For Quick Alerts
ALLOW NOTIFICATIONS  
For Daily Alerts

Canara Bank: ಡೆಬಿಟ್ ಕಾರ್ಡ್ ಸೇವಾ ಶುಲ್ಕ ಏರಿಸಿದ ಕೆನರಾ ಬ್ಯಾಂಕ್, ನೂತನ ಶುಲ್ಕವೆಷ್ಟು?

|

ದೇಶದ ಖಾಸಗಿ ವಲಯದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಇತ್ತೀಚೆಗೆ (ಡಿಸೆಂಬರ್‌ನಲ್ಲಿ) ದೈನಂದಿನ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡಿದೆ. ಈಗ ಮತ್ತೆ ಬೇರೊಂದು ಬದಲಾವಣೆಯನ್ನು ಬ್ಯಾಂಕ್ ಮಾಡಿದೆ. ಹೌದು ಬ್ಯಾಂಕ್ ಡೆಬಿಟ್ ಕಾರ್ಡ್ ಸೇವಾ ಶುಲ್ಕವನ್ನು ಏರಿಸಿದೆ.

ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ ನೂತನ ಡೆಬಿಟ್ ಕಾರ್ಡ್ ಸೇವಾ ಶುಲ್ಕವು 2023ರ ಫೆಬ್ರವರಿ 13ರಿಂದ ಜಾರಿಗೆ ಬರುತ್ತದೆ. ವಾರ್ಷಿಕ ಶುಲ್ಕ, ಕಾರ್ಡ್ ಬದಲಾವಣೆ ಶುಲ್ಕ, ಡೆಬಿಟ್ ಕಾರ್ಡ್ ನಿಷ್ಟ್ರೀಯಗೊಳಿಸುವ ಶುಲ್ಕ, ಎಸ್‌ಎಂಎಸ್ ಅಲರ್ಟ್ ಶುಲ್ಕ ಸೇರಿದಂತೆ ಬ್ಯಾಂಕ್ ಹಲವಾರು ಶುಲ್ಕಗಳನ್ನು ಏರಿಕೆ ಮಾಡಿದೆ.

Canara Bank : ಎಟಿಎಂ ವಿತ್‌ಡ್ರಾ ಮಿತಿ ಏರಿಸಿದ ಕೆನರಾ ಬ್ಯಾಂಕ್, ಎಷ್ಟು ನಗದು ಪಡೆಯಬಹುದು?Canara Bank : ಎಟಿಎಂ ವಿತ್‌ಡ್ರಾ ಮಿತಿ ಏರಿಸಿದ ಕೆನರಾ ಬ್ಯಾಂಕ್, ಎಷ್ಟು ನಗದು ಪಡೆಯಬಹುದು?

ಈ ಕೆಳಗೆ ನಾವು ನೂತನ ಶುಲ್ಕವನ್ನು ಪಟ್ಟಿ ಮಾಡಿದ್ದೇವೆ. ಆದರೆ ಈ ಶುಲ್ಕಗಳು ತೆರಿಗೆಗೂ ಮುಂಚಿನ ಶುಲ್ಕವಾಗಿದೆ. ಶುಲ್ಕಕ್ಕೆ ತೆರಿಗೆ ಸೇರ್ಪಡೆಯಾಗಲಿದೆ. ಹಾಗಾದರೆ ಯಾವ ಕಾರ್ಡ್‌ಗೆ ಎಷ್ಟು ಶುಲ್ಕವಿದೆ, ವಾರ್ಷಿಕ ಶುಲ್ಕವೆಷ್ಟು, ಡೆಬಿಟ್ ಕಾರ್ಡ್ ಬದಲಾವಣೆ ಮಾಡುವ ಶುಲ್ಕವೆಷ್ಟು, ಡೆಬಿಟ್ ಕಾರ್ಡ್ ನಿಷ್ಕ್ರೀಯಗೊಳಿಸುವ ಶುಲ್ಕವೆಷ್ಟು ತಿಳಿಯೋಣ ಮುಂದೆ ಓದಿ....

 ವಾರ್ಷಿಕ, ಕಾರ್ಡ್ ಬದಲಾವಣೆ ಶುಲ್ಕ ಎಷ್ಟಿದೆ?

ವಾರ್ಷಿಕ, ಕಾರ್ಡ್ ಬದಲಾವಣೆ ಶುಲ್ಕ ಎಷ್ಟಿದೆ?

ಸ್ಟಾಡರ್ಡ್ ಅಥವಾ ಕ್ಲಾಸಿಕ್ ಡೆಬಿಟ್ ಕಾರ್ಡ್‌ಗೆ ವಾರ್ಷಿಕ ಶುಲ್ಕವನ್ನು ಹೆಚ್ಚಿಸಲಾಗಿದೆ. ಸುಮಾರು 200 ರೂಪಾಯಿಗೆ ವಾರ್ಷಿಕ ಶುಲ್ಕ ಏರಿಕೆಯಾಗಿದೆ. ಪ್ಲಾಟಿನಮ್ ಮತ್ತು ಬ್ಯುಜಿನೆಸ್ ಕಾರ್ಡ್‌ಗೆ ವಾರ್ಷಿಕ ಶುಲ್ಕವನ್ನು 500 ರೂಪಾಯಿಗೆ ಏರಿಸಲಾಗಿದೆ. ಹಾಗೆಯೇ ನಿರ್ದಿಷ್ಟ ಡೆಬಿಟ್ ಕಾರ್ಡ್‌ಗಳಿಗೆ ವಾರ್ಷಿಕ ಶುಲ್ಕವಾಗಿ 1000 ರೂಪಾಯಿ ವಿಧಿಸುವುದನ್ನು ಕೆನರಾ ಬ್ಯಾಂಕ್ ಮುಂದುವರಿಸುವುದಾಗಿ ಹೇಳಿದೆ. ಡೆಬಿಟ್ ಕಾರ್ಡ್ ಅನ್ನು ಬದಲಾವಣೆ ಮಾಡುವ ಶುಲ್ಕವನ್ನು ಕೂಡಾ ಕೆನರಾ ಬ್ಯಾಂಕ್ ಏರಿಸಿದೆ. ಕ್ಲಾಸಿಕ್ ಹಾಗೂ ಸ್ಟಾಂಡರ್ಡ್ ಡೆಬಿಟ್ ಕಾರ್ಡ್‌ಗೆ ಸೊನ್ನೆಯಿಂದ 150 ರೂಪಾಯಿವರೆಗೆ ಶುಲ್ಕವಿದೆ. ಹಾಗೆಯೇ ಪ್ಲಾಟಿನಂ, ಬ್ಯುಜಿನೆಟ್ ಹಾಗೂ ಸೆಲೆಕ್ಟ್ ಕಾರ್ಡ್ ಶುಲ್ಕವನ್ನು 50 ರೂಪಾಯಿಯಿಂದ 150 ರೂಪಾಯಿಗೆ ಹೆಚ್ಚಿಸಲಾಗಿದೆ.

 ಕಾರ್ಡ್ ನಿಷ್ಕ್ರೀಯ, ಎಸ್‌ಎಂಎಸ್‌ ಅಲರ್ಟ್ ಶುಲ್ಕ

ಕಾರ್ಡ್ ನಿಷ್ಕ್ರೀಯ, ಎಸ್‌ಎಂಎಸ್‌ ಅಲರ್ಟ್ ಶುಲ್ಕ

ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕವನ್ನು ಕೂಡಾ ಹೆಚ್ಚಳ ಮಾಡಿದೆ. ಬ್ಯುಜಿನೆಸ್ ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕವಾಗಿ ಬ್ಯಾಂಕ್ ವಾರ್ಷಿಕವಾಗಿ 300 ರೂಪಾಯಿ ವಿಧಿಸುತ್ತದೆ. ಬೇರೆ ಪಾವತಿ ವಿಧಾನವು ಉಚಿತವಾಗಿದೆ. ಬೇರೆ ಕಾರ್ಡ್‌ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಹಿಂದೆ ಕೆನರಾ ಬ್ಯಾಂಕ್ ಒಂದು ತ್ರೈಮಾಸಿಕಕ್ಕೆ 15 ರೂಪಾಯಿ ಎಸ್‌ಎಂಎಸ್‌ ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಈ ಶುಲ್ಕವನ್ನು ತೆಗೆದುಹಾಕಿತ್ತು. ಈಗ ಮತ್ತೆ ಶುಲ್ಕವನ್ನು ಆರಂಭಿಸಿದೆ. ಒಂದು ತ್ರೈಮಾಸಿಕಕ್ಕೆ 15 ರೂಪಾಯಿ ಎಸ್‌ಎಂಎಸ್‌ ಶುಲ್ಕವಾಗಿ ವಿಧಿಸುತ್ತದೆ. ಸ್ಟಾಡರ್ಡ್ ಅಥವಾ ಕ್ಲಾಸಿಕ್ ಕಾರ್ಡ್‌ಗೆ ದೈನಂದಿನ ಎಟಿಎಂ ವಿತ್‌ಡ್ರಾ ಮಿತಿ 40 ಸಾವಿರವಾಗಿದೆ. ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ಪ್ಲಾಟಿನಂ/ಸೆಲೆಕ್ಟ್ ಕಾರ್ಡ್‌ಗಳಿಗೆ ದೈನಂದಿನ ಎಟಿಎಂ ವಿತ್‌ಡ್ರಾ ಮಿತಿ 50 ಸಾವಿರ ಆಗಿದೆ. ದೈನಂದಿನ ವಹಿವಾಟು ಮಿತಿ 2 ಲಕ್ಷ ರೂಪಾಯಿ ಆಗಿದೆ.

 ನೂತನ ಶುಲ್ಕ ಪಟ್ಟಿಯನ್ನು ನೋಡಿ

ನೂತನ ಶುಲ್ಕ ಪಟ್ಟಿಯನ್ನು ನೋಡಿ

ಕ್ಲಾಸಿಕ್‌/ಸ್ಟಾಡರ್ಡ್ ಕಾರ್ಡ್

ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 125 ರೂ, ಹೊಸ ಕಾರ್ಡ್‌ಗೆ 200 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ ಇಲ್ಲ, ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ

ಪ್ಲಾಟಿನಂ ಕಾರ್ಡ್

ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 250 ರೂ, ಹೊಸ ಕಾರ್ಡ್‌ಗೆ 500 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ

ಬ್ಯುಜಿನೆಸ್ ಕಾರ್ಡ್

ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 300 ರೂ, ಹೊಸ ಕಾರ್ಡ್‌ಗೆ 500 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ ಕಾರ್ಡ್‌ಗೆ 300 ರೂಪಾಯಿ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ

ಸೆಲೆಕ್ಟ್ ಡೆಬಿಟ್ ಕಾರ್ಡ್

ಎನ್‌ರೋಲ್‌ಮೆಂಟ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಆಕ್ಟಿವೇಷನ್/ಮೆಂಬರ್‌ಶಿಪ್ ಶುಲ್ಕ: ಹಳೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ವಾರ್ಷಿಕ ಶುಲ್ಕ: ಹಳೆ ಕಾರ್ಡ್‌ಗೆ 1000 ರೂ, ಹೊಸ ಕಾರ್ಡ್‌ಗೆ 1000 ರೂಪಾಯಿ ಆಗಿದೆ.
ಕಾರ್ಡ್ ಬದಲಾವಣೆ ಶುಲ್ಕ: ಹಳೆ ಕಾರ್ಡ್‌ಗೆ 50 ರೂಪಾಯಿ , ಹೊಸ ಕಾರ್ಡ್‌ಗೆ 150 ರೂಪಾಯಿ
ಡೆಬಿಟ್ ಕಾರ್ಡ್ ನಿಷ್ಕ್ರೀಯ ಶುಲ್ಕ: ಹಳೆ ಕಾರ್ಡ್‌ಗೆ, ಹೊಸ ಕಾರ್ಡ್‌ಗೆ ಯಾವುದೇ ಶುಲ್ಕವಿಲ್ಲ.
ಎಸ್‌ಎಂಎಸ್ ಅಲರ್ಟ್ ಶುಲ್ಕ (ತ್ರೈಮಾಸಿಕ): 15 ರೂಪಾಯಿ

English summary

Canara Bank Hiked Debit Card Service Charges, Know New Charges Here

Canara Bank, a public sector lender, has increased its debit card service charges on various card types. Know New Charges Here.
Story first published: Thursday, January 19, 2023, 13:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X