For Quick Alerts
ALLOW NOTIFICATIONS  
For Daily Alerts

'ಮಹಾ' ಸರ್ಕಾರದಿಂದ ಪ್ರತಿಯೊಬ್ಬರಿಗೆ ಉಚಿತ ಇನ್ಷೂರೆನ್ಸ್; ಇದು ದೇಶದಲ್ಲೇ ಮೊದಲು

|

ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಮಹಾರಾಷ್ಟ್ರದಲ್ಲಿ ರಚನೆ ಆಗಿರುವ ಸರ್ಕಾರವು ಇಡೀ ದೇಶದಲ್ಲೇ ಮೊದಲು ಎಂಬಂಥ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರದ ಎಲ್ಲ ನಾಗರಿಕರಿಗೂ ಉಚಿತ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಘೋಷಣೆ ಮಾಡಿದ್ದಾರೆ ಅಲ್ಲಿನ ಆರೋಗ್ಯ ಸಚಿವ ರಾಜೇಶ್ ಟೋಪೆ.

 

ಅಂದಹಾಗೆ, ಭಾರತದ ರಾಜ್ಯವೊಂದು ಈ ರೀತಿ ಯೋಜನೆ ಘೋಷಣೆ ಮಾಡುತ್ತಿರುವುದು ಇದೇ ಮೊದಲು ಎಂದ ಸ್ವತಃ ಟೋಪೆ ಹೇಳಿಕೊಂಡಿದ್ದಾರೆ. ನೆನಪಿರಲಿ, ಮಹಾರಾಷ್ಟ್ರದ ಪ್ರತಿಯೊಬ್ಬರಿಗೂ ಕ್ಯಾಶ್ ಲೆಸ್ (ನಗದುರಹಿತ) ಇನ್ಷೂರೆನ್ಸ್ ಸ್ಕೀಮ್ ಈ ಮೂಲಕ ದೊರೆಯಲಿದೆ. ಮಹಾರಾಷ್ಟ್ರ ದಿನದ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.

ಮಹಾತ್ಮ ಜ್ಯೋತಿಬಾ ಫುಲೆ ಜನ್ ಆರೋಗ್ಯ ಯೋಜನಾ

ಮಹಾತ್ಮ ಜ್ಯೋತಿಬಾ ಫುಲೆ ಜನ್ ಆರೋಗ್ಯ ಯೋಜನಾ

ಕಳೆದ ಶುಕ್ರವಾರದಂದು ಟೋಪೆ ಮಾತನಾಡಿ, ಮಹಾತ್ಮ ಜ್ಯೋತಿಬಾ ಫುಲೆ ಜನ್ ಆರೋಗ್ಯ ಯೋಜನಾ (MJPJAY) ಅಡಿಯಲ್ಲಿ ಈಗಾಗಲೇ ಮಹಾರಾಷ್ಟ್ರದ ಶೇಕಡಾ 85ರಷ್ಟು ಜನಸಂಖ್ಯೆಗೆ ಆರೋಗ್ಯ ವಿಮೆಯು ದೊರೆಯುತ್ತಿದೆ. ಅದನ್ನು ಈಗ ಬಾಕಿ ಹದಿನೈದು ಪರ್ಸೆಂಟ್ ಜನಸಂಖ್ಯೆಗೂ ವಿಸ್ತರಿಸಲಾಗುತ್ತಿದೆ ಎಂದಿದ್ದಾರೆ.

ಖಾಸಗಿ ಆಸ್ಪತ್ರೆಯಿಂದ ರಕ್ಷಣೆಗಾಗಿ ಕ್ರಮ

ಖಾಸಗಿ ಆಸ್ಪತ್ರೆಯಿಂದ ರಕ್ಷಣೆಗಾಗಿ ಕ್ರಮ

ಖಾಸಗಿ ಆಸ್ಪತ್ರೆಗಳು ವಿಪರೀತ ಹೆಚ್ಚಿನ ದರವನ್ನು ವಿಧಿಸುವುದರಿಂದ ಜನರನ್ನು ರಕ್ಷಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ ಹಾಗೂ ಬಿಳಿ ರೇಷನ್ ಕಾರ್ಡ್ ಇರುವಂಥವರನ್ನು ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಒಪ್ಪಂದವೊಂದಕ್ಕೆ ಸಹಿ ಮಾಡಲಾಗಿ ಎಂದು ಸಚಿವರು ತಿಳಿಸಿದ್ದಾರೆ.

ಕೊರೊನಾಗೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ
 

ಕೊರೊನಾಗೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ

ಜನರಲ್ ಇನ್ಷೂರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ ಜತೆಗೆ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಅದರ ಪ್ರಕಾರ, ಪುಣೆ ಹಾಗೂ ಮುಂಬೈನಲ್ಲಿ ಇರುವ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈವರೆಗೆ ಮಹಾರಾಷ್ಟ್ರದಲ್ಲಿ 11,506 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 485 ಮಂದಿ ಸಾವನ್ನಪ್ಪಿದ್ದಾರೆ.

English summary

Free Cashless Insurance To All By Maharashtra Government

Maharashtra government announced free cashless insurance to all. Here is the complete details.
Story first published: Sunday, May 3, 2020, 11:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X