For Quick Alerts
ALLOW NOTIFICATIONS  
For Daily Alerts

ಈ ಬ್ಯಾಂಕ್‌ಗಳ ಖಾತೆಯಲ್ಲಿರಬೇಕಾದ ಮಾಸಿಕ ಕನಿಷ್ಠ ಮೊತ್ತವೆಷ್ಟು?

|

ನಾವು ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗಿದೆ. ನಮ್ಮ ಹಣವನ್ನು ನಾವು ಕೈಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗದು. ಅದಕ್ಕಾಗಿ ಬ್ಯಾಂಕ್ ಖಾತೆಯನ್ನು ಹೊಂದುವುದು ಉತ್ತಮ. ಆದರೆ ಎಲ್ಲ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯಲ್ಲಿ ಎಷ್ಟು ಕನಿಷ್ಠ ಮೊತ್ತ ಇರಬೇಕು ಎಂಬ ಮಿತಿ ಇದೆ.

 

ನಾವು ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಹಣವನ್ನು ಇಡುವುದರಿಂದ ನಮ್ಮ ಹಣ ಉಳಿತಾಯ ಆಗುವುದು ಮಾತ್ರವಲ್ಲ ಅದಕ್ಕೆ ಬಡ್ಡಿಯು ಕೂಡಾ ಲಭ್ಯವಾಗಲಿದೆ. ಆದಾಗ್ಯೂ, ಬ್ಯಾಂಕಿನಿಂದ ಈ ಎಲ್ಲಾ ಸೇವೆಗಳನ್ನು ಪಡೆಯುವುದು, ಬ್ಯಾಂಕಿನಲ್ಲಿ ಉಳಿತಾಯ ಖಾತೆದಾರರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳು ಮತ್ತು ಷರತ್ತುಗಳಿವೆ.

ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು, ಇಲ್ಲಿದೆ ಟಿಪ್ಸ್ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು, ಇಲ್ಲಿದೆ ಟಿಪ್ಸ್

ಖಾತೆದಾರರು ತಮ್ಮ ಉಳಿತಾಯದ ಮೇಲೆ ನಿರ್ದಿಷ್ಟ ಮೊತ್ತದ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು. ಈ ಕನಿಷ್ಠ ಮೊತ್ತವು ಹೆಚ್ಚಿನ ಬ್ಯಾಂಕ್‌ಗಳಿಗೆ ಒಂದೇ ಆಗಿರುತ್ತದೆ, ಆದರೆ ಕೆಲವು ಬ್ಯಾಂಕ್‌ಗಳಿಗೆ ಇದು ಬೇರೆ ಬೇರೆಯಾಗಿದೆ. ದೇಶದ ಪ್ರಮುಖ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್‌ಗಳ ಖಾತೆಯಲ್ಲಿರಬೇಕಾದ ಮಾಸಿಕ ಕನಿಷ್ಠ ಮೊತ್ತವೆಷ್ಟು? ಎಂದು ತಿಳಿಯಲು ಮುಂದೆ ಓದಿ....

ಎಸ್‌ಬಿಐ ಬ್ಯಾಂಕ್‌ ಕನಿಷ್ಠ ಮೊತ್ತವೆಷ್ಟು?

ಎಸ್‌ಬಿಐ ಬ್ಯಾಂಕ್‌ ಕನಿಷ್ಠ ಮೊತ್ತವೆಷ್ಟು?

ಖಾತೆದಾರರ ಪ್ರದೇಶದ ಆಧಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಕನಿಷ್ಠ ಬ್ಯಾಂಕ್ ಮೊತ್ತ ಬೇರೆ ಬೇರೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಎಸ್‌ಬಿಐ ಉಳಿತಾಯ ಖಾತೆದಾರರು ಖಾತೆಯಲ್ಲಿ ಮಾಸಿಕ ಒಂದು ಸಾವಿರ ರೂಪಾಯಿ ಹೊಂದಿರಬೇಕಾಗಿದೆ. ಇನ್ನು ಪಟ್ಟಣ ಪ್ರದೇಶದಲ್ಲಿ ಎರಡು ಸಾವಿರ ರೂಪಾಯಿ ಆಗಿದೆ. ಇನ್ನು ಮೆಟ್ರೋ ಸಿಟಿಯಲ್ಲಿ ಕನಿಷ್ಠ ಮೊತ್ತ ಮೂರು ಸಾವಿರ ರೂಪಾಯಿ ಆಗಿದೆ. ಇನ್ನು ಎಲ್ಲ ಬ್ಯಾಂಕ್‌ಗಳ ಪೈಕಿ ಎಸ್‌ಬಿಐನಲ್ಲೇ ಅತೀ ಕಡಿಮೆ ಕನಿಷ್ಠ ಮಿತಿ ಇದೆ.

ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು?ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು?

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತವೆಷ್ಟು?

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತವೆಷ್ಟು?

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಪ್ರದೇಶದ ಆಧಾರದಲ್ಲಿ ಕನಿಷ್ಠ ಬ್ಯಾಂಕ್ ಮೊತ್ತ ಬೇರೆ ಬೇರೆ ಇದೆ. ನಗರ ಪ್ರದೇಶದಲ್ಲಿ ಕನಿಷ್ಠ ಮಿತಿ ಹತ್ತು ಸಾವಿರ ರೂಪಾಯಿ ಆಗಿದೆ. ಇನ್ನು ಪಟ್ಟಣ ಪ್ರದೇಶದಲ್ಲಿ ಕನಿಷ್ಠ ಮಿತಿ 5 ಸಾವಿರ ರೂಪಾಯಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ 2500 ರೂಪಾಯಿ ಆಗಿದೆ.

ಐಸಿಐಸಿಐ ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತವೆಷ್ಟು?
 

ಐಸಿಐಸಿಐ ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತವೆಷ್ಟು?

ಐಸಿಐಸಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯ ಕನಿಷ್ಠ ಮೊತ್ತವು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಷ್ಟಿದೆ ಅಷ್ಟೇ ಆಗಿದೆ. ನಗರ ಪ್ರದೇಶದಲ್ಲಿ ಕನಿಷ್ಠ ಮಿತಿ ಹತ್ತು ಸಾವಿರ ರೂಪಾಯಿ ಆಗಿದೆ. ಇನ್ನು ಅರೆ ನಗರ ಪ್ರದೇಶದಲ್ಲಿ ಕನಿಷ್ಠ ಮಿತಿ 5 ಸಾವಿರ ರೂಪಾಯಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ 2500 ರೂಪಾಯಿ ಆಗಿದೆ.

ಆಕ್ಸಿಸ್ ಬ್ಯಾಂಕ್ ಕನಿಷ್ಠ ಮೊತ್ತವೆಷ್ಟು?

ಆಕ್ಸಿಸ್ ಬ್ಯಾಂಕ್ ಕನಿಷ್ಠ ಮೊತ್ತವೆಷ್ಟು?

ಈ ವರ್ಷದಲ್ಲಿ ಆಕ್ಸಿಸ್ ಬ್ಯಾಂಕ್ ಮೆಟ್ರೋ ಸಿಟಿಗಳಲ್ಲಿ ಉಳಿತಾಯ ಖಾತೆಯ ಕನಿಷ್ಠ ಮೊತ್ತ ಮಿತಿಯನ್ನು ಏರಿಕೆ ಮಾಡಲಾಗಿದೆ. ಮೆಟ್ರೋ ನಗರದಲ್ಲಿ ಕನಿಷ್ಠ ಮೊತ್ತ 12,000 ರೂಪಾಯಿ ಆಗಿದೆ. ಇನ್ನು ಅರೆ ನಗರ ಪ್ರದೇಶದಲ್ಲಿ ಕನಿಷ್ಠ ಮೊತ್ತ 5,000 ರೂಪಾಯಿ ಆಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ 2500 ರೂಪಾಯಿ ಆಗಿದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಅತೀ ಹೆಚ್ಚು ಕನಿಷ್ಠ ಠೇವಣಿ ಮಿತಿ ಆಗಿದೆ.

English summary

Here's Details of Minimum Monthly Balance Required In These Banks Savings Account

An account holder has to keep a certain amount of balance on their savings. Here's Details of Minimum Monthly Balance Required In These Banks Savings Account.
Story first published: Monday, September 12, 2022, 18:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X