For Quick Alerts
ALLOW NOTIFICATIONS  
For Daily Alerts

ಗಮನಿಸಿ: ಜುಲೈ 1ರಿಂದ ಈ ಮೂರು ಹಣಕಾಸು ಬದಲಾವಣೆ

|

ಇಂದು (ಜೂನ್ 30) ಜೂನ್ ತಿಂಗಳ ಕೊನೆಯ ದಿನವಾಗಿದೆ. ನಾಳೆಯಿಂದ ಹೊಸ ತಿಂಗಳು (ಜುಲೈ) ಆರಂಭವಾಗಲಿದೆ. ಹೊಸ ತಿಂಗಳಲ್ಲಿ ಹಣಕಾಸು ವಿಚಾರದಲ್ಲಿ ಹೊಸ ಬದಲಾವಣೆಗಳು ಆಗಲಿದೆ. ಈ ಹಣಕಾಸು ನೀತಿಯಿಂದ ನಿಮಗೆ ಲಾಭವಾಗಲಿದೆಯೇ ಅಥವಾ ನಷ್ಟವಾಗಲಿದೆಯೇ ಎಂಬುವುದನ್ನು ತಿಳಿಯಲು ಮುಂದೆ ಓದಿ...

 

ನಮ್ಮ ಜೀವನದಲ್ಲಿ ಹಣಕಾಸು ನಿರ್ವಹಣೆ ಬಹಳ ಮುಖ್ಯವಾದುದು. ಅದಂತೂ ಈ ದುಬಾರಿ ಕಾಲದಲ್ಲಿ ನಾವು ಎಲ್ಲದಕ್ಕೂ ಬಜೆಟ್ ನಿರ್ವಹಣೆ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಏನಾದರೂ ಹಣಕಾಸು ಸಂಬಂಧಿತ ಬದಲಾವಣೆಗಳು ಆಗುತ್ತದೆ. ಅದನ್ನು ನಾವು ಸರಿಯಾಗಿ ತಿಳಿಯದಿದ್ದರೆ ನಮ್ಮ ಜೇಬಿಗೆ ಕತ್ತರಿ ಬೀಳಲಿದೆ.

ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು

ಜುಲೈ ಒಂದರಿಂದ ಪ್ರಮುಖವಾಗಿ ಮೂರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಯಾವೆಲ್ಲ ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎಂಬ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ, ಮುಂದೆ ಓದಿ.....

 ಕ್ರಿಪ್ಟೋಕರೆನ್ಸಿ ಮೇಲೆ ಟಿಡಿಎಸ್

ಕ್ರಿಪ್ಟೋಕರೆನ್ಸಿ ಮೇಲೆ ಟಿಡಿಎಸ್

ವರ್ಚುವಲ್ ಡಿಜಿಟಲ್ ಅಸೆಟ್ ಅಥವಾ ಕ್ರಿಪ್ಟೋಕರೆನ್ಸಿ/ಎನ್‌ಎಫ್‌ಟಿ ಮೇಲೆ ಈ ವರ್ಷದ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶೇಕಡ ಒಂದರಷ್ಟು ಟಿಡಿಎಸ್ ಘೋಷಣೆ ಮಾಡಿದ್ದಾರೆ. ಹತ್ತು ಸಾವಿರ ರೂಪಾಯಿಗಿಂತ ಅಧಿಕ ಕ್ರಿಪ್ಟೋಕರೆನ್ಸಿ ವ್ಯವಹಾರದ ಮೇಲೆ ಜುಲೈ 1ರಿಂದ ಟಿಡಿಎಸ್ ಹೇರಲಾಗುತ್ತದೆ. ಕ್ರಿಪ್ಟೋ ಖರೀದಿ ಮಾಡುವವರ ಪ್ಯಾನ್ ಲಭ್ಯವಿಲ್ಲದಿದ್ದರೆ, ಹೆಚ್ಚಾಗಿ ಶೇಕಡ 20ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇನ್ನು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡದಿದ್ದರೆ ಶೇಕಡ 5ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ.

 ಪ್ಯಾನ್, ಆಧಾರ್ ಲಿಂಕಿಂಗ್

ಪ್ಯಾನ್, ಆಧಾರ್ ಲಿಂಕಿಂಗ್

ನೀವು ಇನ್ನೂ ಕೂಡಾ ಪ್ಯಾನ್ ಕಾರ್ಡ್‌ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಇಂದೇ ಮಾಡಿಬಿಡುವುದು ಉತ್ತಮ. ನೀವು ಜೂನ್ 30ರ ಒಳಗೆ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಒಂದು ಸಾವಿರ ರೂಪಾಯಿ ದಂಡ ಬೀಳಲಿದೆ. ನೀವು ಜೂನ್ 30ರ ಮುನ್ನ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಐನ್ನೂರು ರೂಪಾಯಿ ದಂಡ ಬೀಳಲಿದೆ. ಜುಲೈ ಒಂದರಿಂದ ಈ ದಂಡವು ದುಪ್ಪಟ್ಟು ಆಗಲಿದೆ.

 ವೈದ್ಯರಿಗೆ, ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಟಿಡಿಎಸ್
 

ವೈದ್ಯರಿಗೆ, ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಟಿಡಿಎಸ್

ವೈದ್ಯರಿಗೆ ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಜುಲೈ ಒಂದರಿಂದ ಪ್ರಮೋಷನ್ ನೆಪದಲ್ಲಿ ಲಭ್ಯವಾಗುವ ವಸ್ತುಗಳ ಮೇಲೆ ಟಿಡಿಎಸ್ ವಿಧಿಸಲಾಗುತ್ತದೆ. ಆಸ್ಪತ್ರೆಯ ಉದ್ಯೋಗಿಯಾಗಿರುವ ವೈದ್ಯರಿಗೆ ಕಂಪನಿಯಿಂದ ಉಚಿತ ಮಾದರಿಗಳನ್ನು ವಿತರಿಸಲು ಸೆಕ್ಷನ್ 194 ಆರ್ ಅನ್ವಯಿಸುತ್ತದೆ. ಆಸ್ಪತ್ರೆಯು ತರುವಾಯ ಈ ಪ್ರಯೋಜನ/ಅನುಕೂಲತೆಯನ್ನು ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ನೀಡಲಾದ ಪರ್ಕ್ವಿಸಿಟ್ ಎಂದು ಪರಿಗಣಿಸಬಹುದು. ಹಾಗೆಯೇ ಕಾಯಿದೆಯ ಸೆಕ್ಷನ್ 192 ರ ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಿಸಬಹುದು. ಉದ್ಯೋಗಿ ಅಥವಾ ವೈದ್ಯರ ಸಂಬಳದಿಂದಲೇ ಈ ಪರ್ಕ್ವಿಸಿಟ್ ತೆರಿಗೆ ಕಡಿತವಾಗಲಿದೆ.

English summary

Income tax rules: Three changes from July 1 explained in Kannada

Income tax rules from July 1 : Here is a have a look at three vital income tax associated changes that may come into impact from July 1, 2022. Know more.
Story first published: Thursday, June 30, 2022, 15:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X