For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ಕ್ಕೂ ಮುನ್ನ ಪಿಎಫ್‌ಗೆ ಖಾತೆಗೆ ನಾಮಿನಿ ಸೇರಿಸಿ

|

ಪ್ರಸ್ತುತ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವುದು ಅಗತ್ಯ ಆಗಿದೆ. ನಿಮ್ಮ ಪಿಎಫ್‌ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಮಾರ್ಚ್ 31 ಆಗಿದ್ದು ಅದಕ್ಕೂ ಮುನ್ನವೇ ನೀವು ಪಿಎಫ್‌ ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಿ, ಭವಿಷ್ಯದಲ್ಲಿ ಆಗುವ ತೊಂದರೆಯನ್ನು ದೂರ ಮಾಡಿ.

 

EPFO ಅಧಿಕೃತ ಪ್ರಕಟಣೆಯ ಪ್ರಕಾರ, ನಿಮ್ಮ ಪಿಎಫ್‌ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಮಾರ್ಚ್ 31 ಆಗಿದೆ. ಹಾಗಾಗಿ ಅದಕ್ಕೂ ಮುನ್ನವೇ ನೀವು ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಿಕೊಳ್ಳಿ. PF ಖಾತೆದಾರರು EPFO ​​ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಇ-ನಾಮಿನಿ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಬಹುದು.

 

 ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?: ಇಲ್ಲಿದೆ ಹಂತಗಳು ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?: ಇಲ್ಲಿದೆ ಹಂತಗಳು

ಭಾರತದಲ್ಲಿ ಸಾಮಾನ್ಯವಾಗಿ ಸಂಬಳ ಪಡೆಯುವ ಎಲ್ಲಾ ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPF) ಖಾತೆಯನ್ನು ಹೊಂದಿದ್ದಾರೆ. ಈ ಖಾತೆಗೆ ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದ ಒಂದು ಭಾಗವನ್ನು ಜಮೆ ಮಾಡಲಾಗುತ್ತದೆ. ಹಾಗೆಯೇ ಇದಕ್ಕೆ ಉದ್ಯೋಗಿಗಳು ಕೆಲಸ ಮಾಡುವ ಸಂಸ್ಥೆಯು ಅಷ್ಟೇ ಪ್ರಮಾಣದ ಹಣವನ್ನು ಜಮೆ ಮಾಡಲಿದೆ. ಇದು ಒಂದು ಉಳಿತಾಯ ಮತ್ತು ನಿವೃತ್ತಿ ಯೋಜನೆಗೆ ಕೊಡುಗೆ ನೀಡುವ ಯೋಜನೆ ಆಗಿದೆ. ಈಗ ನಿಮ್ಮ ಭವಿಷ್ಯದಲ್ಲಿ ನಿವೃತ್ತಿ ವೇಳೆ ಹಣ ಹಿಂಪಡೆಯಲು ಯಾವುದೇ ತೊಂದರೆ ಉಂಟಾಗಬಾರದೆಂದರೆ ಪ್ರಸ್ತುತ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವುದು ಅಗತ್ಯ ಆಗಿದೆ.

 ಮಾರ್ಚ್  31ಕ್ಕೂ ಮುನ್ನ ಪಿಎಫ್‌ಗೆ ಖಾತೆಗೆ ನಾಮಿನಿ ಸೇರಿಸಿ

ಇನ್ನು ಮಾರ್ಚ್ 31ರ ಒಳಗೆ ಪಿಎಫ್‌ ಖಾತೆಗೆ ನಾಮಿನಿ ಸೇರ್ಪಡೆ ಮಾಡುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತೊಮ್ಮೆ ತನ್ನ ಚಂದಾದಾರರಿಗೆ ತಿಳಿಸಿದೆ. ಈ ದಿನಾಂಕಕ್ಕೂ ಮುನ್ನ ಇಪಿಎಫ್‌ಒ ಚಂದಾದಾರರು ಇ ನಾಮಿನೇಷನ್‌ ಮಾಡಲು ವಿಫಲರಾದರತೆ ನಿವೃತ್ತಿ ಸಂದರ್ಭದಲ್ಲಿ ಈ ಸಂಸ್ಥೆಯಿಂದ ಒದಗಿಸಲಾದ ಕೆಲವು ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ಹಾಗಾದರೆ ನಾಮಿನಿಯನ್ನು ಸೇರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ನಿಮ್ಮ PF ಖಾತೆಗೆ ಇ-ನಾಮಿನೇಷನ್‌ ಸಲ್ಲಿಸುವುದು ಹೇಗೆ?

* ಮೊದಲು EPFO ವೆಬ್‌ಸೈಟ್‌ epfindia.gov.in. ಗೆ ಭೇಟಿ ನೀಡಿ
* 'Services' ಆಯ್ಕೆಯ ಕೆಳಗೆ 'For Employees' ಅನ್ನು ಆಯ್ಕೆ ಮಾಡಿ
* 'Member UAN/Online Service (OCS/OTCP)' ಆಯ್ಕೆಯನ್ನು ಕ್ಲಿಕ್‌ ಮಾಡಿ
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
* 'Manage' ಪೇಜ್‌ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ, ಅದನ್ನು ಸಕ್ರಿಯಗೊಳಿಸಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್‌ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು, 'yes' ಎಂದು ಕ್ಲಿಕ್‌ ಮಾಡಿ
* ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ 'Add New' ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆಯು ಅಂತ್ಯವಾಗಲಿದೆ

English summary

EPFO Urges Subscribers to File e-nomination by March 31: Here's How

Provident Fund E-Nomination : EPFO Urges Subscribers to File e-nomination by March 31. Check How to Do It.
Story first published: Sunday, March 27, 2022, 15:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X