Bank Holidays in January 2023: ಹೊಸ ವರ್ಷದ ಮೊದಲ ತಿಂಗಳು 14 ದಿನ ಬ್ಯಾಂಕ್ ರಜೆ
2022 ವರ್ಷ ಈಗ ಕೊನೆಯಾಗುತ್ತಿದ್ದು, 2023ರ ಹೊಸ ವರ್ಷಕ್ಕಾಗಿ ನಾವು ಕಾಯುತ್ತಿದ್ದೇವೆ. ಕೋವಿಡ್ ಆತಂಕ ಈ ಸಂದರ್ಭದಲ್ಲಿ ಮತ್ತೆ ಸೃಷ್ಟಿಯಾಗಿದೆ. ಆದರೆ ಈಗಾಗಲೇ ಜನರು ಕ್ರಿಸ್‌ಮಸ್, ಹೊಸ ವರ್ಷದ ಆಚರಣೆಗೆ ಸಿದ್ಧರಾಗಿದ್ದಾರೆ. ಈ ನಡುವೆ ಮುಂದಿನ ತಿಂಗಳು ಅಥವಾ ಹೊಸ ವರ್ಷದ ಮೊದಲ ತಿಂಗಳು 14 ದಿನ ಬ್ಯಾಂಕ್ ಬಂದ್ ಆಗಿರಲಿದೆ.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜನವರಿ 2023ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಹಬ್ಬ, ಸರ್ಕಾರಿ ರಜೆ, ಕೆಲವು ರಾಜ್ಯಗಳಲ್ಲಿ ಮಾತ್ರ ಇರುವ ರಜೆಗಳ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಆದರೆ ಹೊಸ ವರ್ಷದ ಮೊದಲ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳು ರಜೆ ಇರಲಿದೆ ನಿಮಗೆ ಗೊತ್ತೆ? ಇಲ್ಲಿದೆ ಮಾಹಿತಿ ಮುಂದೆ ಓದಿ...

ರಜಾದಿನಗಳ ಮೂರು ವರ್ಗೀಕರಣ
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.

ಜನವರಿ ತಿಂಗಳ ಬ್ಯಾಂಕ್ ರಜಾದಿನ ಪಟ್ಟಿ
ಜನವರಿ 1: ಹೊಸ ವರ್ಷ, ಭಾನುವಾರ (ವಾರದ ರಜೆ)
ಜನವರಿ 2: ಹೊಸ ವರ್ಷ, , ಸೋಮವಾರ (ಮಿಜೋರಾಂ)
ಜನವರಿ 5: ಗುರು ಗೋವಿಂದ ಸಿಂಗ್ ಜಯಂತಿ, ಗುರುವಾರ (ಹರಿಯಾಣ ಹಾಗೂ ರಾಜಸ್ಥಾನ)
ಜನವರಿ 8: ಭಾನುವಾರ (ವಾರದ ರಜೆ)
ಜನವರಿ 11: ಮಿಷನರಿ ದಿನ, ಬುಧವಾರ (ಮಿಜೋರಾಂ)
ಜನವರಿ 14: ತಿಂಗಳ ಎರಡನೇ ಶನಿವಾರ
ಜನವರಿ 15: ಭಾನುವಾರ (ವಾರದ ರಜೆ)
ಜನವರಿ 22: ಭಾನುವಾರ (ವಾರದ ರಜೆ)
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ಸೋಮವಾರ (ತ್ರಿಪುರಾ ಹಾಗೂ ಪಶ್ಚಿಮ ಬಂಗಾಳ)
ಜನವರಿ 25: ರಾಜ್ಯ ದಿನ, ಬುಧವಾರ (ಹಿಮಾಚಲ ಪ್ರದೇಶ)
ಜನವರಿ 26: ಗಣರಾಜ್ಯೋತ್ಸವ, ಗುರುವಾರ
ಜನವರಿ 28: ತಿಂಗಳ ನಾಲ್ಕನೇ ಶನಿವಾರ
ಜನವರಿ 29: ಭಾನುವಾರ (ವಾರದ ರಜೆ)
ಜನವರಿ 31: ಮೆ-ದಮ್-ಮೆ-ಫಿ, ಸೋಮವಾರ (ಅಸ್ಸಾಂ)

ಕರ್ನಾಟಕದಲ್ಲಿ ಬ್ಯಾಂಕ್ ರಜೆ
ಜನವರಿ 1: ಹೊಸ ವರ್ಷ, ಭಾನುವಾರ (ವಾರದ ರಜೆ)
ಜನವರಿ 8: ಭಾನುವಾರ (ವಾರದ ರಜೆ)
ಜನವರಿ 14: ತಿಂಗಳ ಎರಡನೇ ಶನಿವಾರ, ಮಕರ ಸಂಕ್ರಾಂತಿ
ಜನವರಿ 15: ಭಾನುವಾರ (ವಾರದ ರಜೆ)
ಜನವರಿ 22: ಭಾನುವಾರ (ವಾರದ ರಜೆ)
ಜನವರಿ 26: ಗಣರಾಜ್ಯೋತ್ಸವ, ಗುರುವಾರ
ಜನವರಿ 28: ತಿಂಗಳ ನಾಲ್ಕನೇ ಶನಿವಾರ
ಜನವರಿ 29: ಭಾನುವಾರ (ವಾರದ ರಜೆ)