For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಪಡೆಯಬೇಕೆ? ನೀವು ಎಷ್ಟು ಭರಿಸಬಹುದು ಎಂದು ಇಲ್ಲಿ ತಿಳಿದುಕೊಳ್ಳಿ

|

ಸ್ವಂತ ಮನೆ ಇರಬೇಕು ಎಂದು ಹಲವರ ಬಯಕೆ ಆಗಿರುತ್ತದೆ. ತನ್ನದೇ ಆದ, ಸಾಮರ್ಥ್ಯಕ್ಕೆ ಅನುಗುಣವಾದ, ಕನಸಿನ ಮನೆಯ ನಿರ್ಮಾಣವು ಜೀವನದ ಮಹತ್ವದ ಗುರಿಯಾಗಿರುತ್ತದೆ. ಆದರೆ ಸ್ವಂತ ಮನೆ ನಿರ್ಮಾಣವು ಅಷ್ಟು ಸುಲಭವಾಗಿರುವುದಿಲ್ಲ.

ಶ್ರೀಮಂತರ ಮನೆ ನಿರ್ಮಾಣದ ಕನಸು ಹೇಗೋ ಆಗಿಬಿಡುತ್ತದೆ. ಆದರೆ ಬಡವರು, ಮಧ್ಯಮ ವರ್ಗದವರು ಮನೆ ನಿರ್ಮಾಣ ಮಾಡುವುದು ಜೀವಮಾನದ ಸಾಧನೆಯಾಗಿರುತ್ತದೆ. ಹೀಗಿರುವಾಗ ಸ್ವಂತ ಮನೆ ಕಟ್ಟಲು ಪೂರ್ತಿ ಹಣ ಹೊಂದಿಸಲು ಕಷ್ಟಸಾಧ್ಯ. ಗೃಹ ಸಾಲ ಮಾಡಿ ಮನೆಕಟ್ಟುವವರು ಅನೇಕರಿದ್ದಾರೆ.

ಹಾಗಿದ್ದರೆ ನೀವು ಗೃಹ ಸಾಲ ಪಡೆಯಲು ತೆರಳಿದರೆ ಎಷ್ಟು ಭರಿಸಬಲ್ಲರಿ? ನಿಮ್ಮ ಪ್ರಸ್ತುತ ಆದಾಯವನ್ನು ಗಮನಿಸಿದರೆ, ಗೃಹ ಸಾಲ ಇಎಂಐ ಎಷ್ಟು ಹೆಚ್ಚಾಗಬಹುದು? ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಕೆಳಗಿನ ಮಾಹಿತಿ ಓದಿ. ನೀವು ಹೊಂದಿರಬಹುದಾದ ಇತರೆ ಕೆಲವು ಸಂಬಂಧಿತ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಿದೆ.

ನೀವು ನಿಭಾಯಿಸಬಲ್ಲ EMIಗಳು

ನೀವು ನಿಭಾಯಿಸಬಲ್ಲ EMIಗಳು

ನೀವು ಗೃಹ ಸಾಲ ಪಡೆಯಲು ಬಯಸಿದರೆ ಸಾಲಗಾರರ ನಿಯಮವು ಇಲ್ಲಿ ಸಹಾಯಕ್ಕೆ ಬರುತ್ತವೆ. ಸಾಲ ಇಎಂಐಗಳು ನಿಮ್ಮ ನಿವ್ವಳ ಸಂಬಳದ 40 ರಿಂದ 45 ಪರ್ಸೆಂಟ್ ಮೀರಬಾರದು ಎಂದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಖಚಿತಪಡಿಸುತ್ತವೆ.

ಉದಾಹರಣೆಗೆ ನಿಮ್ಮ ತಿಂಗಳ ಟೇಕ್ ಹೋಮ್ ಸಂಬಳ 1 ಲಕ್ಷ ರುಪಾಯಿ ಅಂದುಕೊಳ್ಳೋಣ. ನಿಮ್ಮ EMIಗಳು 40,000 ರಿಂದ 45,000 ರುಪಾಯಿಗಿಂತ ಹೆಚ್ಚಿಲ್ಲದಿದ್ದರೆ ಮಾತ್ರ ಬ್ಯಾಂಕುಗಳು ಸಾಲ ನೀಡುತ್ತವೆ.

 

40,000 ರುಪಾಯಿ ಇಎಂಐಗೆ ಯಾವ ಗೃಹ ಸಾಲವನ್ನು ಪಡೆಯಬಹುದು

40,000 ರುಪಾಯಿ ಇಎಂಐಗೆ ಯಾವ ಗೃಹ ಸಾಲವನ್ನು ಪಡೆಯಬಹುದು

ನೀವು 40,000 ರುಪಾಯಿ ಇಎಂಐಗೆ ಯಾವ ಗೃಹ ಸಾಲವನ್ನು ಪಡೆಯಬಹುದು ಎಂಬ ಪ್ರಶ್ನೆಯು ನಿಮ್ಮನ್ನು ಕಾಡುತ್ತಿರುತ್ತದೆ. ವಿಭಿನ್ನ ಸಾಲದ ಅವಧಿಗಳನ್ನು ಅವಲಂಬಿಸಿ ( 8.5 ಪರ್ಸೆಂಟ್ ದರದಲ್ಲಿ), ನೀವು ಪಡೆಯಬಹುದಾದ ಗೃಹ ಸಾಲ ಮೊತ್ತಗಳು ಇಲ್ಲಿವೆ:

30 ವರ್ಷದ ಸಾಲ: 52-53 ಲಕ್ಷ ರುಪಾಯಿ

25 ವರ್ಷದ ಸಾಲ: 49-50 ಲಕ್ಷ ರುಪಾಯಿ

20 ವರ್ಷದ ಸಾಲ: 46-47 ಲಕ್ಷ ರುಪಾಯಿ

15 ವರ್ಷದ ಸಾಲ: 40-41 ಲಕ್ಷ ರುಪಾಯಿ

ಆದರೆ ನೆನಪಿಡಿ, ಸಾಲಗಾರನ ಆಂತರಿಕ ಮಿತಿ 40 ಪರ್ಸೆಂಟ್ ಇಎಂಐ ಕ್ಯಾಪ್ ಎಲ್ಲರಿಗೂ ವಾಸ್ತವಿಕವಾಗದಿರಬಹುದು. ಉದಾಹರಣೆಗೆ ನೀವು 1 ಲಕ್ಷ ರುಪಾಯಿ ಗಳಿಸಿದರೆ ಮತ್ತು ತಿಂಗಳಿಗೆ 30,000 ರುಪಾಯಿ ಖರ್ಚನ್ನು ಹೊಂದಿದ್ದರೆ, ನೀವು ಸುಲಭವಾಗಿ 40,000 ರುಪಾಯಿ ಇಎಂಐನೊಂದಿಗೆ ಸಾಲಕ್ಕೆ ಹೋಗಬಹುದು. ಆದರೆ ಅದೇ 1 ಲಕ್ಷ ಸಂಬಳ ಹೊಂದಿರುವವರು 75,000 ರುಪಾಯಿ ಖರ್ಚು ಮಾಡುತ್ತಿದ್ದರೆ , 40,000 ರುಪಾಯಿ ಇಎಂಐ ಅನ್ನು ನಿಭಾಯಿಸಲಾಗುವುದಿಲ್ಲ.

 

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

ಡೌನ್ ಪೇಮೆಂಟ್ ಸಮಸ್ಯೆಗಳು

ಡೌನ್ ಪೇಮೆಂಟ್ ಸಮಸ್ಯೆಗಳು

ಇಎಂಐ ಮಾಡಿಸುವುದು ಆರಂಭದಲ್ಲಿ ಸುಲಭ ಅನ್ನಿಸಬಹುದು. ಆದರೆ ಪ್ರತಿ ತಿಂಗಳು ನಿಮ್ಮ ಜೇಬಿನಿಂದ 15-20 ಪರ್ಸೆಂಟ್ ವೆಚ್ಚವನ್ನು ಡೌನ್-ಪೇಮೆಂಟ್ ಆಗಿ ಹಾಕಬೇಕಾಗುತ್ತದೆ. ಈ ಪಾವತಿ ಮಾಡಲು ಹೆಚ್ಚಿನ ಜನರು ತಮ್ಮ ಉಳಿತಾಯದಿಂದ ದೊಡ್ಡ ಭಾಗವನ್ನು ತೆಗೆದುಕೊಳ್ಳುತ್ತಾರೆ.

ಹಿಂದಿನ ಉದಾಹರಣೆಯನ್ನು ಬಳಸಿ: ನೀವು ತಿಂಗಳಿಗೆ ಒಂದು ಲಕ್ಷ ರುಪಾಯಿ ಗಳಿಸುತ್ತೀರಿ ಮತ್ತು 25 ವರ್ಷಗಳ ಅವಧಿಯ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತೀರಿ ಎಂದುಕೊಂಡರೆ, ‘ಕೈಗೆಟುಕುವ' 40,000 ರುಪಾಯಿ ಇಎಂಐಗೆ, ನೀವು ಪಡೆಯುವ ಸಾಲದ ಮೊತ್ತ 50 ಲಕ್ಷ ರುಪಾಯಿ.

ಆದರೆ ಬ್ಯಾಂಕುಗಳು ಕೇವಲ 80 ಪರ್ಸೆಂಟ್ ಸಾಲವನ್ನು ಮಾತ್ರ ನೀಡುತ್ತಿರುವುದರಿಂದ, ನೀವು 12.5 ಲಕ್ಷ ರುಪಾಯಿಗಳನ್ನು 20 ಪರ್ಸೆಂಟ್ ಡೌನ್-ಪೇಮೆಂಟ್ ಆಗಿ ನೀಡುವುದು ಸ್ಪಷ್ಟವಾಗಿದೆ. ಇದರಿಂದ ನಿಮ್ಮ 62.5 ಲಕ್ಷ ರುಪಾಯಿ ಮೌಲ್ಯದ ಆಸ್ತಿಗೆ ಬ್ಯಾಂಕು 50 ಲಕ್ಷ ರುಪಾಯಿ ಸಾಲವನ್ನು ನೀಡುತ್ತದೆ.

ಇದು ನಿಜಕ್ಕೂ ಸಣ್ಣ ಮೊತ್ತವಲ್ಲ. ಒಂದು ವೇಳೆ ನೀವು 12.5 ಲಕ್ಷ ರುಪಾಯಿ ಡೌನ್‌ಪೇಮೆಂಟ್ ಹೊಂದಿಲ್ಲದಿದ್ದರೆ, ನೀವು 40 ಪರ್ಸೆಂಟ್ ಇಎಂಐ ಪಾವತಿ ಮಾಡುವವರಾಗಿದ್ದರೂ ಬ್ಯಾಂಕ್ 50 ಲಕ್ಷ ರುಪಾಯಿ ಸಾಲ ನೀಡುವುದಿಲ್ಲ.

 

ಗಮನಿಸಬೇಕಾದ ಇತರೆ ಅಂಶಗಳು

ಗಮನಿಸಬೇಕಾದ ಇತರೆ ಅಂಶಗಳು

ನೀವು ನಿರ್ಮಾಣ ಹಂತದಲ್ಲಿದ್ದ ಆಸ್ತಿಯನ್ನು ಖರೀದಿಸುತ್ತಿದ್ದರೆ ಮತ್ತು ನಿಮ್ಮ ಇಎಂಐ ಜೊತೆಗೆ ಬಾಡಿಗೆಯನ್ನು ಪಾವತಿಸಬೇಕಾದ ಸಂದರ್ಭದಲ್ಲಿ ನೀವು ಬ್ಯಾಂಕಿನಿಂದ ದೊಡ್ಡ ಮಟ್ಟದ ಸಾಲ ಪಡೆದರೆ ಸ್ವಲ್ಪ ಯೋಚಿಸಿ. ನಿಮಗೆ ದೊಡ್ಡ ಸಾಲವನ್ನು ನೀಡಲು ಬ್ಯಾಂಕ್ ಸಿದ್ಧರಿದ್ದರೂ ಸಹ, ನೀವು ಬಾಡಿಗೆ ಮತ್ತು ಇಎಂಐ ಅನ್ನು ಒಟ್ಟಿಗೆ ನಿಭಾಯಿಸಬಹುದೇ ಎಂದು ನೀವು ಮೊದಲು ನೋಡಿಕೊಳ್ಳಿ

ಅನೇಕ ಜನರಿಗೆ, ಬಾಡಿಗೆ ಮತ್ತು ಇಎಂಐ ಪಾವತಿಸುವುದರಿಂದ ಹಣವೇ ಉಳಿತಾಯವಾಗುವುದಿಲ್ಲ. ಆದ್ದರಿಂದ ಇತರೆ ಹಣಕಾಸಿನ ಗುರಿಗಳಿಗಾಗಿ ಉಳಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಕೇವಲ ತಾತ್ಕಾಲಿಕವಾಗಿದ್ದರೆ ಉತ್ತಮ. ಆದರೆ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ನೀವು ಗುರಿಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸ್ವಲ್ಪ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಯಾವುದೇ ಸಂದರ್ಭದಲ್ಲಿ, ನಿಮ್ಮ ಬ್ಯಾಂಕ್ ಅವರ ಮಾನದಂಡಗಳ ಆಧಾರದ ಮೇಲೆ ಸಾಲ ನೀಡಲು ಇಚ್ಚಿಸುವಷ್ಟು ಸಾಲ ಪಡೆಯಲು ನಿಮಗೆ ಅನುಕೂಲವಿಲ್ಲದಿದ್ದರೆ, ನೀವು ತೆಗೆದುಕೊಳ್ಳಬೇಡಿ. ಇದರಿಂದ ಹೆಚ್ಚಿನ ಹೊರೆಯಾಗಬಹುದು.

ಮನೆ ಖರೀದಿಸುವುದು ಹೆಚ್ಚಿನವರಿಗೆ ಭಾವನಾತ್ಮಕ ನಿರ್ಧಾರವಾಗಿದೆ. ಆದರೆ ನಿಮ್ಮ ಹಣಕಾಸಿನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಿರಿ ಮತ್ತು ನೀವು ಎಲ್ಲಿ ನಿಂತಿದ್ದೀರಿ ಎಂದು ನೋಡಿ. ನಿಮ್ಮ ಬಜೆಟ್ ಅನ್ನು ಸ್ವಲ್ಪಮಟ್ಟಿಗೆ ವಿಸ್ತರಿಸುವುದು ಉತ್ತಮ, ಏಕೆಂದರೆ ನಿಮ್ಮ ಆದಾಯವು ಹೆಚ್ಚಾಗುತ್ತದೆ, ಆದರೆ ಇಎಂಐ ಆಗುವುದಿಲ್ಲ. ಹೀಗಾಗಿ ಅತಿರೇಕಕ್ಕೆ ಹೋಗದಿರಿ.

 

English summary

How Much Home Loan Can You Afford?

To get home loan how much can you afford? These type few others questions explained in this article
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X