For Quick Alerts
ALLOW NOTIFICATIONS  
For Daily Alerts

ನಿರಂತರ ಚಿನ್ನದ ಬೆಲೆ ಏರಿಕೆ: ಸ್ಟಾಕ್, ಚಿನ್ನ ಎಲ್ಲಿ ಹೂಡಿಕೆ?

|

ಭಾರತೀಯ ಮಾರುಕಟ್ಟೆಗಳಲ್ಲಿ, ಈ ವಾರ ಚಿನ್ನದ ದರಗಳು ಹೆಚ್ಚಾಗುತ್ತಿವೆ. ಮೇ 23ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿದ್ದು 47,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಏರಿದ್ದು, ಪ್ರಸ್ತುತ 51,430 ರೂಪಾಯಿ ಆಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರಗಳು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಇದು ಭಾರತೀಯ ಮಾರುಕಟ್ಟೆಯ ಮೇಲೂ ಕೂಡಾ ಪರಿಣಾಮ ಬೀರುತ್ತಿದೆ. ಆದರೆ ಈ ವಾರ ಇಕ್ವಿಟಿ ಮಾರುಕಟ್ಟೆಗಳು ಕುಸಿಯುತ್ತಿದೆ. ಇನ್ನು ಷೇರು ಮಾರುಕಟ್ಟೆ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕೂಡಾ ಏರಿಳಿತ ಕಾಣುತ್ತಿದೆ.

 Gold Rate Today: ಮತ್ತೆ ಚಿನ್ನದ ದರ ಏರಿಕೆ, ಪ್ರಮುಖ ನಗರಗಳಲ್ಲಿ ಮೇ 23ರ ಬೆಲೆ ಎಷ್ಟಿದೆ? Gold Rate Today: ಮತ್ತೆ ಚಿನ್ನದ ದರ ಏರಿಕೆ, ಪ್ರಮುಖ ನಗರಗಳಲ್ಲಿ ಮೇ 23ರ ಬೆಲೆ ಎಷ್ಟಿದೆ?

ಬಡ್ಡಿದರ ಹೆಚ್ಚಳ, ಹೆಚ್ಚುತ್ತಿರುವ ಹಣದುಬ್ಬರದ ಒತ್ತಡ, ಕಾರ್ಪೊರೇಟ್‌ಗಳ ಲಾಭ, ಕುಸಿಯುತ್ತಿರುವ ಚಿಲ್ಲರೆ ಮಾರಾಟ, ಕಡಿಮೆ ಬೇಡಿಕೆಗಳು, ಕುಸಿಯುತ್ತಿರುವ ಯುಎಸ್ ಡಾಲರ್ ಸೂಚ್ಯಂಕದ ನಡುವೆ ಚಿನ್ನದ ದರಗಳು ಏರಿಕೆ ಕಾಣುತ್ತಿದೆ.

ಗಮನ ಸೆಳೆಯುವ ಚಿನ್ನದ ಹೂಡಿಕೆ

ಗಮನ ಸೆಳೆಯುವ ಚಿನ್ನದ ಹೂಡಿಕೆ

ಕಳೆದ ವಾರದಲ್ಲಿ ಈಕ್ವಿಟಿ ಹೂಡಿಕೆದಾರರು ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದಾರೆ. ಮ್ಯೂಚುವಲ್ ಫಂಡ್‌ಗಳು ಮತ್ತು ಎಸ್‌ಐಪಿ ಕೂಡಾ ನಷ್ಟವನ್ನು ಕಂಡಿದೆ. ಆದ್ದರಿಂದ, ಅನೇಕ ಹೂಡಿಕೆದಾರರು ಪರ್ಯಾಯ ಆಯ್ಕೆಗಳನ್ನು ಎದುರು ನೋಡುತ್ತಿದ್ದಾರೆ. ಈ ವೇಳೆ ಜನರ ಗಮನ ಸೆಳೆಯುವುದು ಚಿನ್ನ, ಚಿನ್ನದ ಇಟಿಎಫ್‌ಗಳು ಮತ್ತು ಡಿಜಿಟಲ್ ಚಿನ್ನದ ಹೂಡಿಕೆಯಾಗಿದೆ.

 ದೀರ್ಘಾವಧಿ ಚಿನ್ನದ ಹೂಡಿಕೆ ಉತ್ತಮ

ದೀರ್ಘಾವಧಿ ಚಿನ್ನದ ಹೂಡಿಕೆ ಉತ್ತಮ

ನೀವು ದೀರ್ಘಾವಧಿಯ ಹೂಡಿಕೆ ಮಾಡುವುದಾದರೆ, ನೀವು ಚಿನ್ನದ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಹಳದಿ ಲೋಹವು ಎಂದಿಗೂ ಕೂಡಾ ಉತ್ತಮ ಆಯ್ಕೆಯಾಗಿದೆ. ಉತ್ತಮ ಆದಾಯವನ್ನು ನೀಡುತ್ತದೆ. ಹಣದುಬ್ಬರವನ್ನು ಸೋಲಿಸಲು ಒಂದು ಮಾರ್ಗವು ಹೌದು. ಆದರೆ ಷೇರು ಮಾರುಕಟ್ಟೆಗಳು ಮತ್ತು ಚಿನ್ನದ ಮಾರುಕಟ್ಟೆಗಳು ಎರಡೂ ಅಸ್ಥಿರವಾಗಿವೆ.

 ಕಡಿಮೆ ಠೇವಣಿಗೆ ಷೇರು ಹೂಡಿಕೆ

ಕಡಿಮೆ ಠೇವಣಿಗೆ ಷೇರು ಹೂಡಿಕೆ

ಹೂಡಿಕೆದಾರರು ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ, ಕಡಿಮೆ ಬೆಲೆಯೊಂದಿಗೆ ಷೇರುಗಳನ್ನು ಖರೀದಿಸಲು ಬಯಸಿದರೆ, ಷೇರುಗಳು ಉತ್ತಮ ಅವಕಾಶಗಳಾಗಿರಬಹುದು. ಇಲ್ಲದಿದ್ದರೆ, ಚಿನ್ನ ಉತ್ತಮ ಆಯ್ಕೆ. ಚಿನ್ನ ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ದೀರ್ಘಾವಧಿಯಲ್ಲಿ ಲಾಭ ಆದಾಯವನ್ನು ನೀಡುತ್ತದೆ.

 ಇಂದಿನ ಫ್ಯೂಚರ್ ಗೋಲ್ಡ್, ಸ್ಪಾಟ್ ಗೋಲ್ಡ್

ಇಂದಿನ ಫ್ಯೂಚರ್ ಗೋಲ್ಡ್, ಸ್ಪಾಟ್ ಗೋಲ್ಡ್

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 23ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 50923.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.50ರಷ್ಟು ಹಿಗ್ಗಿ 1,854.62 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.33ರಷ್ಟು ಇಳಿಕೆಯಾಗಿದ್ದು, 21.87 ಯುಎಸ್ ಡಾಲರ್ ಆಗಿದೆ.

English summary

Gold Prices Hike in Several Days: Stock Or Gold, Where To Invest?

Gold Prices Hike in Several Days: Stock Or Gold, Where To Invest?.
Story first published: Monday, May 23, 2022, 21:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X