For Quick Alerts
ALLOW NOTIFICATIONS  
For Daily Alerts

ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

|

ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಬ್ಯಾಂಕ್‌ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಿದೆ. ಸಾಮಾನ್ಯವಾಗಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಉಳಿಸಿಕೊಳ್ಳುವ ಹಣದ ಮೇಲೆ ಅವಲಂಭಿತವಾಗಿರುತ್ತದೆ.

 

ನಿಮ್ಮ ಉಳಿತಾಯ ಖಾತೆಯಲ್ಲಿನ ದೈನಂದಿನ ಹಣದ ಲೆಕ್ಕಾಚಾರ ಮೇಲೆ ತ್ರೈಮಾಸಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಖಾಸಗಿ ವಲಯದಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್‌ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಳ ಮಾಡುವ ಮೂಲಕ ಸಿಹಿಸುದ್ದಿಯನ್ನು ನೀಡಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

 

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

"2ನೇ ಫೆಬ್ರವರಿ 2022 ರಿಂದ ಜಾರಿಗೆ ಬರುವಂತೆ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳ ಬಡ್ಡಿ ದರವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ" ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ. ಹಾಗಾದರೆ ಎಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಯಲು ಮುಂದೆ ಓದಿ...

 ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ

ಎಷ್ಟು ಬಡ್ಡಿದರ ನೀಡಲಾಗುತ್ತದೆ?

ಅಧಿಸೂಚನೆಯ ಪ್ರಕಾರ, ಬ್ಯಾಂಕ್ ಈಗ 50 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಗಳಿಗೆ ವಾರ್ಷಿಕ ಶೇ.3 ಬಡ್ಡಿ ದರವನ್ನು ನೀಡುತ್ತಿದೆ. ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ 50 ಲಕ್ಷ ರೂ.ಗಿಂತ ಹೆಚ್ಚು ಮತ್ತು ರೂ. 1,000 ಕೋಟಿಗಿಂತ ಕಡಿಮೆ ಇರುವ ಉಳಿತಾಯ ಖಾತೆಯ ಹಣದ ಮೇಲೆ ವಾರ್ಷಿಕ ಶೇ.3.50 ಬಡ್ಡಿದರವನ್ನು ನೀಡಲಾಗುತ್ತದೆ. ರೂ.1,000 ಕೋಟಿಗಿಂತ ಹೆಚ್ಚಿನ ಉಳಿತಾಯ ಖಾತೆಗಳಿಗೆ ವಾರ್ಷಿಕ ಶೇ.4.50 ಬಡ್ಡಿದರವನ್ನು ನೀಡುತ್ತಿದೆ.

ಇನ್ನು ಪರಿಷ್ಕೃತ ದರಗಳು ದೇಶೀಯ, ಎನ್‌ಆರ್‌ಒ ಹಾಗೂ ಎನ್‌ಆರ್‌ಇಗಳ ಉಳಿತಾಯ ಖಾತೆಗಳಿಗೆ ಅನ್ವಯಿಸುತ್ತವೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. "ಉಳಿತಾಯ ಖಾತೆಯ ಬಡ್ಡಿಯನ್ನು ನಿಮ್ಮ ಖಾತೆಯಲ್ಲಿ ನಿರ್ವಹಿಸುವ ದೈನಂದಿನ ಬಾಕಿಗಳ ಮೇಲೆ ಲೆಕ್ಕಹಾಕಲಾಗುತ್ತದೆ," ಎಂದು ಬ್ಯಾಂಕ್‌ ತಿಳಿಸಿದೆ.

 ಈ ದಿನದಿಂದ ಎಚ್‌ಡಿಎಫ್‌ಸಿ ವಹಿವಾಟು ಶುಲ್ಕ ಬದಲಾವಣೆ: ಎಷ್ಟು ಪರಿಶೀಲಿಸಿ ಈ ದಿನದಿಂದ ಎಚ್‌ಡಿಎಫ್‌ಸಿ ವಹಿವಾಟು ಶುಲ್ಕ ಬದಲಾವಣೆ: ಎಷ್ಟು ಪರಿಶೀಲಿಸಿ

ಗಮನಾರ್ಹವಾಗಿ, ಹಲವು ವರ್ಷಗಳಲ್ಲಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ ಮೊದಲ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದೆ. ಇದಕ್ಕೂ ಮುನ್ನ ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿತ್ತು. 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್‌ ಮತ್ತು ರಿಕ್ಯೂರಿಂಗ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ ದಿನಗಳ ನಂತರ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸುವ ಕ್ರಮವು ಬಂದಿದೆ. ಬ್ಯಾಂಕ್‌ನ ನವೀಕರಣಗಳ ಪ್ರಕಾರ, ಹೊಸ ದರಗಳು ಜನವರಿ 12, 2022 ರಿಂದ ಜಾರಿಗೆ ಬರುತ್ತವೆ.

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ

ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ದೇಶೀಯ/ ಎನ್‌ಆರ್‌ಒ/ ಎನ್‌ಆರ್‌ಇ ಫಿಕ್ಸಿಡ್‌ ಡೆಪಾಸಿಟ್‌ ಹಾಗೂ ಆರ್‌ಡಿ ಬಡ್ಡಿದರವನ್ನು ಈ ಹಿಂದೆ ಪರಿಷ್ಕರಣೆ ಮಾಡಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿಗಳ (ಎಫ್‌ಡಿ- ಫಿಕ್ಸಿ‌ಡ್‌ ಡೆಪಾಸಿಟ್‌) ಬಡ್ಡಿದರವನ್ನು ಅಧಿಕ ಮಾಡಿದೆ. ಈ ಹೊಸ ಬಡ್ಡಿ ದರವು ಡಿಸೆಂಬರ್ 1 ರಿಂದ ಅಂದರೆ ಬುಧವಾರದಿಂದಲೇ ಜಾರಿಗೆ ಬಂದಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳು ಮತ್ತು 10 ವರ್ಷಗಳ ನಡುವಿನ ಅವಧಿಯ ಠೇವಣಿಗಳ ಮೇಲೆ ಶೇಕಡ 2.50 ರಿಂದ ಶೇಕಡ 5.50 ರವರಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳು 21 ಮೇ 2021 ರಿಂದ ಜಾರಿಗೆ ಬರುತ್ತವೆ. HDFC ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್‌ ಆಗುವ ಎಫ್‌ಡಿಗಳ ಮೇಲೆ ಶೇಕಡ 3 ರಿಂದ ಶೇಕಡ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ.

English summary

HDFC Bank Revises Interest Rate On Savings Accounts

Good News For Bank Customers: HDFC Bank Revises Interest Rate On Savings Accounts.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X