For Quick Alerts
ALLOW NOTIFICATIONS  
For Daily Alerts

ಉದ್ಯೋಗ ಕಡಿತದ ನಡುವೆ ಸಿಹಿಸುದ್ದಿ: ಭಾರತ್‌ಪೇಯಲ್ಲಿ ಉದ್ಯೋಗಾವಕಾಶ

|

ಪ್ರಸ್ತುತ ಪ್ರತಿದಿನ ನಾವು ಉದ್ಯೋಗ ಕಡಿತದ ಸುದ್ದಿಯನ್ನು ಕೇಳುತ್ತಿದ್ದೇವೆ. ಹಲವಾರು ಸಂಸ್ಥೆಗಳು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಉದ್ಯೋಗ ಕಳೆದುಕೊಂಡ ಅದೆಷ್ಟೋ ಮಂದಿ ಹೊಸ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ಉದ್ಯೋಗ ಹುಡುಕುವವರಿಗೆ ಸಿಹಿಸುದ್ದಿಯೊಂದಿದೆ.

ಹೌದು, ಸಂಸ್ಥೆಗಳು ನೇಮಕಾತಿಯನ್ನು ಕಡಿತ ಮಾಡುತ್ತಿರುವಾಗ ಮತ್ತು ಉದ್ಯೋಗ ಕಡಿತ ಸೀಸನ್‌ನಲ್ಲಿಯೂ ಸಂಸ್ಥೆಯೊಂದು ನೇಮಕಾತಿಯನ್ನು ಮಾಡುತ್ತಿದೆ. ಭಾರತ್‌ಪೇ ಸಂಸ್ಥೆಯು ನೇಮಕಾತಿಯನ್ನು ಘೋಷಣೆ ಮಾಡಿದೆ. ಪ್ರೋಡೆಕ್ಟ್ ಮ್ಯಾನೆಜರ್ ಹುದ್ದೆಗೆ ಸಂಸ್ಥೆಯು ಅರ್ಹ ವ್ಯಕ್ತಿಯ ಹುಡುಕಾಟದಲ್ಲಿದೆ. ಈ ಬಗ್ಗೆ ಲಿಂಕ್ಡಿನ್‌ನ್ಲಲಿ ಸಂಸ್ಥೆಯು ಉಲ್ಲೇಖಿಸಿದೆ.

Q3ಯಲ್ಲಿ ಹೊಸ ನೇಮಕಾತಿ ಪ್ರಮಾಣ ಕಡಿತ, ಕಾರಣವೇನು?Q3ಯಲ್ಲಿ ಹೊಸ ನೇಮಕಾತಿ ಪ್ರಮಾಣ ಕಡಿತ, ಕಾರಣವೇನು?

ಭಾರತ್‌ಪೇ ಮುಖ್ಯ ಅಧಿಕಾರಿಯಾದ ಅಂಕುರ್‌ ಜೈನ್ ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಮಾಹಿತಿ ನೀಡಿದ್ದಾರೆ. ನೇಮಕಾತಿಯ ಬಗ್ಗೆ ವಿವರಣೆ ನೀಡಿದ್ದಾರೆ. "ನನ್ನ ಸಂಸ್ಥೆ ಭಾರತ್‌ಪೇ ಪ್ರೊಡೆಕ್ಟ್ ಮ್ಯಾನೆಜರ್ಸ್‌ಗಳನ್ನು ನೇಮಕಾತಿ ಮಾಡುತ್ತಿದೆ. ನೀವು ಆಸಕ್ತಿಯನ್ನು ಹೊಂದಿದ್ದರೆ, ಭಾರತ್‌ಪೇಯನ್ನು ಸಂಪರ್ಕಿಸಬಹುದು. [email protected] ಗೆ ಇಮೇಲ್ ಮಾಡಿ," ಎಂದು ಪೋಸ್ಟ್‌ನಲ್ಲಿ ಅಂಕುರ್‌ ಜೈನ್ ತಿಳಿಸಿದ್ದಾರೆ.

ಉದ್ಯೋಗ ಕಡಿತದ ನಡುವೆ ಸಿಹಿಸುದ್ದಿ: ಭಾರತ್‌ಪೇಯಲ್ಲಿ ಉದ್ಯೋಗಾವಕಾಶ

ಅಂಕುರ್ ಜೈನ್ ಬೇರೇನು ಮಾಹಿತಿ ನೀಡಿದ್ದಾರೆ

ಭಾರತ್‌ಪೇ ಮುಖ್ಯ ಅಧಿಕಾರಿಯಾದ ಅಂಕುರ್‌ ಜೈನ್, "ಸಂಸ್ಥೆಯು ನಿರಂತರವಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರಸ್ತುತ ಸುಮಾರು 25 ಬಿಲಿಯನ್ ಡಾಲರ್ ವಹಿವಾಟನ್ನು ಹೊಂದಿದೆ," ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸಂಸ್ತೆಯು 1 ಬಿಲಿಯನ್ ಡಾಲರ್ ಸಾಲವನ್ನು ಕೂಡಾ ನೀಡಿದೆ ಎಂದು ಅಂಕುರ್‌ ಜೈನ್ ಹೇಳಿದ್ದಾರೆ.

ಸಂಸ್ಥೆಯ ಆದಾಯವು ಕಳೆದ ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ ಎಂಬ ಬಗ್ಗೆಯೂ ಅಂಕುರ್ ಜೈನ್ ವಿವರಿಸಿದ್ದಾರೆ. 2022ರಲ್ಲಿ ಭಾರತ್‌ಪೇ ಆದಾಯವು 100 ಮಿಲಿಯನ್ ಡಾಲರ್‌ನಿಂದ 300 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಹಾಗೆಯೇ ಸಂಸ್ಥೆಯು ಮುಂದಿನ ವರ್ಷ ಐಪಿಒ ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ನೇಮಕಾತಿಯಾದವರಿಗೆ ಸಂಸ್ಥೆಯಲ್ಲಿ ಉದ್ಯೋಗ ವಾತಾವರಣ ಹೇಗಿರಲಿದೆ. ಯಾವೆಲ್ಲ ಸವಾಲುಗಳು ಇದೆ ಎಂದಬ ಬಗ್ಗೆಯೂ ಅಂಕುರ್ ಜೈನ್ ಹೇಳಿದ್ದಾರೆ. ಅರ್ಹತೆ ಬಗ್ಗೆ ಉಲ್ಲೇಖಿಸಿರುವ ಜೈನ್, "ಮುಂದಿನ ಜನರೇಷನ್‌ನ ಪಾವತಿ ಪ್ಲಾಟ್‌ಫಾರ್ಮ್, ಫಿನ್‌ಟೆಕ್ ಪ್ರೊಡೆಕ್ಟ್, AI/ML ಮೂಲದ ಸಾಲದ ಪ್ಲಾಟ್‌ಫಾರ್ಮ್, ಕ್ರೆಡಿಟ್ ರಿಸ್ಕ್ ಮಾಡೆಲಿಂಗ್, IoT ಡಿವೈಸ್ ಮೊದಲಾದವುಗಳ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಇದರ ಬಗ್ಗೆ ಕಾರ್ಯನಿರ್ವಹಣೆ ಮಾಡಲಿರುತ್ತದೆ," ಎಂದು ಮಾಹಿತಿ ನೀಡಿದ್ದಾರೆ.

ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ಟ್ವಿಟ್ಟರ್, ಎಮಟಾ, ಅಮೆಜಾನ್, ಮೈಕ್ರೋಸಾಫ್ಟ್ ಮೊದಲಾದವುಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಪ್ರಮುಖವಾಗಿ ಹಣದುಬ್ಬರ, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುವ ಆತಂಕದ ನಡುವೆ ಈ ಪ್ರಮುಖ ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಇನ್ನು ಆನ್‌ಲೈನ್ ಡೆಲಿವರಿ ಸಂಸ್ಥೆಗಳು ಕೂಡಾ ಉದ್ಯೋಗ ಕಡಿತ ಮಾಡುತ್ತಿದೆ.

English summary

Good News For Job Seekers Amid Layoff, BharatPe Opens Hiring, Check Eligibility Criteria

layoffs Wagon in 2023: At a time when major IT firms are freezing hiring amid layoff season BharatPe Opens Hiring, Check Eligibility Criteria.
Story first published: Friday, January 20, 2023, 17:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X