For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಬಳಿಕ 50,000 ರೂ ಪಿಂಚಣಿ ಗಳಿಸುವುದು ಹೇಗೆ?

|

ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಪಿಂಚಣಿ ಪ್ರಯೋಜನವನ್ನು ಹೊಂದಿಲ್ಲದಿದ್ದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಹೂಡಿಕೆ ಮಾಡಿ. ಈ ಮೂಲಕ ಹೂಡಿಕೆ ಮಾಡಿ ನಿವೃತ್ತಿ ಜೀವನದಲ್ಲಿ ಪ್ರಯೋಜನವನ್ನು ನೀವು ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನಿವೃತ್ತಿಯಲ್ಲಿ ದೊಡ್ಡ ಪ್ರಮಾಣದ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.

 

ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ಇದಾಗಿದೆ.

ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?

ನೀವು ಈ ಯೋಜನೆಯ ಮೂಲಕ ನಿವೃತ್ತಿ ಬಳಿಕ 50,000 ರೂ ಪಿಂಚಣಿಯನ್ನು ಪಡೆಯಲು ಬಯಸುತ್ತೀರಾ? ಹೇಗೆ ಹಾಗೂ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ. ಮುಂದೆ ಓದಿ..

 ಕೆಲಸದ ಆರಂಭದಿಂದಲೂ ಹೂಡಿಕೆ ಮಾಡಿ

ಕೆಲಸದ ಆರಂಭದಿಂದಲೂ ಹೂಡಿಕೆ ಮಾಡಿ

ನಿವೃತ್ತಿಯ ಯೋಜನೆಯು ನಿಮ್ಮ ಮೊದಲ ಕೆಲಸಕ್ಕೆ ನೀವು ಕಾಲಿಡುವ ಸಮಯದಿಂದ ಪ್ರಾರಂಭವಾಗಬೇಕು. ಇದರಿಂದ ನಿವೃತ್ತಿಯ ಸಮಯದಲ್ಲಿ ಗರಿಷ್ಠ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು. 21 ವರ್ಷದಿಂದ ಎನ್‌ಪಿಎಸ್‌ನಲ್ಲಿ ಪ್ರತಿ ತಿಂಗಳು 4,500 ರೂ.ಗಳನ್ನು ಹೂಡಿಕೆ ಮಾಡಿದರೆ, ನಂತರ 60 ವರ್ಷ ವಯಸ್ಸಿನವರೆಗೆ, 39 ವರ್ಷಗಳವರೆಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಆನ್‌ಲೈನ್ ನೋಂದಣಿ ಹಾಗೂ ಪಡೆಯುವುದು ಹೇಗೆ?ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಆನ್‌ಲೈನ್ ನೋಂದಣಿ ಹಾಗೂ ಪಡೆಯುವುದು ಹೇಗೆ?

 ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ವಾರ್ಷಿಕ 54,000 ರೂ.ಗಳ ದರದಲ್ಲಿ, 39 ವರ್ಷಗಳಲ್ಲಿ ನಿಮ್ಮ ಹೂಡಿಕೆಯು 21.06 ಲಕ್ಷ ರೂ. ಆಗುತ್ತದೆ. ಎನ್‌ಪಿಎಸ್‌ನಲ್ಲಿ ಸರಾಸರಿ ಶೇಕಡ 10 ಆದಾಯವನ್ನು ನೀಡಿದರೆ, ನಂತರ ಮೆಚ್ಯೂರಿಟಿಯಲ್ಲಿ, 2.59 ಕೋಟಿ ರೂ. ಪಡೆಯಬಹುದು. ಅದರಂತೆ 60ನೇ ವಯಸ್ಸಿನಲ್ಲಿ ನಿವೃತ್ತಿಯಾದ ಮೇಲೆ ಪ್ರತಿ ತಿಂಗಳು 51,848 ರೂಪಾಯಿ ಪಿಂಚಣಿ ಸಿಗಲಿದೆ. ಅಂದಾಜಿನ ಮೇಲೆ ಈ ಲೆಕ್ಕಾಚಾರ ಮಾಡಲಾಗಿದೆ. ಅಂದಹಾಗೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಸರಾಸರಿ 8 ರಿಂದ ಶೇಕಡ 12 ಆದಾಯಗಳು ಲಭ್ಯವಿವೆ.

 ವರ್ಷಾಶನವನ್ನು ಎಷ್ಟು ತೆಗೆದುಕೊಳ್ಳಬೇಕು?
 

ವರ್ಷಾಶನವನ್ನು ಎಷ್ಟು ತೆಗೆದುಕೊಳ್ಳಬೇಕು?

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ, ನೀವು ಶೇಕಡ 40 ವರ್ಷಾಶನವನ್ನು ತೆಗೆದುಕೊಂಡರೆ, ವಾರ್ಷಿಕ ವಾರ್ಷಿಕ ದರವು ಶೇಕಡ 6 ಆಗಿದ್ದರೆ, ನಿವೃತ್ತಿಯ ನಂತರ ನೀವು 1.56 ಕೋಟಿ ರೂಪಾಯಿಗಳನ್ನು ಪಡೆಯುತ್ತೀರಿ. ಉಳಿದ 1.04 ಕೋಟಿ ವರ್ಷಾಶನಕ್ಕೆ ಹೋಗುತ್ತದೆ. ಈ ವರ್ಷಾಶನದಿಂದ ಪ್ರತಿ ತಿಂಗಳು ಪಿಂಚಣಿ ನೀಡಲಾಗುವುದು. ವರ್ಷಾಶನ ಮೊತ್ತ ಹೆಚ್ಚಾದಷ್ಟೂ ಪಿಂಚಣಿ ಹೆಚ್ಚಾಗಿರುತ್ತದೆ. ಹಾಗಾದರೆ ಎನ್‌ಪಿಎಸ್ ಖಾತೆಯನ್ನು ತೆರೆಯುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ...

 ಎನ್‌ಪಿಎಸ್ ಖಾತೆಯನ್ನು ತೆರೆಯುವುದು ಹೇಗೆ?

ಎನ್‌ಪಿಎಸ್ ಖಾತೆಯನ್ನು ತೆರೆಯುವುದು ಹೇಗೆ?

* ನೀವು ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ, Enps.nsdl.com/eNPS ಅಥವಾ Nps.karvy.com ತೆರೆಯಿರಿ.
* ಅದರ ನಂತರ ಹೊಸ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
* ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಟಿಪಿಯೊಂದಿಗೆ ಪರಿಶೀಲನೆ ಮಾಡಲಾಗುತ್ತದೆ. ಅದರ ನಂತರ ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿ.
* ನಿಮ್ಮ ಫಂಡ್ ಅನ್ನು ಆಯ್ಕೆ ಮಾಡಿ
* ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡಿ.
* ನೀವು ಭರ್ತಿ ಮಾಡಿದ ಬ್ಯಾಂಕ್ ಖಾತೆಯ ರದ್ದಾದ ಚೆಕ್, ನಿಮ್ಮ ಫೋಟೋ ಮತ್ತು ಸಹಿಯನ್ನು ನೀವು ಅಪ್‌ಲೋಡ್ ಮಾಡಬೇಕು.
* ಇದರ ನಂತರ, ಎನ್‌ಪಿಎಸ್‌ನಲ್ಲಿ ನಿಮಗೆ ಬೇಕಾದಷ್ಟು ಹೂಡಿಕೆ ಮಾಡಿ.
* ಪಾವತಿ ಮಾಡಿದ ನಂತರ, ನಿಮ್ಮ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನು ರಚಿಸಲಾಗುತ್ತದೆ. ಪಾವತಿ ರಸೀದಿಯೂ ಲಭ್ಯವಿರುತ್ತದೆ.
* ಹೂಡಿಕೆ ಮಾಡಿದ ನಂತರ, ಇ-ಸೈನ್/ಪ್ರಿಂಟ್ ನೋಂದಣಿ ಫಾರ್ಮ್ ಪುಟಕ್ಕೆ ಹೋಗಿ.
* ಇಲ್ಲಿ ನೀವು ಪ್ಯಾನ್ ಹಾಗೂ ನೆಟ್‌ಬ್ಯಾಂಕಿಂಗ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದರೊಂದಿಗೆ ನಿಮ್ಮ ಕೆವೈಸಿ ಮಾಡಲಾಗುತ್ತದೆ.

ನೋಂದಾಯಿಸುವಾಗ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀಡಿರುವ ವಿವರಗಳು ಅದರೊಂದಿಗೆ ಹೊಂದಿಕೆಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ. 22 ಬ್ಯಾಂಕ್‌ಗಳು ಪ್ರಸ್ತುತ ಆನ್‌ಲೈನ್ ಎನ್‌ಪಿಎಸ್ ಸೌಲಭ್ಯವನ್ನು ನೀಡುತ್ತಿವೆ.

 

English summary

How to Earn Rs 50,000 Pension on Retirement, Here's How, Explained in Kannada

How to Earn Rs 50,000 Pension on Retirement, Here's How, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X