99%8.64%
ಎಸ್‌ಬಿಐ ಪೆನ್ಷನ್ ಫಂಡ್ಸ್ ಪ್ರೈ. ಲಿಮಿಟೆಡ್171.331,33,01630.83645.97%10.60%8.23%
ಯುಟಿಐ ರಿಟೈರಮೆಂಟ್ ಸಲ್ಯುಶನ್ಸ್ ಲಿಮಿಟೆಡ್27.8818,78629.00715.75%10.53%8.12%
15-10-2021 ರಲ್ಲಿದ್ದಂತೆ ಬೆಂಚ್ ಮಾರ್ಕ್ ರಿಟರ್ನ್ಸ್----------7.66%12.07%8.75%

 

NPS ಪೆನ್ಷನ್ ಫಂಡ್ ಮ್ಯಾನೇಜರ್‌ಗಳ ಪಟ್ಟಿ

NPS ಪೆನ್ಷನ್ ಫಂಡ್ ಮ್ಯಾನೇಜರ್‌ಗಳ ಪಟ್ಟಿ

ಚಂದಾದಾರರು NPS ನಲ್ಲಿ ಲಭ್ಯವಿರುವ ಫಂಡ್ ಮ್ಯಾನೇಜರ್‌ಗಳ ಪೈಕಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಫಂಡ್ ಮ್ಯಾನೇಜರ್‌ಗಳ ಪಟ್ಟಿ ಹೀಗಿದೆ:

1. ಬಿರ್ಲಾ ಸನ್ ಲೈಫ್ ಪೆನ್ಶನ್ ಮ್ಯಾನೇಜ್‌ಮೆಂಟ್ ಲಿಮಿಟೆಡ್

2. ಎಚ್‌ಡಿಎಫ್‌ಸಿ ಪೆನ್ಷನ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್

3. ಐಸಿಐಸಿಐ ಪ್ರುಡೆನ್ಶಿಯಲ್ ಪೆನ್ಷನ್ ಫಂಡ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್

4. ಕೋಟಕ್ ಮಹೀಂದ್ರಾ ಪೆನ್ಶನ್ ಫಂಡ್ ಲಿಮಿಟೆಡ್

5. ಎಲ್ಐಸಿ ಪೆನ್ಶನ್ ಫಂಡ್ ಲಿಮಿಟೆಡ್

6. ರಿಲಯನ್ಸ್ ಕ್ಯಾಪಿಟಲ್ ಪೆನ್ಶನ್ ಫಂಡ್ ಲಿಮಿಟೆಡ್

7. ಎಸ್‌ಬಿಐ ಪೆನ್ಷನ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್

8. ಯುಟಿಐ ರಿಟೈರಮೆಂಟ್ ಸೊಲ್ಯುಶನ್ಸ್ ಲಿಮಿಟೆಡ್

 

NPS ನಲ್ಲಿ ಲಭ್ಯವಿರುವ ಹೂಡಿಕೆ ಆಯ್ಕೆಗಳು

NPS ನಲ್ಲಿ ಲಭ್ಯವಿರುವ ಹೂಡಿಕೆ ಆಯ್ಕೆಗಳು

NPS ನಲ್ಲಿ ಆ್ಯಕ್ಟಿವ್ ಆಯ್ಕೆ ಮತ್ತು ಆಟೊ ಆಯ್ಕೆ ಹೀಗೆ ಎರಡು ಬಗೆಯ ಹೂಡಿಕೆ ಆಯ್ಕೆಗಳಿವೆ. ಆ್ಯಕ್ಟಿವ್ ಆಯ್ಕೆಯಲ್ಲಿ ಚಂದಾದಾರನೊಬ್ಬನು ತನ್ನ ಹಣವನ್ನು ಯಾವ ರೀತಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಆತನೇ ಫಂಡ್ ಮ್ಯಾನೇಜರ್, ಅಸೆಟ್ ವರ್ಗ ಹಾಗೂ ಪ್ರತಿಯೊಂದು ಫಂಡ್ ಮ್ಯಾನೇಜರ್ ನಲ್ಲಿ ಎಷ್ಟು ಪ್ರತಿಶತ ಹೂಡಿಕೆ ಮಾಡಬೇಕು ಎಂಬುದನ್ನು ಸೂಚಿಸಬೇಕಾಗುತ್ತದೆ. ಚಂದಾದಾರನು ನಾಲ್ಕು ಅಸೆಟ್ ವರ್ಗ (ಇಕ್ವಿಟಿ, ಕಾರ್ಪೊರೇಟ್ ಡೆಬ್ಟ್, ಸರ್ಕಾರಿ ಬಾಂಡ್‌ಗಳು, ಮತ್ತು ಪರ್ಯಾಯ ಹೂಡಿಕೆ ಫಂಡ್‌ಗಳು)ಗಳಿಗೆ ಹೂಡಿಕೆ ಪ್ರಮಾಣವನ್ನು ಒಂದೇ ಫಂಡ್ ಮ್ಯಾನೇಜರ್ ಅಡಿಯಲ್ಲಿ ಸೂಚಿಸಬೇಕಾಗುತ್ತದೆ. ನಾಲ್ಕು ಅಸೆಟ್ ವರ್ಗಗಳು ಈ ರೀತಿಯಾಗಿವೆ:

- ಅಸೆಟ್ ವರ್ಗ E : ಇಕ್ವಿಟಿ ಮತ್ತು ಅದಕ್ಕೆ ಸಂಬಂಧಿಸಿದ ಇನ್ಸಟ್ರುಮೆಂಟ್ಸ್

- ಅಸೆಟ್ ವರ್ಗ C : ಕಾರ್ಪೊರೇಟ್ ಡೆಬ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಇನ್ಸ್‌ಟ್ರುಮೆಂಟ್ಸ್

- ಅಸೆಟ್ ವರ್ಗ G : ಸರ್ಕಾರಿ ಬಾಂಡುಗಳು ಮತ್ತು ಅದಕ್ಕೆ ಸಂಬಂಧಿಸಿದ ಇನ್ಸ್‌ಟ್ರುಮೆಂಟ್ಸ್

- ಅಸೆಟ್ ವರ್ಗ A : ಪರ್ಯಾಯ ಹೂಡಿಕೆ ಫಂಡ್ಗಳು, CMBS, MBS, REITS, AIFs, Invlts, ಇತ್ಯಾದಿಗಳನ್ನು ಸೇರಿ.


ಆಟೊ ಆಯ್ಕೆ ಅಡಿಯಲ್ಲಿ ಹೂಡಿಕೆಗಳನ್ನು ಲೈಫ್ ಸೈಕಲ್ ಫಂಡ್‌ಗಳಲ್ಲಿ ಠೇವಣಿ ಮಾಡಲಾಗುತ್ತದೆ. ಪೂರ್ವನಿರ್ಧರಿತ ಯೋಜನೆಯಂತೆ ಮೂರು ಅಸೆಟ್ ವರ್ಗಗಳಲ್ಲಿ ಹೂಡಿಕೆ ಮಾಡುವ ಹಣದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇದು ಚಂದಾದಾರನೊಬ್ಬನ ವಯಸ್ಸಿಗೆ ತಕ್ಕಂತೆ ಹೆಚ್ಚು ಕಡಿಮೆಯಾಗುತ್ತದೆ. ಚಂದಾದಾರರು ತಮಗೆ ವಯಸ್ಸಾದಂತೆ ಹೂಡಿಕೆಗಳಿಗೆ ಆಟೊಮ್ಯಾಟಿಕ್ ಆಗಿ ರಿಸ್ಕ್ ಕಡಿಮೆಯಾಗಬೇಕೆಂದು ಬಯಸುವವರು ಆಟೊ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಚಂದಾದಾರನೊಬ್ಬನ ಇಕ್ವಿಟಿ ಮತ್ತು ಕಾರ್ಪೊರೇಟ್ ಡೆಬ್ಟ್ ಹೂಡಿಕೆಗಳು ಆತನಿಗೆ ವಯಸ್ಸಾದಂತೆ ಕಡಿಮೆಯಾಗುತ್ತ ಬರುತ್ತವೆ. ಆಟೊ ಆಯ್ಕೆಯಲ್ಲಿ ಮೂರು ವಿಶಿಷ್ಟ ರಿಸ್ಕ್ ಹೂಡಿಕೆಗಳಿವೆ. ಅವು: ತೀವ್ರ, ಮಧ್ಯಮ ಹಾಗೂ ಸೌಮ್ಯ (Aggressive, Moderate, and Conservative).

English summary

All You Need To Know About NPS Corporate Bond Funds & Its 5 Year Returns

Description: NPS Corporate Bond Funds & Its 5 Year Returns. Here is a detailed description in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X