For Quick Alerts
ALLOW NOTIFICATIONS  
For Daily Alerts

EPF ಯೋಜನೆಯಲ್ಲಿ ಬದಲಾವಣೆ: ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?

|

ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಕುರಿತಂತೆ ಕಾರ್ಮಿಕ ಸಚಿವಾಲಯವು ಇತ್ತೀಚೆಗಷ್ಟೇ ಮಹತ್ವದ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ, ನಿವೃತ್ತಿಯ 15 ವರ್ಷಗಳ ನಂತರ ಸಂಪೂರ್ಣ ಪಿಂಚಣಿಯನ್ನು EPF ಯೋಜನೆಯಂತೆ ಹಿಂಪಡೆಯಲು ನಿರ್ಧರಿಸಿರುವ ಪಿಂಚಣಿದಾರರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಹಾಲಿ ನಿಯಮದಂತೆ ಇಪಿಎಸ್ -95 ಸದಸ್ಯರಿಗೆ ಪಿಂಚಣಿಯ ಮೂರನೇ ಒಂದು ಭಾಗವನ್ನು 10 ವರ್ಷಗಳವರೆಗೆ ಹಿಂಪಡೆಯಲು ಅವಕಾಶವಿತ್ತು. ಇದನ್ನು ಈಗ 15 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದರ ಲಾಭ 6.3 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ.

ಹಳೆ ಪಿಂಚಣಿ ಯೋಜನೆಯಂತೆ ಲಾಭ

ಹಳೆ ಪಿಂಚಣಿ ಯೋಜನೆಯಂತೆ ಲಾಭ

ಜನವರಿ 1, 2004 ಹಾಗೂ ಅದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ನೇಮಕವಾಗಿರುವ ಅಥವಾ ಆ ದಿನಾಂಕದ ನಂತರ ಹುದ್ದೆಗೆ ಸೇರಿರುವ ನೌಕರರಿಗೆ ಹಳೆ ಪಿಂಚಣಿ ಯೋಜನೆ ಲಾಭ ಸಿಗಲಿದೆ. 01.01.2004 ನಂತರ ಕೆಲಸಕ್ಕೆ ಸೇರಿ ಲೆಟರ್ ಪಡೆದವರಿಗೂ ಲಾಭ ಸಿಗಲಿದೆ ಎಂದು ಮೋದಿ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

ಹೆಚ್ಚಿನ ಪಿಂಚಣಿ ಯಾರಿಗೆ ಸಿಗಲಿದೆ, ಯಾರಿಗೆ ಸಿಗಲ್ಲ

ಹೆಚ್ಚಿನ ಪಿಂಚಣಿ ಯಾರಿಗೆ ಸಿಗಲಿದೆ, ಯಾರಿಗೆ ಸಿಗಲ್ಲ

ಮುಂಗಡ ಪಿಂಚಣಿಯ ಸೌಲಭ್ಯ ಬಳಸುವ ಹಾಗೂ ನಿವೃತ್ತಿಯ ಸಮಯದಲ್ಲಿ ತಮ್ಮ ಪಿಂಚಣಿಯ ಸ್ವಲ್ಪ ಭಾಗವನ್ನು ಕಡಿಮೆ ಮಾಡಿದವರಿಗೆ ಮಾತ್ರ ಈ ಹೊಸ ನಿಯಮ ಅನ್ವಯವಾಗಲಿದೆ. 2008ರ ಸೆಪ್ಟೆಂಬರ್ 26ಕ್ಕೂ ಮುನ್ನ ನಿವೃತ್ತರಾದವರಿಗೆ ಲಾಭ ಸಿಗಲಿದೆ.

ಈ ಸೌಲಭ್ಯದಡಿ ಪಿಂಚಣಿಯ ಒಂದು ಭಾಗವನ್ನು ಪಿಂಚಣಿದಾರರಿಗೆ ಮುಂಚಿತವಾಗಿ ನೀಡಲಾಗುತ್ತದೆ. ನಂತರ ತಿಂಗಳ ಪಿಂಚಣಿಯ ಮೂರನೇ ಒಂದು ಭಾಗವನ್ನು ಮುಂದಿನ 15 ವರ್ಷಗಳವರೆಗೆ ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ ಪಿಂಚಣಿದಾರರು ಪೂರ್ಣ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

 

6 ಲಕ್ಷದ 30 ಸಾವಿರ ಪಿಂಚಣಿದಾರರಿಗೆ ಅನುಕೂಲ

6 ಲಕ್ಷದ 30 ಸಾವಿರ ಪಿಂಚಣಿದಾರರಿಗೆ ಅನುಕೂಲ

ಪಿಂಚಣಿ ಯೋಜನೆಯ ಈ ಹೊಸ ನಿಯಮದಡಿ 6 ಲಕ್ಷದ 30 ಸಾವಿರ ಪಿಂಚಣಿದಾರರಿಗೆ ಅನುಕೂಲವಾಗಲಿದೆ. 2008 ರ ಸೆಪ್ಟೆಂಬರ್ 25 ರಂದು ಅಥವಾ ಅದಕ್ಕೂ ಮೊದಲು ತಮ್ಮ ಪಿಂಚಣಿಯನ್ನು ಪರಿವರ್ತಿಸಲು ಆಯ್ಕೆ ಮಾಡಿದವರ ಪಿಂಚಣಿಯನ್ನು ಪುನಃಸ್ಥಾಪಿಸಲು ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ನಿರ್ಧಾರವನ್ನು ಫೆಬ್ರವರಿ 20 ರಂದು ಸಚಿವಾಲಯ ಸೂಚಿಸಿದೆ.

ಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?

ಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ?

ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ 12 ಪರ್ಸೆಂಟ್ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ 3.67 ಪರ್ಸೆಂಟ್ರಷ್ಟು ಪಿಎಫ್ ಗೆ ಹಾಗೂ 8.33 ಪರ್ಸೆಂಟ್ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ 0.5 ಪರ್ಸೆಂಟ್ ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು 12 ಪರ್ಸೆಂಟ್ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ 8.33 ಪರ್ಸೆಂಟ್ರಷ್ಟು ಪಿಂಚಣಿ ಯೋಜನೆಗೆ ಹಾಗೂ 3.67 ಪರ್ಸೆಂಟ್ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

English summary

Govt Implements EPFO's Decision To Restore Pension

Pension commutation refers to part-withdrawal of fund in advance by a subscriber, who then gets reduced pension amount for 15 years
Story first published: Tuesday, February 25, 2020, 20:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X