For Quick Alerts
ALLOW NOTIFICATIONS  
For Daily Alerts

ಮತ್ತೆ ಸಿಎನ್‌ಜಿ ದರ ಏರಿಕೆ, 2022ರಲ್ಲಿ 14 ಬಾರಿ ಬೆಲೆ ಹೆಚ್ಚಳ

|

ದೇಶದ ರಾಜಧಾನಿ ಸಿಎನ್‌ಜಿ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ನವದೆಹಲಿಯಲ್ಲಿ ಸಿಎನ್‌ಜಿ ದರವು ಸುಮಾರು 95 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ದರವು ಪ್ರತಿ ಕೆಜಿ ಸಿಎನ್‌ಜಿಗೆ 79.56 ರೂಪಾಯಿಗೆ ಏರಿದೆ.

ನೂತನ ದರವು ಶನಿವಾರ ಮುಂಜಾನೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಈ ಹಿಂದೆ ಅಕ್ಟೋಬರ್ 8ರಂದು ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದಕ್ಕೂ ಮುನ್ನ ಹಲವಾರು ಬಾರಿ ಬೆಲೆ ಏರಿಕೆ ಮಾಡಲಾಗಿದೆ.

ಸಿಎನ್‌ಜಿ ಬೆಲೆ ಏರಿಕೆ: ನೂತನ ದರ ಪರಿಶೀಲಿಸಿಸಿಎನ್‌ಜಿ ಬೆಲೆ ಏರಿಕೆ: ನೂತನ ದರ ಪರಿಶೀಲಿಸಿ

ದೆಹಲಿಯಲ್ಲಿ ಈ ಹಿಂದೆ ಪ್ರತಿ ಕೆಜಿ ಸಿಎನ್‌ಜಿಗೆ 78.61 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ ದರ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ದರವು 79.56 ರೂಪಾಯಿ ಆಗಿದೆ. ಇನ್ನು ಗುರುಗ್ರಾಮ, ನೋಯ್ಡಾ ಸೇರಿದಂತೆ ಕೆಲವು ಪ್ರದೇಶದಲ್ಲಿ ಸಿಎನ್‌ಜಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಮತ್ತೆ ಸಿಎನ್‌ಜಿ ದರ ಏರಿಕೆ, 2022ರಲ್ಲಿ 14 ಬಾರಿ ಬೆಲೆ ಹೆಚ್ಚಳ

ಬೇರೆ ಪ್ರದೇಶದಲ್ಲಿ ಎಷ್ಟಿದೆ ಸಿಎನ್‌ಜಿ ದರ?

ದೆಹಲಿಯನ್ನು ಹೊರತುಪಡಿಸಿ ಪ್ರಸ್ತುತ ಗುರುಗ್ರಾಮದಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ 86.94 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಇನ್ನು ಗಾಝಿಯಾಬಾದ್ ಹಾಗೂ ನೋಯ್ಡಾ-ಗ್ರೇಟರ್ ನೋಯ್ಡಾದಲ್ಲಿ ಸಿಎನ್‌ಜಿ ದರ 81.17 ರೂಪಾಯಿಯಾಗಿದೆ. ರೆವಾರಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ 78.61 ರೂಪಾಯಿ ಆಗಿದೆ. ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಏರಿಕೆ ಮಾಡಿದ ಬಳಿಕ ಗುರುಗ್ರಾಮ, ಗಾಝಿಯಾಬಾದ್, ನೋಯ್ಡಾ, ಗ್ರೇಟರ್ ನೋಯ್ಡಾ, ರೆವಾರಿಯಲ್ಲಿಯೂ ದರವನ್ನು ಏರಿಕೆ ಮಾಡುವ ಸಾಧ್ಯತೆಯಿದೆ.

ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳ ದರ ಪಟ್ಟಿಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳ ದರ ಪಟ್ಟಿ

2022ರಲ್ಲಿ 14 ಬಾರಿ ಸಿಎನ್‌ಜಿ ದರ ಹೆಚ್ಚಳ

ಮಾರ್ಚ್ 7, 2022ರಿಂದ ಈವರೆಗೆ ಸಿಎನ್‌ಜಿ ದರವು ಒಟ್ಟಾಗಿ 14 ಬಾರಿ ಹೆಚ್ಚಳವಾಗಿದೆ. ಈ ಹಿಂದೆ ಮೇ 2021ರಲ್ಲಿ ದರವು ಪ್ರತಿ ಕೆಜಿಗೆ 2 ರೂಪಾಯಿಯಂತೆ ಹೆಚ್ಚಳವಾಗಿದೆ. ಆದರೆ 2022ರ ಮಾರ್ಚ್ ತಿಂಗಳಿನಿಂದ ಆರಂಭವಾದ ದರ ಏರಿಕೆಯು ಜನರ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ. ಮಾರ್ಚ್‌ನಿಂದ ಈವರೆಗೆ 14 ಬಾರಿಯಾದ ದರ ಏರಿಕೆಯಲ್ಲಿ ಒಟ್ಟಾಗಿ ಪ್ರತಿ ಕೆಜಿಗೆ 23.55 ರೂಪಾಯಿ ಬೆಲೆ ಹೆಚ್ಚಳವಾಗಿದೆ.

2021ರ ಏಪ್ರಿಲ್‌ನಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 36.16 ರೂಪಾಯಿ ಏರಿಕೆ ಮಾಡಲಾಗಿದೆ. ಅಂದರೆ ಸುಮಾರು 80 ಶೇಕಡ ದರ ಏರಿಸಲಾಗಿದೆ. ಜನವರಿ 2022ರಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 54.31 ರೂಪಾಯಿ ಆಗಿತ್ತು.

English summary

CNG Prices Rise Again By 95 Paise, Check New Rates in Here

CNG Prices Rise Again By 95 Paise In Delhi And Other Cities, Check New Rates Here.
Story first published: Saturday, December 17, 2022, 9:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X