For Quick Alerts
ALLOW NOTIFICATIONS  
For Daily Alerts

ಬದಲಾಗಲಿದೆ ಆದಾಯ ತೆರಿಗೆ; ಪಾಸ್ ಪೋರ್ಟ್, ಎಲೆಕ್ಟ್ರಿಕ್ ಬಿಲ್ ಎತ್ತಿಟ್ಟುಕೊಳ್ಳಿ...

|

ನೀವೇನಾದರೂ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವವರಾದರೆ ಮುಂದಿನ ಆರ್ಥಿಕ ವರ್ಷದಿಂದ ಆಗಲಿರುವ ಬದಲಾವಣೆ ಬಗ್ಗೆ ನಿಮ್ಮ್ ಗಮನ ಇರಲಿ. ಇನ್ನು ನೀವು ಆದಾಯ, ಹೂಡಿಕೆ ಬಗೆಗಿನ ಮಾಹಿತಿ ನೀಡಿದರಷ್ಟೇ ಸಾಲದು. ಜತೆಗೆ ಪಾಸ್ ಪೋರ್ಟ್, ವಿದೇಶ ಪ್ರವಾಸ ಮತ್ತು ವಿದ್ಯುತ್ ಬಿಲ್ ನ ಮಾಹಿತಿಗಳನ್ನೂ ನೀಡಬೇಕು.

 

2020- 21ರ ಆರ್ಥಿಕ ವರ್ಷದಿಂದ ಆದಾಯ ತೆರಿಗೆ ಇಲಾಖೆಯು ಐಟಿಆರ್ ಅರ್ಜಿಗಳಲ್ಲಿ ಬದಲಾವಣೆ ಮಾಡಲಿದೆ. ಆದಾಯ ತೆರಿಗೆ ಇಲಾಖೆಯಿಂದ ITR-1ರಿಂದ ITR-7ರ ತನಕ ಪ್ರತಿ ವರ್ಷ ITR ಫೈಲಿಂಗ್ ಗೆ 7 ಅರ್ಜಿಗಳನ್ನು ನೀಡಲಾಗುತ್ತದೆ. ಈ ಬಾರಿ ಆರ್ಥಿಕ ವರ್ಷ ಆರಂಭವಾಗುವ ಏಪ್ರಿಲ್ ಗೂ ಮುನ್ನವೇ ITR 1 (ಸಹಜ್) ಮತ್ತು ITR 4 (ಸುಗಮ್) ಅರ್ಜಿ ಬಿಡುಗಡೆ ಮಾಡಿದೆ.

ಇತರ ಅರ್ಜಿಗಳು ಶೀಘ್ರದಲ್ಲೇ ಬಿಡುಗಡೆ ಆಗಲಿದೆ. 2020-21 ಆರ್ಥಿಕ ವರ್ಷಕ್ಕೆ ITR ಅರ್ಜಿಯಲ್ಲಿ ಆಗುವ ಬದಲಾವಣೆಗಳು ಹೀಗಿವೆ:

1 ಕೋಟಿಗೂ ಹೆಚ್ಚು ಹಣ ಬ್ಯಾಂಕ್ ಖಾತೆಗೆ ಜಮೆ

1 ಕೋಟಿಗೂ ಹೆಚ್ಚು ಹಣ ಬ್ಯಾಂಕ್ ಖಾತೆಗೆ ಜಮೆ

ಮುಂದಿನ ವರ್ಷದಿಂದ ಯಾರು ಸದ್ಯದ ಬ್ಯಾಂಕ್ ಖಾತೆಯಲ್ಲಿ 1 ಕೋಟಿಗೂ ಹೆಚ್ಚು ಹಣ ಜಮೆ ಮಾಡಿರುತ್ತಾರೋ ಅಥವಾ 2 ಲಕ್ಷ ರುಪಾಯಿ ಮತ್ತು ಅದಕ್ಕಿಂತ ಹೆಚ್ಚು ಖರ್ಚನ್ನು ವಿದೇಶ ಪ್ರವಾಸಕ್ಕಾಗಿ ಮಾಡುತ್ತಾರೋ ಅಥವಾ ಆಯಾ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬಿಲ್ ಗೆ 1 ಲಕ್ಷ ರುಪಾಯಿ ಪಾವತಿಸಿರುತ್ತಾರೋ ಅವರಿಗೆ ITR 1 ಅರ್ಜಿಯಲ್ಲಿ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಕಾನೂನುಬದ್ಧ ಅಲ್ಲ.

ITR 1 ಮತ್ತು ITR 4 ಅರ್ಜಿ ಯಾರಿಗಾಗಿ?

ITR 1 ಮತ್ತು ITR 4 ಅರ್ಜಿ ಯಾರಿಗಾಗಿ?

ಯಾರ ಆದಾಯವು ವೇತನ, ಮನೆ ಬಾಡಿಗೆ, ಬಡ್ಡಿ ಮತ್ತು ಕುಟುಂಬ ಪಿಂಚಣಿ ಮತ್ತಿತರ ಎಲ್ಲ ಸೇರಿ ಐವತ್ತು ಲಕ್ಷದೊಳಗೆ ಇರುತ್ತದೋ ಅಂಥವರು ITR 1 ಅರ್ಜಿ ಸಲ್ಲಿಸಬಹುದು. ಇನ್ನು ITR 4 ಅರ್ಜಿಯು ವೈಯಕ್ತಿಕ ನಿವಾಸಿಗಳು, ಹಿಂದೂ ಅವಿಭಕ್ತ ಕುಟುಂಬ ಮತ್ತು ಸಂಸ್ಥೆಗಳು (LLP ಹೊರತುಪಡಿಸಿ ಇತರೆ) ವ್ಯಾಪಾರ ಮತ್ತು ವೃತ್ತಿ ಅಥವಾ ಬಡ್ಡಿ ಮತ್ತಿತರ ಆದಾಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ 50 ಲಕ್ಷದೊಳಗೆ ಇದ್ದರೆ ಅಂಥವರಿಗಾಗಿ ಇದೆ.

ಪಾಸ್ ಪೋರ್ಟ್ ಸಂಖ್ಯೆ ನೀಡಬೇಕು
 

ಪಾಸ್ ಪೋರ್ಟ್ ಸಂಖ್ಯೆ ನೀಡಬೇಕು

ಒಂದು ವೇಳೆ ಸ್ವಂತ ಮನೆಯಿದ್ದು, ಅದು ಬೇರೆಯವರ ಜತೆ ಜಂಟಿ ಹೆಸರಲ್ಲಿ ಇದ್ದಲ್ಲಿ ಆಗ ITR 1 ಅಥವಾ ITR 4 ಬಳಸಬೇಕು. ಪಾಸ್ ಪೋರ್ಟ್ ಇದ್ದಲ್ಲಿ ITR 1 ಮತ್ತು ITR 4 ಎರಡೂ ಅರ್ಜಿಗಳಿಗೂ ಅದರ ಸಂಖ್ಯೆಯನ್ನು ಬಳಸಬೇಕು.

ಒಂದು ಲಕ್ಷಕ್ಕೂ ಹೆಚ್ಚು ಮೊತ್ತದ  ಎಲೆಕ್ಟ್ರಿಕ್ ಬಿಲ್ ಮಾಹಿತಿ

ಒಂದು ಲಕ್ಷಕ್ಕೂ ಹೆಚ್ಚು ಮೊತ್ತದ ಎಲೆಕ್ಟ್ರಿಕ್ ಬಿಲ್ ಮಾಹಿತಿ

ITR 4 ಅರ್ಜಿಯಲ್ಲಿ ವಿದೇಶ ಪ್ರವಾಸದ ಖರ್ಚು ಎರಡು ಲಕ್ಷ ಮಾಡಿದ್ದರೆ ಅದರ ಬಗ್ಗೆ ಮಾಹಿತಿ ನೀಡಬೇಕು. ನಿಮಗಾಗಿಯೋ ಅಥವಾ ಇತರರಿಗಾಗಿಯೋ ಸರಾಸರಿ ಎರಡು ಲಕ್ಷ ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ್ದೀರಾ ಎಂಬ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಹಾಗೊಂದು ವೇಳೆ ಖರ್ಚು ಮಾಡಿದ್ದರೆ ಎಷ್ಟು ಮೊತ್ತ ಎಂಬ ಬಗ್ಗೆ ತಿಳಿಸಬೇಕಾಗುತ್ತದೆ. ಇದರ ಜತೆಗೆ ಎಲೆಕ್ಟ್ರಿಕ್ ಬಿಲ್ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರೂ ಆ ಬಗ್ಗೆ ಮಾಹಿತಿ ನೀಡಬೇಕು.

English summary

Be Ready With Passport, Electric Bill For ITR

For AY 2020-21 be ready with passport and electric bill. Here is the complete details.
Story first published: Monday, January 6, 2020, 13:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X