For Quick Alerts
ALLOW NOTIFICATIONS  
For Daily Alerts

ಗ್ಲೋಬಲ್ ಹೆಲ್ತ್ ಐಪಿಒ ಚಂದಾದಾರಿಕೆ ಮಾಡಬಹುದೇ, ಬ್ರೋಕರೇಜ್ ಏನು ಹೇಳುತ್ತೆ?

|

ಗ್ಲೋಬಲ್ ಹೆಲ್ತ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಂದು (ನವೆಂಬರ್ 4, 2022) ಆರಂಭವಾಗಿದೆ. ಇದು ಸುಮಾರು 2119.3 - 2205.6 ಕೋಟಿ ರೂಪಾಯಿ ಗಾತ್ರದ ಐಪಿಒ ಆಗಿದ್ದು ಚಂದಾದಾರಿಕೆಗೆ ತೆರೆದುಕೊಂಡಿದೆ. ಐಪಿಒ ಚಂದಾದಾರಿಕೆಯನ್ನು ನವೆಂಬರ್ 7ರವರೆಗೆ ಮಾತ್ರ ಮಾಡಿಕೊಳ್ಳುವ ಅವಕಾಶವಿದೆ. ಐಪಿಒ ಬ್ಯಾಂಡ್ ಬೆಲೆ 319 ರೂಪಾಯಿಯಿಂದ 336 ರೂಪಾಯಿವರೆಗೆ ಇದೆ. ಇದರ ಮುಖಬೆಲೆ 2 ರೂಪಾಯಿ ಆಗಿದೆ. ಆದರೆ ನೀವು ಚಂದಾದಾರಿಕೆ ಮಾಡಬಹುದೇ?

65,641,952 ಈಕ್ವಿಟಿ ಷೇರುಗಳ ಸಾರ್ವಜನಿಕ ವಿತರಣೆಗೆ ಇದ್ದು ಇದರ ಮುಖಬೆಲೆ ಪ್ರತಿ ಈಕ್ವಿಟಿ ಷೇರಿಗೆ ಎರಡು ರೂಪಾಯಿ ಆಗಿದೆ. ನೀವು ಸುಮಾರು 44 ಷೇರುಗಳವರೆಗೆ ಖರೀದಿ ಮಾಡಲು ಸಾಧ್ಯವಾಗಲಿದೆ. ಇನ್ನು ಐಪಿಒ ಇದಕ್ಕೂ ಮುನ್ನ ನಡೆಯುವ ಆಂಕರ್ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆದಾರರಿಂದ 662 ಕೋಟಿ ರೂಪಾಯಿ ಬಂಡವಾಳವನ್ನು ಪಡೆದುಕೊಂಡಿದೆ. ಪ್ರಮುಖವಾಗಿ ಮಾರಾಟ ಮಾಡುವ ಷೇರುದಾರರಿಂದ ಮಾರಾಟದ ಕೊಡುಗೆಯ ಯಾವುದೇ ಆದಾಯವನ್ನು ಕಂಪನಿಯು ಸ್ವೀಕರಿಸುವುದಿಲ್ಲ.

ಮೇದಾಂತ ಆಸ್ಪತ್ರೆ ಐಪಿಒ: ಷೇರು ಬೆಲೆ, ಮಾರಾಟ ಸಮಯ ಇತ್ಯಾದಿ ಮಾಹಿತಿಮೇದಾಂತ ಆಸ್ಪತ್ರೆ ಐಪಿಒ: ಷೇರು ಬೆಲೆ, ಮಾರಾಟ ಸಮಯ ಇತ್ಯಾದಿ ಮಾಹಿತಿ

ಸಾಮಾನ್ಯವಾಗಿ ಯಾವುದೇ ಒಂದು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ನಡೆಯುವ ಪ್ರಮುಖ ಸಂಸ್ಥೆಗಳು ಈ ಐಪಿಒ ಚಂದಾದಾರಿಕೆ ಮಾಡಿಕೊಳ್ಳಬಹುದೇ ಎಂಬ ಬಗ್ಗೆ ಸಲಹೆಯನ್ನು ನೀಡುತ್ತದೆ. ಈಗ ನೀವು ಗ್ಲೋಬಲ್ ಹೆಲ್ತ್ ಐಪಿಒ ಚಂದಾದಾರಿಕೆ ಮಾಡಬಹುದೇ, ಬ್ರೋಕರೇಜ್ ಏನು ಹೇಳುತ್ತದೆ, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಗ್ಲೋಬಲ್ ಹೆಲ್ತ್ ಲಿಮಿಟೆಡ್

ಗ್ಲೋಬಲ್ ಹೆಲ್ತ್ ಲಿಮಿಟೆಡ್

ಗ್ಲೋಬಲ್ ಹೆಲ್ತ್ ಲಿಮಿಟೆಡ್ (ಮೇದಾಂತ) ಭಾರತದ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ ಖಾಸಗಿ ಕಂಪನಿಯಾಗಿದೆ. ಹೃದ್ರೋಗ, ಕಾರ್ಡಿಯಕ್ ಸೈನ್ಸ್, ನರವಿಜ್ಞಾನ, ಆಂಕೊಲಾಜಿ, ಡೈಜೆಸ್ಟಿವ್, ಹೆಪಟೋಬಿಲಿಯರಿ ಸೈನ್ಸ್, ಆರ್ಥೋ, ಲಿವರ್ ಟ್ರಾನ್ಸ್‌ಪ್ಲೆಂಟ್, ಕಿಡ್ನಿ ಚಿಕಿತ್ಸೆ ಮೊದಲಾದ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತದೆ.

"ಮೇದಾಂತ" ಬ್ರಾಂಡ್ ಅಡಿಯಲ್ಲಿ, ಕಂಪನಿಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. 5 ಆಸ್ಪತ್ರೆಗಳನ್ನು ಪ್ರಸ್ತುತ ಹೊಂದಿದೆ. ಗುರುಗ್ರಾಮ, ಇಂದೋರ್, ರಾಂಚಿ, ಲಕ್ನೋ, ಪಾಟ್ನಾ ಹಾಗೂ ನೋಯ್ಡಾದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಗುರುಗ್ರಾಮ, ಇಂದೋರ್, ರಾಂಚಿ, ಲಕ್ನೋ, ಪಾಟ್ನಾದಲ್ಲಿ ಆಸ್ಪತ್ರೆಗಳು ಕಾರ್ಯಾ ನಿರ್ವಹಣೆ ಮಾಡುತ್ತಿದೆ. ಆದರೆ ನೋಯ್ಡಾದಲ್ಲಿ ಒಂದು ಆಸ್ಪತ್ರೆ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

 

 ಸಂಸ್ಥೆಯ ಕಾರ್ಯವೈಖರಿ ಹೇಗಿದೆ?

ಸಂಸ್ಥೆಯ ಕಾರ್ಯವೈಖರಿ ಹೇಗಿದೆ?

  • ಆಶಿಕಾ ರಿಸರ್ಚ್ ಪ್ರಕಾರ ಮೇದಾಂತ ಪ್ರಮುಖವಾಗಿ ತನ್ನ ಮಾರುಕಟ್ಟೆಯಲ್ಲಿ ತನ್ನ ಆದ ಛಾಪನ್ನು ಹೊಂದಿದೆ. ಪ್ರಸ್ತುತ ಮೇದಾಂತ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದು, ಪೂರಕ ಸೇವೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ತನ್ನ ಮಿತಿಯನ್ನು ಇರುವ ಭೂಮಿಯ ಸದ್ಬಳಕೆಯನ್ನು ನಡೆಸುವ ಪ್ರಯತ್ನವನ್ನು ಸಂಸ್ಥೆಯು ಮಾಡುತ್ತಿದೆ. ಈ ಸಂದರ್ಭದಲ್ಲೇ ಮಾಹಿತಿ, ತಂತ್ರಜ್ಞಾನ, ಸಂಶೋಧನೆ, ಹೊಸ ಉತ್ಪನ್ನ, ಹೊಸ ಸಂಪನ್ಮೂಲ, ಅಪ್‌ಗ್ರೇಡೆಡ್ ವಿಧಾನ ಮತ್ತು ಇತರ ಸಂಪನ್ಮೂಲಗಳ ಸಮರ್ಥ, ಅತ್ಯುತ್ತಮ ಬಳಕೆಯ ಮೂಲಕ ಉತ್ತಮ ಆರೈಕೆ, ಸುಧಾರಿತ ಗುಣಮಟ್ಟ ಮತ್ತು ಆರೋಗ್ಯ ಸೇವೆಯ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ.
  • ಹಾಗೆಯೇ ಸಂಸ್ಥೆಯಲ್ಲಿನ ಉದ್ಯೋಗ ದರ ಹಾಗೂ ಉಪಕರಣಗಳ ಬಳಕೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ನಿರ್ದಿಷ್ಟ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಹೊಸ ವೈದ್ಯಕೀಯ ವೃತ್ತಿಪರರನ್ನು ಕಾರ್ಯ ಪ್ರವೃತ್ತರಾಗಿಸುವುದು ಮತ್ತು ನೇಮಕ ಮಾಡಿಕೊಳ್ಳುವುದು, ಕ್ಲಿನಿಕಲ್ ಸೇವೆಯ ಮೇಲೆ ಗಮನ ಹರಿಸುವ ಕಾರ್ಯವನ್ನು ಮಾಡುತ್ತಿದೆ. ಕ್ಲಿನಿಕಲ್ ಟ್ರೇನಿಂಗ್ ತಂತ್ರಜ್ಞಾನದ ಬಳಕೆಯನ್ನು ಸುಧಾರಿಸುವುದನ್ನು ಮುಂದುವರಿಸುವ ಮೂಲಕ ಆಸ್ಪತ್ರೆಗಳಲ್ಲಿ ಸರಾಸರಿ ಅವಧಿಯನ್ನು ಕಡಿಮೆ ಮಾಡಲು ಕಂಪನಿಯು ಯೋಜಿಸಿದೆ. ಕಂಪನಿಯು ಉದ್ಯೋಗಿಗಳ ಕಾರ್ಯವೈಖರಿಯನ್ನು ಸುಧಾರಣೆ ಮಾಡುವ ಮೂಲಕ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ನೋಡುತ್ತದೆ.
  • ಆಸ್ಪತ್ರೆಗಳ ಕಾರ್ಯವೈಖರಿಯನ್ನು ಸುಧಾರಿಸಲು, ಸುಧಾರಿತ ತಂತ್ರಜ್ಞಾನವನ್ನು ನಿರಂತರವಾಗಿ ಅಳವಡಿಸಲು ದೇಶೀಯ ಮತ್ತು ಅಂತರಾಷ್ಟ್ರೀಯ ಕ್ಲಿನಿಕಲ್ ಅಭಿವೃದ್ಧಿ ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಹೊಂದಿರುವ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಕಂಪನಿಯು ಯೋಜಿಸಿದೆ. ಹಾಗೆಯೇ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಇನ್ನಷ್ಟು ಅಪ್‌ಗ್ರೇಡ್ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.
 ನೀವು ಚಂದಾದಾರಿಕೆ ಮಾಡಬಹುದೇ?

ನೀವು ಚಂದಾದಾರಿಕೆ ಮಾಡಬಹುದೇ?

  • ಮೇದಾಂತದ ಗುರುಗ್ರಾಮ ಆಸ್ಪತ್ರೆಯಲ್ಲಿ 100 ಹಾಸಿಗೆಗಳು ಮತ್ತು ಲಕ್ನೋ ಆಸ್ಪತ್ರೆಯಲ್ಲಿ 400-500 ಹಾಸಿಗೆಗಳು ಹೆಚ್ಚಿನ ಹೂಡಿಕೆಗಳು ಇಲ್ಲದೆ ಸೇರ್ಪಡೆ ಮಾಡಬಹುದು. ಇನ್ನು ಸಂಸ್ಥೆಯು ಗುರುಗ್ರಾಮ ಆಸ್ಪತ್ರೆಯಲ್ಲಿ ಮೆಡಿಸಿಟಿ ಪ್ಲಾಟ್‌ನಲ್ಲಿ 103,703.22 ಚದರ ಮೀಟರ್‌ನ ಖಾಲಿ ಮಹಡಿಯನ್ನು ಹೊಂದಿದೆ. ಸಹಾಯಕ ಸೇವೆಗಳಿಗೆ (ಅಂದರೆ, ವಸತಿ ಮತ್ತು ಅತಿಥಿ ಗೃಹ) 13 ಎಕರೆಗಳ ಹೆಚ್ಚುವರಿ ಭೂಮಿಯನ್ನು ಹೊಂದಿದೆ.
  • ಆಶಿಕಾ ರಿಸರ್ಚ್ ಪ್ರಕಾರ ಮೇದಾಂತ ಆರೋಗ್ಯ ಸೇವೆಗಳ ವಿಷಯದಲ್ಲಿ ಹೆಚ್ಚಿನ ವಿಸ್ತಾರವನ್ನು ಹೊಂದಿಲ್ಲ. ಎನ್‌ಸಿಆರ್, ಲಕ್ನೋ ಮತ್ತು ಪಾಟ್ನಾದಲ್ಲಿ ಕ್ರಮವಾಗಿ 1,000 ಜನರಿಗೆ 1.9, 3.3 ಮತ್ತು 4.3 ಹಾಸಿಗೆಗಳನ್ನು ಹೊಂದಿದೆ. 2021 ರ ಆರ್ಥಿಕ ವರ್ಷದಲ್ಲಿ ಕೊಂಚ ಹಿನ್ನಡೆಯನ್ನು ಕಂಡಿದೆ. ಅದನ್ನು ಹೊರತಾಗಿ ಭಾರತೀಯ ಆರೋಗ್ಯ ವಿತರಣಾ ಉದ್ಯಮವು 2022 ಮತ್ತು 2026 ರ ನಡುವೆ ಉತ್ತಮ ಬೆಳವಣಿಗೆಯನ್ನು ಹೊಂದುವ ಅಂದಾಜು ಮಾಡಲಾಗಿದೆ. ಭಾರತದಲ್ಲಿ ಕಡಿಮೆ ಆದಾಯ ಗಳಿಸುವವರಿಗೆ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುವಂತೆ ಮಾಡಲು 2018 ರಲ್ಲಿ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ಪ್ರಾರಂಭ ಮಾಡಲಾಗಿದೆ. ಇದರ ಸದುಪಯೋಗ ಕೂಡಾ ಪಡೆಯಲು ಸಾಧ್ಯವಾಗಲಿದೆ.
  • ಹಣಕಾಸು ವರ್ಷ 2020-22ರಲ್ಲಿ ಮೇದಾಂತದ ಆದಾಯ ಏರಿಕೆಯಾಗಿದೆ. ಮೇದಾಂತ ಆದಾಯ, EBITDA ಹಾಗೂ ನಿವ್ವಳ ಆದಾಯ ಕ್ರಮವಾಗಿ 20.2%, 55.4% ಹಾಗೂ 132.4% ರಷ್ಟು ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳನ್ನು ನೋಡಿ ಆಶಿಕಾ ರಿಸರ್ಚ್ ಈ ಐಪಿಒ ಚಂದಾದಾರಿಕೆ ಮಾಡುವಂತೆ ಸಲಹೆ ನೀಡಿದೆ.
 ಜಿಯೋಜಿತ್ ಚಂದಾದಾರಿಕೆ ರೇಟಿಂಗ್ ನೀಡಿದೆ!

ಜಿಯೋಜಿತ್ ಚಂದಾದಾರಿಕೆ ರೇಟಿಂಗ್ ನೀಡಿದೆ!

"336 ರೂಗಳ ಮೇಲಿನ ಬೆಲೆಯ ಬ್ಯಾಂಡ್‌ನಲ್ಲಿ, ಮೇದಾಂತದಲ್ಲಿ 46x (FY22 EPS) ನ P/E ನಲ್ಲಿ ಲಭ್ಯವಿದೆ. ಅದರ ಬಲವಾದ ಬ್ರ್ಯಾಂಡ್ ಮೌಲ್ಯ, ಹೊಸ ಆಸ್ಪತ್ರೆ ಸೇರ್ಪಡೆ, ARPOB ನಲ್ಲಿ ಏರಿಕೆ, ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಉನ್ನತಿ, ಆರೋಗ್ಯ ಸೇವೆಗಳಿಗೆ ಕೈಗೆಟಕುವ ದರ ಎಲ್ಲವನ್ನು ಗಮನಿಸಿ 'ಚಂದಾದಾರಿಕೆ' ಮಾಡಿಕೊಳ್ಳಬಹುದು," ಎಂದು ಜಿಯೋಜಿತ್ ಚಂದಾದಾರಿಕೆ ರೇಟಿಂಗ್ ನೀಡಿದೆ.

 ಇಲ್ಲಿ ಗಮನಿಸಿ!

ಇಲ್ಲಿ ಗಮನಿಸಿ!

ಯಾವುದೇ ಈಕ್ವಿಟಿಯಲ್ಲಿ ಹೂಡಿಕೆ ಮಾಡುವು ಅಪಾಯಕಾರಿ. ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅರಿತುಕೊಮಡು ಹೂಡಿಕೆ ಮಾಡುವುದು ಉತ್ತಮ. ಹೂಡಿಕೆ ಮಾಡಿದ ಬಳಿಕ ಉಂಟಾದ ಯಾವುದೇ ನಷ್ಟಕ್ಕೆ ಗ್ರೇನಿಯಂ ಸಂಸ್ಥೆ ಅಥವಾ ಲೇಖಕರು ಜವಾಬ್ದಾರರಲ್ಲ.

ಬೆಂಗಳೂರಿನ ಡಿಸಿಎಕ್ಸ್ ಸೇರಿ 4 ಕಂಪನಿಗಳಿಂದ ಈ ವಾರ ಐಪಿಒಬೆಂಗಳೂರಿನ ಡಿಸಿಎಕ್ಸ್ ಸೇರಿ 4 ಕಂಪನಿಗಳಿಂದ ಈ ವಾರ ಐಪಿಒ

English summary

Global Health IPO Opens: Should You Subscribe, What Brokerage Says, Details in Kannada

Global Health IPO Opens On novemeber 04, 2022: Should You Subscribe, What Brokerage Says, Details in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X