For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳು ಇಪಿಎಫ್‌ಒ ವಿಮೆ ಯೋಜನೆಯಡಿ 7 ಲಕ್ಷ ಪಡೆಯಬಹುದು!, ಇಲ್ಲಿದೆ ವಿವರ

|

ನೌಕರರ ಭವಿಷ್ಯ ನಿಧಿ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿಯು ಸಂಬಳ ಪಡೆಯುವ ಉದ್ಯೋಗಿಗಳಿಗೆ ವಿಶ್ವಾಸಾರ್ಹ ಹೂಡಿಕೆ ಯೋಜನೆಯಾಗಿರುವುದರ ಜೊತೆಗೆ, ಅವರಿಗೆ ಉತ್ತಮ ಲಾಭವನ್ನು ಅನ್ನು ಕೂಡಾ ನೀಡುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ? ಹೌದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಯೋಜನೆ ಅಡಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ಉತ್ತಮ ಲಾಭವನ್ನು ಪಡೆಯಬಹುದು.

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ (Employees Deposit Linked Insurance) ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಖಾತೆದಾರರು ಪ್ರೀಮಿಯಂ ಆಗಿ ಯಾವುದೇ ಮೊತ್ತವನ್ನು ಪಾವತಿ ಮಾಡದೆಯೇ ರೂ 7 ಲಕ್ಷದವರೆಗೆ ಜೀವ ವಿಮೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಬಗ್ಗೆ ಇಲ್ಲಿ ಅಧಿಕ ಮಾಹಿತಿ ಇದೆ ಮುಂದೆ ಓದಿ...

 ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ! ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ!

ಈ ಯೋಜನೆಯಲ್ಲಿ ವಿಮೆ-ಸಂಬಂಧಿತ ಪ್ರಯೋಜನಗಳನ್ನು ಹೊರತುಪಡಿಸಿ, ಪಿಎಫ್‌ ಖಾತೆದಾರಿಗೆ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆಯು ಇತರೆ ಪ್ರಯೋಜವನ್ನು ಕೂಡಾ ನೀಡುತ್ತದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ. ಮುಂದೆ ಓದಿ..

ಗರಿಷ್ಠ ವಿಮಾ ಯೋಜನೆ

ಗರಿಷ್ಠ ವಿಮಾ ಯೋಜನೆ

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಇಪಿಎಫ್ ಸದಸ್ಯರಾಗಿರುವ ಸಂಬಳ ಪಡೆಯುವ ಉದ್ಯೋ‌ಗಿಗಳ ಮರಣದ ಸಂದರ್ಭದಲ್ಲಿ ಪಿಎಫ್‌ ಖಾತೆದಾರರ ಕಾನೂನುಬದ್ಧ ವಾರಸುದಾರರು ರೂಪಾಯಿ 7 ಲಕ್ಷದವರೆಗೆ ಹಣವನ್ನು ಪಡೆಯಲು ಸಾಧ್ಯವಾಗಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಇದರ ಮಿತಿಯನ್ನು 6 ಲಕ್ಷದಿಂದ ಏಳು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಕನಿಷ್ಠ ಪ್ರಯೋಜನಗಳು ಏನು?

ಕನಿಷ್ಠ ಪ್ರಯೋಜನಗಳು ಏನು?

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಇಪಿಎಫ್ ಸದಸ್ಯರು ಇನ್ನು ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ. ಇಪಿಎಫ್ ಸದಸ್ಯರಾಗಿರುವ ಸಂಬಳ ಪಡೆಯುವ ಉದ್ಯೋ‌ಗಿಗಳು ಮರಣದ ನಂತರ ಪಿಎಫ್‌ ಖಾತೆದಾರರ ಕಾನೂನುಬದ್ಧ ವಾರಸುದಾರರು ರೂಪಾಯಿ 7 ಲಕ್ಷದವರೆಗೆ ಪಡೆಯಬಹುದು. ಉದ್ಯೋಗಿಯು ಮರಣದ ಹಿಂದಿನ 12 ತಿಂಗಳುಗಳಲ್ಲಿ ನಿರಂತರ ಸೇವೆಯಲ್ಲಿದ್ದರೆ ಕನಿಷ್ಠ 2.5 ಲಕ್ಷ ರೂಪಾಯಿಯನ್ನು ಪಿಎಫ್‌ ಖಾತೆದಾರರ ಕಾನೂನುಬದ್ಧ ವಾರಸುದಾರರು ಪಡೆಯಬಹುದು.

ನಿಮಗಿದೆ ಉಚಿತ ಲಾಭ!

ನಿಮಗಿದೆ ಉಚಿತ ಲಾಭ!

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಇಪಿಎಫ್ ಸದಸ್ಯರು ಹಲವಾರು ಉಚಿತ ಲಾಭವನ್ನು ಕೂಡಾ ಪಡೆಯಲಿದ್ದಾರೆ. ನಿಮಗೆ ನಾವು ಮೊದಲೇ ಹೇಳಿದಂತೆ ಸಂಬಳ ಪಡೆಯುವ ಉದ್ಯೋಗಿಗಳು ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಯೋಜನಗಳನ್ನು ಪಡೆಯಲು ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ಕನಿಷ್ಠ 15,000 ಸಂಬಳವನ್ನು ಹೊಂದಿರುವ ಉದ್ಯೋಗಿಗಳು ಮಾಸಿಕ ವೇತನದ ಶೇಕಡಾ 0.50 ರಷ್ಟಿರುವ ಪ್ರೀಮಿಯಂ ಪಾವತಿಸುತ್ತಾರೆ. ಇದು ಮಾಸಿಕ ವೇತನದಲ್ಲೇ ಬರಲಿದೆ. ಹೆಚ್ಚಿಗೆ ಬೇರೆ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ.

ಸ್ವಯಂ-ನೋಂದಣಿ

ಸ್ವಯಂ-ನೋಂದಣಿ

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆಯ ಪ್ರಯೋಜನವನ್ನು ಪಡೆಯಲು ಇಪಿಎಫ್‌ಒ ಚಂದಾದಾರರು ಪ್ರತ್ಯೇಕವಾಗಿ ನೋಂದಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಇಪಿಎಫ್‌ಒ ಸದಸ್ಯರು ಅಥವಾ ಚಂದಾದಾರರು ಆದ ಮೇಲೆ ಸ್ವಯಂ ಚಾಲಿತವಾಗಿ ಉದ್ಯೋಗಿಗಳು ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆಯಡಿಯು ಚಂದಾದಾರರು ಆಗಲಿದ್ದಾರೆ.

ನೇರೆ ಬ್ಯಾಂಕ್‌ಗೆ ವರ್ಗಾವಣೆ!

ನೇರೆ ಬ್ಯಾಂಕ್‌ಗೆ ವರ್ಗಾವಣೆ!

ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಪಡೆಯುವ ಪ್ರಯೋಜನವು ಇಪಿಎಫ್‌ಒ ಚಂದಾದಾರರ ಮರಣದ ನಂತರ ನಾಮಿನಿಯ ಬ್ಯಾಂಕ್ ಖಾತೆಗೆ ಅಥವಾ ಪಿಎಫ್‌ ಖಾತೆದಾರರ ಕಾನೂನುಬದ್ಧ ವಾರಸುದಾರರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಈ ಯೋಜನೆಯಲ್ಲಿ ಉದ್ಯೋಗಿಯ ಕಾನೂನು ವಾರಸುದಾರರ ಬ್ಯಾಂಕ್‌ ಖಾತೆಯು ಕೂಡಾ ಲಿಂಕ್‌ ಆಗಿರಲಿದೆ. ಈ ಹಿನ್ನೆಲೆ ಇಪಿಎಫ್‌ಒ ಚಂದಾದಾರರ ಮರಣದ ನಂತರ ನಾಮಿನಿಯ ಖಾತೆಗೆ ನೇರವಾಗಿ ಹಣವು ವರ್ಗಾವಣೆ ಮಾಡಲಾಗುತ್ತದೆ.

English summary

EPFO's Deposit Linked Insurance Scheme: Salaried Employees Can Avail Benefits Up to Rs 7 Lakh

EPFO's Deposit Linked Insurance Scheme: Salaried Employees Can Avail Benefits Up to Rs 7 Lakh. Know How Here Explained In Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X