For Quick Alerts
ALLOW NOTIFICATIONS  
For Daily Alerts

EPFOದಿಂದ 2019- 20ನೇ ಸಾಲಿಗೆ 8.5% ಬಡ್ಡಿ ಜಮೆ: ಪರಿಶೀಲಿಸುವುದು ಹೇಗೆ?

|

2019- 20ನೇ ಸಾಲಿನ 8.5% ಬಡ್ಡಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ ಒ)ನಿಂದ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್)ನ ಆರು ಕೋಟಿ ಚಂದಾದಾರರಿಗೆ ಡಿಸೆಂಬರ್ ಕೊನೆಗೆ ಒಂದೇ ಸಲಕ್ಕೆ ಜಮೆ ಆಗಲಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಬಡ್ಡಿ ದರವನ್ನು ಎರಡು ಕಂತಿನಲ್ಲಿ ಪಾವತಿಸಲು ಇಪಿಎಫ್ ಒ ನಿರ್ಧರಿಸಿತ್ತು.

ಅಂದರೆ, 8.5 ಪರ್ಸೆಂಟ್ ಬಡ್ಡಿಯ ಪೈಕಿ ಮೊದಲಿಗೆ 8.15% ಹಾಗೂ ನಂತರ 0.35% ಹೀಗೆ ಎರಡು ಕಂತಿನಲ್ಲಿ ಪಾವತಿ ಮಾಡಲು ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ಕಾರ್ಮಿಕ ಸಚಿವಾಲಯದಿಂದ ಆರ್ಥಿಕ ಸಚಿವಾಲಯಕ್ಕೆ ಪ್ರಸ್ತಾವವೊಂದನ್ನು ಕಳುಹಿಸಿ, 2019- 20ನೇ ಸಾಲಿನ 8.5% ಬಡ್ಡಿ ಒಂದೇ ಸಲಕ್ಕೆ ಖಾತೆಗಳಿಗೆ ಜಮೆ ಮಾಡಲು ಅನುಮತಿ ಕೇಳಿತ್ತು.

ವಾಲಂಟರಿ ಪ್ರಾವಿಡೆಂಟ್ ಫಂಡ್ (VPF) 4 ಅನುಕೂಲ, 3 ಲಾಭವಾಲಂಟರಿ ಪ್ರಾವಿಡೆಂಟ್ ಫಂಡ್ (VPF) 4 ಅನುಕೂಲ, 3 ಲಾಭ

ಈ ವರ್ಷದ ಮಾರ್ಚ್ ನಲ್ಲಿ ಇಪಿಎಫ್ ನ ಕೇಂದ್ರೀಯ ಬೋರ್ಡ್ ಟ್ರಸ್ಟಿಗಳು 8.5% ಬಡ್ಡಿ ದರವನ್ನು ನಿಗದಿ ಮಾಡಿದರು. ಲಾಕ್ ಡೌನ್ ಕಾರಣಕ್ಕೆ ಮಾರುಕಟ್ಟೆ ಸ್ಥಿತಿ ಬಹಳ ಕೆಟ್ಟದಾಗಿದ್ದರಿಂದ ಈ ತನಕ ಮೊದಲ ಕಂತಿನ ಬಡ್ಡಿ ಚಂದಾದಾರರ ಖಾತೆಗೆ ಜಮೆ ಆಗಿಲ್ಲ.

EPFOದಿಂದ 2019- 20 ಸಾಲಿಗೆ 8.5% ಬಡ್ಡಿ ಜಮೆ: ಪರಿಶೀಲಿಸುವುದು ಹೇಗೆ

ಆದರೂ ಚಂದಾದಾರರು ತಮ್ಮ ಇಪಿಎಫ್ ಬ್ಯಾಲೆನ್ಸ್ ಪರೀಕ್ಷಿಸಿಕೊಳ್ಳಬಹುದು ಮತ್ತು ಒಂದು ಮಿಸ್ ಕಾಲ್ ಮೂಲಕ ಬಡ್ಡಿ ಬಂದಿದೆಯೋ ಇಲ್ಲವೋ ತಿಳಿದುಕೊಳ್ಳಬಹುದು. ಅದು ಹೇಗೆಂದರೆ,

* ಯೂನಿವರ್ಸಲ್ ಅಕೌಂಟ್ ನಂಬರ್ (UAN) ಜತೆಗೆ ನೋಂದಣಿ ಆಗಿರುವ ಫೋನ್ ನಿಂದ 011-22901406ಗೆ ಕರೆ ಮಾಡಬೇಕು.

* ಆ ಕರೆಯು ಎರಡು ಬಾರಿ ರಿಂಗ್ ಆದ ಮೇಲೆ ತಾನಾಗಿಯೇ ಕಟ್ ಆಗುತ್ತದೆ.

* ಈ ಸೇವೆಗೆ ಯಾವುದೇ ಶುಲ್ಕ ಇರುವುದಿಲ್ಲ.

* ಆದರೆ, ಫೋನ್ ಬಳಕೆದಾರರು ಇಪಿಎಫ್ ಒ ಜತೆಗೆ ಕೆವೈಸಿ ಆಗಿರಬೇಕು.

ಎಸ್ಸೆಮ್ಮೆಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಿರಿ:
ಬಳಕೆದಾರರು EPFOHO ಟೈಪ್ ಮಾಡಿ 7738299899 ಸಂಖ್ಯೆಗೆ ಕಳುಹಿಸಬೇಕು.

ಇನ್ಯಾವುದೇ ಮಾಹಿತಿಗಾಗಿ ಬಳಕೆದಾರರು https://unifiedportal-mem.epfindia.gov.in/memberinterface ಭೇಟಿ ನೀಡಬಹುದು.

Read more about: epf epfo ಪಿಎಫ್
English summary

EPFO Likely To Credit Interest To EPF Account: How To Check Balance?

EPFO likely to credit interest of 8.5% for FY 2020- 21 to EPF account. Here you know how to check balance.
Story first published: Thursday, December 17, 2020, 9:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X