For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ನೆಲೆಸಲು ಬಯಸುವವರಿಗೆ ಕೈ ಬೀಸಿ ಕರೆಯುತ್ತಿದೆ, ಇಲ್ಲಿವೆ ನಿಯಮಗಳು

|

ನಿವೃತ್ತಿ ವಯಸ್ಸಿನವರನ್ನು ಸೆಳೆಯುವ ಉದ್ದೇಶಕ್ಕೆ ದುಬೈನಿಂದ ಕಾರ್ಯಕ್ರಮವೊಂದಕ್ಕೆ ವೇಗ ನೀಡಲಾಗಿದೆ. ಇದು ಎರಡು ವರ್ಷದ ಹಿಂದೆಯೇ ಆರಂಭವಾದ ಯೋಜನೆ. ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ದುಬೈ ಬಿಡುತ್ತಿರುವ ವಲಸಿಗರಿಂದ ಅಲ್ಲಿನ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಅಲ್ಲೋಲ ಕಲ್ಲೋಲ ಆಗಿದೆ. ಆ ಕಾರಣಕ್ಕೆ ಈ ಹೊಸ ಯೋಜನೆ.

ದುಬೈನಲ್ಲಿ ರಿಯಲ್ ಎಸ್ಟೇಟ್ ಹತ್ತು ವರ್ಷಗಳ ಹಿಂದಿನ ಸ್ಥಿತಿಗೆದುಬೈನಲ್ಲಿ ರಿಯಲ್ ಎಸ್ಟೇಟ್ ಹತ್ತು ವರ್ಷಗಳ ಹಿಂದಿನ ಸ್ಥಿತಿಗೆ

55 ವರ್ಷ ಮೇಲ್ಪಟ್ಟ ವಿದೇಶೀಯರು ಐದು ವರ್ಷಕ್ಕೊಮ್ಮೆ ನವೀಕರಿಸಬಹುದಾದ ವೀಸಾ ಪಡೆಯಲು ಅರ್ಹರು. ಆದರೆ ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಆರಂಭದ ಹಂತವಾಗಿ ಇಲ್ಲಿ ಕಾರ್ಯ ನಿರ್ವಹಿಸುವ ನಿವಾಸಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಕೊರೊನಾ ಬಿಕ್ಕಟ್ಟು ತಲೆದೋರುವ ಮುಂಚೆಯೇ ದುಬೈನಲ್ಲಿ ಸತತ ಮೂರನೇ ವರ್ಷ ಜನಸಂಖ್ಯಾ ಬೆಳವಣಿಗೆ ದರ ಕಡಿಮೆ ಆಗಿತ್ತು.

ದುಬೈ ದುಬಾರಿ ಸ್ಥಳ

ದುಬೈ ದುಬಾರಿ ಸ್ಥಳ

ಯುಎಇಯಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ವಲಸಿಗರು ಇತರ ರಾಷ್ಟ್ರಗಳಿಗೆ ಅಥವಾ ತಾಯ್ನಾಡಿಗೆ ಹೋಗುತ್ತಿದ್ದಾರೆ. ದುಬೈನ ಒಟ್ಟು ಜನಸಂಖ್ಯೆಯಲ್ಲಿ 90%ನಷ್ಟು ವಿದೇಶಿಯರಿದ್ದಾರೆ. ಆ ಪೈಕಿ ಬಹಳಷ್ಟು ಮಂದಿ ಉದ್ಯೋಗದಲ್ಲಿ ಇದ್ದಾರೆ. ದುಬೈನಲ್ಲಿ ಅವರು ಹೂಡಿಕೆ ಮಾಡಿಯೂ ಅಲ್ಲಿ ಬೇರೂರಲು ಅವಕಾಶ ನೀಡುತ್ತಿಲ್ಲ. ದುಬೈಗೆ ಸೆಳೆಯುವ ಉದ್ದೇಶದಿಂದ ಯುಎಇ ಸಂಪುಟವು ಸೆಪ್ಟೆಂಬರ್ 2018ರಲ್ಲಿ ಈ ಯೋಜನೆಗೆ ಅನುಮತಿ ನೀಡಿತ್ತು. ನಿವೃತ್ತರಿಗೆ ದುಬೈ ಬಹಳ ದುಬಾರಿ ಸ್ಥಳ. ಸ್ಪೇನ್, ಕೋಸ್ಟರಿಕಾ ಮತ್ತು ಮಲೇಷ್ಯಾದಂಥ ದೇಶಗಳು ದುಬೈಗೆ ಪ್ರಬಲ ಪೈಪೋಟಿ ನೀಡುತ್ತಿವೆ. ಆ ದೇಶಗಳಲ್ಲಿ ವೈದ್ಯಕೀಯ ವೆಚ್ಚಗಳು ಮತ್ತು ಜೀವನ ನಿರ್ವಹಣಾ ವೆಚ್ಚ ಕಡಿಮೆ ಇದೆ.

ನಿವೃತ್ತರು ಈ ನಿಯಮದಲ್ಲಿ ಒಂದನ್ನು ಪೂರೈಸಬೇಕು

ನಿವೃತ್ತರು ಈ ನಿಯಮದಲ್ಲಿ ಒಂದನ್ನು ಪೂರೈಸಬೇಕು

ದುಬೈನಲ್ಲಿ ನೆಲೆಗೊಳ್ಳಲು ಬಯಸುವವರು ಈ ಮೂರು ಮಾನದಂಡಗಳ ಪೈಕಿ ಒಂದನ್ನು ಪೂರೈಸಬೇಕು:
* ತಿಂಗಳ ಆದಾಯ 20,000 ದಿರ್ಹಾಮ್ ಇರಬೇಕು ($ 5,445)

* 10 ಲಕ್ಷ ದಿರ್ಹಾಮ್ ಉಳಿತಾಯ ಇರಬೇಕು

* 20 ಲಕ್ಷ ದಿರ್ಹಾಮ್ ಮೌಲ್ಯದ ಆಸ್ತಿ ದುಬೈನಲ್ಲಿರಬೇಕು

ವಲಸಿಗರು ಉದ್ಯೋಗದ ಮೇಲೆ ಹೆಚ್ಚು ಅವಲಂಬನೆ

ವಲಸಿಗರು ಉದ್ಯೋಗದ ಮೇಲೆ ಹೆಚ್ಚು ಅವಲಂಬನೆ

ವಲಸಿಗರು ಉದ್ಯೋಗದ ಸಲುವಾಗಿ ಯುಎಇ ಆರ್ಥಿಕತೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅಲ್ಲಿನ ತೈಲ ಸಂಪತ್ತು ಈಚಿನ ವರ್ಷಗಳಲ್ಲಿ ಹತ್ತಾರು ಲಕ್ಷ ವಿದೇಶಿಗರನ್ನು ಸೆಳೆಯುತ್ತಿದೆ. ಯುಎಇ ಸ್ಥಳೀಯರ ಜನಸಂಖ್ಯೆ 10 ಲಕ್ಷದಷ್ಟಿದೆ. ಕಳೆದ ವರ್ಷ ಫ್ರಾನ್ಸ್ ಅಥವಾ ಕೆನಡಾಕ್ಕಿಂತ ಹೆಚ್ಚು ವಲಸಿಗರನ್ನು ಒಳಗೆ ಬಿಟ್ಟುಕೊಂಡಿದೆ. ಇದು ವಿಶ್ವಸಂಸ್ಥೆಯ ಅಂದಾಜು. ವಿಶ್ವಸಂಸ್ಥೆಯ ಅಂದಾಜು ಮಾಡಿದ ಪ್ರಕಾರ, ಮುಂದಿನ ದಶಕಗಳಲ್ಲಿ ದೇಶದ ಜನಸಂಖ್ಯೆ ಹೆಚ್ಚಾಗಲಿದೆ. 2050ನೇ ಇಸವಿ ಹೊತ್ತಿಗೆ 1.04 ಕೋಟಿ ಜನಸಂಖ್ಯೆ ಆಗಬಹುದು. ಈ ವರ್ಷ ಜನಸಂಖ್ಯೆ 1 ಕೋಟಿಗಿಂತ ಕಡಿಮೆ ಇದೆ. 1950ರಲ್ಲಿ ಯುಎಇ ಸ್ಥಳೀಯರ ಜನಸಂಖ್ಯೆ 70 ಸಾವಿರ ಇತ್ತು.

English summary

Dubai Gear Up Two Year Old Plan To Attract Wealthy Retirees

Commercial hub Dubai accelerate two year old plan to attract retirees. Here is the complete details of plan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X