For Quick Alerts
ALLOW NOTIFICATIONS  
For Daily Alerts

ಫಿಕ್ಸೆಡ್ ಡೆಪಾಸಿಟ್ ಗೆ ಒಂದು ವರ್ಷದ ಅವಧಿಗೆ ಉತ್ತಮ ಬಡ್ಡಿ ದರ ನೀಡುವ ಬ್ಯಾಂಕ್ ಗಳು

|

ಏರುತ್ತಿರುವ ಹಣದುಬ್ಬರ ಮತ್ತು ಇಳಿಯುತ್ತಿರುವ ಬಡ್ಡಿ ದರದ ಕಾರಣಕ್ಕೆ ಬ್ಯಾಂಕ್ ಗಳು ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಇಳಿಕೆ ಆಗಿವೆ. ಅಂದ ಹಾಗೆ ಕಳೆದ ಆರು ವರ್ಷದಲ್ಲೇ ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ ಕಳೆದ ಅಕ್ಟೋಬರ್ ನಲ್ಲಿ ಗರಿಷ್ಠ ಮಟ್ಟವಾದ 7.61 ಪರ್ಸೆಂಟ್ ತಲುಪಿದೆ.

ಅಪಾಯಕಾರಿ ಹೂಡಿಕೆಯಿಂದ ದೂರ ಇರುವುದಕ್ಕೆ ಬಯಸುವವರು ಈಕ್ವಿಟಿ ಮಾರ್ಕೆಟ್ ನಿಂದ ದೂರ ಇರುತ್ತಾರೆ. ಕಳೆದ ವಾರ ಷೇರು ಮಾರ್ಕೆಟ್ ಸಾರ್ವಕಾಲಿಕ ದಾಖಲೆ ಬರೆದಿದ್ದರೂ ಈ ಹೂಡಿಕೆ ಬಗ್ಗೆ ಆಸಕ್ತಿ ಇಲ್ಲದ ವರ್ಗವೂ ಇದೆ. ತುಂಬ ಸುರಕ್ಷಿತ ಉಳಿತಾಯ ಹಾಗೂ ಮಾಸಿಕ ಆದಾಯ ತಂದುಕೊಂಡುವಂಥ ಹೂಡಿಕೆ ಎಂದು ಫಿಕ್ಸೆಡ್ ಡೆಪಾಸಿಟ್ (ಎಫ್.ಡಿ.) ಅನ್ನು ಪರಿಗಣಿಸುತ್ತಾರೆ. ಏಕೆಂದರೆ ನಿಶ್ಚಿತವಾದ ಆದಾಯ ಬರುತ್ತದೆ.

 

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೌಸಿಂಗ್ ಲೋನ್ ಬಡ್ಡಿ; ಯಾವ ಬ್ಯಾಂಕ್ ನಲ್ಲಿ ಎಷ್ಟು?

ಯಾವಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರಂತರವಾಗಿ ರೆಪೋ ದರ ಕಡಿತ ಮಾಡುತ್ತಾ ಬರಲಾಯಿತೋ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರವೂ ಇಳಿಕೆಯಾಯಿತು. ಹೀಗೆ ದರ ಕುಸಿಯುತ್ತಾ ಬಂದರೂ ಈಗಲೂ ಕೆಲವು ಬ್ಯಾಂಕ್ ಗಳು ಒಂದು ವರ್ಷದ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗೆ ಉತ್ತಮ ಬಡ್ಡಿ ದರ ನೀಡುತ್ತವೆ.

ಅದರಲ್ಲೂ ಸಣ್ಣ ಖಾಸಗಿ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ನೀಡುತ್ತವೆ.

FDಗೆ ಒಂದು ವರ್ಷದ ಅವಧಿಗೆ ಉತ್ತಮ ಬಡ್ಡಿ ದರ ನೀಡುವ ಬ್ಯಾಂಕ್ ಗಳು

ಖಾಸಗಿ ಬ್ಯಾಂಕ್ ಗಳು

* ಇಂಡಸ್ ಇಂಡ್ ಬ್ಯಾಂಕ್ 7.00%

* ಆರ್ ಬಿಎಲ್ ಬ್ಯಾಂಕ್ 6.75%

* ಯೆಸ್ ಬ್ಯಾಂಕ್ 6.75%

* ಡಿಸಿಬಿ ಬ್ಯಾಂಕ್ 6.50%

* ಬಂಧನ್ ಬ್ಯಾಂಕ್ 5.75%

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು

* ಕೆನರಾ ಬ್ಯಾಂಕ್ 5.30%

* ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 5.30%

* ಬ್ಯಾಂಕ್ ಆಫ್ ಇಂಡಿಯಾ 5.25%

* ಯೂನಿಯನ್ ಬ್ಯಾಂಕ್ 5.25%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 5.20%

English summary

Best Interest Rate In Public, Private Sector Bank On Fixed Deposit For One Year Period

Here is the best interest rate on fixed deposits in public and private sector banks for one year period.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X