For Quick Alerts
ALLOW NOTIFICATIONS  
For Daily Alerts

ರೆಪೋ ಏರಿಕೆ: ಮತ್ತೆ ಇಎಂಐ ಹೆಚ್ಚಳ ಸಾಧ್ಯತೆ, ನೀವೇನು ಮಾಡಬೇಕು?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಬುಧವಾರ ಆರ್‌ಬಿಐ ರೆಪೋ ದರವನ್ನು 35 ಮೂಲಾಂಕ ಏರಿಕೆ ಮಾಡಿದ್ದು, ಪ್ರಸ್ತುತ ದರ ಶೇಕಡ 6.25ಕ್ಕೆ ತಲುಪಿದೆ. ಈ ಬೆನ್ನಲ್ಲೇ ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರವನ್ನು ಏರಿಸುವ ಸಾಧ್ಯತೆಯಿದೆ.

 

ಆರ್‌ಬಿಐ ಒಟ್ಟಾಗಿ ಈವರೆಗೆ ಐದು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ 40 ಮೂಲಾಂಕ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಅದಾದ ಬಳಿಕ ಮೂರು ಬಾರಿ ರೆಪೋ ದರ ಹೆಚ್ಚಿಸಲಾಗಿದೆ.

ಸಾಮಾನ್ಯವಾಗಿ ರೆಪೋ ದರ ಪರಿಷ್ಕರಣೆ ಮಾಡಿದರೆ, ಅದು ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತದೆ. ಗೃಹ ಸಾಲದ ಬಡ್ಡಿದರ ಅಧಿಕವಾಗುವುದರಿಂದ ನಿಮ್ಮ ಮಾಸಿಕ ಇಎಂಐ ಅಧಿಕವಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಆರ್‌ಬಿಐ ನಿರ್ಧಾರದಿಂದ ಗೃಹ ಸಾಲಕ್ಕೆ ಏನು ಪ್ರಭಾವ?

ಆರ್‌ಬಿಐ ನಿರ್ಧಾರದಿಂದ ಗೃಹ ಸಾಲಕ್ಕೆ ಏನು ಪ್ರಭಾವ?

ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದಾಗ ಇದು ಬ್ಯಾಂಕ್‌ಗಳ ವೆಚ್ಚವನ್ನು ಕೂಡಾ ಅಧಿಕ ಮಾಡುತ್ತದೆ. ಅಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡುತ್ತದೆ. ಇದು ಸಾಲ ಪಡೆದಿರುವವರ ಇಎಂಐ ಹೊರೆಯನ್ನು ಅಧಿಕಗೊಳಿಸುತ್ತದೆ. ಹೊಸದಾಗಿ ಹಾಗೂ ಈಗಾಗಲೇ ಸಾಲ ಪಡೆದಿರುವವರಿಗೆ ಸಾಲದ ಬಡ್ಡಿದರ ಅಧಿಕವಾಗುತ್ತದೆ.

 ಗೃಹ ಸಾಲ ಎಷ್ಟು ಏರಿಕೆ ಸಾಧ್ಯತೆ?

ಗೃಹ ಸಾಲ ಎಷ್ಟು ಏರಿಕೆ ಸಾಧ್ಯತೆ?

ತಜ್ಞರ ಪ್ರಕಾರ ರೆಪೋ ದರ ಏರಿಕೆಯು ಗೃಹ ಸಾಲದ ಮೇಲೆ ಖಂಡಿತವಾಗಿ ಪರಿಣಾಮ ಉಂಟುಮಾಡುತ್ತದೆ. ಇದರಿಂದಾಗಿ ಗೃಹ ಸಾಲವು ದುಬಾರಿಯಾಗುತ್ತದೆ. ಆರ್‌ಬಿಐ ಈ ಹಿಂದೆ ನಾಲ್ಕು ಬಾರಿ ರೆಪೋ ದರ ಹೆಚ್ಚಿಸಿದ್ದು ಒಟ್ಟು 190 ಮೂಲಾಂಕ ದರ ಏರಿಕೆ ಮಾಡಿತ್ತು. ಮೊದಲ ಬಾರಿ ಮೇ ತಿಂಗಳಲ್ಲಿ 40 ಬಿಪಿಎಸ್, ಆ ಬಳಿಕ ಜೂನ್, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ತಲಾ 50 ಮೂಲಾಂಕ ದರ ಹೆಚ್ಚಳ ಮಾಡಿದೆ. ಈಗ ಡಿಸೆಂಬರ್‌ನಲ್ಲಿ ನಡೆದ ಆರ್‌ಬಿಐನ ಎಂಪಿಸಿ ಸಭೆಯ ಬಳಿಕ ಕೇಂದ್ರ ಬ್ಯಾಂಕ್ 35 ಬಿಪಿಎಸ್‌ ಬಡ್ಡಿದರ ಏರಿಸಿದೆ. ಒಟ್ಟಾಗಿ ಐದು ಬಾರಿ ರೆಪೋ ದರ ಹೆಚ್ಚಿಸಲಾಗಿದ್ದು, 225 ಮೂಲಾಂಕ ಏರಿಸಿದಂತಾಗಿದೆ. ಪ್ರಸ್ತುತ ರೆಪೋ ದರ ಶೇಕಡ 6.25ರಷ್ಟಿದೆ. ಬ್ಯಾಂಕ್‌ಗಳು ಕೂಡಾ 20-35ರಷ್ಟು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆ.

 ಹಾಗಾದರೆ ಸಾಲ ಪಡೆದವರು ಮಾಡುವುದೇನು?
 

ಹಾಗಾದರೆ ಸಾಲ ಪಡೆದವರು ಮಾಡುವುದೇನು?

ಈಗಾಗಲೇ ನಾಲ್ಕು ಬಾರಿ ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಆರ್‌ಬಿಐನ ವಿತ್ತೀಯ ನೀತಿ ಬದಲಾವಣೆ ಕಾರಣದಿಂದಾಗಿ ಬ್ಯಾಂಕ್‌ಗಳು ಈ ನಿರ್ಧಾರವನ್ನು ಮಾಡಿದೆ. ಈಗ ಆರ್‌ಬಿಐ ಮತ್ತೆ ದರ ಅಧಿಕ ಮಾಡಿರುವ ಕಾರಣದಿಂದಾಗಿ ಬ್ಯಾಂಕ್‌ಗಳು ಮತ್ತೆ ಸಾಲದ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ. ಸಾಲದ ಹೊರೆ ಅಧಿಕವಾಗುವುದನ್ನು ನಾವು ತಪ್ಪಿಸಬೇಕಾದರೆ, ಆದಷ್ಟು ಪೂರ್ವ ಪಾವತಿ ಮಾಡುವುದು ಉತ್ತಮ. ಅಂದರೆ ನಿಮ್ಮ ಕೈಯಲ್ಲಿ ಇರುವ ಹಣವನ್ನು ಪಾವತಿಸಿ ಸಾಲವನ್ನು ಕ್ಲೋಸ್ ಮಾಡಿಬಿಡಿ. ಇದರಿಂದ ಬಡ್ಡಿದರದ ಹೊರೆ ನಿಮಗೆ ಇರದು. ನಿಮ್ಮಲ್ಲಿ ಅಷ್ಟು ಮೊತ್ತ ಇಲ್ಲವೆಂದಾದರೆ ಇದಷ್ಟು ಮೊತ್ತವನ್ನು ಪಾವತಿಸಿದರೆ, ನಿಮ್ಮ ಸಾಲದ ಅವಧಿ ಹಾಗೂ ಇಎಂಐ ಕೊಂಚ ಇಳಿಕೆಯಾಗಬಹುದು. ಹಾಗೆಯೇ ಮಾಸಿಕ ಬಜೆಟ್ ನಿರ್ವಹಣೆ ಕಷ್ಟವಾದರೆ ನೀವು ಸಾಲದ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿಯನ್ನು ಕೂಡಾ ಮಾಡಬಹುದು.

English summary

Home loan EMIs to increase as RBI once again hikes repo rate to 35 bps; know details in kannada

RBI Increases Repo Rate Fifth time. Home loan EMIs to increase as RBI once again hikes repo rate to 35 bps; know details in kannada.
Story first published: Wednesday, December 7, 2022, 12:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X