For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ವಿಳಾಸ ಬದಲಾಯಿಸಲು ಎಷ್ಟು ವೆಚ್ಚವಾಗುತ್ತದೆ?

|

ಪ್ರಸ್ತುತ ಆಧಾರ್ ಕಾರ್ಡ್ ಎಲ್ಲ ಯೋಜನೆಗಳಿಗೆ ಪ್ರಮುಖವಾಗಿದೆ. ಎಲ್ಲ ಕಾರ್ಯಕ್ಕೂ ನಾವು ಆಧಾರ್ ಕಾರ್ಡ್ ಅನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ಯೋಜನೆಯನ್ನು ಸಂಪೂರ್ಣ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆಯನ್ನು ತೆರೆಯುವುದರಿಂದ ಹಿಡಿದು ಸರ್ಕಾರದ ಎಲ್ಲ ಯೋಜನೆಯನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ಮುಖ್ಯವಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಂದು ಬಾರಿ ಈ ಆಧಾರ್ ಕಾರ್ಡ್ ಲಭ್ಯವಾಗುತ್ತದೆ. ಇದು ಜೀವನಪೂರ್ತಿ ಬಳಕೆ ಮಾಡಲು ಸಾಧ್ಯವಾಗುವ ಒಂದು ಪ್ರಮುಖ ದಾಖಲೆಯಾಗಿದೆ. ಯುಐಡಿಎಐ ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್ ಅನ್ನು ನೀಡುತ್ತದೆ.

ಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿ

ಆದರೆ ಕೆಲವೊಮ್ಮೆ ಆಧಾರ್‌ನಲ್ಲಿ ನಿಮ್ಮ ಮಾಹಿತಿಯನ್ನು ತಪ್ಪಾಗಿ ಉಲ್ಲೇಖ ಮಾಡಲಾಗುತ್ತದೆ. ಹೆಸರು, ವಿಳಾಸ ತಪ್ಪಾಗಿದ್ದರೆ ಅದೇ ಮಾಹಿತಿ ಡೇಟಾಬೇಸ್‌ನಲ್ಲಿ ಇರುತ್ತದೆ. ಯುಐಡಿಎಐ ಈ ತಪ್ಪನ್ನು ಸರಿ ಮಾಡುವ ಅವಕಾಶ ನೀಡುತ್ತದೆ. ನಿಮ್ಮ ಆಧಾರ್‌ನಲ್ಲಿ ವಿಳಾಸ, ಹೆಸರನ್ನು ಅಪ್‌ಡೇಟ್ ಮಾಡುವುದು ಸರಳವಾಗಿದೆ. ಹೇಗೆ, ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಆಧಾರ್ ಕಾರ್ಡ್‌ ವಿಳಾಸ ಬದಲಾವಣೆಗೆ ಎಷ್ಟು ವೆಚ್ಚ?

ಆಧಾರ್ ಕಾರ್ಡ್‌ ವಿಳಾಸ ಬದಲಾವಣೆಗೆ ಎಷ್ಟು ವೆಚ್ಚ?

ನೀವು ನಿಮ್ಮ ಹೆಸರು, ವಿಳಾಸ, ಜನನ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ಸಂಖ್ಯೆಯಂತಹ ಮಾಹಿತಿಯನ್ನು ಬದಲಾವಣೆ ಮಾಡಲು 50 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ಯುಐಡಿಎಐ ಮಾಹಿತಿ ನೀಡಿದೆ. ಇನ್ನು ಬಯೋಮೆಟ್ರಿಕ್ ಡೇಟಾವನ್ನು ಅಪ್‌ಡೇಟ್ ಮಾಡಬೇಕಾದರೆ ನೀವು 100 ರೂಪಾಯಿ ಪಾವತಿಸಬೇಕಾಗುತ್ತದೆ. ನಿಮಗೆ ಇದಕ್ಕೂ ಅಧಿಕ ಶುಲ್ಕವನ್ನು ವಿಧಿಸಿದರೆ ನೀವು ದೂರನ್ನು ನೀಡಬಹುದು. ದೂರು ನೀಡಲು ಈ ಲಿಂಕ್ ಕ್ಲಿಕ್ ಮಾಡಿ.

ಎಲ್ಲಿ ಅಪ್‌ಡೇಟ್ ಮಾಡಬಹುದು?

ಎಲ್ಲಿ ಅಪ್‌ಡೇಟ್ ಮಾಡಬಹುದು?

ಹೆಸರು, ವಿಳಾಸದಂತಹ ಮಾಹಿತಿಯನ್ನು ನೀವು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದು. ಆದರೆ ಬಯೋಮೆಟ್ರಿಕ್ ಡೇಟಾವನ್ನು ನೀವು ಸ್ಥಳೀಯ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿಯೇ ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತದೆ. ಹೊಸ ಮಾರ್ಗಸೂಚಿ ಪ್ರಕಾರ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳಿಗೆ ಒಮ್ಮೆ ಅಪ್‌ಡೇಟ್ ಮಾಡಬೇಕಾಗುತ್ತದೆ.

  ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ ಅಪ್‌ಡೇಟ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ ಅಪ್‌ಡೇಟ್ ಮಾಡುವುದು ಹೇಗೆ?

ಹಂತ 1: ಆಧಾರ್ ಕಾರ್ಡ್ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಒಟಿಪಿ ಮೂಲಕ ಲಾಗಿನ್ ಆಗಿ
ಹಂತ 3: 'Proceed to update address' ಮೇಲೆ ಕ್ಲಿಕ್ ಮಾಡಿ
ಹಂತ 4: ಒಟಿಪಿ ಬಳಸಿ ಲಾಗಿನ್ ಆಗಿ
ಹಂತ 5: "Update New Address Proof" ಆಯ್ಕೆ ಮಾಡಿದ ಬಳಿಕ ಹೊಸ ವಿಳಾಸವನ್ನು ಉಲ್ಲೇಖಿಸಿ
ಹಂತ 6: ವಿಳಾಸ ಪುರಾವೆಯಾಗಿ ದಾಖಲೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 7: ವಿಳಾಸ ಅಪ್‌ಡೇಟ್ ಮಾಡಿದ ಬಳಿಕ "Submit" ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 8: ಆಧಾರ್ ಅಪ್‌ಡೇಟ್ ರಿಕ್ವೆಸ್ಟ್ ಅಪ್ರೋವ್ ಆದರೆ 14 ಡಿಜಿಟ್‌ನ ರಿಕ್ವೆಸ್ಟ್ ನಂಬರ್ ಲಭ್ಯವಾಗಲಿದೆ.

ವಿಳಾಸ ಲಭ್ಯವಾಗುವ ಸಮಯಾವಕಾಶ

ವಿಳಾಸ ಲಭ್ಯವಾಗುವ ಸಮಯಾವಕಾಶ

ಈ 12 ಡಿಜಿಟ್ ಸಂಖ್ಯೆಯ ಆಧಾರ್ ಕಾರ್ಡ್ ನಾಗರಿಕರ ಎಲ್ಲ ಮಾಹಿತಿಯನ್ನು ಹೊಂದಿರುತ್ತದೆ. ಹೆಸರು, ವಿಳಾಸ, ಪೋಷಕರ ಮಾಹಿತಿ, ವಯಸ್ಸು ಎಲ್ಲವೂ ಇರುತ್ತದೆ. ಯುಐಡಿಎಐ ಪ್ರಕಾರ ಆಧಾರ್ ಕಾರ್ಡ್‌ದಾರರು ವಿಳಾಸವನ್ನು ಬದಲಾವಣೆ ಮಾಡಲು ಸಮಯದ ಮಿತಿ ಇದೆ. ಯುಐಡಿಎಐ ಪ್ರಕಾರ ಆಧಾರ್ ಕಾರ್ಡ್‌ದಾರರು ತಮ್ಮ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಜೀವನದಲ್ಲಿ ಎರಡು ಬಾರಿ ಮಾತ್ರ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಜನನ ದಿನಾಂಕವನ್ನು ಒಂದು ಬಾರಿ ಮಾತ್ರ ಬದಲಾಯಿಸಲು ಸಾಧ್ಯವಾಗಲಿದೆ. ಆಧಾರ್ ಡೇಟಾದಲ್ಲಿ ನೀವು ಪದೇ ಪದೇ ನಿಮ್ಮ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ.

English summary

How much it Costs to Change Address on Aadhaar Card, Details in Kannada

Aadhaar is necessary for everything, from opening a bank account to participating in any government programme. How much it Costs to Change Address on Aadhaar Card, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X