For Quick Alerts
ALLOW NOTIFICATIONS  
For Daily Alerts

FIFA World Cup: ಫಿಫಾ ಆದಾಯ ಕೇಳಿದ್ರೆ ಬೆರಗಾಗುವುದು ಖಂಡಿತ!

|

ಫೆಡರೇಶನ್ ಇಂಟರ್‌ನ್ಯಾಶನಲ್ ಡಿ ಫುಟ್‌ಬಾಲ್ ಅಸೋಸಿಯೇಷನ್ (ಫಿಫಾ) ವಿಶ್ವಕಪ್‌ಗೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ತಾರ್ ನ ಅಲ್ ಖೋರಾ ಮೈದಾನದಲ್ಲಿ ವರ್ಣರಂಜಿತ ಸಮಾರಂಭದ ಜೊತೆಗೆಯೇ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಪ್ರಾರಂಭವಾಗಿದೆ. ಆದರೆ ಈ ನಡುವೆ ನೀವು ಫಿಫಾ ಆದಾಯ ಎಷ್ಟಿದೆ ಎಂದು ತಿಳಿದರೆ ನೀವು ಬೆರಗಾಗುವುದಂತು ಖಚಿತ.

2022ರಲ್ಲಿ ಕತಾರ್‌ನಲ್ಲಿ ನಡೆಯುವ ವಿಶ್ವಕಪ್‌ಗಾಗಿ ನಾಲ್ಕು ವರ್ಷಗಳ ವಾಣಿಜ್ಯ ಒಪ್ಪಂದಗಳ ಮೂಲಕ ಫಿಫಾ ಸುಮಾರು 7.5 ಬಿಲಿಯನ್ ಯುಎಸ್ ಡಾಲರ್ ಆದಾಯವನ್ನು ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇದರ 1 ಬಿಲಿಯನ್ ಡಾಲರ್‌ಗಿಂತ ಅಧಿಕ ಆದಾಯವು ರಷ್ಯಾದಲ್ಲಿ 2018ರಲ್ಲಿ ನಡೆದ ವಿಶ್ವಕಪ್‌ಗೆ ಸಂಬಂಧಿಸಿದ್ದು ಆಗಿದೆ.

FIFA World Cup Qatar 2022: ಭಾರತದಿಂದ ಕತಾರ್‌ಗೆ ಹೋಗಲು ಹೆಚ್ಚಾಯ್ತು ಪ್ರೈವೇಟ್ ಜೆಟ್ ಬುಕಿಂಗ್; ಕಾರಣ ಏನು?FIFA World Cup Qatar 2022: ಭಾರತದಿಂದ ಕತಾರ್‌ಗೆ ಹೋಗಲು ಹೆಚ್ಚಾಯ್ತು ಪ್ರೈವೇಟ್ ಜೆಟ್ ಬುಕಿಂಗ್; ಕಾರಣ ಏನು?

ವಿಶ್ವಕಪ್‌ ನಡೆಯುವ ದೇಶದಲ್ಲಿ ನಡೆಸಿದ ವಾಣಿಜ್ಯ ಡೀಲ್‌ಗಳ ಮೂಲಕ ಅಧಿಕ ಆದಾಯವನ್ನು ಗಳಿಸುವಲ್ಲಿ ಫಿಫಾ ಯಶಸ್ವಿಯಾಗಿದೆ. ಕತಾರ್ ಎನರ್ಜಿ ಟಾಪ್ ಸ್ಪಾನ್ಸರ್ ಆಗಿದ್ದರೆ, ಕತಾರಿ ಬ್ಯಾಂಕ್ ಕ್ಯೂಎನ್‌ಬಿ ಹಾಗೂ ಟೆಲಿಕಾಂ ಸಂಸ್ಥೆ ಓರೆಡೊ ಕೂಡಾ ಕೈಜೋಡಿಸಿದೆ.

 FIFA World Cup: ಫಿಫಾ ಆದಾಯ ಕೇಳಿದ್ರೆ ಬೆರಗಾಗುವುದು ಖಂಡಿತ!

ಹಣಕಾಸು ಪ್ಲಾಟ್‌ಫಾರ್ಮ್ ಕ್ರಿಪ್ಟೋ.ಕಾಂ (crypto.com) ಕೂಡಾ ಫಿಫಾದ ಅತೀ ದೊಡ್ಡ ಸ್ಪಾನ್ಸರ್‌ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನು ದಶಕಗಳ ಬಳಿಕ ಮೊದಲ ಬಾರಿಗೆ ಹೊಸ ಅಮೆರಿಕ ಸಂಸ್ಥೆ ಫಿಫಾ ಪ್ರಾಯೋಜಕತ್ವ ಮಾಡಿದೆ.

ಒಂದು ವಿಶ್ವಕಪ್‌ನಿಂದ ಫಿಫಾ ಗಳಿಸುವ ಆದಾಯವೆಷ್ಟು?

ಫಿಫಾ ವಿಶ್ವಕಪ್ ಅನ್ನು ನಡೆಸಲು ಭಾರೀ ವೆಚ್ಚವಾಗುತ್ತದೆ. ಆದರೆ ಫಿಫಾ ಇದರಿಂದ ಲಾಭವನ್ನು ಕೂಡಾ ಗಳಿಸುತ್ತದೆ. ಜಗತ್ತಿನಲ್ಲೇ ಅತಿ ಶ್ರೀಮಂತ ಕ್ರೀಡಾ ಮಂಡಳಿ ಎಂದೆನಿಸಿಕೊಂಡಿರುವ ವಿಶ್ವದೆಲ್ಲೆಡೆ ಫುಟ್ಬಾಲ್ ಕೂಟಗಳನ್ನು ಆಯೋಜನೆ ಮಾಡುವ ಫಿಫಾ ಒಂದು ವಿಶ್ವಕಪ್‌ನಿಂದ ಸಾಕಷ್ಟು ಆದಾಯವನ್ನು ಗಳಿಸುತ್ತದೆ.

ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಫಿಫಾ ತನ್ನ ಆದಾಯದ ವಿವರಗಳನ್ನು ಬಹಿರಂಗಪಡಿಸುತ್ತದೆ. 2018ರಲ್ಲಿ ನಡೆದ ವಿಶ್ವಕಪ್‌ ಸಂದರ್ಭ ಫಿಫಾ ಆದಾಯ 460 ಮಿಲಿಯನ್ ಡಾಲರ್ (37,500 ಕೋಟಿ ರೂಪಾಯಿ) ಆಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಫಿಫಾ ಆದಾಯ 7.5 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. 2015-18ರ ಅವಧಿಯಲ್ಲಿ ಫಿಫಾ ಒಟ್ಟು 640 ಕೋಟಿ ಡಾಲರ್ (52 ಸಾವಿರ ಕೋಟಿ ರೂಪಾಯಿ) ಗಳಿಸಿದೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಫಿಫಾ ಒಟ್ಟು 44 ಮಿಲಿಯನ್ ಡಾಲರ್ ಬಹುಮಾನವನ್ನು ನೀಡುತ್ತಿದೆ. ವಿಜೇತರಿಗೆ 4.4 ಕೋಟಿ ಡಾಲರ್ (358 ಕೋಟಿ ರೂಪಾಯಿ) ಲಭ್ಯವಾಗಲಿದೆ.

 FIFA World Cup: ಫಿಫಾ ಆದಾಯ ಕೇಳಿದ್ರೆ ಬೆರಗಾಗುವುದು ಖಂಡಿತ!

ಫಿಫಾಗೆ ಈ ಆದಾಯ ಎಲ್ಲಿಂದ ಲಭ್ಯ?

ಸಾಮಾನ್ಯವಾಗಿ ಫಿಫಾ ವಿಶ್ವಕಪ್ ಅನ್ನು ನಡೆಸಬೇಕಾದರೆ ಫಿಫಾ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ತಂಡಗಳಿಗೆ ವಸತಿ ವ್ಯವಸ್ಥೆ, ಆಹಾರ, ಸಿಬ್ಬಂದಿಗಳಿಗೆ ವ್ಯವಸ್ಥೆ, ನಿರ್ವಹಣೆ ಸೇರಿದಂತೆ ಬಹಳಷ್ಟು ಖರ್ಚುಗಳನ್ನು ಮಾಡುತ್ತದೆ. ಆದರೆ ಇದರಿಂದ ಆದಾಯ ಹೇಗೆ ಲಭ್ಯ ಎಂಬ ಆಲೋಚನೆಯೇ?, ಫಿಫಾ ಪ್ರಮುಖವಾಗಿ ಜಾಹೀರಾತುಗಳ ಮೂಲಕ ಆದಾಯವನ್ನು ಗಳಿಸುತ್ತದೆ.

ಜಾಗತಿಕ ಸಂಸ್ಥೆಗಳು ವಿಶ್ವಕಪ್‌ನಂತಹ ದೊಡ್ಡ ಈವೆಂಟ್‌ಗಳಲ್ಲಿ ತಮ್ಮ ಜಾಹೀರಾತನ್ನು ಕೂಡಾ ಪ್ರದರ್ಶನ ಮಾಡಲು ಇಚ್ಛಿಸುತ್ತದೆ. ಇದಕ್ಕಾಗಿ ಫಿಫಾಗೆ ದೊಡ್ಡ ಮೊತ್ತವನ್ನು ಜಾಹೀರಾತು ವೆಚ್ಚವಾಗಿ ಪಾವತಿ ಮಾಡುತ್ತದೆ. ಹಾಗೆಯೇ ಟಿಕೆಟ್ ಮಾರಾಟ ಮೂಲಕವು ಫಿಫಾಗೆ ಕೊಂಚ ಆದಾಯ ದೊರೆಯುತ್ತದೆ. ಫಿಫಾ ಎಂಬ ಹೆಸರನ್ನು ಬೇರೆ ಸಂಸ್ಥೆಗಳು ಬಳಕೆ ಮಾಡಬೇಕಾದರೂ ಭಾರೀ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ವಿಡಿಯೋ ಗೇಮ್‌ಗಳನ್ನು ತಯಾರಿಸುವ ಇಎ, 20 ವರ್ಷಗಳ ಕಾಲ ಫಿಫಾ ಹೆಸರನ್ನು ಬಳಸುವ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದಕ್ಕಾಗಿ ಪ್ರತಿ ವರ್ಷ ಫಿಫಾಗೆ 15 ಮಿಲಿಯನ್ ಡಾಲರ್ ಪಾವತಿಸುತ್ತದೆ.

English summary

FIFA Revenue: FIFA Revenue Hits USD 7.5 Billion for Current World Cup Period

FIFA earned record revenues of USD 7.5 billion in the four years of commercial deals tied to the 2022 World Cup in Qatar, the governing body of soccer said Sunday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X