For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸದ ಅವಧಿಯೇ?

|

ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಟ್ವಿಟ್ಟರ್‌ ಭಾರೀ ನಷ್ಟವನ್ನು ಕಾಣುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಎಲಾನ್ ಮಸ್ಕ್ ಹಲವಾರು ನಿಯಮಗಳನ್ನು ಬದಲಾವಣೆ ಮಾಡುತ್ತಿದ್ದಾರೆ, ಹಲವಾರು ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ಈಗ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸ ಮಾಡಲು ಹೇಳಿರುವುದಾಗಿ ವರದಿಯಾಗಿದೆ.

ಟ್ವಿಟ್ಟರ್ ಅನ್ನು ಸುಮಾರು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ ಎಲಾನ್ ಮಸ್ಕ್ ಇತ್ತೀಚೆಗಷ್ಟೆ ನಷ್ಟವನ್ನು ಸರಿದೂಗಿಸಲು ಟೆಸ್ಲಾದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯು ಜೂನ್ 30, 2022 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಸುಮಾರು 270 ಮಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಕಂಡಿದೆ. ಈ ನಡುವೆ ಹಲವಾರು ಮಂದಿಯನ್ನು ಕೆಲಸದಿಂದ ಮಸ್ಕ್ ತೆಗೆದು ಹಾಕಿದ್ದಾರೆ.

Come Back Home: ಟ್ವಿಟ್ಟರ್‌, ಮೆಟಾದಿಂದ ಉದ್ಯೋಗ ಕಳೆದುಕೊಂಡ ಭಾರತೀಯರಿಗೆ ಈ ಸಂಸ್ಥೆಯ ಆಫರ್!Come Back Home: ಟ್ವಿಟ್ಟರ್‌, ಮೆಟಾದಿಂದ ಉದ್ಯೋಗ ಕಳೆದುಕೊಂಡ ಭಾರತೀಯರಿಗೆ ಈ ಸಂಸ್ಥೆಯ ಆಫರ್!

ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಟ್ವಿಟ್ಟರ್ ಸುಮಾರು 66 ಮಿಲಿಯನ್ ಯುಎಸ್ ಡಾಲರ್ ನಿವ್ವಳ ಲಾಭವನ್ನು ಘೋಷಣೆ ಮಾಡಿತ್ತು. ಆದರೆ ಈ ವರ್ಷ ನಷ್ಟವನ್ನು ಕಂಡಿದೆ. 2022 ರ ಜೂನ್ ತ್ರೈಮಾಸಿಕದಲ್ಲಿ ಟ್ವಿಟರ್‌ನ ಆದಾಯವು ಭಾರೀ ಕುಸಿದಿದೆ. ಒಂದು ವರ್ಷದ ಹಿಂದೆ ಜೂನ್‌ನಿಂದ ಅಂತ್ಯವಾಗುವ ತ್ರೈಮಾಸಿಕದಲ್ಲಿ ಟ್ವಿಟ್ಟರ್‌ನ ಆದಾಯವು 1,190 ಮಿಲಿಯನ್‌ ಯುಎಸ್ ಡಾಲರ್ ಆಗಿತ್ತು. ಆದರೆ ಆದಾಯವು ಈ ವರ್ಷದಲ್ಲಿ 1,176 ಮಿಲಿಯನ್‌ ಡಾಲರ್‌ಗೆ ಕುಸಿದಿದೆ. ಈಗ ಕಂಪನಿಯ ಜಾಗತಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.

 ಏನೆಲ್ಲ ಬದಲಾವಣೆ ಮಾಡಬಹುದು?

ಏನೆಲ್ಲ ಬದಲಾವಣೆ ಮಾಡಬಹುದು?

ಎಲಾನ್ ಮಸ್ಕ್ ಉದ್ಯೋಗಿಗಳಿಗಾಗಿ ತಾನು ಮಾಡಿದ ಭಾಷಣದಲ್ಲಿ ಗಂಭೀರವಾಗಿ ಹಲವಾರು ವಿಚಾರಗಳನ್ನು ಹೇಳಿದ್ದಾರೆ. ಉದ್ಯೋಗಿಗಳಿಂದ ತಾನು ವಾರದಲ್ಲಿ 80 ಗಂಟೆ ಕೆಲಸವನ್ನು ನಿರೀಕ್ಷೆ ಮಾಡುವುದಾಗಿ ತಿಳಿಸಿದ್ದು ಮಾತ್ರವಲ್ಲದೆ ಉಚಿತ ಊಟದಂತಹ ಬೇರೆ ಪ್ರಯೋಜನಗಳು ಇರಲಾರದು ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಬಹುತೇಕ ಎಲ್ಲ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅನ್ನು ನೀಡಿದೆ. ಆದರೆ ಎಲಾನ್ ಮಸ್ಕ್ ಈಗ ಈ ಆಯ್ಕೆಯನ್ನು ಕಿತ್ತೆಯೆಸಲು ಮುಂದಾಗಿದ್ದಾರೆ. "ನೀವು ಕಚೇರಿಗೆ ಬರಲು ಬಯಸದಿದ್ದರೆ, ರಾಜೀನಾಮೆಯನ್ನು ನಾವು ಸ್ವೀಕರಿಸುತ್ತೇವೆ," ಎಂದು ಹೇಳಿದ್ದಾರೆ.

 ತಾವಾಗಿಯೇ ರಾಜೀನಾಮೆ ನೀಡುತ್ತಿದ್ದಾರೆಯೇ?

ತಾವಾಗಿಯೇ ರಾಜೀನಾಮೆ ನೀಡುತ್ತಿದ್ದಾರೆಯೇ?

ಟ್ವಿಟ್ಟರ್ ತನ್ನ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ನಡುವೆಯೇ ಹಲವಾರು ಮಂದಿ ತಾವಾಗಿಯೇ ರಾಜೀನಾಮೆ ನೀಡಿ ಟ್ವಿಟ್ಟರ್‌ಗೆ ಗುಡ್ ಬಾಯ್ ಹೇಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಡ್ರೀಮ್ 11 ಸಂಸ್ಥೆಯ ಸಿಇಒ ಹರ್ಷ ಜೈನ್ ಭಾರತೀಯರಿಗೆ ತಮ್ಮ ದೇಶಕ್ಕೆ ಬರುವಂತೆ ತಿಳಿಸಿದ್ದಾರೆ. ಉದ್ಯೋಗವನ್ನು ನೀಡುವುದಾಗಿಯೂ ಹೇಳಿದ್ದಾರೆ. ಮಾಹಿತಿ ಪ್ರಕಾರ ಹಿರಿಯ ಉದ್ಯೋಗಿಯಾಗಿದ್ದ ಯೋಲ್ ರೋತ್ ಸಂಸ್ಥೆಯನ್ನು ತೊರೆದಿದ್ದಾರೆ. ಇನ್ನು ರಾಬಿನ್ ವೀಲರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವರು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ರಕ್ಷಣೆಗಾಗಿ ಅನಿವಾರ್ಯವಾಗಿ ಟ್ವಿಟ್ಟರ್ ಸಂಸ್ಥೆಯಲ್ಲೇ ಉಳಿದುಕೊಂಡಿದ್ದಾರೆ.

 ಹೂಡಿಕೆದಾರರ ಚಿಂತೆ ಏನು?

ಹೂಡಿಕೆದಾರರ ಚಿಂತೆ ಏನು?

ಟ್ವಿಟ್ಟರ್‌ಗೆ ಪ್ರಸ್ತುತ ಸುಮಾರು 13 ಬಿಲಿಯನ್ ಡಾಲರ್ ಸಾಲದ ಹೊರೆ ಇದೆ. ಸುಮಾರು 7 ಬ್ಯಾಂಕ್‌ಗಳಿಂದ ಈ ಸಾಲವನ್ನು ಪಡೆಯಲಾಗಿದೆ. ಪ್ರಸ್ತುತ ಹೂಡಿಕೆದಾರರು ಟ್ವಿಟ್ಟರ್ ಸಂಸ್ಥೆಯು ಶೀಘ್ರವಾಗಿ ಪಾತಾಳಕ್ಕೆ ಇಳಿಯುತ್ತದೆ ಎಂಬ ಆತಂಕವನ್ನು ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ತಮ್ಮ ಷೇರುಗಳನ್ನು ಕಡಿಮೆ ಬೆಲೆಗೆಯೇ ಮಾರಾಟ ಮಾಡುತ್ತಿದ್ದಾರೆ. ಇನ್ನು ಟ್ವಿಟ್ಟರ್ 8 ಡಾಲರ್‌ನ ಸಬ್‌ಸ್ಕ್ರಿಪ್‌ಷನ್ ಆಯ್ಕೆಯನ್ನು ರದ್ದು ಮಾಡಿದೆ. ಪ್ರಮುಖವಾಗಿ ನಕಲಿ ಖಾತೆಗಳು ಹೆಚ್ಚಾಗುತ್ತಿರುವ ಕಾರಣ ಟ್ವಿಟ್ಟರ್ ಈ ಕ್ರಮವನ್ನು ಕೈಗೊಂಡಿದೆ. ಈ ಮೊತ್ತವನ್ನು ಟ್ವಿಟ್ಟರ್‌ನ ಬ್ಲ್ಯೂ ಟಿಕ್‌ಗಾಗಿ ಪಾವತಿ ಮಾಡಲಾಗುತ್ತದೆ. ಟ್ವಿಟ್ಟರ್‌ನಲ್ಲಿ ಒಂದು ಖಾತೆಯು ಅಧಿಕೃತ ಎಂದು ಗುರುತಿಸಬೇಕಾದರೆ ಬ್ಲ್ಯೂ ಟಿಕ್ ಅನ್ನು ಸಂಸ್ಥೆಯು ನೀಡುತ್ತದೆ. ಇದಕ್ಕಾಗಿ ಚಂದಾದಾರರು ಹಣ ಪಾವತಿ ಮಾಡಬೇಕಾಗುತ್ತದೆ.

English summary

Elon Musk Demands 80 Hour Work From Twitter Employees, Details in Kannada

Musk repeated several somber cautions in his speech to the workers. Expect 80-hour work weeks, employees. Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X