For Quick Alerts
ALLOW NOTIFICATIONS  
For Daily Alerts

ರಷ್ಯಾದಿಂದ ಹಳದಿ ಲೋಹ ಆಮದಿಗೆ ಜಿ7 ನಿರ್ಬಂಧ ಹೇರಿಕೆ: ಚಿನ್ನದ ದರ ಏರಿಕೆ

|

ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು ನಾಲ್ಕು ತಿಂಗಳಿನಿಂದ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಈಗಾಗಲೇ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿಕೆ ಮಾಡಿದೆ. ಈಗ ಜಿ7 ರಾಷ್ಟ್ರಗಳು ರಷ್ಯಾದಿಂದ ಹಳದಿ ಲೋಹದ ಆಮದಿನ ಮೇಲೆ ನಿಷೇಧವನ್ನು ಹೇರಿದೆ. ಇದರಿಂದಾಗಿ ಚಿನ್ನದ ಬೆಲೆಯು ಹೆಚ್ಚಳವಾಗಿದೆ.

 

ಈ ಸಮಯಕ್ಕೆ ಸ್ಟಾಪ್ ಗೋಲ್ಡ್ ಶೇಕಡ 0.42ರಷ್ಟು ಏರಿಕೆಯಾಗಿ 1,838.48ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಬೆಳ್ಳಿ ಶೇಕಡ 1.23ರಷ್ಟು ಹೆಚ್ಚಳವಾಗಿ 21.39ಕ್ಕೆ ತಲುಪಿದೆ. ಫ್ಯೂಚರ್ ಗೋಲ್ಡ್ ಕೂಡಾ ಏರಿಕೆ ಕಂಡಿದ್ದು, 50882.00ಕ್ಕೆ ತಲುಪಿದೆ. ಇನ್ನು ಸೋಮವಾರ ಭಾರತದಲ್ಲೂ ಚಿನ್ನದ ದರ ಹೆಚ್ಚಳವಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು ನೂರು ರೂಪಾಯಿ ಹೆಚ್ಚಳವಾಗಿದ್ದು, 47,650 ರೂಪಾಯಿಗೆ ತಲುಪಿದೆ.

Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ

ಜಿ7 ರಾಷ್ಟ್ರಗಳ ಪೈಕಿ ನಾಲ್ಕು ರಾಷ್ಟ್ರಗಳು ರಷ್ಯಾದಿಂದ ಚಿನ್ನದ ಆಮದನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಭಾನುವಾರ ನಿರ್ಧಾರ ಕೈಗೊಂಡಿದೆ. ಆದರೆ ಈ ನಿರ್ಬಂಧವನ್ನು ಎಲ್ಲಾ ಜಿ7 ರಾಷ್ಟ್ರಗಳು ಹೇರಲಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

 ಹಣದುಬ್ಬರಕ್ಕೆ ಚಿನ್ನ ಸುರಕ್ಷಿತ ಹೂಡಿಕೆ

ಹಣದುಬ್ಬರಕ್ಕೆ ಚಿನ್ನ ಸುರಕ್ಷಿತ ಹೂಡಿಕೆ

ಯುಎಸ್ ಕೇಂದ್ರ ಬ್ಯಾಂಕ್ ಈ ಹಣದುಬ್ಬರದ ನಡುವೆ ಮತ್ತೆ ಬಡ್ಡಿದರ ಏರಿಕೆಯ ಬಗ್ಗೆ ಸುಲಿವು ನೀಡಿದೆ. ಈ ನಡುವೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಸಾಮಾನ್ಯವಾಗಿ ಈ ಹಣದುಬ್ಬರ ಸಂದರ್ಭದಲ್ಲಿ ಚಿನ್ನವನ್ನು ಮೂಲಾಧಾರವಾಗಿ ಬಳಕೆ ಮಾಡಲಾಗುತ್ತದೆ.

 ಶುಕ್ರವಾರ ಹೇಗಿತ್ತು ಚಿನ್ನದ ವಹಿವಾಟು

ಶುಕ್ರವಾರ ಹೇಗಿತ್ತು ಚಿನ್ನದ ವಹಿವಾಟು

ಕಳೆದ ವಾರದಲ್ಲಿ ಚಿನ್ನದ ಬೆಲೆಯು ಇಳಿಕೆ ಕಂಡಿದ್ದವು, ಆದರೆ ಶುಕ್ರವಾರ ಡಾಲರ್ ಚೇತರಿಕೆ ಕಂಡಾಗ ಚಿನ್ನದ ಬೆಲೆಯು ಏರಿಕೆ ಕಂಡಿದೆ. ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50603.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಹಿಗ್ಗಿ 59755.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಏರಿದ್ದು 1,827.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.63ರಷ್ಟು ಏರಿಕೆಯಾಗಿದ್ದು, 21.15 ಯುಎಸ್ ಡಾಲರ್ ಆಗಿದೆ.

 ಮಾರುಕಟ್ಟೆ ಚಂಚಲತೆ ಎದುರಿಸಲು ಚಿನ್ನ ಸಾಧನ
 

ಮಾರುಕಟ್ಟೆ ಚಂಚಲತೆ ಎದುರಿಸಲು ಚಿನ್ನ ಸಾಧನ

ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ವಿಮರ್ಶಕ ಜೆಫ್ರಿ ಹ್ಯಾಲಿ "ಒಟ್ಟಾರೆಯಾಗಿ ಮೇ ಆರಂಭದಿಂದ ಚಿನ್ನವು 1,780 ಡಾಲರ್ -1,880 ಡಾಲರ್ ಆಸುಪಾಸಿನಲ್ಲಿದೆ. ಡಾಲರ್ ಇದರಲ್ಲಿ ಬದಲಾವಣೆ ತರಲಿದೆ. ಈ ಯುದ್ಧದ ನಡುವೆ ಮಾರುಕಟ್ಟೆ ಚೇತರಿಕೆ ಕಾಣಬೇಕಾಗಿದೆ," ಎಂದು ತಿಳಿಸಿದರು. ನಾವು ಮಾರುಕಟ್ಟೆಯಲ್ಲಿ ಆಗುವ ಚಂಚಲತೆಯನ್ನು ಎದುರಿಸಬೇಕಾದರೆ ಅದಕ್ಕೆ ಉತ್ತಮ ಸಾಧನ ಚಿನ್ನವಾಗಿದೆ. ಈಕ್ವಿಟಿಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಆದರೂ ಕೊಳ್ಳುವ ಶಕ್ತಿಯ ಸಮಾನತೆಯನ್ನು ಉಳಿಸಿಕೊಂಡು ಮಾರುಕಟ್ಟೆಯ ಚಂಚಲತೆಯನ್ನು ನಾವು ಎದುರಿಸಲು ಅತ್ಯುತ್ತಮವಾದ ಸಾಧನ ಚಿನ್ನವಾಗಿದೆ.

English summary

Gold prices today : gold prices rise in India after G7 countries move to ban Russia imports

Gold prices today : Gold prices today edged higher in Indian markets, after some G7 countries moved to ban imports of Russian gold. Know more.
Story first published: Monday, June 27, 2022, 13:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X