For Quick Alerts
ALLOW NOTIFICATIONS  
For Daily Alerts

ಮನೆ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯಿತಿ: ಇಲ್ಲಿದೆ ವಿವರ

|

ಮನೆ ಖರೀದಿದಾರರು ತಮ್ಮ ಹೊಸ ಮನೆ ಅಥವಾ ಫ್ಲಾಟ್ ಅನ್ನು ವಾಸಯೋಗ್ಯವನ್ನಾಗಿಸಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಸಿದ್ಧ ಆಸ್ತಿಯನ್ನು ಅಂದರೆ ನಿರ್ಮಾಣವಾಗಿರುವ ಮನೆಯನ್ನು ಖರೀದಿ ಮಾಡುವಾಗಲೂ ಕೂಡಾ ಮನೆಯನ್ನು ವಾಸಯೋಗ್ಯವನ್ನಾಗಿಸಲು ಹಲವಾರು ಖರ್ಚುಗಳು ಇರುತ್ತದೆ. ಆದರೆ ಈಗ ಜನರು ಅಂತಹ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು!

 

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ), ಅಹಮದಾಬಾದ್‌ನ ಇತ್ತೀಚಿನ ಆದೇಶದ ಪ್ರಕಾರ, ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 54 ರ ಅಡಿಯಲ್ಲಿ ಹೊಸ ಮನೆಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಮೊದಲು ಮಾಡುವ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿಯನ್ನು ಮನೆ ಮಾಲೀಕರು ಪಡೆಯಬಹುದು. ಹೊಸ ಮನೆಯನ್ನು ವಾಸಯೋಗ್ಯವನ್ನಾಗಿ ಮಾಡಲು ದುರಸ್ತಿ ಕಾರ್ಯವನ್ನು ನಿರ್ವಹಿಸುವ ಮೂಲಕ ತೆರಿಗೆ ಪ್ರಯೋಜನ ಪಡೆಯಬಹುದು. ತೆರಿಗೆದಾರರು ಅಂತಹ ವೆಚ್ಚವನ್ನು ಹೊಸ ಆಸ್ತಿಯ ಒಟ್ಟು ವೆಚ್ಚದೊಂದಿಗೆ ಸೇರ್ಪಡೆ ಮಾಡಬಹುದು.

 ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ

ಮನೆಯನ್ನು ನಮ್ಮ ಸ್ವಾಧೀನಕ್ಕೆ ಪಡೆಯುವ ಮೊದಲು ಹಲವಾರು ಖರ್ಚುಗಳು ಇರುತ್ತದೆ. ಈ ವಿಚಾರದಲ್ಲಿ ಶ್ರೀನ್ವಾಸ್ ಆರ್ ದೇಸಾಯಿ ವಿರುದ್ಧ ಎಸಿಐಟಿ (ಒಎಸ್‌ಡಿ) ಪ್ರಕರಣದಲ್ಲಿ ಸಮನ್ವಯ ಪೀಠವು ನೀಡಿದ ಮತ್ತೊಂದು ತೀರ್ಪನ್ನು ನ್ಯಾಯಮಂಡಳಿ ಉಲ್ಲೇಖಿಸಿದೆ. ಈ ತೀರ್ಪಿನಿಲ್ಲಿ ಖರೀದಿದಾರರಿಗೆ ನಿರ್ಮಾಣ ವೆಚ್ಚ, ಪೂರಕ ವೆಚ್ಚಕ್ಕೆ ತೆರಿಗೆ ವಿನಾಯಿತಿ ನೀಡಬಹುದು ಎಂದು ಹೇಳಲಾಗಿದೆ. ಅಂತಹ ಹೆಚ್ಚುವರಿ ವೆಚ್ಚಗಳು ಕಾಯಿದೆಯ ಸೆಕ್ಷನ್ 54 ರ ಅಡಿಯಲ್ಲಿ ಅರ್ಹ ಹೂಡಿಕೆಯಾಗಿ ಪರಿಗಣಿಸಲು ಅರ್ಹವಾಗಿರುತ್ತವೆ. ಹಾಗಾದರೆ ಈ ತೆರಿಗೆ ವಿನಾಯಿತಿ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ, ಎಷ್ಟು ವಿನಾಯಿತಿ ಪಡೆಬಹುದು, ತೆರಿಗೆದಾರರು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಸೆಕ್ಷನ್ 54 ಏನು ಹೇಳುತ್ತದೆ?

ಸೆಕ್ಷನ್ 54 ಏನು ಹೇಳುತ್ತದೆ?

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 54 ರ ಪ್ರಕಾರ, ಮಾರಾಟಗಾರನು ಮನೆಯ ಆಸ್ತಿಯ ವರ್ಗಾವಣೆಯಿಂದ ಪಡೆದ ಲಾಭದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು ಮತ್ತೊಂದು ಮನೆಯನ್ನು ಖರೀದಿಸಲು ಅಥವಾ ನಿರ್ಮಾಣಕ್ಕಾಗಿ ಈ ಮಾರಾಟ ಮಾಡಿದ ಹಣದಿಂದ ಪಡೆದ ಲಾಭವನ್ನು ವಿನಿಯೋಗ ಮಾಡುವ ಮೂಲಕ ವಿನಾಯಿತಿಯನ್ನು ಪಡೆಯಬಹುದು. ತಜ್ಞರ ಪ್ರಕಾರ, ಈ ಪ್ರಯೋಜನವು ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು ಮತ್ತು ಅಂತಹ ಇತರ ಸಂಸ್ಥೆಗಳಿಗೆ ಲಭ್ಯವಿಲ್ಲ.

 ಒಟ್ಟು ವಿನಾಯಿತಿ ಎಷ್ಟು?

ಒಟ್ಟು ವಿನಾಯಿತಿ ಎಷ್ಟು?

ಹಣಕಾಸು ಕಾಯಿದೆ 2020 ರ ಪ್ರಕಾರ, ಎರಡು ಗೃಹ ಆಸ್ತಿಗಳಲ್ಲಿ ಮಾಡಿದ ಹೂಡಿಕೆಯ ಮೇಲಿನ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ವಿನಾಯಿತಿ ಪ್ರಯೋಜನವನ್ನು ರೂ 2 ಕೋಟಿಗೆ ಸೀಮಿತಗೊಳಿಸಲಾಗಿದೆ. ಈ ಪ್ರಯೋಜನವು ದೀರ್ಘಾವಧಿಯ ಬಂಡವಾಳ ಆಸ್ತಿಯ ವರ್ಗಾವಣೆಯ ಮೇಲೆ ಮಾತ್ರ ಲಭ್ಯವಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಆಸ್ತಿಯು ಸೆಕ್ಷನ್ 54 ರ ಅಡಿಯಲ್ಲಿ ಪ್ರಯೋಜನಕ್ಕೆ ಅರ್ಹವಾಗಿಲ್ಲದಿದ್ದರೆ, ಆಸ್ತಿಯ ಮಾರಾಟದ ಮೇಲೆ ಎಲ್‌ಟಿಸಿಜಿಗೆ ಅನ್ವಯವಾಗುವ ದರದಲ್ಲಿ ಲಾಭಕ್ಕೆ ತೆರಿಗೆ ವಿಧಿಸಲಾಗುತ್ತದೆ. ಸ್ತುತ ದರವು 20 ಪ್ರತಿಶತ ಮತ್ತು ಹೆಚ್ಚುವರಿ ಶುಲ್ಕಗಳು ಮತ್ತು ಸೆಸ್ ಅನ್ವಯಿಸುತ್ತದೆ.

 ಯಾರಿಗೆಲ್ಲಾ ಈ ತೆರಿಗೆ ವಿನಾಯಿತಿ ಲಭ್ಯವಿಲ್ಲ?
 

ಯಾರಿಗೆಲ್ಲಾ ಈ ತೆರಿಗೆ ವಿನಾಯಿತಿ ಲಭ್ಯವಿಲ್ಲ?

ದೀರ್ಘಾವಧಿ ಖರೀದಿದಾರರು ಮಾತ್ರ ತೆರಿಗೆ ವಿನಾಯಿತಿ ಪ್ರಯೋಜನವನ್ನು ಪಡೆಯಬಹುದು. ಯಾರಾದರೂ ವಿನಾಯಿತಿಯನ್ನು ಕ್ಲೈಮ್ ಮಾಡಿ, ಆದರೆ ಸ್ವಾಧೀನಪಡಿಸಿಕೊಂಡ ದಿನಾಂಕದಿಂದ ಅಥವಾ ನಿರ್ಮಾಣ ಪೂರ್ಣಗೊಂಡ ಮೂರು ವರ್ಷಗಳೊಳಗೆ ಹೊಸ ಮನೆಯನ್ನು ವರ್ಗಾಯಿಸಿದರೆ ಸೆಕ್ಷನ್ 54 ರ ಅಡಿಯಲ್ಲಿ ಪ್ರಯೋಜನವನ್ನು ಹಿಂಪಡೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಐಟಿಎಟಿ ತೀರ್ಪಿನ ಪ್ರಕಾರ, ಆಸ್ತಿಯನ್ನು ವಾಸಯೋಗ್ಯವಾಗಿಸಲು ಬಂಡವಾಳ ಲಾಭದ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದರೆ ಆಸ್ತಿಯು ಈಗಾಗಲೇ ವಾಸಯೋಗ್ಯವಾಗಿದ್ದರೆ ಮತ್ತು ನೀವು ಸಣ್ಣ ಬದಲಾವಣೆಗಳನ್ನು ಮಾಡಿದರೆ ಅದಕ್ಕೆ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

 ತೆರಿಗೆದಾರರು ಏನು ಮಾಡಬೇಕು?

ತೆರಿಗೆದಾರರು ಏನು ಮಾಡಬೇಕು?

ಪ್ರಸ್ತುತ, ಸೆಕ್ಷನ್ 54 ಹೊಸ ಆಸ್ತಿಯನ್ನು ವಾಸಯೋಗ್ಯವಾಗಿಸುವ ವೆಚ್ಚದ ಮೇಲಿನ ತೆರಿಗೆ ವಿನಾಯಿತಿ ಪ್ರಯೋಜನವನ್ನು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ. ಆದಾಗ್ಯೂ, ತೆರಿಗೆದಾರರು ಈ ಪ್ರಯೋಜನವನ್ನು ಪಡೆಯಬಹುದು ಎಂದು ಹಲವಾರು ಆದೇಶಗಳು ಸೂಚಿಸುತ್ತವೆ. ಈ ವಿನಾಯಿತಿಯ ಲಾಭವನ್ನು ಪಡೆಯಲು ನೀವು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿದರೆ ಉತ್ತಮ.

English summary

Income Tax exemption for home buyers: No tax on making new home liveable, price of interiors

Income Tax exemption for home buyers: Homebuyers have to make a lot of expenses for making their new house or flat inhabitable. Now they can claim tax exemption on such expenses.
Story first published: Tuesday, May 10, 2022, 12:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X