ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಐಸಿಐಸಿಐ ಬ್ಯಾಂಕ್ ಕೂಡಾ ಒಂದಾಗಿದೆ. ಈ ಬ್ಯಾಂಕ್ 11 ದಶಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಕೆದಾರರನ್ನು ಹೊಂದಿದೆ. ಆದರೆ ಬ್ಯಾಂಕ್‌ನ ಇತ್ತೀಚಿನ ಪ್ರಕಟಣೆಯು ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರನ್ನು ಚಿಂತೆಗೆ ದೂಡಿದೆ.
ಹೌದು ಇನ್ಮುಂದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಗೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಬಾಡಿಗೆ ಪಾವತಿಗಾಗಿ 20 ಅಕ್ಟೋಬರ್ 2022 ರಿಂದ ಶೇಕಡಾ ಒಂದರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಸಂದೇಶವನ್ನು ಬ್ಯಾಂಕ್ ಕಳುಹಿಸಿದೆ. "ಆತ್ಮೀಯ ಗ್ರಾಹಕರೇ, 20-ಅಕ್ಟೋಬರ್-22 ರಿಂದ ನಿಮ್ಮ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಬಾಡಿಗೆ ಪಾವತಿಗಾಗಿ ಎಲ್ಲಾ ವಹಿವಾಟುಗಳಿಗೆ ಶೇಕಡ 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ," ಎಂದು ಈ ಸಂದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲರಿಗೂ ಶೇಕಡ 1 ಶುಲ್ಕ ವಿಧಿಸುತ್ತಾರಾ?
ಇಲ್ಲ, ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಾಡಿಗೆ ಪಾವತಿಯ ಮೇಲೆ ಶೇಕಡ ಒಂದರಷ್ಟು ಶುಲ್ಕದ ಇತ್ತೀಚಿನ ಪ್ರಕಟಣೆಯು ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವವರ ಎಲ್ಲರಿಗೂ ಅನ್ವಯವಾಗುವುದಿಲ್ಲ. ಇತರ ಕ್ರೆಡಿಟ್ ಕಾರ್ಡ್ ಸೇವಾ ಪೂರೈಕೆದಾರರು ನಿರ್ದಿಷ್ಟ ಪ್ರಮಾಣದ ಶುಲ್ಕವನ್ನು ವಿಧಿಸುತ್ತಾರೆ. ಆದರೆ ಶುಲ್ಕಗಳು ನಿರ್ದಿಷ್ಟವಾಗಿ ಸೇವಾ ಶುಲ್ಕವಲ್ಲ. ಹೆಚ್ಚುವರಿ ತೆರಿಗೆಯೊಂದಿಗೆ ಪ್ಲಾಟ್‌ಫಾರ್ಮ್ ಶುಲ್ಕವಾಗಿದೆ. ಆದರೆ ಈಗ, ಐಸಿಐಸಿಐ ಬ್ಯಾಂಕ್ ಈ ಹಿಂದೆ ಕಡಿತ ಮಾಡುತ್ತಿದ್ದ ಇತರ ಶುಲ್ಕಗಳೊಂದಿಗೆ ಶೇಕಡ 1ರಷ್ಟು ಸೇವಾ ಶುಲ್ಕವನ್ನು ವಿಧಿಸುತ್ತದೆ.
ಈ ಸೇವಾ ಶುಲ್ಕ ವಿಧಿಸಲು ಕಾರಣವೇನು?
ಈ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಬ್ಯಾಂಕ್ ಅಧಿಕೃತವಾಗಿ ಯಾವುದೇ ಕಾರಣವನ್ನು ಹೇಳಿಲ್ಲ. ಆದರೆ ಬೇರೆ ಬೇರೆ ಬಾಡಿಗೆ ಪಾವತಿ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಸೇವೆಯ ದುರುಪಯೋಗ ಆಗುತ್ತಿರುವುದು ಕೂಡಾ ಈ ಸೇವಾ ಶುಲ್ಕ ವಿಧಿಸಲು ಕಾರಣವಾಗಿದೆ. ಹೆಚ್ಚಿನ ಬಳಕೆದಾರರು ಕ್ರೆಡಿಟ್ ಕಾರ್ಡ್ ಹಣವನ್ನು ನಗದಾಗಿ ಪರಿವರ್ತಿಸಲು ಈ ಬಾಡಿಗೆ ಪಾವತಿಯನ್ನು ತೆರಿಗೆ ಮುಕ್ತ ಮಾರ್ಗವಾಗಿ ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ತೆಗೆದುಕೊಳ್ಳಲು ಬ್ಯಾಂಕ್ ಶೇಕಡ 3ರಷ್ಟು ಶುಲ್ಕವನ್ನು ವಿಧಿಸುತ್ತದೆ.


Click it and Unblock the Notifications