For Quick Alerts
ALLOW NOTIFICATIONS  
For Daily Alerts

New Year 2023: ಹೊಸ ವರ್ಷಕ್ಕೆ ಈ ಮೌಲ್ಯಯುತ ಗಿಫ್ಟ್ ನೀಡಿ

|

ಇಂದು ಈ ವರ್ಷದ ಅಂದರೆ 2022ರ ಕೊನೆಯ ದಿನವಾಗಿದೆ, ಹೊಸ ವರ್ಷ 2023ಕ್ಕೆ ಇನ್ನು ಒಂದು ದಿನ ಮಾತ್ರವಿದೆ. ಈಗಾಗಲೇ ಹಲವಾರು ಕೋವಿಡ್ ಮಾರ್ಗಸೂಚಿಯೊಂದಿಗೆ ಹೊಸ ವರ್ಷ ಆಚರಣೆಯ ತಯಾರಿಯಲ್ಲಿದ್ದಾರೆ. ಆದರೆ ಹೊಸ ವರ್ಷದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದೇ ಉಡುಗೊರೆ ನೀಡುವುದಿಲ್ಲವೇ? ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಬಯಸಿದ್ದರೆ, ಈ ಕೆಳಗಿನ ಉಡುಗೊರೆಗಳು ಅತೀ ಮೌಲ್ಯಯುತವಾಗಲಿದೆ.

 

ನೀವು ಯಾವುದೇ ಸಂದರ್ಭದಲ್ಲಿ ಉಡುಗೊರೆಯನ್ನು ನೀಡುವಾಗ ಆ ಉಡುಗೊರೆಯನ್ನು ಪಡೆಯುವವರಿಗೆ ಆ ಉಡುಗೊರೆ ಲಾಭದಾಯಕವಾಗಬೇಕು. ನೀವು ನೀಡಿದ ಉಡುಗೊರೆಯು ಬರೀ ಒಂದು ಸಲ ಉಪಯೋಗಕ್ಕೆ ಬರುವುದಾದರೆ ಪ್ರಯೋಜನವಿಲ್ಲದಂತಾಗುತ್ತದೆ. ಅದಕ್ಕಿಂತ ಬದಲಾಗಿ ನೀವು ನೀಡುವ ಉಡುಗೊರೆಯು ಜೀವನ ಪೂರ್ತಿ ನಿಮ್ಮ ಪ್ರೀತಿ ಪಾತ್ರರಿಗೆ ಲಾಭವನ್ನು ನೀಡಲಿದೆ.

ದೀಪಾವಳಿ ಉಡುಗೊರೆಗೆ ತೆರಿಗೆ: ಹೇಗೆ, ಎಷ್ಟು ವಿಧಿಸಲಾಗುತ್ತೆ?ದೀಪಾವಳಿ ಉಡುಗೊರೆಗೆ ತೆರಿಗೆ: ಹೇಗೆ, ಎಷ್ಟು ವಿಧಿಸಲಾಗುತ್ತೆ?

ನೀವು ಯಾವೆಲ್ಲ ಹಣಕಾಸು ಸಂಬಂಧಿತ ಉಡುಗೊರೆಯನ್ನು ನೀಡಬಹುದು, ಅದರಿಂದ ಆ ಉಡುಗೊರೆಯನ್ನು ಪಡೆದವರಿಗೆ ಎಷ್ಟು ಸಹಾಯವಾಗಲಿದೆ, ಲಾಭವಾಗಲಿದೆ ಹಾಗೂ ಉಡುಗೊರೆ ಎಷ್ಟು ನೆನಪಿನಲ್ಲಿ ಉಳಿಯಲಿದೆ ಎಂದು ನಾವಿಲ್ಲಿ ವಿವರಿಸಿದ್ದೇವೆ. ಉಡುಗೊರೆಗಳ ಬಗ್ಗೆ ತಿಳಿಯಲು ಮುಂದೆ ಓದಿ...

 ಆರೋಗ್ಯ ವಿಮೆ

ಆರೋಗ್ಯ ವಿಮೆ

ಈ ಹೊಸ ವರ್ಷದ ಸಂದರ್ಭದಲ್ಲಿ ನೀವು ಆರೋಗ್ಯ ವಿಮೆಯನ್ನು ಉಡುಗೊರೆಯಾಗಿ ನೀಡಬಹುದು. ಈ ಮೂಲಕ ನೀವು ನಿಮ್ಮ ಪ್ರೀತಿ ಪಾತ್ರರ ಜೀವನವನ್ನು ಸುರಕ್ಷತೆ ಮಾಡಬಹುದು. ಹಾಗೆಯೇ ಆರೋಗ್ಯ ವಿಮೆ ತೆರಿಗೆ ವಿನಾಯಿತಿ ಕೂಡಾ ಇದೆ. ವಿಮೆಯನ್ನು ಖರೀದಿ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರ ಜೀವನವನ್ನು ಸುರಕ್ಷಿತಗೊಳಿಸಬಹುದು. ಕೊರೊನಾ ವೈರಸ್ ಸಾಂಕ್ರಾಮಿಕ ಆರಂಭವಾದ ಬಳಿಕದಿಂದ ಜನರು ವಿಮೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನೀವು ಪ್ರೀತಿ ಪಾತ್ರರಿಗೆ ವಿಮೆಯನ್ನು ಗಿಫ್ಟ್ ಆಗಿ ನೀಡುವುದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈ ಆರೋಗ್ಯ ವಿಮೆ ಸಹಾಯಕವಾಗಲಿದೆ. ಈ ಆರೋಗ್ಯ ವಿಮೆಯು ಆಸ್ಪತ್ರೆಯ ವೆಚ್ಚ, ಚಿಕಿತ್ಸೆ ವೆಚ್ಚ, ಆಸ್ಪತ್ರೆ ರೂಮ್ ಬಾಡಿಗೆ, ಇತರೆ ವೆಚ್ಚವನ್ನು ಕವರ್ ಮಾಡುತ್ತದೆ. ಇದು ನಗದುರಹಿತ ಚಿಕಿತ್ಸೆಗೆ ಸಹಕಾರಿಯಾಗಲಿದೆ.

 ಫಿಕ್ಸಿಡ್ ಡೆಪಾಸಿಟ್

ಫಿಕ್ಸಿಡ್ ಡೆಪಾಸಿಟ್

ನೀವು ಫಿಕ್ಸಿಡ್ ಡೆಪಾಸಿಟ್ ಅನ್ನು ಕೂಡಾ ಹೊಸ ವರ್ಷದ ಉಡುಗೊರೆಯಾಗಿ ನೀಡಬಹುದು. ಇದನ್ನು ಬೇರೆ ಎಲ್ಲ ಹೂಡಿಕೆಗಿಂತ ಅತೀ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಇದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಹೊಸ ವರ್ಷದಲ್ಲಿ ನೀಡಬಹುದಾದ ಅತ್ಯುತ್ತಮ ಹಣಕಾಸು ಗಿಫ್ಟ್ ಆಗಿದೆ. ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಫಿಕ್ಸಿಡ್ ಡೆಪಾಸಿಟ್‌ಗೆ ಬ್ಯಾಂಕ್‌ನಿಂದ ಬಡ್ಡಿದರ ಲಭ್ಯವಾಗಲಿದೆ. ಮೆಚ್ಯೂರಿಟಿ ವೇಳೆ ಹೂಡಿಕೆ ಮಾಡಿದ ಮೊತ್ತದ ಜೊತೆ ಬಡ್ಡಿದರವು ಕೂಡಾ ಲಭ್ಯವಾಗಲಿದೆ.

 ಮ್ಯೂಚುವಲ್ ಫಂಡ್
 

ಮ್ಯೂಚುವಲ್ ಫಂಡ್

ಹಣವು ಎಲ್ಲ ಕಾರ್ಯಕ್ಕೂ ಅತೀ ಮುಖ್ಯವಾಗಿದೆ. ಮದುವೆ, ಶಿಕ್ಷಣ ಎಲ್ಲದ್ದಕ್ಕೂ ಭಾರತದಲ್ಲಿ ಹಣ ಅಗತ್ಯವಾಗಿದೆ. ಇದಕ್ಕಾಗಿ ನೀವು ಹೊಸ ವರ್ಷದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಮ್ಯೂಚುವಲ್ ಫಂಡ್ ಅನ್ನು ಗಿಫ್ಟ್ ರೂಪದಲ್ಲಿ ನೀಡಬಹುದು. ಹಾಗೆಯೆ ನೀವೇ ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಬಹುದು. ನೀವು ಎಸ್‌ಐಪಿ ಮೂಲಕ ಹಣವನ್ನು ಡೆಪಾಸಿಟ್ ಮಾಡಬಹುದು. ಆದರೆ ಮ್ಯೂಚುವಲ್ ಫಂಡ್ ಹೂಡಿಕೆ ಕೊಂಚ ರಿಸ್ಕ್ ಕೂಡಾ ಹೌದು. ಆದ್ದರಿಂದಾಗಿ ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡಿ.

 ಚಿನ್ನ ಉಡುಗೊರೆ

ಚಿನ್ನ ಉಡುಗೊರೆ

ಭಾರತದಲ್ಲಿ ಚಿನ್ನಕ್ಕೆ ಅತೀ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಶುಭ ಸಂದರ್ಭದಲ್ಲಿ ಹೆಚ್ಚಾಗಿ ಭಾರತೀಯರು ಚಿನ್ನವನ್ನು ಖರೀದಿ ಮಾಡುತ್ತಾರೆ. ನೀವು ಈ ಹೊಸ ವರ್ಷದಲ್ಲಿ ಚಿನ್ನವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು. ಚಿನ್ನದ ನಾಣ್ಯ, ಆಭರಣ, ಸವರನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್, ಗೋಲ್ಡ್ ಸೇವೀಂಗ್ಸ್ ಫಂಡ್ಸ್ ಅನ್ನು ನಿಮ್ಮ ಮಕ್ಕಳಿಗೆ, ಸಂಗಾತಿಗೆ, ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು.

 ಪ್ರೀಪೇಡ್ ಗಿಫ್ಟ್ ಕಾರ್ಡ್

ಪ್ರೀಪೇಡ್ ಗಿಫ್ಟ್ ಕಾರ್ಡ್

ನೀವು ಹೊಸ ವರ್ಷದಲ್ಲಿ ಪ್ರೀಪೇಡ್ ಗಿಫ್ಡ್ ಕಾರ್ಡ್ ಅನ್ನು ಉಡುಗೊರೆಯಾಗಿ ನೀಡಬಹುದು. ಹೆಸರೇ ಹೇಳುವಂತೆ ಇದು ಉಡುಗೊರೆ ಕಾರ್ಡ್ ಆಗಿದೆ. ನೀವು ಹಣಕಾಸು ಸಂಬಂಧಿತ ಗಿಫ್ಟ್ ನೀಡುವುದಾದರೆ ಇದು ಉತ್ತಮವಾಗಿದೆ. ನೀವು ಗಿಫ್ಟ್ ಕಾರ್ಡ್ ಅನ್ನು ನೀಡಿದರೆ, ಆ ಕಾರ್ಡ್ ಅನ್ನು ಯಾವುದೇ ವಸ್ತು ಖರೀದಿ ಮಾಡಲು ಬಳಕೆ ಮಾಡಲಾಗುತ್ತದೆ. ಅದರಿಂದಾಗಿ ನಿಮ್ಮ ಪ್ರೀತಿ ಪಾತ್ರರು ತಮಗೆ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಬಹುದು. ನೀವು ನೀಡಿದ ಗಿಫ್ಟ್ ಅವರಿಗೆ ಇಷ್ಟವಾಗಿಲ್ಲ ಎಂಬ ವಿಚಾರವೇ ಇಲ್ಲಿ ಬರುವುದಿಲ್ಲ. ಈ ಕಾರ್ಡ್‌ಗಳನ್ನು ಆನ್‌ಲೈನ್ ಶಾಪಿಂಗ್ ಅಥವಾ ಶಾಪ್‌ಗಳನ್ನು ಬಳಸಬಹುದು. ಇದು ಡೆಬಿಟ್ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತದೆ. ನೀವು ಸುಮಾರು 5 ಸಾವಿರ ರೂಪಾಯಿಯಿಂತ 50 ಸಾವಿರ ರೂಪಾಯಿವರೆಗಿನ ಗಿಫ್ಟ್ ಕಾರ್ಡ್ ಅನ್ನು ಪಡೆಯಬಹುದು. ಈ ಹಿಂದೆಯೇ ಹೇಳಿದಂತೆ ಇದು ಪ್ರೀಪೇಡ್ ಆಗಿದೆ. ಅಂದರೆ ಗಿಫ್ಟ್ ನೀಡುವವರು ಮೊದಲೇ ಹಣ ಪಾವತಿಸಿ ಗಿಫ್ಟ್ ಕಾರ್ಡ್ ಅನ್ನು ಉಡುಗೊರೆಯಾಗಿ ನೀಡಬೇಕಾಗುತ್ತದೆ. ಇದಕ್ಕೂ ಕೂಡಾ ಡೆಬಿಟ್ ಕಾರ್ಡ್‌ನಂತೆಯೇ ಪಿನ್‌ ಇದೆ.

English summary

Happy New Year 2023: 5 Financial Gift Ideas, Details in Kannada

If you are planning to gift your family on the occasion of the new year. Then you must go through this article. Here's 5 Financial Gift Ideas, deatils in kannada.
Story first published: Saturday, December 31, 2022, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X