For Quick Alerts
ALLOW NOTIFICATIONS  
For Daily Alerts

ಎನ್ಪಿಎಸ್ ನಲ್ಲಿ ಗ್ರಾಚ್ಯುಟಿ ಪಾವತಿಗೆ ನಿಯಮಗಳೇನಿವೆ? ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು...

|

ಕೇಂದ್ರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ (The Department of Pension and Pensioners' Welfare -DoPPW) ಅಡಿಯಲ್ಲಿ ಕಾರ್ಯನಿರ್ವಹಿಸುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಕೇಂದ್ರ ನಾಗರಿಕ ಸೇವೆಗಳ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಗ್ರಾಚ್ಯುಟಿ ಪಾವತಿ) ನಿಯಮಗಳು, 2021 ನಿಯಮಾವಳಿಯನ್ನು ಜಾರಿ ಮಾಡಿದೆ.

 

2021ರ ಹೊಸ ನಿಯಮಾವಳಿ ಯಾರಿಗೆಲ್ಲ ಅನ್ವಯ?

 

ಈ ನಿಯಮಾವಳಿಯು ಸರಕಾರಿ ನೌಕರರು ಸೇರಿದಂತೆ 2004 ರ ಜನವರಿ 1 ನೇ ತಾರೀಖಿನ ನಂತರ ಭಾರತ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡಿರುವ ರಕ್ಷಣಾ ಸೇವೆಗಳಲ್ಲಿನ ನಾಗರಿಕ ಸೇವೆ ಸರ್ಕಾರಿ ನೌಕರರಿಗೆ ಮತ್ತು 'ಕೇಂದ್ರ ನಾಗರಿಕ ಸೇವೆಗಳು ( ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನುಷ್ಠಾನ) ನಿಯಮಗಳು, 2021' ಯಾರಿಗೆ ಅನ್ವಯವಾಗುತ್ತದೆಯೋ ಅವರಿಗೂ ಈ ನಿಯಮಗಳು ಅನ್ವಯಿಸುತ್ತವೆ.

ಸರ್ಕಾರಿ ನೌಕರನು ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದರೆ, ಅಂಗವೈಕಲ್ಯದಿಂದ ನೌಕರಿಯಿಂದ ಹೊರಗುಳಿಯುವಂತಾದರೆ ಅಥವಾ ಅಮಾನ್ಯತೆಯ ಕಾರಣದಿಂದ ನಿವೃತ್ತಿಯಾದರೆ ಅಂಥವರಿಗೆ ಕೇಂದ್ರ ನಾಗರಿಕ ಸೇವೆಗಳ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನುಷ್ಠಾನ) ನಿಯಮಗಳು, 2021 ರ ಪ್ರಕಾರ ಗ್ರಾಚ್ಯುಟಿ ಪಾವತಿ ಮಾಡಲಾಗುವುದು.

ಎನ್ಪಿಎಸ್ ನಲ್ಲಿ ಗ್ರಾಚ್ಯುಟಿ ಪಾವತಿಯ ನಿಯಮಗಳು

ಅಲ್ಲದೆ, ಕೇಂದ್ರ ನಾಗರಿಕ ಸೇವೆಗಳ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನುಷ್ಠಾನ) ನಿಯಮಗಳು, 2021 ರ ನಿಯಮ 10 ರ ಅಡಿಯಲ್ಲಿ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972ರ ಪ್ರಯೋಜನಗಳ ಆಯ್ಕೆ ಬಳಸಿಕೊಂಡಿರುವವರು ಅಥವಾ ಕೇಂದ್ರ ನಾಗರಿಕ ಸೇವೆಗಳ (ಅಸಾಧಾರಣ ಪಿಂಚಣಿ) ನಿಯಮಗಳು, 1939 ರ ಅಡಿಯಲ್ಲಿ ಪ್ರಯೋಜನಗಳ ಆಯ್ಕೆಯನ್ನು ಬಳಸಿಕೊಂಡಿರುವವರಿಗೂ ಕೇಂದ್ರ ನಾಗರಿಕ ಸೇವೆಗಳ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನುಷ್ಠಾನ) ನಿಯಮಗಳು, 2021 ರ ಪ್ರಕಾರ ಗ್ರಾಚ್ಯುಟಿ ಪಾವತಿ ಮಾಡಲಾಗುವುದು.

ನೌಕರನ ಮರಣದ ದಿನಾಂಕವೂ ಕೆಲಸದ ದಿನವಾಗಿರುತ್ತದೆ

ಸರ್ಕಾರಿ ನೌಕರನೊಬ್ಬ ನಿವೃತ್ತನಾದಾಗ ಅಥವಾ ಸೇವೆಯಿಂದ ಡಿಸ್ಚಾರ್ಜ್ ಆದಾಗ ಅಥವಾ ಸೇವೆಗೆ ರಾಜೀನಾಮೆ ಸಲ್ಲಿಸಲು ಅನುಮತಿ ಪಡೆದಾಗ ಅಥವಾ ಮರಣಹೊಂದಿದಾಗ ಹೀಗೆ ಯಾವುದೇ ಕಾರಣಗಳಿದ್ದಾಗ ಆಯಾ ಸಮಯದಲ್ಲಿ ಜಾರಿಯಲ್ಲಿರುವ ಈ ನಿಯಮ ನಿಬಂಧನೆಗಳಿಗೆ ಅನುಸಾರವಾಗಿ ಯಾವುದೇ ಗ್ರಾಚ್ಯುಟಿ ಕ್ಲೈಮ್ ಅನ್ನು ನಿಯಂತ್ರಿಸಲಾಗುತ್ತದೆ. ಸರ್ಕಾರಿ ನೌಕರನು ನಿವೃತ್ತನಾಗುವ ದಿನದಂದು ಅಥವಾ ನಿವೃತ್ತನಾದಾಗ ಅಥವಾ ಸೇವೆಯಿಂದ ರಾಜೀನಾಮೆ ನೀಡಲು ಅನುಮತಿಸಿದ ದಿನವನ್ನು ಅವರ ಕೊನೆಯ ಕೆಲಸದ ದಿನವೆಂದು ಪರಿಗಣಿಸಲಾಗುತ್ತದೆ ಮತ್ತು ಸರ್ಕಾರಿ ನೌಕರನ ಸಾವಿನ ದಿನಾಂಕದ ದಿನವನ್ನು ಸಹ ಒಂದು ಕೆಲಸದ ದಿನವೆಂದು ಪರಿಗಣಿಸಲಾಗುತ್ತದೆ.

ಈ ನಿಯಮಗಳ ಅಡಿಯಲ್ಲಿ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತವನ್ನು ನಿರ್ಧರಿಸುವ ಉದ್ದೇಶಕ್ಕಾಗಿ, ಸರ್ಕಾರಿ ನೌಕರನು ತನ್ನ ನಿವೃತ್ತಿಗೆ ಮುಂಚಿತವಾಗಿ ಅಥವಾ ಆತ ಮರಣ ಹೊಂದಿದ ದಿನಾಂಕದಂದು, ಮೂಲಭೂತ ನಿಯಮಗಳು, 1922 ರ ನಿಯಮ 9 (21) (a) (i) ನಲ್ಲಿ ವಿವರಿಸಿದಂತೆ ಪಡೆಯುತ್ತಿದ್ದ ಮೂಲ ವೇತನವನ್ನು ಒಳಗೊಂಡಿರಬೇಕು ಮತ್ತು ಖಾಸಗಿ ವೃತ್ತಿಯ ಬದಲಾಗಿ ವೈದ್ಯಕೀಯ ಅಧಿಕಾರಿಗೆ ನೀಡಲಾಗುವ ನಾನ್-ಪ್ರಾಕ್ಟೀಸಿಂಗ್ ಭತ್ಯೆಯನ್ನು ಸಹ ಒಳಗೊಂಡಿರುತ್ತದೆ.

ಈ ನಿಯಮದ ಅಡಿಯಲ್ಲಿ ಪಾವತಿಸಬೇಕಾದ ನಿವೃತ್ತಿ ಗ್ರಾಚ್ಯುಟಿ ಅಥವಾ ಮರಣ ಗ್ರಾಚ್ಯುಟಿ ಮೊತ್ತವು ಯಾವುದೇ ಸಂದರ್ಭದಲ್ಲಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮೀರುವಂತಿಲ್ಲ.

ಸರಾಸರಿ ವೇತನ ನಿಗದಿ ಹೇಗೆ?

ಸರ್ಕಾರಿ ನೌಕರನು ತನ್ನ ಸೇವೆಯ ಕೊನೆಯ ಹತ್ತು ತಿಂಗಳಲ್ಲಿ ಪಡೆಯಲಾದ ವೇತನಗಳನ್ನು ಪರಿಗಣಿಸಿ ಸರಾಸರಿ ವೇತನವನ್ನು ನಿರ್ಧರಿಸಲಾಗುತ್ತದೆ. ನಿವೃತ್ತಿಯ ದಿನದಂದು ಅಥವಾ ಸಾವಿನ ದಿನಾಂಕದಂದು ಪಡೆಯುತ್ತಿದ್ದ ತುಟ್ಟಿ ಭತ್ಯೆಯನ್ನು ಈ ನಿಯಮದ ಅಡಿಯಲ್ಲಿ ಸಂಭಾವನೆಯೆಂದು ಪರಿಗಣಿಸಲಾಗುತ್ತದೆ.

ಐದು ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರನ ನಿವೃತ್ತಿ ಗ್ರಾಚ್ಯುಟಿ ಅಥವಾ ಮರಣ ಗ್ರಾಚ್ಯುಟಿಯು ಪೂರ್ಣಗೊಂಡ ಪ್ರತಿ ಆರು ತಿಂಗಳ ಅರ್ಹತಾ ಸೇವೆಯ ನಾಲ್ಕನೇ ಒಂದು ಭಾಗಕ್ಕೆ ಸಮನಾಗಿರುತ್ತದೆ ಮತ್ತು ಗರಿಷ್ಠ 16½ ಪಟ್ಟು ಸಂಭಾವನೆಯನ್ನು ಮೀರುವಂತಿಲ್ಲ.

ಸೇವೆಯಲ್ಲಿರುವಾಗ ಮರಣ ಹೊಂದಿದರೆ ಗ್ರಾಚ್ಯುಟಿ ಲೆಕ್ಕಾಚಾರ ಹೀಗಿದೆ:

ಸರಕಾರಿ ನೌಕರನೊಬ್ಬ ಸೇವೆಯಲ್ಲಿರುವಾಗ ಮರಣ ಹೊಂದಿದರೆ, ನಿಯಮ 24 ರ ಉಪ-ನಿಯಮ (1) ರಲ್ಲಿ ಸೂಚಿಸಿದ ಪ್ರಕಾರ ಈ ಕೆಳಗಿನಂತೆ ಮರಣ ಗ್ರಾಚ್ಯುಟಿ ನೀಡಲಾಗುತ್ತದೆ:

- ಅರ್ಹತಾ ಸೇವೆಯ ಅವಧಿಯು ಒಂದು ವರ್ಷವಾಗಿದ್ದರೆ ವೇತನದ 2 ಪಟ್ಟು

- ಅರ್ಹತಾ ಸೇವೆಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದರೆ ಐದು ವರ್ಷಕ್ಕಿಂತ ಕಡಿಮೆ ಇದ್ದರೆ ವೇತನದ 6 ಪಟ್ಟು

- ಅರ್ಹತಾ ಸೇವೆಯ ಅವಧಿಯು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಮತ್ತು ಹನ್ನೊಂದು ವರ್ಷಗಳಿಗಿಂತ ಕಡಿಮೆ ಇದ್ದರೆ ವೇತನದ 12 ಪಟ್ಟು

- ಅರ್ಹತಾ ಸೇವೆಯ ಅವಧಿಯು ಹನ್ನೊಂದು ವರ್ಷ ಅಥವಾ ಅದಕ್ಕೂ ಹೆಚ್ಚಾಗಿದ್ದರೆ ಮತ್ತು ಇಪ್ಪತ್ತು ವರ್ಷಗಳಿಗಿಂತ ಕಡಿಮೆಯಾಗಿದ್ದರೆ ವೇತನದ 20 ಪಟ್ಟು

- ಅರ್ಹತಾ ಸೇವೆಯ ಅವಧಿಯು ಇಪ್ಪತ್ತು ವರ್ಷ ಅಥವಾ ಅದಕ್ಕೂ ಹೆಚ್ಚಾಗಿದ್ದರೆ, ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವಾವಧಿಯ ಅರ್ಧ ವೇತನದಷ್ಟು ನೀಡಬೇಕು ಹಾಗೂ ಇದು ವೇತನದ ಗರಿಷ್ಠ 33 ಪಟ್ಟು ಮೀರಕೂಡದು

- ಅರ್ಹತಾ ಸೇವೆಯ ಅವಧಿಯು ಹನ್ನೊಂದು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ ಇಪ್ಪತ್ತು ವರ್ಷಗಳಿಗಿಂತ ಕಡಿಮೆ ಮತ್ತು ಅರ್ಹತಾ ಸೇವೆಯ ಪೂರ್ಣಗೊಂಡ ಪ್ರತಿ ಆರು ತಿಂಗಳ ಅವಧಿಗೆ ಅರ್ಧದಷ್ಟು ಸಂಭಾವನೆ ಗರಿಷ್ಠ ಸೇವೆಯ ಅವಧಿಯು 20 ವರ್ಷಗಳಾಗಿದ್ದರೆ ಅಥವಾ ಗರಿಷ್ಠ ಮೂವತ್ಮೂರು ಬಾರಿ ಹೆಚ್ಚು.

ಈ ಸಂದರ್ಭಗಳಲ್ಲೂ ಗ್ರಾಚ್ಯುಟಿ ಅರ್ಹತೆ ಇರುತ್ತದೆ:

ಸುಪರ್ ಆ್ಯನುವೇಶನ್ ಮುಗಿದ ನಂತರ ನಿವೃತ್ತನಾದಾಗ ಅಥವಾ ಅಮಾನ್ಯತೆಯಿಂದ ನಿವೃತ್ತನಾದಾಗ ಅಥವಾ ಸುಪರ್ ಆ್ಯನುವೇಶನ್ ವಯಸ್ಸಿಗೂ ಮುಂಚೆ ನಿವೃತ್ತಿಯಾದಾಗ, ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಹೆಚ್ಚುವರಿ ಎಂದು ಘೋಷಣೆಯಾಗಿ ನಿವೃತ್ತಿಯಾದಾಗ ಅಥವಾ ಸ್ವಯಂ ನಿವೃತ್ತಿ ಯೋಜನೆಯಡಿ ನಿವೃತ್ತಿ ಪಡೆದಾಗ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸಂಪೂರ್ಣ ಅಥವಾ ಗಣನೀಯವಾಗಿ ಒಡೆತನದ ಅಥವಾ ನಿಯಂತ್ರಿಸಲ್ಪಡುವ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ನಿಯಂತ್ರಿಸಲ್ಪಟ್ಟ ಅಥವಾ ಹಣಕಾಸು ಒದಗಿಸುವ ಸಂಸ್ಥೆಯ ಅಡಿಯಲ್ಲಿ ಅಥವಾ ನಿಗಮ ಅಥವಾ ಕಂಪನಿಯ ಸೇವೆಯಲ್ಲಿ ಅಥವಾ ಹುದ್ದೆಯಲ್ಲಿ ನೇಮಿಸಿಕೊಳ್ಳುವಂತೆ ಅನುಮತಿಸಿದಾಗ ಆ ನೌಕರರು ನಿವೃತ್ತಿ ಗ್ರಾಚ್ಯುಟಿ ಅಥವಾ ಮರಣ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ.

ನಾಮಿನಿ ಮರಣ ಹೊಂದಿದ್ದರೆ ಏನಾಗುತ್ತದೆ?

ಸರ್ಕಾರಿ ನೌಕರನೊಬ್ಬನ ಹಕ್ಕುದಾರ ನಾಮಿನಿಯು ಆತನಿಗಿಂತ ಮೊದಲೇ ಮರಣ ಹೊಂದಿದಲ್ಲಿ ಅಥವಾ ಸರ್ಕಾರಿ ನೌಕರನ ಮರಣದ ನಂತರ ಆತನಿಗೆ ಬರಬೇಕಾದ ಗ್ರಾಚ್ಯುಟಿ ಮೊತ್ತವನ್ನು ಪಡೆಯುವ ಮೊದಲೇ ನಾಮಿನಿಯು ಮರಣ ಹೊಂದಿದಾಗ ನಾಮಿನೇಶನ್ನಲ್ಲಿ ಸೂಚಿಸಿರುವಂತೆ ಬೇರೊಬ್ಬ ವ್ಯಕ್ತಿಗೆ ಗ್ರಾಚ್ಯುಟಿಯನ್ನು ಪಾವತಿಸಬೇಕು.

ಗ್ರಾಚ್ಯುಟಿ ಪಾವತಿ ವಿಳಂಬವಾದರೆ ಪರಿಹಾರ ಏನು?

ಅರ್ಜಿ ಸಲ್ಲಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಕುಟುಂಬಕ್ಕೆ ನಿವೃತ್ತಿ ವೇತನವನ್ನು ಪಾವತಿಸಬೇಕು ಮತ್ತು ನಿವೃತ್ತಿ ವೇತನವನ್ನು ಪಾವತಿಸುವಲ್ಲಿ ಯಾವುದೇ ವಿಳಂಬವಾದರೆ, ಸಾರ್ವಜನಿಕ ಭವಿಷ್ಯ ನಿಧಿಗೆ ಅನ್ವಯವಾಗುವ ದರಗಳಲ್ಲಿ ಬಡ್ಡಿಯನ್ನು ಪಾವತಿಸಬೇಕು ಮತ್ತು ವಿಳಂಬದ ಜವಾಬ್ದಾರಿಯನ್ನು ನಿಯಮ 44 ರ ಪ್ರಕಾರ ನಿಗದಿಪಡಿಸಲಾಗುತ್ತದೆ. ಸುಪರ್ ಆ್ಯನುವೇಶನ್ ಹೊರತುಪಡಿಸಿ ನಿವೃತ್ತಿಯ ನಂತರದ ಸಂದರ್ಭಗಳಲ್ಲಿ ಗ್ರಾಚ್ಯುಟಿ ಪಾವತಿಸಬೇಕಾದ ದಿನಾಂಕದ ನಂತರ ಅದರ ಪಾವತಿಗೆ ಅನುಮತಿ ನೀಡಿದಾಗ, ಇಂಥ ವಿಳಂಬವು ನೇರವಾಗಿ ಆಡಳಿತಾತ್ಮಕ ಕಾರಣ ಅಥವಾ ವೈಫಲ್ಯಗಳಿಂದಾಗಿರುವುದು ಸಾಬೀತಾದಲ್ಲಿ ಆಯಾ ಸಮಯದಲ್ಲಿ ಜಾರಿಯಲ್ಲಿರುವ ನಿಯಮಗಳು ಹಾಗೂ ಆಯಾ ಸಮಯದಲ್ಲಿನ ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿದರದ ಸಮಾನವಾಗಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

English summary

All You Need To Know About Payment of Gratuity Under National Pension System in Kannada

All You Need To Know About Payment of Gratuity Under National Pension System Here is a detailed description in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X