For Quick Alerts
ALLOW NOTIFICATIONS  
For Daily Alerts

ತೆರಿಗೆದಾರರಿಗೆ ಗುಡ್‌ನ್ಯೂಸ್‌: ಐಟಿ ರಿಟರ್ನ್ ಗಡುವು ಸೆ. 30ರವರೆಗೆ ವಿಸ್ತರಣೆ

|

ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2019-20ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ. ಈ ಮೂಲಕ ತೆರಿಗೆದಾರರಿಗೆ ಸೆ. 30, 2021ರವರೆಗೆ ಅವಕಾಶ ಸಿಕ್ಕಂತಾಗಿದೆ.

 

ಕೊರೊನಾದಿಂದ ದೇಶದ ಅನೇಕ ರಾಜ್ಯಗಳಲ್ಲಿ ನಿರ್ಬಂಧಗಳಿದ್ದು, ತೆರಿಗೆದಾರರಿಗೆ ಪರಿಹಾರ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ದಿನಾಂಕ ಬದಲಾಗಿಲ್ಲ. ಈ ಐಟಿಆರ್ ಅನ್ನು ಸೆ. 30, 2021 ಸಲ್ಲಿಸಬೇಕು. ಈ ದಿನಾಂಕದ ವೇಳೆಗೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

 
ತೆರಿಗೆದಾರರಿಗೆ ಗುಡ್‌ನ್ಯೂಸ್‌: ITR ಗಡುವು ಸೆ. 30ರವರೆಗೆ ವಿಸ್ತರಣೆ

ಆದಾಯ ತೆರಿಗೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ ಆದಾಯ ತೆರಿಗೆ ರಿಟರ್ನ್‌ಗಾಗಿ ಹಲವು ನಮೂನೆ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

"ವಿವಾಡ್ ಸೆ ವಿಶ್ವಾಸ್ ಕಾಯಿದೆಯಡಿ ತೆರಿಗೆ ಘೋಷಣೆದಾರರಿಂದ ಪಾವತಿ ಮಾಡಲು ಪೂರ್ವಾಪೇಕ್ಷಿತವಾದ ನಮೂನೆ ಸಂಖ್ಯೆ 3 ರ ವಿತರಣೆಯಲ್ಲಿ ಮತ್ತು ತಿದ್ದುಪಡಿಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, 2021 ರ ಸೆಪ್ಟೆಂಬರ್ 30 ರವರೆಗೆ ಮೊತ್ತದ ಪಾವತಿ (ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ) ಕೊನೆಯ ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಹೊಸ ಇ-ಪೋರ್ಟಲ್: ತೆರಿಗೆದಾರರೇ ಪೋರ್ಟಲ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳಿ..ಆದಾಯ ತೆರಿಗೆ ಇಲಾಖೆಯ ಹೊಸ ಇ-ಪೋರ್ಟಲ್: ತೆರಿಗೆದಾರರೇ ಪೋರ್ಟಲ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳಿ..

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವಿನ ವಿಸ್ತರಣೆಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ನೇರ ತೆರಿಗೆ ವಿವಾದ್‌ ಸೆ ವಿಶ್ವಾಸ್ ಆಕ್ಟ್ 2020 ರ ಸೆಕ್ಷನ್ 3 ರ ಅಡಿಯಲ್ಲಿ ಮಾಡಲಾಗಿದೆ ಎಂದು ಇಲಾಖೆ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಐಟಿಆರ್ ಸಲ್ಲಿಸುವಲ್ಲಿನ ಅಸಮರ್ಥತೆಯನ್ನು ಉಲ್ಲೇಖಿಸಿ ಹಲವಾರು ತೆರಿಗೆದಾರರು ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳ ಕುರಿತು ದೂರು ನೀಡಿದ ನಂತರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕದ ವಿಸ್ತರಣೆ ಬಂದಿದೆ.

ಇತ್ತೀಚೆಗಷ್ಟೇ ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಗಮನಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರನ್ನು ಕರೆಸಿ ವಿಚಾರಿಸಿದ್ದರು. ಅಲ್ಲದೆ ಐಟಿ ಪೋರ್ಟಲ್ ದೋಷಗಳನ್ನು ಪರಿಹರಿಸಲು ಸೆಪ್ಟೆಂಬರ್ 15ರವರೆಗೆ ಗಡುವು ಸಹ ನೀಡಲಾಗಿದೆ.2019ರಲ್ಲಿ ಇನ್ಫೋಸಿಸ್‌ಗೆ ಈ ಪೋರ್ಟಲ್‌ನ ಟೆಂಡರ್‌ನ್ನು 4,242 ಕೋಟಿ ರೂ.ಗೆ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್‌ಗಳ ಪ್ರೊಸೆಸಿಂಗ್‌ ಅವಧಿಯನ್ನು 63 ದಿನಗಳಿಂದ 1 ದಿನಕ್ಕೆ ಇಳಿಕೆ ಮಾಡುವ ಗುರಿಯನ್ನು ಈ ಸಂದರ್ಭದಲ್ಲಿ ಇನ್ಫೋಸಿಸ್‌ಗೆ ನೀಡಲಾಗಿತ್ತು.

ಜೂನ್ 7 ರಂದು ಪ್ರಾರಂಭವಾದ ಹೊಸ ಐಟಿ ಇ-ಪೋರ್ಟಲ್ ಎರಡು ತಿಂಗಳಿಗಿಂತಲೂ ಹೆಚ್ಚಿನ ನಂತರವೂ, ತಾಂತ್ರಿಕ ದೋಷಗಳನ್ನು ಎದುರಿಸುತ್ತಲೇ ಇದೆ, ಬಳಕೆದಾರರು ಅನೇಕ ವಿಭಾಗಗಳು ಕಾರ್ಯನಿರ್ವಹಿಸುತ್ತಿಲ್ಲ ಅಥವಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದ್ದಾರೆ.

ಈ ಹಿಂದೆ ಜೂನ್ 22 ರಂದು ಸಹ, ಸೀತಾರಾಮನ್ ಅವರು ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದರು ಮತ್ತು ಸಾಧ್ಯವಾದಷ್ಟು ಬೇಗ ಎಲ್ಲಾ ದೋಷಗಳನ್ನು ಸರಿಪಡಿಸಲು ಮತ್ತು ತೆರಿಗೆದಾರರ ಎಲ್ಲಾ ಕುಂದುಕೊರತೆಗಳನ್ನು ಪರಿಹರಿಸಲು ಕೇಳಿದ್ದರು.

ಆದಾಯ ತೆರಿಗೆ ಹೊಸ ಇ-ಫೈಲಿಂಗ್ ಪೋರ್ಟಲ್‌ ಅನ್ನು ಬಳಸುವುದು ಹೇಗೆ?ಆದಾಯ ತೆರಿಗೆ ಹೊಸ ಇ-ಫೈಲಿಂಗ್ ಪೋರ್ಟಲ್‌ ಅನ್ನು ಬಳಸುವುದು ಹೇಗೆ?

ಜಿಎಸ್‌ಟಿ ಪಾವತಿದಾರರಿಗೆ ಗಮನಿಸಿ:
ಜಿಎಸ್‌ಟಿ ಪಾವತಿದಾರರು ಕಳೆದ ಎರಡು ತಿಂಗಳಿನಿಂದ ಜಿಎಸ್‌ಟಿ 3 ಬಿ ಸಲ್ಲಿಕೆ ಮಾಡದಿದ್ದರೆ ಸೆಪ್ಟೆಂಬರ್‍ ಆರಂಭದಿಂದ ಆ ವ್ಯಕ್ತಿಯು ಜಿಎಸ್‌ಟಿಆರ್ -1 ರಲ್ಲಿ ಬಾಹ್ಯ ಪೂರೈಕೆಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಎಸ್‌ಟಿಆರ್ -3 ಬಿ ಸಲ್ಲಿಸದಿದ್ದರೆ ಜಿಎಸ್‌ಟಿಆರ್ -1 ಸಲ್ಲಿಸಲು ನೀವು ಅನರ್ಹರಾಗುತ್ತೀರಿ. ಸತತ ಕೆಲವು ತಿಂಗಳಿನಿಂದ ಜಿಎಸ್‌ಟಿಆರ್ 3 ಬಿ ಅನ್ನು ತಿಂಗಳ 20-24ರ ನಡುವೆ ಸಲ್ಲಿಸಲಾಗುತ್ತಿದೆ.

English summary

ITR filing deadline for FY21 extended to Sept 30, 2021

Income Tax department has extended the last date for filing of several forms required for the filing of Income Tax Returns to September 30, 2021, from the previous deadline of August 31, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X