For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಮತ್ತೆ ಏರಿಸಿದ ಐಸಿಐಸಿಐ ಬ್ಯಾಂಕ್: ನೂತನ ದರ ತಿಳಿಯಿರಿ

|

ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ಗಗನಕ್ಕೇರುತ್ತಿರುವ ಹಣದುಬ್ಬರವನ್ನು ತಡೆಯಲು ರೆಪೊ ದರವನ್ನು 40 ಬಿಪಿಎಸ್ ಹೆಚ್ಚಿಸಿದೆ. ಸೆಂಟ್ರಲ್ ಬ್ಯಾಂಕ್‌ನ ಕ್ರಮವು ಹಲವಾರು ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳ ಎಫ್‌ಡಿಗಳ ಬಡ್ಡಿದರಗಳ ಮೇಲೆ ಪ್ರಭಾವ ಬೀರಿದೆ. ಈಗಾಗಲೇ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದೆ. ಈಗ ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಮತ್ತೆ ಹೆಚ್ಚಳ ಮಾಡಿದೆ.

 

ರೆಪೋ ದರವನ್ನು ಹೆಚ್ಚಿಸಿದಾಗಿನಿಂದ, ಬ್ಯಾಂಕ್‌ಗಳು ಎಫ್‌ಡಿ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡಲು ಪ್ರಯತ್ನಿಸುತ್ತಿವೆ. ಈಗ ಐಸಿಐಸಿಐ ಬ್ಯಾಂಕ್ ತನ್ನ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಐಸಿಐಸಿಐ ಬ್ಯಾಂಕ್ ಐದು ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕ 0.25% ವಿಶೇಷ ಹೆಚ್ಚುವರಿ ಬಡ್ಡಿ ದರವನ್ನು ನೀಡಲು ನಿರ್ಧರಿಸಿದೆ.

 

ಮೇ ಅಂತ್ಯದಲ್ಲಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ, ಕಾರಣವೇನು? ಮೇ ಅಂತ್ಯದಲ್ಲಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ, ಕಾರಣವೇನು?

ಈ ಠೇವಣಿಗಳು ಬ್ಯಾಂಕ್‌ನ ಗೋಲ್ಡನ್ ಇಯರ್ಸ್ ಫಿಕ್ಸಿಡ್ ಡೆಪಾಸಿಟ್ ವರ್ಗದ ಅಡಿಯಲ್ಲಿ ಬರುತ್ತವೆ. ಈ ವಿಶೇಷ ಠೇವಣಿಗಳ ವಿವಿಧ ಪ್ರಮುಖ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿ ಮುಂದೆ ಓದಿ...

ಎಫ್‌ಡಿ ಬಡ್ಡಿದರ ಮತ್ತೆ ಏರಿಸಿದ ಐಸಿಐಸಿಐ ಬ್ಯಾಂಕ್: ಇಲ್ಲಿದೆ ವಿವರ

ಏನಿದು ಗೋಲ್ಡನ್ ಇಯರ್ಸ್ ಫಿಕ್ಸಿಡ್ ಡೆಪಾಸಿಟ್?

ಹಿರಿಯ ನಾಗರಿಕರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ಸೀಮಿತ ಅವಧಿಗೆ ಮಾತ್ರ ಹೆಚ್ಚುವರಿ ಬಡ್ಡಿದರಗಳನ್ನು ಪಡೆಯಬಹುದಾಗಿದೆ. ಅಕ್ಟೋಬರ್ 7, 2022 ರ ನಂತರ ಠೇವಣಿಗಳು ಅಮಾನ್ಯವಾಗುತ್ತವೆ. ಹಾಗಾಗಿ ನೀವು ಹೆಚ್ಚುವರಿ ಬಡ್ಡಿದರಗಳನ್ನು ಗಳಿಸಲು ಬಯಸಿದರೆ, ಅಕ್ಟೋಬರ್ 7, 2022 ರ ಮೊದಲು ನಿಮ್ಮ ಹಣವನ್ನು ಐಸಿಐಸಿಐನ ಎಫ್‌ಡಿಯಲ್ಲಿ ಹೂಡಿಕೆ ಮಾಡಬೇಕಾಗಿದೆ.

ಹೊಸದಾಗಿ ತೆರೆಯಲಾದ ಠೇವಣಿಗಳ ಮೇಲೆ ಮತ್ತು ಯೋಜನೆಯ ಅವಧಿಯಲ್ಲಿ ನವೀಕರಣ ಮಾಡಿದ ಠೇವಣಿಗಳ ಮೇಲೆ ಹೆಚ್ಚುವರಿ ಬಡ್ಡಿಯ ದರವು ಅನ್ವಯಿಸುತ್ತದೆ. ಹಿರಿಯ ನಾಗರಿಕರು ತಮ್ಮ ಎಫ್‌ಡಿಗಳ ಮೇಲೆ 0.25 ಶೇಕಡದಷ್ಟು ಹೆಚ್ಚುವರಿ ಬಡ್ಡಿ ದರಗಳನ್ನು ಪಡೆಯಬಹುದು. ಇದು ಸೀಮಿತ ಅವಧಿಗೆ ಮಾತ್ರವಾಗಿದೆ.

ಇದು ರೂ 2 ಕೋಟಿಗಿಂತ ಕಡಿಮೆ ಇರುವ ಸಿಂಗಲ್ ಎಫ್‌ಡಿಗಳಿಗೆ ಅನ್ವಯಿಸುತ್ತದೆ. ಗೋಲ್ಡನ್ ಇಯರ್ಸ್ ಅಡಿಯಲ್ಲಿ ಹಿರಿಯ ನಾಗರಿಕರಿಗೆ 5 ವರ್ಷ 1 ದಿನದಿಂದ 10 ವರ್ಷಗಳ ನಡುವಿನ ಅವಧಿಗೆ ಬಡ್ಡಿ ದರವು ಶೇಕಡ 6.50 ಆಗಿದೆ. ಇನ್ನು ಯಾವುದೇ ಠೇವಣಿಗಳನ್ನು ಅಕಾಲಿಕವಾಗಿ ಹಿಂತೆಗೆದುಕೊಂಡರೆ ಅಥವಾ ಐದು ವರ್ಷ ಮತ್ತು ಒಂದು ವರ್ಷದ ನಂತರ ಮುಚ್ಚಿದರೆ, 1.25 ಶೇಕಡ ದಂಡವಿದೆ.

English summary

ICICI Banks Raises FD Interest Rates Once Again: See Latest Rates Here

ICICI Banks Raises FD Interest Rates Once Again: See Latest Rates Here.
Story first published: Saturday, May 28, 2022, 19:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X