For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆ

|

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆ ಅಥವಾ ಡಿಎ ಮತ್ತು ತುಟ್ಟಿಭತ್ಯೆ (ಡಿಆರ್) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜುಲೈನಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

 

ವರ್ಷಕ್ಕೆ ಎರಡು ಬಾರಿ ಡಿಎ ಘೋಷಣೆ ಮಾಡಲಾಗುತ್ತದೆ. ಈ ವರ್ಷದಲ್ಲಿ ಜನವರಿಯಲ್ಲಿ ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಘೋಷಣೆ ಮಾಡಿದೆ. ವರದಿಗಳ ಪ್ರಕಾರವ ಮೇ ತಿಂಗಳಿನಲ್ಲಿ ಶೇಕಡ 7.4ರಷ್ಟಿರುವ ಹಣದುಬ್ಬರವನ್ನು ಕೇಂದ್ರ ಸರ್ಕಾರವು ಪರಿಗಣನೆಗೆ ತೆಗೆದುಕೊಳ್ಳಬಹುದು.

 

ವರದಿಗಳ ಪ್ರಕಾರ, ಈ ಬಾರಿ ಡಿಎಯಲ್ಲಿ ಇನ್ನೂ ಶೇಕಡ ಐದರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) 127.7 ಪಾಯಿಂಟ್‌ಗಳಿಗೆ ಏರಿದೆ. ಇನ್ನು ಮೇ, ಜೂನ್ ಡೇಟಾವನ್ನು ಕೂಡಾ ಪರಿಶೀಲನೆ ಮಾಡಲಾಗುವುದು. ಏಕೆಂದರೆ ಇದು ಡಿಎ ಹೆಚ್ಚಳದ ಮೇಲೆ ಪ್ರಮುಖ ಪಾತ್ರ ವಹಿಸಲಿದೆ. ಗ್ರಾಹಕ ಬೆಲೆ ಸೂಚ್ಯಂಕವು 127 ಕ್ಕಿಂತ ಹೆಚ್ಚಾಗು ಮುಂದುವರಿದರೆ, ಡಿಎ ಮತ್ತೆ ಶೇಕಡ ಐದರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರುಗಳು ಹೇಳುತ್ತಾರೆ.

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆ

ಈ ಹಿಂದೆ ಎಷ್ಟು ಬಾರಿ ಏರಿಕೆ ಮಾಡಲಾಗಿದೆ?

ನಿಯಮಗಳ ಪ್ರಕಾರ, ಡಿಎ ಘೋಷಣೆಯನ್ನು ಮೊದಲು ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಮಾಡಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಸುಮಾರು 1.5 ವರ್ಷಗಳ ಕಾಲ ಡಿಎ ಹೆಚ್ಚಳವನ್ನು ಮಾಡಿಲ್ಲ. ನಂತರ ಜುಲೈ 2021 ರಲ್ಲಿ ಡಿಎ ಹೆಚ್ಚಳ ಮತ್ತೆ ಆರಂಭ ಮಾಡಲಾಗಿದೆ.

7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಯಿತು. ಶೇಕಡ 17 ರಿಂದ 28 ರಷ್ಟು ಡಿಎ ಅಧಿಕವಾಗಿದೆ.

ನಂತರ, ಜುಲೈ 1, 2021 ರಿಂದ ಜಾರಿಗೆ ಬರುವಂತೆ ಅಕ್ಟೋಬರ್ 2021 ರಲ್ಲಿ ಶೇಕಡ 3ರಷ್ಟು ಹೆಚ್ಚಳವನ್ನು ಜಾರಿಗೆ ತರಲಾಯಿತು. ಹೀಗಾಗಿ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಜುಲೈ 1 ರಿಂದ ಶೇಕಡ 31ರಷ್ಟು ಹೆಚ್ಚಳವನ್ನು ಡಿಎ ಪಡೆಯಲು ಪ್ರಾರಂಭವಾಗಿದೆ. ಮತ್ತೆ ಜನವರಿ ಜನವರಿ 1, 2022 ರಂದು ಮತ್ತೊಂದು ಬಾರಿ ಶೇಕಡ 3ರಷ್ಟು ಡಿಎ ಹೆಚ್ಚಳ ಮಾಡಲಾಗಿದೆ. ಅಂದಿನಿಂದ ಕೇಂದ್ರ ಸರ್ಕಾರಿ ನೌಕರರು ಶೇಕಡ 34ರಷ್ಟು ಡಿಎ ಅನ್ನು ಪಡೆಯುತ್ತಿದ್ದಾರೆ.

English summary

Central Government Staffers To Likely Get DA Hike In July

Central government staffers and pensioners are in for a relief as the dearness allowance or DA and dearness relief (DR) is likely to be hiked.
Story first published: Saturday, June 25, 2022, 20:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X