Education Loan: ಕಡಿಮೆ ಬಡ್ಡಿ ದರಕ್ಕೆ ಶಿಕ್ಷಣ ಸಾಲ ನೀಡುವ ಬ್ಯಾಂಕ್ ಗಳಿವು
ಸಾರ್ವಜನಿಕ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಶಿಕ್ಷಣ ಸಾಲ ನೀಡಲಾಗುತ್ತಿದೆ. 20 ಲಕ್ಷ ರುಪಾಯಿ ಮೊತ್ತಕ್ಕೆ 6.8 ಪರ್ಸೆಂಟ್ ಬಡ್ಡಿ ದರದಂತೆ 7 ವರ್ಷಗಳ ಅವಧಿಗೆ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತದೆ.
ಅಂದ ಹಾಗೆ, ಕಡಿಮೆ ಬಡ್ಡಿ ದರಕ್ಕೆ ಶಿಕ್ಷಣ ಸಾಲವನ್ನು ನೀಡುವ ಇತರ ಬ್ಯಾಂಕ್ ಗಳ ಪಟ್ಟಿಯನ್ನೂ ಇಲ್ಲಿ ನೀಡಲಾಗಿದೆ. ಇವು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು. ಇಲ್ಲಿನ ದತ್ತಾಂಶಗಳನ್ನು ಬ್ಯಾಂಕ್ ಬಜಾರ್ ಒಗ್ಗೂಡಿಸಿದೆ. ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ ಶಿಕ್ಷಣ ಸಾಲಕ್ಕೆ ಎಷ್ಟು ಬಡ್ಡಿ ದರ ಎಂಬ ಮಾಹಿತಿ ಹೀಗಿದೆ:
* ಯೂನಿಯನ್ ಬ್ಯಾಂಕ್ 6.80%
* ಸೆಂಟ್ರಲ್ ಬ್ಯಾಂಕ್ 6.85%
* ಬ್ಯಾಂಕ್ ಆಫ್ ಇಂಡಿಯಾ 6.85%
* ಬ್ಯಾಂಕ್ ಆಫ್ ಬರೋಡಾ 6.85%
* ಪಂಜಾಬ್ ನ್ಯಾಷನಲ್ ಬ್ಯಾಂಕ್ 6.90%
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6.90%
* ಇಂಡಿಯನ್ ಬ್ಯಾಂಕ್ 7.15%
* ಐಡಿಬಿಐ ಬ್ಯಾಂಕ್ 7.15%
* ಬ್ಯಾಂಕ್ ಆಫ್ ಮಹಾರಾಷ್ಟ್ರ 7.20%
* ಇಂಡಿಯನ್ ಓವರ್ ಸೀಸ್ ಬ್ಯಾಂಕ್ 7.25%
ಯಾವ ಸಾಲ ಮುಂಚಿತವಾಗಿ ತೀರಿಸಬೇಕು? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರ
ಶಿಕ್ಷಣ ಸಾಲದ ಮರುಪಾವತಿಗೆ ಸೆಕ್ಷನ್ 80E ಅಡಿಯಲ್ಲಿ ತೆರಿಗೆ ಅನುಕೂಲ ದೊರೆಯುತ್ತದೆ. ಎಂಟು ವರ್ಷಗಳ ಅವಧಿಗೆ ಅಥವಾ ಬಡ್ಡಿ ಪೂರ್ತಿಯಾಗಿ ಮರುಪಾವತಿ ಆಗುವ ತನಕ, ಯಾವುದು ಮೊದಲೋ ಅಲ್ಲಿಯ ತನಕ ಕಡಿತ ದೊರೆಯುತ್ತದೆ.