For Quick Alerts
ALLOW NOTIFICATIONS  
For Daily Alerts

ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ 2 ಲಕ್ಷ ಸಿಗುತ್ತಾ?

|

ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 18 ತಿಂಗಳ ಡಿಎ ಬಾಕಿಯನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಿಂದಾಗಿ ತಮ್ಮ ಬಾಕಿ ಹಣವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲು ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಈ ಹೊಸ ವರ್ಷದಲ್ಲಿ ಎರಡು ಲಕ್ಷ ಸಿಗಲಿಯೇ ಎಂಬ ಸುದ್ದಿ ಆಗುತ್ತಿದೆ.

ಹೌದು ಕೇಂದ್ರ ಸರ್ಕಾರವು ಸುಮಾರು 18 ತಿಂಗಳ ಡಿಎಯನ್ನು ಸರ್ಕಾರಿ ನೌಕರರಿಗೆ ನೀಡಬೇಕಾಗಿದೆ. ಇದು ಸರಿ ಸುಮಾರು ಎರಡು ಲಕ್ಷ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಹೊಸ ವರ್ಷದಲ್ಲಿ ಈ ಡಿಎ ಬಾಕಿ ಹಣ ಎರಡು ಲಕ್ಷ ರೂಪಯಿ ಲಭಿಸುವ ಸಾಧ್ಯತೆ ಇದೆಯೇ ಎಂದು ನೌಕರರು ಕಾಯುತ್ತಿದ್ದಾರೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಡಿಎ ಹೆಚ್ಚಳವಾದಂತೆ ಆಗಲಿದೆ ವೇತನ ಹೆಚ್ಚಳಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಡಿಎ ಹೆಚ್ಚಳವಾದಂತೆ ಆಗಲಿದೆ ವೇತನ ಹೆಚ್ಚಳ

ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ನೀಡಬೇಕಾಗಿದೆ. ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಈ ತುಟ್ಟಿ ಭತ್ಯೆಯನ್ನು ಶೇಕಡ 17 ರಿಂದ ಶೇಕಡ 31 ಕ್ಕೆ ಏರಿಕೆ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಅಧಿಕವಾಗಿದೆ. ಆದರೆ ಈವರೆಗೂ ಡಿಎ ಬಾಕಿ ನೌಕರರ ಬ್ಯಾಂಕ್‌ ಖಾತೆಗೆ ಜಮೆ ಆಗಿಲ್ಲ.

ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ 2 ಲಕ್ಷ ಸಿಗುತ್ತಾ?

ಹೊಸ ವರ್ಷಕ್ಕೆ ಡಿಎ ಜಮೆ ಆಗುತ್ತಾ?

ಈ ನಡುವೆ ಹೊಸ ವರ್ಷದಲ್ಲಿ ಡಿಎ ಬಾಕಿ ಹಣ ಸರ್ಕಾರಿ ನೌಕರರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ ಎಂದು ವರದಿ ಆಗಿದೆ. ಡಿಎ ಬಾಕಿಯನ್ನು ಸರ್ಕಾರವು ಜಮೆ ಮಾಡಿದರೆ, ಈ ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸುಮಾರು ಎರಡು ಲಕ್ಷ ರೂಪಾಯಿ ದೊರೆಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಡಿಎ ಬಾಕಿಯನ್ನು ನೌಕರರ ಖಾತೆಗೆ ಜಮೆ ಮಾಡುವ ವಿಚಾರವಾಗಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ.

ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ

ಎಷ್ಟು ತುಟ್ಟಿಭತ್ಯೆ ಅಥವಾ ಡಿಎ ಲಭಿಸಲಿದೆ?

ನ್ಯಾಷನಲ್‌ ಕೌನ್ಸಿಲ್‌ ಆಫ್‌ ಜೆಸಿಎಂ ನ ಶಿವ ಗೋಪಾಲ್‌ ಮಿಶ್ರಾರ ಪ್ರಕಾರ, ಶ್ರೇಣಿ ಒಂದರ ನೌಕರರಿಗೆ ಸುಮಾರು ರೂಪಾಯಿ 11,880ರಿಂದ 37,554ರವೆಗೆ ಡಿಎ ಲಭಿಸಲಿದೆ. ಈ ಸಂದರ್ಭದಲ್ಲೇ ಶ್ರೇಣಿ 13 ರ ಹಾಗೂ 14 ರ ನೌಕರರಿಗೆ ಮೂಲ ವೇತನ ರೂಪಾಯಿ 1,23,100ರಿಂದ ರೂಪಾಯಿ 2,15,900 ಆಗಿದ್ದರೆ, ಸುಮಾರು 1,44,200-2,18,200 ರೂಪಾಯಿವರೆಗೆ ಡಿಎ ಲಭಿಸಲಿದೆ.

ಶಿಕ್ಷಣ ಭತ್ಯೆ

ಕೇಂದ್ರ ಸರ್ಕಾರದ ಉದ್ಯೋಗಿಗಳು ಸೇರಿದಂತೆ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಹೆಚ್ಚಳ ಮಾಡಿದೆ. ಹಾಗೆಯೇ ಮನೆ ಬಾಡಿಗೆ ಭತ್ಯೆಯು ಶೇಕಡ 24 ರಿಂದ ಶೇಕಡ 27 ಏರಿಕೆಯಾಗಿದೆ. ಈ ನಡುವೆ ಇನ್ನು ಈ ನಡುವೆ ಉದ್ಯೋಗಿಗಳಿಗೆ ಮಕ್ಕಳ ಶಿಕ್ಷಣ ಭತ್ಯೆ (ಸಿಇಎ) ನೀಡಬೇಕು ಎಂಬ ಆಗ್ರಹದಂತೆ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ಘೋಷಣೆ ಮಾಡಿತ್ತು. ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕೇಂದ್ರ ಸರ್ಕಾರದ ಉದ್ಯೋ‌ಗಿಗಳು ಈಗ ಮಕ್ಕಳ ಶಿಕ್ಷಣ ಭತ್ಯೆಗಾಗಿ ಅರ್ಜಿ ಸಲ್ಲಿಸಬಹುದು. ಲಾಕ್‌ಡೌನ್‌ ಕಾರಣದಿಂದಾಗಿ ಶಾಲೆಗಳು ಮುಚ್ಚಲಾಗಿದ್ದ ಕಾರಣದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಈಗ ಶಾಲೆಗಳನ್ನು ಮತ್ತೆ ಆರಂಭ ಮಾಡಲಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಈಗ ಮತ್ತೆ ಈ ಅರ್ಜಿ ಸಲ್ಲಿಕೆಯನ್ನು ಆರಂಭ ಮಾಡಲು ನಿರ್ಧಾರ ಮಾಡಿದೆ. ಅದರಂತೆ ಕೇಂದ್ರ ಸರ್ಕಾರದ ಉದ್ಯೋಗಿಗಳು ಮಕ್ಕಳ ಶಿಕ್ಷಣ ಭತ್ಯೆಗಾಗಿ ಈಗ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಮಕ್ಕಳ ಶಿಕ್ಷಣ ಭತ್ಯೆಯು ತಿಂಗಳಿಗೆ ರೂಪಾಯಿ 2,250 ಆಗಿತ್ತು. ಆದರೆ ಏಳನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳಿಗೆ ಈಗ ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಜಿ ಸಲ್ಲಿಸಿದ ಬಳಿಕ ತಿಂಗಳಿಗೆ ರೂಪಾಯಿ 4,500 ದೊರೆಯಲಿದೆ.

English summary

Central govt employees to get upto Rs 2 lakh in New Year as 18-months DA arrears?

Central govt employees to get upto Rs 2 lakh in New Year as 18-months DA arrears?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X