For Quick Alerts
ALLOW NOTIFICATIONS  
For Daily Alerts

ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ಕಣ್ಣು ಕೋರೈಸುವಷ್ಟು ಹೆಚ್ಚಾಗಿದೆ ವಿಶ್ವದ ಕುಬೇರರ ಆಸ್ತಿ

By ಅನಿಲ್ ಆಚಾರ್
|

ಕೊರೊನಾ ಎಬ್ಬಿಸಿದ ಆರ್ಥಿಕ ಸುನಾಮಿ ಮಧ್ಯೆಯೂ ವಿಶ್ವದ ಸಿರಿವಂತ ಉದ್ಯಮಿಗಳ ಆಸ್ತಿ ಪ್ರಮಾಣದಲ್ಲಿ ಭರ್ಜರಿ ಏರಿಕೆಯಾಗಿದ್ದು, ಈ ಹಿಂದಿಗಿಂತ ಶ್ರೀಮಂತರಾಗಿದ್ದಾರೆ. ಪಿಡಬ್ಲ್ಯುಸಿ ಮತ್ತು ಸ್ವಿಸ್ ಬ್ಯಾಂಕ್ ಯುಬಿಸಿ ಅಧ್ಯಯನದ ಪ್ರಕಾರ, ವಿಶ್ವದ ಶತಕೋಟ್ಯಧಿಪತಿಗಳು- ಎರಡು ಸಾವಿರಕ್ಕೂ ಹೆಚ್ಚು ಮಂದಿಯ ಒಟ್ಟಾರೆ ಆಸ್ತಿ ಸೇರಿ ಈ ವರ್ಷ ಹತ್ತು ಲಕ್ಷ ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚಾಗಿದೆ.

ಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳುಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳು

ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 73 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಹಾಗಂತ ಎಲ್ಲ ಶ್ರೀಮಂತರ ಆಸ್ತಿಯಲ್ಲೂ ಏರಿಕೆ ಆಗಿಲ್ಲ. ಕೆಲವು ಶ್ರೀಮಂತರ ಆಸ್ತಿ ಭಾರೀ ಏರಿಕೆ ಆಗಿದೆ. ಯಾರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬ ವಿವರ ಇಲ್ಲಿದೆ.

ಜೆಫ್ ಬೆಜೋಸ್- 18,410 ಕೋಟಿ ಅಮೆರಿಕನ್ ಡಾಲರ್

ಜೆಫ್ ಬೆಜೋಸ್- 18,410 ಕೋಟಿ ಅಮೆರಿಕನ್ ಡಾಲರ್

ಅಮೆಜಾನ್ ಸಿಇಒ, ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ನಿವ್ವಳ ಆಸ್ತಿ ಅಕ್ಟೋಬರ್ 2019ರಲ್ಲಿ 11,400 ಕೋಟಿ ಅಮೆರಿಕನ್ ಡಾಲರ್ ಇತ್ತು. ಒಂದು ವರ್ಷದ ನಂತರ ಆ ಮೊತ್ತ 18,400 ಕೋಟಿ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಅಮೆಜಾನ್ ಷೇರಿನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಆಗಸ್ಟ್ ನಲ್ಲಿ ಕೆಲವೇ ವಾರದಲ್ಲಿ ಬೆಜೋಸ್ ಆಸ್ತಿ 20,000 ಕೋಟಿ ಡಾಲರ್ ಗೂ ಹೆಚ್ಚಿತ್ತು. ಅಂದ ಹಾಗೆ ಕೇವಲ 24 ಗಂಟೆಯಲ್ಲಿ ಬೆಜೋಸ್ ಆಸ್ತಿ 1000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಯಿತು.

ಮಾರ್ಕ್ ಝುಕರ್ ಬರ್ಗ್- 10,150 ಕೋಟಿ ಅಮೆರಿಕನ್ ಡಾಲರ್

ಮಾರ್ಕ್ ಝುಕರ್ ಬರ್ಗ್- 10,150 ಕೋಟಿ ಅಮೆರಿಕನ್ ಡಾಲರ್

2020ರಲ್ಲಿ ಫೇಸ್ ಬುಕ್ ಸಹ ಸಂಸ್ಥಾಪಕ ಸಂಪತ್ತು ದುಪ್ಪಟ್ಟಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ ಅವರ ಆಸ್ತಿ 5470 ಕೋಟಿ ಅಮೆರಿಕನ್ ಡಾಲರ್ ಇತ್ತು. ಇಂದಿನ ಲೆಕ್ಕಕ್ಕೆ ಆ ಮೊತ್ತ ದುಪ್ಪಟ್ಟಾಗಿದೆ. ಲಾಕ್ ಡೌನ್ ನಲ್ಲಿ ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ಈ ಏರಿಕೆಯಿಂದಾಗಿ 36 ವರ್ಷದ ಮಾರ್ಕ್ ಝುಕರ್ ಬರ್ಗ್ ಆಸ್ತಿ 10,000 ಕೋಟಿ ಯುಎಸ್ ಡಿ ದಾಟಿದೆ. ವಿಶ್ವದಲ್ಲಿ 10,000 ಕೋಟಿ ಯುಎಸ್ ಡಿ ಆಸ್ತಿ ಹೊಂದಿದ ನಾಲ್ವರಲ್ಲಿ ಒಬ್ಬರು ಝುಕರ್ ಬರ್ಗ್.

ಎಲಾನ್ ಮಸ್ಕ್- 9240 ಕೋಟಿ ಅಮೆರಿಕನ್ ಡಾಲರ್

ಎಲಾನ್ ಮಸ್ಕ್- 9240 ಕೋಟಿ ಅಮೆರಿಕನ್ ಡಾಲರ್

ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಆಸ್ತಿ 2020ರಲ್ಲಿ ಭರ್ಜರಿ ಹೆಚ್ಚಳವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಅವರ ಆಸ್ತಿ ಮೊತ್ತ 2390 ಕೋಟಿ ಇತ್ತು. ಅದು 300 ಪರ್ಸೆಂಟ್ ಹೆಚ್ಚಳವಾಗಿದೆ. ಎಲಾನ್ ಮಸ್ಕ್ ಆಸ್ತಿಯಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗಿದ್ದು ಟೆಸ್ಲಾ ಷೇರಿನ ಬೆಲೆಯಲ್ಲಿನ ಏರಿಕೆ. ಟ್ವಿಟ್ಟರ್ ನಲ್ಲಿ ಮಸ್ಕ್ ಹಾಕಿದ ಸಂದೇಶಗಳ ತಪ್ಪು ಹೆಜ್ಜೆಗಳ ಹೊರತಾಗಿಯೂ ವಿಶ್ವದಲ್ಲಿಯೇ ಅತ್ಯಂತ ಮೌಲ್ಯಯುತ ವಾಹನ ತಯಾರಕ ಎನಿಸಿದೆ ಟೆಸ್ಲಾ.

ಕಾಲಿನ್ ಹ್ಯುಯಾಂಗ್- 3930 ಕೋಟಿ ಅಮೆರಿಕನ್ ಡಾಲರ್

ಕಾಲಿನ್ ಹ್ಯುಯಾಂಗ್- 3930 ಕೋಟಿ ಅಮೆರಿಕನ್ ಡಾಲರ್

ಚೀನೀ ಇ ಕಾಮರ್ಸ್ ಕಂಪೆನಿ Pinduoduo ಸ್ಥಾಪಕ ಕಾಲಿನ್ ಹ್ಯುಯಾಂಗ್ ಚೀನಾದ ನಾಲ್ಕನೇ ಸಿರಿವಂತ ವ್ಯಕ್ತಿ. ಆದರೆ ಉಳಿದ ಎಲ್ಲ ಚೀನೀ ಸಿರಿವಂತರಿಗಿಂತ ಇವರ ಏಳ್ಗೆ ವಿಪರೀತ ವೇಗವಾಗಿದೆ. ಕೊರೊನಾ ವೇಳೆಯಲ್ಲಿ ಗ್ರಾಹಕರು Pinduoduo ಕಡೆಗೆ ಮುಖ ಮಾಡಿದ್ದರಿಂದ ಕಂಪೆನಿಯ ನಾಸ್ಡಾಕ್ ನಲ್ಲಿ ಲಿಸ್ಟ್ ಆಗಿರುವ ಷೇರುಗಳ ಮೌಲ್ಯದಲ್ಲಿ ದುಪ್ಪಟ್ಟಾಗಿದೆ.

ಎರಿಕ್ ಯುವಾನ್ 1820 ಕೋಟಿ ಅಮೆರಿಕನ್ ಡಾಲರ್

ಎರಿಕ್ ಯುವಾನ್ 1820 ಕೋಟಿ ಅಮೆರಿಕನ್ ಡಾಲರ್

ಲಾಕ್ ಡೌನ್ ಅವಧಿಯಲ್ಲಿ ಅತಿ ದೊಡ್ಡ ಲಾಭ ಪಡೆದುಕೊಂಡಿದ್ದು ಝೂಮ್ ಸ್ಥಾಪಕ ಎರಿಕ್ ಯುವಾನ್. ಎರಿಕ್ ಯುವಾನ್ ಗೆ ಝೂಮ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರು ಬಳಸಬೇಕು ಎಂಬ ಉದ್ದೇಶವೂ ಇರಲಿಲ್ಲ. ಕಾರ್ಪೊರೇಟ್ ಗಳು ಹಣ ಪಾವತಿಸಿ, ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದರು. ಆದರೆ ಯಾವಾಗ ಕಂಪೆನಿಯ ಬಳಕೆ 1900 ಪರ್ಸೆಂಟ್ ಹೆಚ್ಚಳವಾಯಿತೋ ಯುವಾನ್ ತಮ್ಮ ಶ್ರೀಮಂತಿಕೆಗೆ ಕೋಟ್ಯಂತರ ಡಾಲರ್ ಸೇರ್ಪಡೆ ಮಾಡಿಕೊಂಡರು.

English summary

How Corona Pandemic Helps World's Richest Wealth To Soar

Amidst Corona pandemic world's richest people wealth soared and reached to new high. Know the reason how and why?
Story first published: Sunday, November 15, 2020, 11:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X