For Quick Alerts
ALLOW NOTIFICATIONS  
For Daily Alerts

Digital wedding loans : ಮದುವೆ ಸೀಸನ್ ನಡುವೆ ಡಿಜಿಟಲ್ ಸಾಲಕ್ಕೆ ಡಿಮ್ಯಾಂಡ್!

|

ಮದುವೆ ಎಂಬುವುದು ಜೀವನದ ಅತೀ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ನಮ್ಮ ವಿವಾಹಕ್ಕಾಗಿ ನಾವು ಹಲವಾರು ಕನಸುಗಳನ್ನು ಹೊಂದಿರುತ್ತೇವೆ. ಈ ರೀತಿಯಲ್ಲೇ ನನ್ನ ಮದುವೆ ನಡೆಯಬೇಕು ಎಂದು ನಿರ್ಧಾರ ಮಾಡಿರುವವರು ಹಲವಾರು ಮಂದಿ ಇದ್ದಾರೆ. ಆದರೆ ಇದಕ್ಕಾಗಿ ಹಣ ಕೂಡಾ ಅತೀ ಮುಖ್ಯವಾಗಿದೆ. ಎಲ್ಲ ವ್ಯವಸ್ಥೆ ಮಾಡಿದ್ದರೂ ಕೊನೆಯ ಕ್ಷಣದಲ್ಲಿ ಇನ್ನೂ ಅಧಿಕ ಹಣದ ಅಗತ್ಯ ಉಂಟಾಗಬಹುದು.

ಈ ತೀರಾ ಅಗತ್ಯ ಸಂದರ್ಭದಲ್ಲಿ ನಮ್ಮ ಕೈ ಹಿಡಿಯುವುದು ಡಿಜಿಟಲ್ ಸಾಲವಾಗಿದೆ. ಡಿಜಿಟಲ್ ಆಪ್‌ಗಳ ಮೂಲಕ ನಾವು ಶೀಘ್ರದಲ್ಲೇ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ನಮ್ಮ ಖಾತೆಯಿಂದ ಆಟೋ ಪೇ ಆಯ್ಕೆಯನ್ನು ಮಾಡಿಕೊಂಡರೆ ಮಾಸಿಕ ಇಎಂಐ ಲೆಕ್ಕಾಚಾರದಲ್ಲಿ ಸಾಲದ ಮೊತ್ತ ಕಡಿತವಾಗಲಿದೆ.

ಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗುಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗು

ಪ್ರಸ್ತುತ ಮದುವೆಯ ಸೀಸನ್‌ ಆಗಿದೆ. ಹಲವಾರು ಮಂದಿ ದೀಪಾವಳಿ ಆಫರ್‌ ಸಂದರ್ಭದಲ್ಲೇ, ಧನತ್ರಯೋದಶಿಯಂದೆ ಚಿನ್ನಾಭರಣಗಳನ್ನು ಖರೀದಿ ಮಾಡಿದ್ದರೂ ಈಗ ಬೇರೆ ಹಲವಾರು ಖರ್ಚುಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ನಡುವೆ ಪ್ರಸ್ತುತ ಮದುವೆಯ ಸೀಸನ್‌ನಲ್ಲಿ ಡಿಜಿಟಲ್ ಆಪ್ ಸಾಲಕ್ಕೆ ಬೇಡಿಕೆ ಅಧಿಕವಾಗಿದೆ.

 ವಿವಾಹ, ಪ್ರವಾಸಕ್ಕಾಗಿಯೂ ಸಾಲ

ವಿವಾಹ, ಪ್ರವಾಸಕ್ಕಾಗಿಯೂ ಸಾಲ

ಚಿಕಿತ್ಸೆ, ಗೃಹ ನಿರ್ಮಾಣ, ಶಿಕ್ಷಣ ಸಾಲದ ಬೇಡಿಕೆ ಅಧಿಕವಾಗುತ್ತಿರುವ ನಡುವೆಯೇ ಪ್ರಸ್ತುತ ಪ್ರವಾಸ ಹಾಗೂ ವಿವಾಹಕ್ಕಾಗಿ ಸಾಲವು ಕೂಡಾ ಅಧಿಕವಾಗುತ್ತಿದೆ. ಅದು ಕೂಡಾ ಪ್ರಮುಖವಾಗಿ ಈ ತ್ರೈಮಾಸಿಕದಲ್ಲಿ ವಿವಾಹ ಹಾಗೂ ಪ್ರವಾಸಕ್ಕಾಗಿ ಸಾಲ ಪಡೆಯುವುದು ಅಧಿಕವಾಗಿದೆ. ಹೊಸದಾಗಿ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಡಿಜಿಟಲ್ ಸಾಲದ ಆಪ್‌ಗಳಾದ ಇನ್ಸ್‌ಸ್ಟಾಮನಿ, ಕ್ಯಾಷ್‌ಇ, ಪಿಯರ್‌ಟು ಪಿಯರ್ ಮೊದಲಾದವುಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ವೆಡ್ಡಿಂಗ್ ಸೀಸನ್ ನಡುವೆ ಈ ಹಠಾತ್ ಬೇಡಿಕೆ ಕಂಡುಬಂದಿದೆ.

 ಯಾವ ಆಪ್‌ನಲ್ಲಿ ಎಷ್ಟು ಪ್ರಮಾಣ ಏರಿಕೆ?

ಯಾವ ಆಪ್‌ನಲ್ಲಿ ಎಷ್ಟು ಪ್ರಮಾಣ ಏರಿಕೆ?

ಲೆನ್ಸ್‌ಡೆನ್‌ಕ್ಲಬ್ ಆಪ್‌ನಲ್ಲಿ ಈ ವರ್ಷ ವಿವಾಹಕ್ಕಾಗಿ ಸಾಲ ಪಡೆಯುವ ಪ್ರಮಾಣ ಅಧಿಕವಾಗಿದೆ. ಕಳೆದ ವರ್ಷಕ್ಕೆ ನಾವು ಹೋಲಿಕೆ ಮಾಡಿದಾಗ ಈ ಆಪ್‌ನಲ್ಲಿ ವಿವಾಹ ಸಾಲ ಶೇಕಡ 35ರಷ್ಟು ಅಧಿಕವಾಗಿದೆ. ಇನ್ನು ಇನ್‌ಸ್ಟಾಮನಿ ಆಪ್‌ನಲ್ಲಿ ಕಳೆದ ವರ್ಷದಿಂದ ಈ ವರ್ಷಕ್ಕೆ ವಿವಾಹ ಸಾಲ ಶೇಕಡ 40ರಷ್ಟು ಹೆಚ್ಚಾಗಿದೆ. ಜನರು ಈ ಆಪ್‌ ಮೂಲಕ 2 ಗಂಟೆಯಲ್ಲೇ 25 ಸಾವಿರ ರೂಪಾಯಿ ಸಾಲವನ್ನು ಪಡೆಯಲು ಸಾಧ್ಯವಾಗುವ ಕಾರಣದಿಂದಾಗಿ ಜನರು ಈ ಆಪ್‌ ಮೂಲಕ ಸಾಲವನ್ನು ಪಡೆಯುವುದು ಹೆಚ್ಚಿಸಿದ್ದಾರೆ. ಕ್ಯಾಷನ್‌ಇನಲ್ಲಿ ಕಳೆದ ವರ್ಷಕ್ಕೆ ನಾವು ಹೋಲಿಕೆ ಮಾಡಿದಾಗ ಅಕ್ಟೋಬರ್‌ನಲ್ಲಿ ವಿವಾಹಕ್ಕಾಗಿ ಸಾಲ ಪಡೆಯುವ ಪ್ರಮಾಣ ಅಧಿಕವಾಗುತ್ತಾ ಸಾಗುತ್ತಿದೆ. ಪ್ರಮುಖವಾಗಿ ಬೆಂಗಳೂರು, ಹೈದಾರಾದಾಬದ್, ದೆಹಲಿ, ಪುಣೆ, ಮುಂಬೈನಲ್ಲಿ ವಿವಾಹಕ್ಕಾಗಿ ಸಾಲವನ್ನು ಪಡೆಯುವ ಪ್ರಮಾಣ ಹೆಚ್ಚಾಗಿದೆ.

 ಯಾವ ಪ್ರದೇಶಲ್ಲಿ ಅಧಿಕ ವಿವಾಹ ಸಾಲ?

ಯಾವ ಪ್ರದೇಶಲ್ಲಿ ಅಧಿಕ ವಿವಾಹ ಸಾಲ?

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಕ್ಯಾಷ್‌ಇ ನ ಸಿಬಿಒ, ಸಿಟಿಒ ಯಶೋರಾಜ್ ತ್ಯಾಗಿ, "ಹೆಚ್ಚಾಗಿ ಯುವಕರು ಸರಳ ಹಾಗೂ ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗುತ್ತದೆ ಎಂಬ ಕಾರಣದಿಂದಾಗಿ ಡಿಜಿಟಲ್ ಸಾಲದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಬೆಂಗಳೂರು, ಹೈದಾರಾದಾಬದ್, ದೆಹಲಿ, ಪುಣೆ, ಮುಂಬೈನಲ್ಲಿ ವಿವಾಹಕ್ಕಾಗಿ ಸಾಲವನ್ನು ಪಡೆಯಲಾಗುತ್ತದೆ. ಈ ಸೀಸನ್‌ನಲ್ಲಿ ಪ್ರವಾಸ ಹಾಗೂ ಪ್ರಯಾಣಕ್ಕಾಗಿ ಅಧಿಕ ಸಾಲವನ್ನು ಪಡೆಯಲಾಗಿದೆ," ಎಂದು ವಿವರಿಸಿದ್ದಾರೆ.

English summary

Digital Loans are in Demand During Wedding Season, Explained in Kannada

raising finances for the wedding can be a time-consuming process. Digital Loans are in Demand During Wedding Season, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X