For Quick Alerts
ALLOW NOTIFICATIONS  
For Daily Alerts

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬೇಕೆ? ಹಾಗಿದ್ದರೆ ಸಾಲ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು?

|

ಜೀವನದಲ್ಲಿ ಕಷ್ಟಗಳು ಹೇಗೆ ಎದುರಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಗೊತ್ತಿರದೇ, ಆಕಸ್ಮಿಕವಾಗಿ ಯಾವುದೇ ರೀತಿಯಿಂದಲೂ ಬಂದೆರಗಬಹುದು. ಇದರ ಜೊತೆಗೆ ನೀವು ಚಿನ್ನ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಅಥವಾ ಇನ್ಯಾವುದೇ ಗುರಿಯನ್ನು ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಹಣದ ಅವಶ್ಯಕತೆ ಇರುತ್ತದೆ.

ಈ ವೇಳೆ ಸ್ನೇಹಿತರು, ಸಂಬಂಧಿಕರು ಅಥವಾ ಇನ್ಯಾವುದೇ ಫೈನಾನ್ಸ್‌ಗಳಿಂದ ಹಣ ಪಡೆಯಲು ಹೆಚ್ಚಿನ ಬಡ್ಡಿಯನ್ನು ನೀಡಬೇಕಾಗುತ್ತದೆ. ಹೀಗಾಗಿ ಬಹುತೇಕರು ಬ್ಯಾಂಕ್‌ ಸಾಲಗಳ ಮೊರೆ ಹೋಗುವುದನ್ನು ನೋಡಿರ್ತಿರಿ. ಅದರಲ್ಲೂ ವೈಯಕ್ತಿಕ ಸಾಲ ಪಡೆಯಲು ಹೆಚ್ಚಿನ ಪ್ರಾಮುಖ್ಯತೆ ನೀಡುವವರು ಇದ್ದಾರೆ. ಪ್ರತಿ ತಿಂಗಳು ವೇತನವನ್ನು ಪಡೆಯುವ ಉದ್ಯೋಗಿಗಳಿಗೆ ಬ್ಯಾಂಕ್‌ಗಳು ಆಕರ್ಷಕ ಬಡ್ಡಿದರಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತವೆ.

ವೈಯಕ್ತಿಕ ಸಾಲ ಪಡೆಯಲು ಇಚ್ಚಿಸುವವರು ಸಾಮಾನ್ಯವಾಗಿ ಕೇಳಬಯಸುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಈ ಕೆಳಗಿದೆ.

ವೈಯಕ್ತಿಕ ಸಾಲ ಪಡೆಯಲು ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆ?

ವೈಯಕ್ತಿಕ ಸಾಲ ಪಡೆಯಲು ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆ?

ಹೌದು, ವೈಯಕ್ತಿಕ ಸಾಲ ಪಡೆಯಲು ಬಯಸುವ ಯಾವುದೇ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ಹೊಂದಿರಲೇಬೇಕಾಗುತ್ತದೆ. ಅದರಲ್ಲೂ ಪ್ರತಿ ತಿಂಗಳು ವೇತನ ಪಡೆಯುತ್ತಿರುವ ವ್ಯಕ್ತಿಯು ಆತನ ವೇತನದ ಆಧಾರದ ಮೇಲೆ ಸಾಲವನ್ನು ಪಡೆಯುತ್ತಾನೆ.

ವೈಯಕ್ತಿಕ ಸಾಲ ಪಡೆಯಲು ಎಷ್ಟು ಸಮಯ ಬೇಕು?

ವೈಯಕ್ತಿಕ ಸಾಲ ಪಡೆಯಲು ಎಷ್ಟು ಸಮಯ ಬೇಕು?

ಬಹುತೇಕ ಖಾಸಗಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಒಂದು ಅಥವಾ ಎರಡು ದಿನಗಳ ಒಳಗೆ ದಾಖಲೆಗಳೆಲ್ಲಾ ಸರಿಯಾಗಿದ್ದರೆ ವೈಯಕ್ತಿಕ ಸಾಲವನ್ನು ನೀಡುತ್ತವೆ. ಒಂದು ವೇಳೆ ವೇತನ ಪಡೆಯುತ್ತಿರುವ ಉದ್ಯೋಗಿಯ ಸ್ಯಾಲರಿ ಅಕೌಂಟ್ ಬೇರೆ ಬ್ಯಾಂಕ್‌ನಲ್ಲಿದ್ದರೂ ಅದೇ ಬ್ಯಾಂಕ್‌ನಿಂದ ವೈಯಕ್ತಿಕ ಸಾಲ ಪಡೆಯಬೇಕಾಗಿಲ್ಲ. ಇತರೆ ಬ್ಯಾಂಕ್‌ಗಳ ಮೂಲಕವು ಸ್ಯಾಲರಿ ಅಕೌಂಟ್ ಆಧಾರದ ಮೇಲೆ ಸಾಲವನ್ನು ಪಡೆಯಬಹುದು.

ವೈಯಕ್ತಿಕ ಸಾಲವನ್ನು ಹೇಗೆ ನೀಡಲಾಗುತ್ತದೆ?
 

ವೈಯಕ್ತಿಕ ಸಾಲವನ್ನು ಹೇಗೆ ನೀಡಲಾಗುತ್ತದೆ?

ಯಾವುದೇ ಅರ್ಹ ವ್ಯಕ್ತಿಯು ವೈಯಕ್ತಿಕ ಸಾಲವನ್ನು ಪಡೆಯಲು ಇಚ್ಚಿಸಿದ್ದಲ್ಲಿ ಆತನಿಗೆ ಬ್ಯಾಂಕ್‌ ಚೆಕ್‌ ಅಥವಾ ನೇರ ಖಾತೆಗೆ ಹಣವನ್ನು ಕ್ರೆಡಿಟ್ ಮಾಡುವ ಮೂಲಕ ಸಾಲವನ್ನು ನೀಡುತ್ತದೆ.

ಹೆಚ್ಚಿನ ಜನರು ವೈಯಕ್ತಿಕ ಸಾಲದ ಮೊರೆ ಹೋಗುವುದು ಏಕೆ?

ಹೆಚ್ಚಿನ ಜನರು ವೈಯಕ್ತಿಕ ಸಾಲದ ಮೊರೆ ಹೋಗುವುದು ಏಕೆ?

ವೈಯಕ್ತಿಕ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ರೂಪಕ್ಕೆ ಮಾರ್ಪಾಟಾಗುತ್ತಿದ್ದು, ಪೇಪರ್ ರೂಪದ ಯಾವುದೇ ದಾಖಲಾತಿ ಇಲ್ಲದೆಯೇ ಇ-ಕೆವೈಸಿ ಮೂಲಕ ಶೀಘ್ರವಾಗಿ ಸಾಲಗಳನ್ನು ಮಂಜೂರು ಮಾಡಲಾಗುತ್ತಿದೆ. ಇನ್ನು ಕೆಲ ಬ್ಯಾಂಕುಗಳು ಆಯ್ದ ಗ್ರಾಹಕರಿಗೆ ಎಟಿಎಂಗಳ ಮೂಲಕ ಸಾಲ ನೀಡಲು ಮುಂದಾಗುತ್ತಿರುವುದು ವಿಶಿಷ್ಟವಾಗಿದೆ. ಡಿಜಿಟಲ್ ಸಾಲ ಮಂಜೂರಾತಿ ವಿಧಾನದಿಂದ ಸಂಪೂರ್ಣ ಪ್ರಕ್ರಿಯೆ ಅತ್ಯಂತ ಸರಳವಾಗುತ್ತಿದೆ.

ಇದರ ಜೊತೆಗೆ ಕಡಿಮೆ ಸಮಯದಲ್ಲಿ , ಗ್ರಾಹಕರು ಹೆಚ್ಚು ಅಲೆದಾಡದೆ ಸುಲಭವಾಗಿ ಕ್ರೆಡಿಟ್‌ ಸ್ಕೋರ್ ಹಾಗೂ ವೇತನದ ಆಧಾರದಲ್ಲಿ ಸಾಲವನ್ನು ಪಡೆಯುತ್ತಿದ್ದಾರೆ.

 

ಆನ್‌ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು!

ಆನ್‌ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು!

ಈಗ ಎಲ್ಲವೂ ಆನ್ಲೈನ್ ಮಯವಾಗಿದೆ. ಇದಕ್ಕೆ ವೈಯಕ್ತಿಕ ಸಾಲ ಸಹ ಹೊರತಾಗಿಲ್ಲ. ಈಗ ಸಾಲ ಪಡೆಯಲು ಬ್ಯಾಂಕುಗಳಿಗೆ ಅಲೆದಾಡಿ ಸಮಯ ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸಂಪೂರ್ಣ ಅರ್ಜಿ ಸಲ್ಲಿಕೆ ಹಾಗೂ ಮಂಜೂರಾತಿ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ಪೂರ್ಣಗೊಳಿಸಬಹುದು. ವೈಯಕ್ತಿಕ ಸಾಲ ಆಗಿರಲಿ ಅಥವಾ ಬಿಸಿನೆಸ್ ಲೋನ್ ಆಗಿರಲಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಸೌಕರ್ಯ ಈಗ ಗ್ರಾಹಕರಿಗೆ ಸಿಕ್ಕಿದೆ.

ವೈಯಕ್ತಿಕ ಸಾಲವನ್ನು ಅವಧಿಗೂ ಮುನ್ನವೇ ಪೂರ್ವಪಾವತಿ ಮಾಡಬಹುದೇ?

ವೈಯಕ್ತಿಕ ಸಾಲವನ್ನು ಅವಧಿಗೂ ಮುನ್ನವೇ ಪೂರ್ವಪಾವತಿ ಮಾಡಬಹುದೇ?

ಹೌದು ಇದು ಸಾಧ್ಯವಿದೆ. ಹಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರು ಪಡೆದ ಸಾಲವನ್ನು ಪೂರ್ವ ಪಾವತಿ ಮಾಡಲು ಅವಕಾಶ ನೀಡುತ್ತವೆ. ಈ ಮೂಲಕ ಪೂರ್ಣ ಅವಧಿಗೆ ಮುಂಚಿತವಾಗಿ ನಿಮ್ಮ ವೈಯಕ್ತಿಕ ಸಾಲವನ್ನು ಪೂರ್ವಪಾವತಿ ಮಾಡಬಹುದು.

English summary

Are You Interested In personal loan? If so, what qualifies for a loan?

Here is an attempt to answer some of the questions that those who want to get a personal loan usually want to ask
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X