For Quick Alerts
ALLOW NOTIFICATIONS  
For Daily Alerts

ಸಾಲದ ದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್: ಕಾರು, ಗೃಹ ಸಾಲ ಇಎಂಐ ಹೊರೆ ಮತ್ತೆ ಅಧಿಕ

|

ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಅನ್ನು ಮತ್ತೆ ಏರಿಕೆ ಮಾಡಿದೆ. ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಬ್ಯಾಂಕ್ ಮಾಹಿತಿ ನೀಡಿದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಕಾರು ಹಾಗೂ ಗೃಹ ಸಾಲ ಪಡೆದವರಿಗೆ ಹೊರೆಯು ಅಧಿಕವಾಗಲಿದೆ.

ಜೂನ್ 8 ರಂದು ನಡೆಯಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಹಣಕಾಸು ನೀತಿ ಸಮಿತಿ ಸಭೆಯ ಮೇಲೆ ಸದ್ಯ ಎಲ್ಲರ ಚಿತ್ತ ನೆಟ್ಟಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುವ ಸುಳಿವು ಈಗಾಗಲೇ ನೀಡಿದೆ. ಇದಕ್ಕೂ ಮುನ್ನವೇ ಎಚ್‌ಡಿಎಫ್‌ಸಿ ಸಾಲದ ದರವನ್ನು 35 ಮೂಲಾಂಕ ಏರಿಕೆ ಮಾಡಿದೆ.

 ರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆ ರೆಪೋ ದರ ಮತ್ತೆ ಹೆಚ್ಚಳಕ್ಕೆ ಸಜ್ಜು: ಸಾಲದ ಇಎಂಐ ಹೊರೆ ಏರಿಕೆ

ಎಚ್‌ಡಿಎಫ್‌ಸಿ ತನ್ನ ಎಂಸಿಎಲ್‌ಆರ್ ಏರಿಕೆ ಮಾಡಿದ ಕಾರಣದಿಂದಾಗಿ ಈ ಬ್ಯಾಂಕ್‌ನಿಂದ ಗೃಹ ಸಾಲ ಹಾಗೂ ಕಾರು ಖರೀದಿ ಸಾಲ ಪಡೆದವರಿಗೆ ಹೊರೆಯು ಅಧಿಕವಾಗಲಿದೆ. ಈಗಾಗಲೇ ಈ ಬ್ಯಾಂಕ್‌ನ ಗ್ರಾಹಕರಿಗೆ ಇಎಂಐ ಹೆಚ್ಚಾಗಿದೆ. ಈ ಹಿಂದೆ ಎಚ್‌ಡಿಎಫ್‌ಸಿ ಸಾಲದ ಬಡ್ಡಿದರ ಹೆಚ್ಚಿಸಿದೆ.

 ಈ ಹಿಂದೆ ಸಾಲದ ಬಡ್ಡಿದರ ಹೆಚ್ಚಿಸಿದ್ದ ಎಚ್‌ಡಿಎಫ್‌ಸಿ

ಈ ಹಿಂದೆ ಸಾಲದ ಬಡ್ಡಿದರ ಹೆಚ್ಚಿಸಿದ್ದ ಎಚ್‌ಡಿಎಫ್‌ಸಿ

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಸಾಮಾನ್ಯವಾಗಿಯೇ ಬ್ಯಾಂಕುಗಳು ಸಾಲದ ಬಡ್ಡಿದರವನ್ನು, ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಕಳೆದ ಬಾರಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಹಿನ್ನೆಲೆ ಮೇ ತಿಂಗಳಲ್ಲಿಯೇ ಹಲವಾರು ಬ್ಯಾಂಕುಗಳು ತಮ್ಮ ಸಾಲ ಮತ್ತು ಠೇವಣಿ ದರಗಳನ್ನು ಹೆಚ್ಚಳ ಮಾಡಿದೆ. ಮೇ 7ರಂದು ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು 25 ಮೂಲಾಂಕ ಏರಿಕೆ ಮಾಡಿದೆ. ನೂರು ಮೂಲಾಂಕ ಎಂದರೆ ಒಂದು ಶೇಕಡವಾಗಿದೆ. ಆದ್ದರಿಂದ ಎಚ್‌ಡಿಎಫ್‌ಸಿ ಇತ್ತೀಚೆಗೆ ಸಾಲದ ದರವನ್ನು ಏರಿಕೆ ಮಾಡಿದ ಬಳಿಕ ಇಎಂಐ ಹೊರೆಯು ಶೇಕಡ 0.35 ಹೆಚ್ಚಾಗಿದೆ.

 ಸಾಲದ ನೂತನ ಬಡ್ಡಿದರವೆಷ್ಟು?

ಸಾಲದ ನೂತನ ಬಡ್ಡಿದರವೆಷ್ಟು?

  • ಒಂದು ರಾತ್ರಿಯ ಅವಧಿ: ಈ ಹಿಂದಿನ ದರ ಶೇಕಡ 7.15, ಹೊಸ ದರ ಶೇಕಡ 7.50
  • ಒಂದು ತಿಂಗಳ ಅವಧಿ: ಈ ಹಿಂದಿನ ದರ ಶೇಕಡ 7.20, ಹೊಸ ದರ ಶೇಕಡ 7.55
  • ಮೂರು ತಿಂಗಳ ಅವಧಿ: ಈ ಹಿಂದಿನ ದರ ಶೇಕಡ 7.25, ಹೊಸ ದರ ಶೇಕಡ 7.60
  • ಆರು ತಿಂಗಳ ಅವಧಿ: ಈ ಹಿಂದಿನ ದರ ಶೇಕಡ 7.35, ಹೊಸ ದರ ಶೇಕಡ 7.70
  • ಒಂದು ವರ್ಷದ ಅವಧಿ: ಈ ಹಿಂದಿನ ದರ ಶೇಕಡ 7.50, ಹೊಸ ದರ ಶೇಕಡ 7.85
  • ಎರಡು ವರ್ಷದ ಅವಧಿ: ಈ ಹಿಂದಿನ ದರ ಶೇಕಡ 7.60, ಹೊಸ ದರ ಶೇಕಡ 7.95
  • ಮೂರು ವರ್ಷದ ಅವಧಿ: ಈ ಹಿಂದಿನ ದರ ಶೇಕಡ 7.70, ಹೊಸ ದರ ಶೇಕಡ 8.05
 ಕಾರು, ಗೃಹ ಸಾಲ ಇಎಂಐ ಏರಿಕೆ?

ಕಾರು, ಗೃಹ ಸಾಲ ಇಎಂಐ ಏರಿಕೆ?

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಂಸಿಎಲ್‌ಆರ್ ದರವನ್ನು ಏರಿಕೆ ಮಾಡಿದ ಕಾರಣದಿಂದಾಗಿ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದ ಇಎಂಐ ಹೊರೆಯು ಇನ್ನಷ್ಟು ಹೆಚ್ಚಳವಾಗಲಿದೆ. ಈಗಾಗಲೇ ಸಾಲ ಪಡೆದಿರುವವರ ಸಾಲದ ಮರುಹೊಂದಿಸುವಿಕೆ ದಿನಾಂಕ (reset date) ಬಂದಾಗ ಮಾತ್ರ ಪರಿಷ್ಕರಣೆ ಮಾಡಲಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯ ಗೃಹ ಸಾಲವು ಎಂಸಿಎಲ್‌ಆರ್ ಅನ್ನು ಆಧರಿಸಿದ್ದರೆ ಮರುಹೊಂದಿಸುವ ದಿನಾಂಕವು ಸೆಪ್ಟೆಂಬರ್‌ನಲ್ಲಿದ್ದರೆ, ಸೆಪ್ಟೆಂಬರ್‌ನಿಂದ ಹೆಚ್ಚಿನ ಇಎಂಐ ಪಾವತಿ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಅಸ್ತಿತ್ವದಲ್ಲಿರುವ ದರವನ್ನು ಪಾವತಿ ಮಾಡಬೇಕಾಗುತ್ತದೆ.

 ರೆಪೋ ದರ ಮತ್ತೆ ಹೆಚ್ಚಿಸಲು ಆರ್‌ಬಿಐ ಸಜ್ಜು

ರೆಪೋ ದರ ಮತ್ತೆ ಹೆಚ್ಚಿಸಲು ಆರ್‌ಬಿಐ ಸಜ್ಜು

ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಈಗ ಮತ್ತೆ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಹೆಚ್ಚಳ ಮಾಡುವ ಸಿದ್ದತೆಯನ್ನು ಮಾಡಿಕೊಂಡಿದೆ. ಈ ಹಿಂದೆಯೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ವಾರ ಕಳೆಯುತ್ತಿದ್ದಂತೆ ಬ್ಯಾಂಕ್‌ಗಳು ಆರ್‌ಬಿಐನ ನಿರೀಕ್ಷಿತ ದರ ಏರಿಕೆಯ ಹೊರೆಯನ್ನು ಜನರು ಮೇಲೆ ಹಾಕಿದೆ. ಇದರಿಂದಾಗಿ ಸಾಲಗಳ ಮೇಲಿನ ಮಾಸಿಕ ಇಎಂಐ ಕಂತು ಏರಿಕೆಯಾಗಿದೆ. ಇದು ಈಗಾಗಲೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಬರೆ ಎಳೆದಂತೆ ಆಗಿದೆ. ಹಣದುಬ್ಬರ ಮತ್ತಷ್ಟು ಏರಿಕೆ ಹೊಂದುತ್ತಿರುವ ನಡುವೆ ಆರ್‌ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಲು ಸಿದ್ಧವಾಗಿದೆ.

English summary

HDFC Bank Hikes Lending Rates Across Loan Tenors, Home Loan, Car Loan EMIs to Go Up

HDFC Bank raised its marginal cost of funds-based lending rate (MCLR) on loans across all tenures by 35 basis points. Home loan, Car loan EMIs to go up. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X