For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ

By ಅನಿಲ್ ಆಚಾರ್
|

ಕೇಂದ್ರ ಬಜೆಟ್ ಅಂದಾಕ್ಷಣ, ಏನು ಈ ಸಲ ಇನ್ ಕಮ್ ಟ್ಯಾಕ್ಸ್ ಕಡಿಮೆ ಮಾಡಬಹುದಾ ಎಂಬುದೇ ಬಹುತೇಕರ ಮೊದಲ ಪ್ರಶ್ನೆ ಆಗಿರುತ್ತದೆ.

ಪ್ರಮುಖ ವಾಣಿಜ್ಯ ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ, 2021ರ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯವಿಲ್ಲ. ಮೂಲಗಳ ಮಾಹಿತಿಯನ್ನು ಆಧರಿಸಿ, ಈ ವರದಿಯನ್ನು ಮಾಡಲಾಗಿದೆ. ಆದರೆ ಇತರ ತೆರಿಗೆ ವಿನಾಯಿತಿ ಕ್ರಮಗಳ ಮೂಲಕ ತೆರಿಗೆದಾರರಿಗೆ ಅನುಕೂಲ ಒದಗಿಸಬಹುದು ಎನ್ನಲಾಗಿದೆ.

ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ನಿರೀಕ್ಷೆ ಏನು?ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ನಿರೀಕ್ಷೆ ಏನು?

ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿರುವುದು ಎನ್ ಡಿಎ 2.0ದ 3ನೇ ಬಜೆಟ್. ಒಂದು ಕಡೆ ಆರ್ಥಿಕತೆ ಚೇತರಿಕೆಗೆ ಸಹಾಯ ಆಗುವಂಥ ಬಜೆಟ್ ಮಂಡಿಸಬೇಕಿದೆ ಮತ್ತು ಆದಾಯಕ್ಕೆ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸರಿತೂಗಿಸಿಕೊಳ್ಳಬೇಕಿದೆ.

ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ

2020- 21ರ ಆರ್ಥಿಕ ವರ್ಷ ವೈಯಕ್ತಿಕ ಆದಾಯ ತೆರಿಗೆ ದರ ಹೀಗಿತ್ತು:
ವಾರ್ಷಿಕ ಆದಾಯ- ತೆರಿಗೆ ದರ
2.5 ಲಕ್ಷ ರು. ತನಕದ ಆದಾಯ- ಯಾವುದೇ ಆದಾಯ ತೆರಿಗೆ ಇಲ್ಲ

2.5 ಲಕ್ಷ ರುಪಾಯಿಯಿಂದ 5 ಲಕ್ಷ ರು.- 10%

5 ಲಕ್ಷದಿಂದ 10 ಲಕ್ಷ ರು.- 20%

10 ಲಕ್ಷ ರುಪಾಯಿ ಮತ್ತು ಮೇಲ್ಪಟ್ಟು- 30%

ಕೈಗೆಟುಕುವ ದರದ ಮನೆ ಖರೀದಿಗೆ ಇರುವ ಯೋಜನೆ ವಿಸ್ತರಿಸಬಹುದು. ಸದ್ಯದ ಯೋಜನೆಯಲ್ಲಿ ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕುವಾಗ ಎರಡು ಲಕ್ಷ ರು. ತನಕದ ಗರಿಷ್ಠ ಆದಾಯಕ್ಕೆ ಸಾಲಕ್ಕೆ ಕಟ್ಟಿರುವ ಬಡ್ಡಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ಸೆಕ್ಷನ್ 80C ಅಡಿಯಲ್ಲಿ ಇರುವ 1.5 ಲಕ್ಷ ರುಪಾಯಿ ವಿನಾಯಿತಿಯನ್ನು 2 ಲಕ್ಷ ರುಪಾಯಿಗೆ ಹೆಚ್ಚಿಸುವ ಚಿಂತನೆ ಇದೆ. ಸೆಕ್ಷನ್ D ಅಡಿ ವಿನಾಯಿತಿ 25,000 ರು.ಗೂ ಜಾಸ್ತಿ ಮಾಡಬಹುದು.

ಕೊರೊನಾ ಹೊಡೆತಕ್ಕೆ ಸಿಲುಕಿರುವ ಆರ್ಥಿಕತೆಗೆ ಜೀವ ತುಂಬುವುದಕ್ಕಾಗಿ ವಿತ್ತೀಯ ಕೊರತೆ (ವೆಚ್ಚ ಹಾಗೂ ಆದಾಯದ ಮಧ್ಯದ ವ್ಯತ್ಯಾಸ) ಇದ್ದರೂ ಹೆಚ್ಚಿನ ಉತ್ತೇಜನ ಘೋಷಿಸಬಹುದು ಎಂದು ವಿವಿಧ ವಲಯಗಳಲ್ಲಿ ನಿರೀಕ್ಷೆ ಇದೆ.

English summary

Budget 2021: No Personal Income Tax Tweak Likely

According to report of major business media, there will be no income tac tweak likely in Budget 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X