For Quick Alerts
ALLOW NOTIFICATIONS  
For Daily Alerts

ಬೆಲೆ ಏರಿಕೆ: ಜನವರಿಯಿಂದ ಈ ಕಾರುಗಳು ದುಬಾರಿ!

|

2022 ವರ್ಷ ಈಗಾಗಲೇ ಕೊನೆಯಾಗಿದೆ, ಹೊಸ ವರ್ಷ 2023ರ ಮೊದಲ ತಿಂಗಳ ಒಂದು ವಾರವೇ ಕಳೆದಿದೆ. ಈ ಹಿಂದಿನ ವರ್ಷ ನಾವು ಹಣದುಬ್ಬರದ ಮುಂದೆ ನಮ್ಮನ್ನು ನಾವು ಕಾಪಾಡಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಈ ವರ್ಷವೂ ಅದೇ ಕಷ್ಟವನ್ನು ಪಡಬೇಕಾಗುತ್ತದೆ. ಈಗಾಗಲೇ ಹಲವಾರು ವಸ್ತುಗಳ, ಎಲೆಕ್ಟ್ರಾನಿಕ್ ಸಾಮಾಗ್ರಿಗಳ ದರ ಏರಿಕೆಯಾಗಿದೆ. ಈ ನಡುವೆ ಈ ವರ್ಷದ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ಹಲವಾರು ಬ್ರಾಂಡ್‌ಗಳು ತಮ್ಮ ಕಾರಿನ ಬೆಲೆಯನ್ನು ಹೆಚ್ಚಳ ಮಾಡಿದೆ.

ಕೋವಿಡ್ ಸಾಂಕ್ರಾಮಿಕದಿಂದ ಈಗಷ್ಟೇ ಭಾರತದ ಆಟೋ ಮಾರುಕಟ್ಟೆ ಚೇತರಿಸುತ್ತಿದೆ. ಈ ನಡುವೆ ಶೇಕಡ 23ರಷ್ಟು ವಾಹನ ಮಾರಾಟದಲ್ಲಿ ಏರಿಕೆಯು ಕಂಡು ಬಂದಿದೆ. ಆದರೆ ಕಾರುಗಳ ತಯಾರಿ ವೆಚ್ಚ ಮಾತ್ರ ಭಾರೀ ಅಧಿಕವಾಗುತ್ತಿದೆ. ಈ ಕಾರಣದಿಂದಾಗಿ ಜನವರಿ ತಿಂಗಳಿನಿಂದ ಹಲವಾರು ಕಾರು ತಯಾರಕ ಸಂಸ್ಥೆಗಳು ತಮ್ಮ ಕಾರಿನ ದರವನ್ನು ಏರಿಸಿದೆ.

Auto Expo 20232ರ ಆಟೋ ಎಕ್ಸ್‌ಪೋ ದಿನಾಂಕ, ಸ್ಥಳ, ಟಿಕೆಟ್ ಮೊತ್ತ, ಇತರೆ ಮಾಹಿತಿAuto Expo 20232ರ ಆಟೋ ಎಕ್ಸ್‌ಪೋ ದಿನಾಂಕ, ಸ್ಥಳ, ಟಿಕೆಟ್ ಮೊತ್ತ, ಇತರೆ ಮಾಹಿತಿ

ತಯಾರಿಕ ವೆಚ್ಚ ಮಾತ್ರವಲ್ಲದೆ ಸರ್ಕಾರದ ನಿಯಮವು ಕೂಡಾ ಕಾರು ತಯಾರಕರ ಮೇಲೆ ಪ್ರಭಾವ ಬೀರಿದೆ. ಸರ್ಕಾರದ ಹೊಸ ನಿಯಮವು 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ ಕಾರಿನಲ್ಲಿ ಸೆಲ್ಫ್ ಡಯಾಗ್ನೋಸ್ಟಿಕ್ ಡಿವೈಸ್ ಇರಬೇಕಾಗುತ್ತದೆ. ಈ ಎಲ್ಲ ಕಾರಣದಿಂದಾಗಿ ಪ್ರಮುಖ ಬ್ರಾಂಡ್‌ಗಳ ದರ ಏರಿಸಿದೆ. ನೂತನ ದರದ ಬಗ್ಗೆ ತಿಳಿಯೋಣ ಮುಂದೆ ಓದಿ.....

 ಮಾರುತಿ ಸುಜುಕಿ ದರ ಏರಿಕೆ

ಮಾರುತಿ ಸುಜುಕಿ ದರ ಏರಿಕೆ

ಈ ಹಿಂದೆಯೇ ಮಾರುತಿ ಸುಜುಕಿ ತನ್ನ ಎಲ್ಲ ಮಾಡೆಲ್‌ಗಳ ದರವನ್ನು ಹೆಚ್ಚಳ ಮಾಡಲಿದೆ ಎಂದು ಹೇಳಿದೆ. ಇದಕ್ಕೆ ಸಂಸ್ಥೆಗೆ ತಯಾರಿಕ ವೆಚ್ಚ ಅಧಿಕವಾಗಿರುವುದು ಮಾತ್ರವಲ್ಲದೆ ಸರ್ಕಾರದ ಕೆಲವು ನಿಮಯಗಳ ಕಾರಣ ಎಂದು ತಿಳಿಸಿದೆ. ಆದರೆ ಈವರೆಗೂ ಎಷ್ಟು ಏರಿಕೆ ಎಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಮಾಹಿತಿ ಪ್ರಕಾರ ಭಾರತದಲ್ಲಿ ಆಲ್ಟೋ, ವಾಗೋನ್ R, ಸೆಲೆರಿಯೋ, ಇರ್ಟಿಗಾ, ಬ್ರೆಝಾ ಮೊದಲಾದ ದರ ಹೆಚ್ಚಾಗಲಿದೆ. ಈ ಹಿಂದೆ ಲಭ್ಯವಾಗಿದ್ದ ಮಾಹಿತಿ ಪ್ರಕಾರ ಆಲ್ಟೋ K10, ಬಲೇನೋ, ಸಿಯಾಸ್, ಡಿಸೈರ್, Eeco, ಗ್ರ್ಯಾಂಡ್ ವಿಟಾರಾ, ಇಗ್ನೀಸ್, ಎಸ್‌-ಪ್ರೆಸ್ಸೋ, ಸ್ವಿಫ್ಟ್, ಮತ್ತು XL6 ಬೆಲೆಯು ಕೂಡಾ ಹೆಚ್ಚಾಗಲಿದೆ.

 ಟಾಟಾ ಮೋಟರ್ಸ್ ಬೆಲೆ ಎಷ್ಟು ಏರಿಕೆ?

ಟಾಟಾ ಮೋಟರ್ಸ್ ಬೆಲೆ ಎಷ್ಟು ಏರಿಕೆ?

ತಯಾರಿಕ ವೆಚ್ಚ ಅಧಿಕವಾಗುತ್ತಿರುವ ಕಾರಣದಿಂದಾಗಿ ಹೊಸ ವರ್ಷದಿಂದ ವಾಹನಗಳ ದರ ಏರಿಕೆ ಮಾಡಲಾಗುವುದು ಎಂದು ಟಾಟಾ ಮೋಟರ್ಸ್ ಈ ಹಿಂದೆಯೇ ಅಂದರೆ ಕಳೆದ ವರ್ಷವೇ ಹೇಳಿಕೊಂಡಿದೆ. ಈ ದರ ಏರಿಕೆಯು ಇಂಧನ ಸಹಿತ ಹಾಗೂ ಇವಿ ಎರಡಕ್ಕೂ ಪ್ರಭಾವ ಬೀರಲಿದೆ. ಪ್ರಸ್ತುತ ಲಭ್ಯವಾದ ಮಾಹಿತಿ ಪ್ರಕಾರ ಹ್ಯಾರಿಯರ್, ನೆಕ್ಸಾನ್, ನೆಕ್ಸಾನ್ EV,ಸಫಾರಿ, ಪಂಚ್, ತಿಯಾಗೋ, ಅಲ್ಟ್ರಾಸ್, ತಿಯಾಗೊ EV, ಟಿಗೊರ್ ಮತ್ತು ಟಿಗೊರ್ EV ದರ ಹೆಚ್ಚಳವಾಗಲಿದೆ. ಸುಮಾರು 30 ಸಾವಿರ ರೂಪಾಯಿವರೆಗೆ ದರ ಏರಿಕೆ ನಿರೀಕ್ಷೆಯಿದೆ.

 ಕಿಯಾ ಇಂಡಿಯಾ ದರ ಏರಿಕೆ

ಕಿಯಾ ಇಂಡಿಯಾ ದರ ಏರಿಕೆ

ಕಿಯಾ ಸಂಸ್ಥೆಯು ಜನವರಿ 2023ರಿಂದ ತಮ್ಮ ಎಲ್ಲ ಮಾಡೆಲ್‌ಗಳ ದರವನ್ನು 50 ಸಾವಿರ ರೂಪಾಯಿ ಏರಿಕೆ ಮಾಡಲಿದೆ ಎಂದು ಡಿಸೆಂಬರ್‌ನಲ್ಲಿ ಮಾಹಿತಿ ನೀಡಿದೆ. ಕಾರುಗಳ ತಯಾರಿ ವೆಚ್ಚ ಹಾಗೂ ಸಾಗಣೆ ವೆಚ್ಚ ಅಧಿಕವಾಗಿರುವ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಈ ದಕ್ಷಿಣ ಕೊರಿಯಾ ಸಂಸ್ಥೆ ಈ ಹಿಂದೆ ತಿಳಿಸಿದೆ. ಈ ತಿಂಗಳ ಆರಂಭದಿಂದಲೇ ಎಲ್ಲ ಮಾಡೆಲ್‌ಗಳ ದರ 50 ಸಾವಿರ ರೂಪಾಯಿ ಹೆಚ್ಚಾಗಿದೆ. ಪ್ರಸ್ತುತ ಕಿಯಾ ಇಂಡಿಯಾದಲ್ಲಿ ಕಾರೆನ್ಸ್, ಕಾರ್ನಿವಲ್, EV6, ಸೆಲ್ಟೋಸ್ ಮತ್ತು ಸೋನೆಟ್ ಕಿಯಾ ಸಂಸ್ಥೆಯ ಮಾಡೆಲ್‌ಗಳು ಇದೆ.

 ಹುಂಡೈ, ಸಿಟ್ರೋನ್ ಕಾರು ದರ ಏರಿಕೆ

ಹುಂಡೈ, ಸಿಟ್ರೋನ್ ಕಾರು ದರ ಏರಿಕೆ

ಹುಂಡೈ ಕೂಡಾ ತಯಾರಿಕ ವೆಚ್ಚ ಹೆಚ್ಚಾದ ಕಾರಣ ತಮ್ಮ ಕಾರುಗಳ ದರವನ್ನು ಹೆಚ್ಚಿಸಲಾಗುವುದು ಎಂದು ಈ ಹಿಂದೆ 2019ರಲ್ಲೇ ಘೋಷಣೆ ಮಾಡಿದೆ. ಆದರೆ ಎಷ್ಟು ಎಂದು ಈವರೆಗೂ ತಿಳಿಸಿಲ್ಲ. ಪ್ರಸ್ತುತ ಗ್ರಾಂಡ್ i10, ನಿಯಾಸ್, ಔರ, i20, ವೆನ್ಯೂ, ವೆರ್ನಾ, ಕ್ರೆಟಾ ಮೊದಲಾದ ಕಾರುಗಳು ಭಾರತದಲ್ಲಿದೆ. ಹೊಸ ವರ್ಷ 2023ರ ಜನವರಿಯಿಂದ ಸಿಟ್ರೋನ್ ಸಂಸ್ಥೆಯು ತಮ್ಮ ಕಾರುಗಳ ದರವನ್ನು ಏರಿಕೆ ಮಾಡಲಿದೆ ಎಂದು ಹೇಳಿದೆ. ಸುಮಾರು ಶೇಕಡ 1.5ರಿಂದ ಶೇಕಡ 2ರಷ್ಟು ದರ ಏರಿಕೆ ಮಾಡಲಿದೆ. ಸಿ3, ಸಿ5 ಮಾಡೆಲ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

 ಆಡಿ ಕಾರುಗಳ ಬೆಲೆ ಏರಿಕೆ

ಆಡಿ ಕಾರುಗಳ ಬೆಲೆ ಏರಿಕೆ

ಜನವರಿ 2023ರಿಂದ ಆಡಿ ಕಾರುಗಳ ಬೆಲೆಯನ್ನು ಶೇಕಡ 1.7ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ಸಂಸ್ಥೆಯು ಡಿಸೆಂಬರ್‌ನಲ್ಲೇ ಹೇಳಿಕೊಂಡಿದೆ. ಉಳಿದ ಸಂಸ್ಥೆಗಳು ಹೇಳಿದಂತೆ ಈ ಸಂಸ್ಥೆಯು ತಯಾರಿಕ ವೆಚ್ಚ ಅಧಿಕವಾದ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಅದರಂತೆ ದರ ಹೆಚ್ಚಳ ಮಾಡಲಾಗಿದೆ. A4, A6, A8 L, Q3, Q5, Q7, Q8, S5 ಸ್ಪ್ರೋರ್ಟ್ಸ್‌ಬ್ಯಾಕ್, RS 5 ಸ್ಪ್ರೋರ್ಟ್ಸ್‌ಬ್ಯಾಕ್, RSQ8, e-ಟ್ರೋನ್, e-ಟ್ರೋನ್ ಸ್ಪ್ರೋರ್ಟ್ಸ್‌ಬ್ಯಾಕ್ ಮತ್ತು e-ಟ್ರೋನ್ GT ಆಡಿ ಮಾಡೆಲ್‌ಗಳ ಬೆಲೆ ಏರಿಕೆಯಾಗಿದೆ.

 ಮರ್ಸಿಡಿಸ್-ಬೆನ್ಜ್ ನೂತನ ದರ ಪಟ್ಟಿ ನೋಡಿ

ಮರ್ಸಿಡಿಸ್-ಬೆನ್ಜ್ ನೂತನ ದರ ಪಟ್ಟಿ ನೋಡಿ

ಮರ್ಸಿಡಿಸ್-ಬೆನ್ಜ್ ತನ್ನ ಮಾಡೆಲ್‌ಗಳ ದರವನ್ನು ಹೊಸ ವರ್ಷದಲ್ಲಿ ಶೇಕಡ 5ರಷ್ಟು ಏರಿಕೆ ಮಾಡುತ್ತದೆ ಎಂದು ತಿಳಿಸಿತ್ತು.

ಜಿಎಲ್‌ಎ 200: ನೂತನ ದರ 46.50 ಲಕ್ಷ ರೂಪಾಯಿ
ಜಿಎಲ್‌ಎ 220ಡಿ: 48.00 ಲಕ್ಷ ರೂಪಾಯಿ
ಸಿ 200: 57.50 ಲಕ್ಷ ರೂಪಾಯಿ
ಸಿ 220ಡಿ: 58.50 ಲಕ್ಷ ರೂಪಾಯಿ
ಇ 200 ಎಕ್ಸ್‌ಕ್ಲ್ಯೂಸಿವ್: 72.50 ಲಕ್ಷ ರೂಪಾಯಿ
ಇ 200ಡಿ ಎಕ್ಸ್‌ಕ್ಲ್ಯೂಸಿವ್: 73.50 ಲಕ್ಷ ರೂಪಾಯಿ
ಜಿಎಲ್‌ಇ 300ಡಿ 4ಮಾಟಿಕ್: 88.00 ಲಕ್ಷ ರೂಪಾಯಿ
ಜಿಎಲ್‌ಇ 400ಡಿ 4ಮಾಟಿಕ್: 1.05 ಕೋಟಿ ರೂಪಾಯಿ
ಎಸ್‌ 350ಡಿ: 1.65 ಕೋಟಿ ರೂಪಾಯಿ
ಮೇಬ್ಯಾಚ್ ಎಸ್ 580: 2.57 ಕೋಟಿ ರೂಪಾಯಿ
ಮೇಬ್ಯಾಚ್ ಜಿಎಲ್‌ಎಸ್ 600: 2.92 ಕೋಟಿ ರೂಪಾಯಿ

 

 ಜೀಪ್ ಮತ್ತು ಎಂಜಿ ಬೆಲೆ ಏರಿಕೆ

ಜೀಪ್ ಮತ್ತು ಎಂಜಿ ಬೆಲೆ ಏರಿಕೆ

ಜೀಪ್ ಸಂಸ್ಥೆಯ ಎಸ್‌ಯುವಿ ಬೆಲೆ ಶೇಕಡ 2-4ರಷ್ಟು ಹೆಚ್ಚಿಸಲಾಗಿದೆ. ಕ್ಯಾಂಪಸ್, ಮೆರಿಡಿಯನ್, ವ್ರಾಂಗ್ಲರ್ ಸೇರಿದಂತೆ ಹಲವಾರು ಬ್ರಾಂಡ್‌ಗಳ ಬೆಲೆ ಏರಿಸಲಾಗಿದೆ. ಇನ್ನು ಎಂಜಿ ಮೋಟರ್ಸ್ ತಮ್ಮ ಮಾಡೆಲ್‌ಗಳ ಬೆಲೆಯನ್ನು ಸುಮಾರು 90 ಸಾವಿರ ರೂಪಾಯಿ ಹೆಚ್ಚಿಸಿದೆ. ಅದರಿಂದಾಗಿ ಹೆಕ್ಟರ್, ಹೆಕ್ಟರ್ ಪ್ಲಸ್, ಗ್ಲಾಸ್ಟರ್ ಭಾರತದಲ್ಲಿ ಜನವರಿಯಿಂದ ದುಬಾರಿಯಾಗಿದೆ. ಈ ಎರಡು ಸಂಸ್ಥೆಗಳು ತಯಾರಿಕಾ ವೆಚ್ಚ ಅಧಿಕವಾದ ಕಾರಣದಿಂದಾಗಿ ಬೆಲೆ ಏರಿಸಲಾಗಿದೆ ಎಂದು ಹೇಳಿದೆ.

 ರಿನಾಲ್ಟ್, ವೋಕ್ಸ್‌ವ್ಯಾಗನ್ ಕಾರುಗಳ ದರ ಏರಿಕೆ

ರಿನಾಲ್ಟ್, ವೋಕ್ಸ್‌ವ್ಯಾಗನ್ ಕಾರುಗಳ ದರ ಏರಿಕೆ

ಫ್ರೆಂಚ್ ಸಂಸ್ಥೆಯಾದ ರಿನಾಲ್ಟ್ ಕೂಡಾ ತಮ್ಮ ಕಾರುಗಳ ದರವನ್ನು ಏರಿಕೆ ಮಾಡಿದೆ. ಪ್ರಸ್ತುತ ರಿನಾಲ್ಟ್ ಭಾರತದಲ್ಲಿ ಕ್ವಿಡ್,ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇನ್ನು ವೋಕ್ಸ್‌ವ್ಯಾಗನ್ ಕಾರುಗಳ ದರ ಕೂಡಾ ಹೆಚ್ಚಾಗಿದೆ. ಆದರೆ ಎಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂಬುವುದನ್ನು ಸಂಸ್ಥೆಯು ಸ್ಪಷ್ಟಪಡಿಸಿಲ್ಲ.

English summary

Expensive Cars in 2023: Check List of Car Brands that Announced Price Hike

Expensive Cars in 2023: cars of Maruti Suzuki, Tata Motors, Hyundai, Kia, and other brands more expensive. Check List of Car Brands that Announced Price Hike.
Story first published: Sunday, January 8, 2023, 13:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X