For Quick Alerts
ALLOW NOTIFICATIONS  
For Daily Alerts

ಗ್ರಾಚ್ಯುಟಿ ಅವಧಿ ಮಿತಿಯನ್ನು ಇಳಿಸುವ ಹಾದಿಯಲ್ಲಿ ಸರ್ಕಾರ; ಈಗಿನ ಲೆಕ್ಕ ಹೇಗೆ?

|

ಉದ್ಯೋಗಿಗಳಿಗೆ ಗ್ರಾಚ್ಯುಟಿ ಪಾವತಿಸುವುದಕ್ಕೆ ಸದ್ಯಕ್ಕೆ ಇರುವ ಕನಿಷ್ಠ ಅರ್ಹತಾ ಮಾನದಂಡವನ್ನು ಇಳಿಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಈಗಿರುವ ನಿಯಮದ ಪ್ರಕಾರ, ಒಬ್ಬ ಉದ್ಯೋಗಿ ಒಂದೇ ಸಂಸ್ಥೆಯಲ್ಲಿ ನಿರಂತರವಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಆಗಷ್ಟೇ ಗ್ರಾಚ್ಯುಟಿ ಪಡೆಯುವುದಕ್ಕೆ ಅರ್ಹರಾಗುತ್ತಾರೆ.

ಈ ಕನಿಷ್ಠ ಅವಧಿಯನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಒಂದು ಮತ್ತು ಮೂರು ವರ್ಷದ ಮಧ್ಯೆ ಅವಧಿಯನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಸಂಸದೀಯ ಸ್ಥಾಯಿ ಸಮಿತಿ ಮುಂದೆ ಮಂಡಿಸಿದ ವರದಿ ಅನ್ವಯ, ನಿರಂತರ ಐದು ವರ್ಷ ಎಂದಿರುವ ನಿಯಮವು ಒಂದು ವರ್ಷಕ್ಕೆ ಇಳಿಕೆ ಆಗಬೇಕು ಎಂಬುದು ಸಹ ಇದೆ.

ಒಂದು ಸಂಸ್ಥೆಯಲ್ಲಿ ಉದ್ಯೋಗಿ ಎಷ್ಟು ವರ್ಷ ಕಾರ್ಯ ನಿರ್ವಹಿಸಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು, ವರ್ಷಕ್ಕೆ 15 ದಿನದ ವೇತನವನ್ನು ಪಾವತಿಸಲಾಗುತ್ತದೆ. ಬಹಳ ಹಿಂದಿನಿಂದ ಗ್ರಾಚ್ಯುಟಿ ಅವಧಿಯ ಮಿತಿಯನ್ನು ಕಡಿಮೆ ಮಾಡುವಂತೆ ಬೇಡಿಕೆ ಇತ್ತು. ಇದೀಗ ಕೆಲವ ವಲಯಗಳಿಗೆ ಪ್ರೋ ರೇಟಾ ಆಧಾರದಲ್ಲಿ ಮಿತಿಯನ್ನು ಕಡಿಮೆ ಮಾಡುವುದು ಅಥವಾ ಎಲ್ಲ ವಲಯಕ್ಕೂ ಇದು ಅನ್ವಯಿಸುವಂತೆ ಮಾಡುವುದು ಎಂಬೆರಡು ಆಯ್ಕೆಗಳಿವೆ.

ಗ್ರಾಚ್ಯುಟಿ ಅವಧಿ ಮಿತಿ ಇಳಿಸುವ ಹಾದಿಯಲ್ಲಿ ಸರ್ಕಾರ; ಲೆಕ್ಕ ಹೇಗೆ?

ಐದು ವರ್ಷಗಳ ಮಿತಿ ಎಂಬುದನ್ನು ತಂದು ಹಲವಾರು ವರ್ಷಗಳು ಕಳೆದುಹೋಗಿವೆ. ಆಗೆಲ್ಲ ದೀರ್ಘಾವಧಿ ತನಕ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಪರಿಪಾಠ ಇತ್ತು. ಆದರೆ ಈಗ ಪರಿಸ್ಥಿತಿ ಬೇರೆ ಇದೆ. ಗ್ರಾಚ್ಯುಟಿ ಮಿತಿ ಒಂದು ವರ್ಷಕ್ಕೆ ಇಳಿಸುವುದು ಸರಿ ಹೋಗುವುದಿಲ್ಲ. ಎರಡರಿಂದ ಮೂರು ವರ್ಷವಾದಲ್ಲಿ ಅಡ್ಡಿ ಇಲ್ಲ ಎನ್ನುತ್ತಾರೆ ತಜ್ಞರು.

ಇನ್ನು ಸಮಿತಿಯು ಮುಖ್ಯವಾದ ವಿಷಯವೊಂದರ ಬಗ್ಗೆ ಗಮನ ಸೆಳೆದಿದೆ. ಉದ್ಯೋಗದಾತರು ಕೆಲವರು ಉದ್ಯೋಗಿಗಳಿಗೆ ಐದು ವರ್ಷದ ಅವಧಿ ಪೂರ್ಣ ಆಗುವ ಮುನ್ನವೇ ಕೆಲಸದಿಂದ ತೆಗೆಯುತ್ತಿದ್ದಾರೆ. ಈ ಪರಿಪಾಠಕ್ಕೆ ತಡೆಯೊಡ್ಡಬೇಕು ಎಂದು ಅಭಿಪ್ರಾಯ ಪಡಲಾಗಿದೆ.

ಇನ್ನೂ ಮುಂದುವರಿದು ಗುತ್ತಿಗೆ ಕಾರ್ಮಿಕರು, ದಿನಗೂಲಿ/ಮಾಸದ ಸಂಬಳ ಲೆಕ್ಕದಲ್ಲಿ ಇರುವ ಕೂಲಿಯವರಿಗೂ ಗ್ರಾಚ್ಯುಟಿ ತರಬೇಕು ಎಂಬ ಶಿಫಾರಸು ಇದೆ. ಜುಲೈ 31, 2020ಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಶಿಫಾರಸುಗಳನ್ನು ಸಲ್ಲಿಸಲಾಗಿದೆ. ಹಾಗಿದ್ದರೆ ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ ಎಂಬುದನ್ನು ನೋಡೋಣ.

ಪೇಮೆಂಟ್ ಆಫ್ ಗ್ರಾಚ್ಯುಟಿ ಕಾಯ್ದೆ 1972ರ ಅಡಿಯಲ್ಲಿ ಸರ್ಕಾರೇತರ ಉದ್ಯೋಗಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 1) ಕಾಯ್ದೆ ಅಡಿಯಲ್ಲಿ ಬರುವಂಥ ಉದ್ಯೋಗಿಗಳು ಹಾಗೂ 2) ಕಾಯ್ದೆ ಅಡಿಯಲ್ಲಿ ಬಾರದ ಉದ್ಯೋಗಿಗಳು

ವಿಭಾಗ 1) ಕಾಯ್ದೆ ಅಡಿಯಲ್ಲಿ ಬರುವಂಥ ಉದ್ಯೋಗಿಗಳು
ಎರಡು ಮುಖ್ಯ ಮಾನದಂಡಗಳು ಗಣನೆಗೆ ಬರುತ್ತದೆ. ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ ಮತ್ತು ಕೊನೆಯದಾಗಿ ಪಡೆದ ಸಾಲ, ಇವೆರಡನ್ನೂ ಗಣನೆಗೆ ತೆಗೆದುಕೊಂಡು, ಗ್ರಾಚ್ಯುಟಿಯನ್ನು ಲೆಕ್ಕ ಹಾಕುವುದು ಹೀಗೆ-
ಗ್ರಾಚ್ಯುಟಿ= ಕೊನೆಯದಾಗಿ ಪಡೆದ ವೇತನ‍ x (15/26*) x ಸೇವೆ ಸಲ್ಲಿಸಿದ ವರ್ಷಗಳು

* ತಿಂಗಳಲ್ಲಿ ಕಾರ್ಯ ನಿರ್ವಹಿಸಿದ್ದು ಎಂದು 26 ದಿನಗಳನ್ನು ತೆಗೆದುಕೊಳ್ಳಲಾಗಿದೆ

** ಗ್ರಾಚ್ಯುಟಿಯನ್ನು 15 ದಿನಗಳ ವೇತನಕ್ಕೆ ಲೆಕ್ಕ ಹಾಕಲಾಗುತ್ತದೆ.

ಕೊನೆಯದಾಗಿ ಪಡೆದ ವೇತನಕ್ಕೆ ಬೇಸಿಕ್ (ಮೂಲವೇತನ), ತುಟ್ಟಿ ಭತ್ಯೆ- ಸರ್ಕಾರಿ ನೌಕರರಾಗಿದ್ದಲ್ಲಿ ಮಾತ್ರ ಹಾಗೂ ಮಾರಾಟದ ಮೇಲೆ ಪಡೆದ ಕಮಿಷನ್ ಗಣನೆಗೆ ತೆಗೆದುಕೊಳ್ಳಬೇಕು.

ಉದಾಹರಣೆಗೆ: 10 ವರ್ಷ 4 ತಿಂಗಳು ಕಾರ್ಯ ನಿರ್ವಹಿಸಿದ್ದು, ಕೊನೆಯದಾಗಿ ಮೂಲವೇತನ ಎಂದು 80 ಸಾವಿರ ರುಪಾಯಿ ಪಡೆಯುತ್ತಿದ್ದಲ್ಲಿ ಗ್ರಾಚ್ಯುಟಿ ಲೆಕ್ಕಾಚಾರ ಹಾಕುವ ಕ್ರಮ ಹೀಗಿದೆ:

ಗ್ರಾಚ್ಯುಟಿ= 80,000 x (15/26) x 10 = 4.62 ಲಕ್ಷ. 5ಕ್ಕಿಂತ ಕಡಿಮೆ ಅವಧಿ, ಅಂದರೆ 4 ತಿಂಗಳಾದ್ದರಿಂದ 10 ವರ್ಷ ಎಂದು ಮಾಡಲಾಗಿದೆ. ಒಂದು ವೇಳೆ 5 ತಿಂಗಳ ಅವಧಿ ದಾಟಿದಲ್ಲಿ ಮುಂದಿನ ವರ್ಷಕ್ಕೆ ರೌಂಡ್ ಆಫ್ ಮಾಡಬೇಕು.

ವಿಭಾಗ ವಿಭಾಗ 2) ಕಾಯ್ದೆ ಅಡಿಯಲ್ಲಿ ಬಾರದ ಉದ್ಯೋಗಿಗಳು
ಸಂಸ್ಥೆಯು ಕಾಯ್ದೆ ಅಡಿಯಲ್ಲಿ ಬಾರದಿದ್ದರೂ ಗ್ರಾಚ್ಯುಟಿ ಪಾವತಿಸಬಹುದು. ಹಾಗಿದ್ದ ಪಕ್ಷದಲ್ಲಿ ಕಾರ್ಯ ನಿರ್ವಹಣೆ ಅವಧಿಯನ್ನು 26 ದಿನದ ಬದಲಿಗೆ 30 ದಿನಕ್ಕೆ ಲೆಕ್ಕ ಹಾಕಲಾಗುತ್ತದೆ. ಈಗ 80 ಸಾವಿರದಂತೆ ನೀಡಿರುವ ಮೇಲಿನ ಉದಾಹರಣೆಯ ಲೆಕ್ಕಾಚಾರವನ್ನೇ ನೀಡಲಾಗುತ್ತಿದೆ.

ಗ್ರಾಚ್ಯುಟಿ= 80,000 x (15/30) x 10 = 4 ಲಕ್ಷ ರುಪಾಯಿ.

English summary

How Gratuity Calculated For Employees? Government Likely To Give Big News About Gratuity

How gratuity payment for employees calculated? Here is an example with calculation. And central government likely to give big news related to gratuity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X