ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು?

ಖಾಸಗಿ ವಲಯದ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ಬಡ್ಡಿದರ ಮೇ 10, 2022 ರಿಂದ ಜಾರಿಗೆ ತಂದಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಶೇಕಡ 3ರಿಂದ ಶೇಕಡ 3.5ಕ್ಕೆ ಏರಿಕೆ ಆಗುತ್ತದೆ.

ಈ ಪರಿಷ್ಕರಣೆಯ ಬಳಿಕ ಬ್ಯಾಂಕ್ ಈಗ 50 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ಖಾತೆಯ ಮೇಲೆ ಶೇಕಡ 3.00, ರೂ 50 ಲಕ್ಷದಿಂದ 2,500 ಕೋಟಿಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಯ ಮೇಲೆ ಶೇಕಡ 3.5 ಬಡ್ಡಿದರ ನೀಡುತ್ತದೆ.

ಆಕ್ಸಿಸ್ ಬ್ಯಾಂಕ್ ಪ್ರಕಾರ, ಈ ಉಳಿತಾಯ ಖಾತೆಯ ಬಡ್ಡಿದರಗಳನ್ನು ಪ್ರತಿದಿನ ಲೆಕ್ಕಹಾಕಲಾಗುತ್ತದೆ. ಮುಂದಿನ ತ್ರೈಮಾಸಿಕದ ಮೊದಲ ದಿನದಂದು ಖಾತೆಗೆ ಜಮಾ ಮಾಡಲಾಗುತ್ತದೆ. ಆಕ್ಸಿಸ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. "ಮೇ 10, 2022 ರಿಂದ ಜಾರಿಗೆ ಬರುವಂತೆ, ನಿಮ್ಮ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಪರಿಷ್ಕರಣೆ ಮಾಡಲಾಗಿದೆ," ಎಂದು ಬ್ಯಾಂಕ್ ಉಲ್ಲೇಖ ಮಾಡಿದೆ.

SB ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು?

ನೂತನ ಬಡ್ಡಿದರವೆಷ್ಟು?

ರೂ. 50 ಲಕ್ಷಕ್ಕಿಂತ ಕಡಿಮೆ: ಶೇಕಡ 3.00 ಬಡ್ಡಿದರ
ರೂ. 50 ಲಕ್ಷಗಳು ಮತ್ತು ರೂ.10 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 10 ಕೋಟಿ ಮತ್ತು 100 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 100 ಕೋಟಿ ಮತ್ತು 200 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 200 ಕೋಟಿ ಮತ್ತು 2,500 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ

ಆಕ್ಸಿಸ್ ಬ್ಯಾಂಕ್‌ನ ಉಳಿತಾಯ ಖಾತೆಯ ಈ ಹಿಂದಿನ ಬಡ್ಡಿ ದರ ಎಷ್ಟಿತ್ತು?

ರೂ 50 ಲಕ್ಷಕ್ಕಿಂತ ಕಡಿಮೆ: ಶೇಕಡ 3.00 ಬಡ್ಡಿದರ
ರೂ. 50 ಲಕ್ಷಗಳು ಮತ್ತು ರೂ.10 ಕೋಟಿಗಿಂತ ಕಡಿಮೆ: ಶೇಕಡ 3.50 ಬಡ್ಡಿದರ
ರೂ. 10 ಕೋಟಿ ಮತ್ತು 100 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.65 (ಶೇಕಡ 3.50 ಬಡ್ಡಿದರ)
ರೂ. 100 ಕೋಟಿ ಮತ್ತು 200 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.50
ರೂ. 200 ಕೋಟಿ ಮತ್ತು 2,500 ಕೋಟಿಗಿಂತ ಕಡಿಮೆ: ರೆಪೋ+ಶೇಕಡ 0.50

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+