For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಫ್‌ಡಿ ದರ ಮತ್ತೆ ಹೆಚ್ಚಳ; ಶೇ. 6.25ರವರೆಗೆ ಬಡ್ಡಿ

|

ಮುಂಬೈನ ಕೆನರಾ ಬ್ಯಾಂಕ್ ಶಾಖೆಯೊಂದರ ಉದ್ಯೋಗಿಗಳು ಮನೆಮನೆಗೆ ಹೋಗಿ ಜನರಿಂದ ಠೇವಣಿ ಸಂಗ್ರಹಕ್ಕಾಗಿ ರಸ್ತೆ ರಸ್ತೆ ತಿರುಗುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಬ್ಯಾಂಕುಗಳಿಗೆ ಬಂಡವಾಳದ ಅವಶ್ಯಕತೆ ಈಗ ಬಹಳ ಹೆಚ್ಚಿದೆ ಎಂಬುದಕ್ಕೆ ಈ ದೃಶ್ಯ ದ್ಯೋತಕ.

 

ಬ್ಯಾಂಕುಗಳು ನಮ್ಮ ದೇಶದ ಹಣಕಾಸು ವ್ಯವಸ್ಥೆಯ ಆಧಾರ ಸ್ತಂಭಗಳು. ಇವು ಸುಭದ್ರವಾಗಿದ್ದರೆ ಹಣಕಾಸು ಪರಿಸ್ಥಿತಿ ಭದ್ರವಾಗಿದ್ದಂತೆ. ಈಗ ಬ್ಯಾಂಕುಗಳಿಗೆ ಬಂಡವಾಳ ಬೇಕಾಗಿದೆ. ಬಂಡವಾಳ ಆಕರ್ಷಿಸಲು ಠೇವಣಿ ಯೋಜನೆಗಳಲ್ಲಿ ಆಕರ್ಷಕ ಬಡ್ಡಿ ದರ ನಿಗದಿಪಡಿಸುತ್ತಿವೆ. ಎಫ್‌ಡಿ ಮತ್ತು ಆರ್‌ಡಿಯಂತಹ ಟರ್ಮ್ ಡೆಪಾಸಿಟ್‌ಗಳಿಗೆ ವಿವಿಧ ಬ್ಯಾಂಕುಗಳು ಪೈಪೋಟಿಯ ಮೇಲೆ ದರಗಳನ್ನು ಹೆಚ್ಚಿಸುತ್ತಾ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ.

 

SBI Annuity Deposit Plan : ಒಮ್ಮೆ ಹೂಡಿಕೆ ಮಾಡಿ, ಇಎಂಐ ಮೂಲಕ ಮಾಸಿಕ ಪಿಂಚಣಿ ಪಡೆಯಿರಿSBI Annuity Deposit Plan : ಒಮ್ಮೆ ಹೂಡಿಕೆ ಮಾಡಿ, ಇಎಂಐ ಮೂಲಕ ಮಾಸಿಕ ಪಿಂಚಣಿ ಪಡೆಯಿರಿ

ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದೆನಿಸಿರುವ ಎಚ್‌ಡಿಎಫ್‌ಸಿ ಇದೀಗ ತನ್ನ ಎಫ್‌ಡಿ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ತನ್ನ ನಿಶ್ಚಿತ ಠೇವಣಿಗಳಿಗೆ ಎಚ್‌ಡಿಎಫ್‌ಸಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ಹೆಚ್ಚಳ ಮಾಡಿದೆ. 2 ಕೋಟಿ ರೂ ಒಳಗಿನ ಎಫ್‌ಡಿಗಳಿಗೆ ಬ್ಯಾಂಕು ಈಗ ವಾರ್ಷಿಕ ಶೇ. 6.25 ರಷ್ಟರವರೆಗೆ ಬಡ್ಡಿ ಕೊಡುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಎಚ್‌ಡಿಎಫ್‌ಸಿ ತನ್ನ ಎಫ್‌ಡಿ ಬಡ್ಡಿ ದರವನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಅಕ್ಟೋಬರ್ 11ರಂದು 75 ಮೂಲಾಂಕಗಳಷ್ಟು ಹೆಚ್ಚಿಸಿತ್ತು. ಎರಡು ವಾರದ ಅಂತರದಲ್ಲಿ ಶೇ. 1.25ರಷ್ಟು ಬಡ್ಡಿ ಹೆಚ್ಚಳವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಫ್‌ಡಿ ದರ ಹೆಚ್ಚಳ; ಶೇ. 6.25 ಬಡ್ಡಿ

ಎಚ್‌ಡಿಎಫ್‌ಸಿ ಬ್ಯಾಂಕಲ್ಲಿ ವಿವಿಧ ಕಾಲಾವಧಿಯ ಠೇವಣಿಗಳಿಗೆ ವಿವಿಧ ಪ್ರಮಾಣದ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಅದರ ಪರಿಷ್ಕೃತ ಪಟ್ಟಿ ಇಲ್ಲಿದೆ.

ಪೋಸ್ಟ್ ಆಫೀಸ್ ಸ್ಕೀಮ್: ನಿಮ್ಮ ಹಣ ಡಬಲ್ ಮಾಡುವ ಯೋಜನೆಪೋಸ್ಟ್ ಆಫೀಸ್ ಸ್ಕೀಮ್: ನಿಮ್ಮ ಹಣ ಡಬಲ್ ಮಾಡುವ ಯೋಜನೆ

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಠೇವಣಿಗಳಿಗೆ ನೀಡುವ ಬಡ್ಡಿ ದರ
7-14 ದಿನ: ಶೇ. 3
15-29 ದಿನ: ಶೇ. 3
30-45 ದಿನ: ಶೇ. 3.50
46-60 ದಿನ: ಶೇ. 4
61-89 ದಿನ: ಶೇ. 4.50
90 ದಿನಗಳಿಂದ 6 ತಿಂಗಳು: ಶೇ. 4.50
6 ತಿಂಗಳು 1 ದಿನದಿಂದ 9 ತಿಂಗಳವರೆಗೆ: ಶೇ. 5.25
9 ತಿಂಗಳು 1 ದಿನದಿಂದ 12 ತಿಂಗಳವರೆಗೆ: ಶೇ. 5.50
12 ತಿಂಗಳಿಂದ 15 ತಿಂಗಳವರೆಗೆ: ಶೇ. 6.10
15 ತಿಂಗಳಿಂದ 18 ತಿಂಗಳವರೆಗೆ: ಶೇ. 6.15
18 ತಿಂಗಳಿಂದ 21 ತಿಂಗಳವರೆಗೆ: ಶೇ. 6.15
21 ತಿಂಗಳಿಂದ 24 ತಿಂಗಳವರೆಗೆ: ಶೇ. 6.15
24 ತಿಂಗಳಿಂದ 36 ತಿಂಗಳವರೆಗೆ: ಶೇ. 6.25
36 ತಿಂಗಳಿಂದ 60 ತಿಂಗಳವರೆಗೆ: ಶೇ. 6.25
60 ತಿಂಗಳಿಂದ 10 ವರ್ಷದವರೆಗೆ: ಶೇ. 6.20

ಕೆನರಾ ಬ್ಯಾಂಕ್, ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳು ನಿಶ್ಚಿತ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯ ಆಫರ್ ನೀಡಿವೆ. ಆರ್‌ಬಿಐ ದರ ಹೆಚ್ಚಿಸಿರುವುದು ಒಂದು ಕಾರಣವಾದರೆ, ಬ್ಯಾಂಕುಗಳಿಗೆ ಬಂಡವಾಳ ಅಗತ್ಯವಿದ್ದು, ಜನರು ಠೇವಣಿ ಇಡಲು ಅನುವಾಗುವ ರೀತಿಯಲ್ಲಿ ಬಡ್ಡಿ ದರ ಹೆಚ್ಚಿಸಲಾಗುತ್ತಿದೆ.

English summary

HDFC Bank Raises Fixed Deposit Rates; Offers Upto 6.25pc Interest For FDs

HDFC bank has hiked fixed deposit rates for second time in October. According to revised rates HDFC bank will give upto 6.25% interest to some FDs.
Story first published: Wednesday, October 26, 2022, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X