For Quick Alerts
ALLOW NOTIFICATIONS  
For Daily Alerts

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

|

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಹೊಸ ದರಗಳು ಫೆಬ್ರವರಿ 18, 2022 ರಿಂದ ಜಾರಿಗೆ ಬರುತ್ತವೆ.

ಬ್ಯಾಂಕ್ ಈಗ ಉಳಿತಾಯ ಖಾತೆ ಠೇವಣಿಗಳ ಮೇಲೆ ಗರಿಷ್ಠ 5.00 ಶೇಕಡಾ ಬಡ್ಡಿದರವನ್ನು ವಿಧಿಸುತ್ತದೆ. ವೀಡಿಯೊ KYC ಯೊಂದಿಗೆ ಪೇಪರ್‌ಲೆಸ್ ಡಿಜಿಟಲ್ ಖಾತೆ ತೆರೆಯುವ ಪ್ರಕ್ರಿಯೆ, ಉಳಿತಾಯ ಖಾತೆಗಳ ಮೇಲಿನ ಮಾಸಿಕ ಬಡ್ಡಿ ಕ್ರೆಡಿಟ್, ರೂ 6 ಲಕ್ಷಗಳ ಖರೀದಿ ಮಿತಿ ಮತ್ತು ರೂ 2 ಲಕ್ಷಗಳ ದೈನಂದಿನ ಎಟಿಎಂ ವಿತ್‌ಡ್ರಾ ಮಿತಿ, ಉಚಿತ ಮತ್ತು ಅನಿಯಮಿತ ಎಟಿಎಂ ವಿತ್‌ಡ್ರಾ ಸೇರಿ ಹಲವಾರು ಪ್ರಯೋಜನಗಳನ್ನು ಬ್ಯಾಂಕ್‌ ನೀಡುತ್ತಿದೆ.

ಫೆ.18ರಂದು ದೇಶದ ಕೆಲ ನಗರಗಳಲ್ಲಿ ಇಂಧನ ದರದಲ್ಲಿ ಬದಲಾವಣೆಫೆ.18ರಂದು ದೇಶದ ಕೆಲ ನಗರಗಳಲ್ಲಿ ಇಂಧನ ದರದಲ್ಲಿ ಬದಲಾವಣೆ

ಇಷ್ಟು ಮಾತ್ರವಲ್ಲದೇ ರೂ 35 ಲಕ್ಷಗಳ ಉಚಿತ ವೈಯಕ್ತಿಕ ಅಪಘಾತ ವಿಮಾ ರಕ್ಷಣೆ, ರೂ 1 ಕೋಟಿ ಅಪಘಾತ ವಿಮಾ ರಕ್ಷಣೆಯು ಉಳಿತಾಯ ಖಾತೆಗಳಲ್ಲಿ ತನ್ನ ಗ್ರಾಹಕರಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುತ್ತದೆ. ಹಾಗಿರುವಾಗ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ ಎಷ್ಟಾಗಿದೆ ಎಂಬುವುದನ್ನು ತಿಳಿಯೋಣ ಎಂದು ಹೇಳಿದ್ದಾರೆ.

 ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಣೆ

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ

ಬ್ಯಾಂಕ್ ಪ್ರಸ್ತುತ ರೂ 1 ಲಕ್ಷದವರೆಗಿನ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇಕಡಾ 4.00 ಬಡ್ಡಿದರವನ್ನು ನೀಡುತ್ತಿದೆ. ರೂ 1 ಲಕ್ಷಕ್ಕಿಂತ ಹೆಚ್ಚು ಮತ್ತು ರೂ 10 ಲಕ್ಷದವರೆಗಿನ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಪ್ರಸ್ತುತ 4.50 ಪ್ರತಿಶತ ಬಡ್ಡಿ ದರವನ್ನು ನೀಡುತ್ತಿದೆ. 10 ಲಕ್ಷಕ್ಕಿಂತ ಹೆಚ್ಚು ಮತ್ತು 100 ಕೋಟಿ ರೂ.ವರೆಗಿನ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ, ಬ್ಯಾಂಕ್ ಈಗ ಶೇಕಡಾ 5.00 ಬಡ್ಡಿದರವನ್ನು ಪಾವತಿಸುತ್ತಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 100 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿ ಬ್ಯಾಲೆನ್ಸ್‌ಗಳ ಮೇಲೆ ಶೇ. 4.50 ಮತ್ತು ರೂ. 200 ಕೋಟಿ ಬ್ಯಾಲೆನ್ಸ್‌ಗಳ ಮೇಲೆ ಶೇ. 3.50 ಬಡ್ಡಿ ದರಗಳನ್ನು ನೀಡುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿದ ನಿಯಮಗಳ ಪ್ರಕಾರ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ನಿಗದಿಪಡಿಸಿದ ದರದಲ್ಲಿ ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿಯನ್ನು ದಿನನಿತ್ಯದ ದಿನದ ಬಾಕಿಗಳ ಮೇಲೆ ನಿರ್ಧರಿಸಲಾಗುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ, "ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯ ಅವಧಿಯು 1ನೇ ಜುಲೈ 2021 ರಿಂದ ಮಾಸಿಕ ಆಧಾರದ ಮೇಲೆ ಇರುತ್ತದೆ. ಖಾತೆಯಲ್ಲಿನ ಬ್ಯಾಲೆನ್ಸ್‌ ಆಧಾರದಲ್ಲಿ ಬಡ್ಡಿ ದರವನ್ನು ನಿರ್ಧಾರ ಮಾಡಲಾಗುತ್ತದೆ," ಎಂದು ಉಲ್ಲೇಖ ಮಾಡಿದೆ. ಇನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು IndusInd ಬ್ಯಾಂಕ್ ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಫಿಕ್ಸಿಡ್‌ ಡೆಪಾಸಿಟ್‌ಗಳ ಮೇಲೆ 6.50 ಪ್ರತಿಶತ ಬಡ್ಡಿಯನ್ನು ನೀಡುತ್ತದೆ.

ಇತ್ತೀಚೆಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ರೂ. 2 ಕೋಟಿಗಿಂತ ಕಡಿಮೆಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಹಿರಿಯ ನಾಗರಿಕರಲ್ಲದವರಿಗೆ ಅನ್ವಯಿಸುವ ಕಾರ್ಡ್ ದರಕ್ಕಿಂತ 0.50% ಹೆಚ್ಚುವರಿ ದರವನ್ನು ಪಡೆಯುವುದನ್ನು ಮುಂದುವರಿಸಲಾಗಿದೆ. 7 ದಿನಗಳಿಂದ 14 ವರ್ಷಗಳವರೆಗೆ ಮೆಚ್ಯೂರಿಟಿ ಹೊಂದುವ ಬಡ್ಡಿದರವನ್ನು ಶೇಕಡ 3.00ರಷ್ಟಿದೆ. 15ರಿಂದ 29 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ಬಡ್ಡಿ ದರ ಶೇಕಡ 3.00ರಷ್ಟಿದೆ.

English summary

IDFC First Bank Revises Savings Account Interest Rate: Here's Details

IDFC First Bank Revises Savings Account Interest Rate: Here's Details in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X