For Quick Alerts
ALLOW NOTIFICATIONS  
For Daily Alerts

ಭಾರತದ 10 ಖ್ಯಾತ ಶ್ರೀಮಂತರು: ಯಾರಿಗೆ ಮೊದಲ ಸ್ಥಾನ?

|

ಶ್ರೀಮಂತಿಕೆಗೂ ಖ್ಯಾತಿಗೂ ಸಂಬಂಧ ಇದೆಯಾ? ಖ್ಯಾತಿ ಬರುತ್ತಿದ್ದಂತೆಯೇ ಶ್ರೀಮಂತಿಕೆ ಬರುತ್ತದೋ ಅಥವಾ ಶ್ರೀಮಂತಿಕೆಯನ್ನು ಹುಡುಕಿಕೊಂಡು ಖ್ಯಾತಿ ಬರುತ್ತದೋ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವುದು ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ. ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ಮಾತ್ರ ಭಾರತದ ಹತ್ತು ಖ್ಯಾತ ಶ್ರೀಮಂತರ ಬಗ್ಗೆ.

2020ನೇ ಇಸವಿಯಲ್ಲಿ ಭಾರತದಲ್ಲಿ ಇವರು ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಇದ್ದಾರೆ. ಇವರ ಬಗ್ಗೆ ಒಂದಿಷ್ಟು ಹಿನ್ನೆಲೆ, ಆಸ್ತಿ ಮೌಲ್ಯ, ವಯಸ್ಸು ಇಂಥ ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಎಷ್ಟಾದರೂ ಖ್ಯಾತ ಶ್ರೀಮಂತರಲ್ಲವಾ. ನಿಮಗೂ ಇವರ ಬಗ್ಗೆ ಒಂದಿಷ್ಟು ಮಾಹಿತಿ ಇದ್ದಿರಬಹುದು.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ಧೀರೂಭಾಯಿ ಅಂಬಾನಿ ಅವರ ಹಿರಿಯ ಮಗ ಮುಕೇಶ್. ಇವರಿಗೆ ಒಬ್ಬ ಸೋದರ ಇದ್ದಾರೆ. ಹೆಸರು ಅನಿಲ್. ಅಂದ ಹಾಗೆ ಮುಕೇಶ್ ಜನಿಸಿದ್ದು ಯೆಮೆನ್ ನ ಆಡೆನ್ ನಲ್ಲಿ; ಏಪ್ರಿಲ್ 19, 1957. ಸದ್ಯಕ್ಕೆ ವಾಸ ಇರುವುದು ಮುಂಬೈ. ಕೆಮಿಕಲ್ ಎಂಜಿನಿಯರಿಂಗ್ ಮಾಡಿದ್ದು, ಎಂಬಿಎ ಅರ್ಧಕ್ಕೆ ಬಿಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳೆಂದರೆ ಅಚ್ಚುಮೆಚ್ಚು. ವಾರದಲ್ಲಿ ಮೂರು ಸಿನಿಮಾ ನೋಡುತ್ತಾರಂತೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮಾಲೀಕ ಮತ್ತು ಅಧ್ಯಕ್ಷರಾದ ಮುಕೇಶ್, ಕೆಲ ವರ್ಷಗಳ ಹಿಂದೆ ಟೆಲಿಕಾಂ ವಲಯಕ್ಕೂ ಕಾಲಿರಿಸಿದ್ದಾರೆ.


* ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ


* ವಿಶ್ವದ 13ನೇ ಶ್ರೀಮಂತ


* ವಯಸ್ಸು: 62


* ಸಂಪತ್ತಿನ ಮೂಲ: ಪೆಟ್ರೋಕೆಮಿಕಲ್ಸ್, ತೈಲ, ಟೆಲಿಕಾಂ


* ಒಟ್ಟು ಆಸ್ತಿ ಮೌಲ್ಯ: 56.6 ಬಿಲಿಯನ್ ಅಮೆರಿಕನ್ ಡಾಲರ್

 

 

ಅಜೀಂ ಪ್ರೇಮ್ ಜೀ

ಅಜೀಂ ಪ್ರೇಮ್ ಜೀ

ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಅಜೀಂ ಪ್ರೇಮ್ ಜೀ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ. ವಿಪ್ರೋ ಲಿಮಿಟೆಡ್ ನ ಅಧ್ಯಕ್ಷರು. ಶತಕೋಟ್ಯಧಿಪತಿಯಾದ ಇವರು ತಮ್ಮ ದಾನ ಕಾರ್ಯಗಳಿಂದಲೂ ಖ್ಯಾತಿ ಪಡೆದಿದ್ದಾರೆ. ಕರ್ನಾಟಕದ ಅತ್ಯಂತ ಶ್ರೀಮಂತ ಎಂಬ ಶ್ರೇಯವೂ ಇವರಿಗಿದೆ. ಪದ್ಮಭೂಷಣ, ಪದ್ಮವಿಭೂಷಣ ಗೌರವಗಳನ್ನು ಭಾರತ ಸರ್ಕಾರದಿಂದ ಪಡೆದಿದ್ದಾರೆ. 24ನೇ ಜುಲೈ 1945ರಲ್ಲಿ ಜನಿಸಿದ ಇವರು, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪ್ರೇಮ್ ಜೀ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. 1966 ತಮ್ಮ ತಂದೆಯ ಸಾವಿನ ನಂತರ ಕುಟುಂಬದ ಉದ್ಯಮದ ಜವಾಬ್ದಾರಿ ವಹಿಸಿಕೊಂಡರು.

* ಜಗತ್ತಿನ 55ನೇ ಶ್ರೀಮಂತ ವ್ಯಕ್ತಿ

* ವಯಸ್ಸು 74

* ಸಂಪತ್ತಿನ ಮೂಲ- ಸಾಫ್ಟ್ ವೇರ್ ಸೇವೆಗಳು

* ಒಟ್ಟು ಆಸ್ತಿ ಮೌಲ್ಯ: 22.6 ಬಿಲಿಯನ್ ಅಮೆರಿಕನ್ ಡಾಲರ್

 

ಗೌತಮ್ ಅದಾನಿ

ಗೌತಮ್ ಅದಾನಿ

ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ. ಅದಾನಿ ಗ್ರೂಪ್ ನ ಸ್ಥಾಪಕರು ಮತ್ತು ಅಧ್ಯಕ್ಷರು. ಅವರು ಅದಾನಿ ಫೌಂಡೇಷನ್ ನ ಅಧ್ಯಕ್ಷರೂ ಹೌದು. ಇದರ ಮೂಲಕ ಸಮಾಜ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅದಾನಿ ಪೋರ್ಟ್ಸ್ ಮತ್ತು ಎಸ್ ಇಜೆಡ್ ಲಿಮಿಟೆಡ್ ನಲ್ಲಿ 66 ಪರ್ಸೆಂಟ್ ಪಾಲು, ಅದಾನಿ ಎಂಟರ್ ಪ್ರೈಸಸ್ ನಲ್ಲಿ 75 ಪರ್ಸೆಂಟ್, ಅದಾನಿ ಪವರ್ ನಲ್ಲಿ 73 ಪರ್ಸೆಂಟ್ ಮತ್ತು ಅದಾನಿ ಟ್ರಾನ್ಸ್ ಮಿಷನ್ ನಲ್ಲಿ 75% ಪಾಲು ಹೊಂದಿದ್ದಾರೆ ಗೌತಮ್ ಅದಾನಿ. ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ 4ನೇ ಸ್ಥಾನದಲ್ಲಿದ್ದಾರೆ.

* ಒಟ್ಟು ಆಸ್ತಿ ಮೌಲ್ಯ: 15.7 ಬಿಲಿಯನ್ ಅಮೆರಿಕನ್ ಡಾಲರ್

* ವಯಸ್ಸು: 57

* ಜನ್ಮ ದಿನಾಂಕ: 24 ಜೂನ್ 1962

* ವಾಸ: ಗುಜರಾತ್

* ಸಂಪತ್ತಿನ ಮೂಲ: ಕಮಾಡಿಟೀಸ್, ಮೂಲಸೌಕರ್ಯ

 

ಹಿಂದೂಜಾ ಸೋದರರು

ಹಿಂದೂಜಾ ಸೋದರರು

ಭಾರತದ ದೊಡ್ಡ ಕಂಪೆನಿಗಳ ಪೈಕಿ ಹಿಂದೂಜಾ ಗ್ರೂಪ್ ಕೂಡ ಒಂದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಪೆನಿಯು ಕಾರ್ಯ ನಿರ್ವಹಿಸುತ್ತಿದೆ. ಸದ್ಯಕ್ಕೆ ಕಂಪೆನಿಯನ್ನು ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕಂಪೆನಿಯನ್ನು ಹುಟ್ಟುಹಾಕಿದ್ದು ಪರ್ಮಾನಂದ್ ದೀಪ್ ಚಂದ್ ಹಿಂದೂಜಾ. ಭಾರತೀಯರೇ ಆದರೂ ಹಿಂದೂಜಾ ಗ್ರೂಪ್ ಗೆ ವಿದೇಶದಲ್ಲಿ ಯಶಸ್ಸು ದೊರೆತಿದೆ. ಕಂಪೆನಿಯ ಕೇಂದ್ರ ಕಚೇರಿ ಲಂಡನ್ ನಲ್ಲಿದೆ. ಆ ಕಾರಣದಿಂದಲೇ ಏನೋ ಬ್ರಿಟನ್ ನ ಅತ್ಯಂತ ಶ್ರೀಮಂತ ಸಂಸ್ಥೆಗಳಲ್ಲಿ ಹಿಂದೂಜಾ ಕೂಡ ಸ್ಥಾನ ಪಡೆದುಕೊಂಡಿದೆ. ಹಿಂದೂಜಾ ಗ್ರೂಪ್ ನ ನಾಲ್ವರು ಸೋದರರು ನಿರ್ವಹಿಸುತ್ತಿದ್ದಾರೆ. ಆ ಗ್ರೂಪ್ ನಲ್ಲಿ ಟ್ರಕ್, ಲುಬ್ರಿಕೆಂಟ್ಸ್, ಬ್ಯಾಂಕಿಂಗ್, ಕೇಬಲ್ ಟೀವಿ ವ್ಯವಹಾರ ಎಲ್ಲ ಇದೆ.

* ಆಸ್ತಿ ಮೌಲ್ಯ: 16 ಬಿಲಿಯನ್ ಅಮೆರಿಕನ್ ಡಾಲರ್

* ಸಂಪತ್ತಿನ ಮೂಲ: ವಿವಿಧ ಆದಾಯ ಮೂಲಗಳಿವೆ

* ವಾಸ್ತವ್ಯ: ಲಂಡನ್, ಯುನೈಟೆಡ್ ಕಿಂಗ್ ಡಮ್

 

ಪಲ್ಲೋಂಜಿ ಶಾಪೂರ್ ಜೀ ಮಿಸ್ತ್ರಿ

ಪಲ್ಲೋಂಜಿ ಶಾಪೂರ್ ಜೀ ಮಿಸ್ತ್ರಿ

ಶಾಪೂರ್ ಜಿ ಪಲ್ಲೋಂಜಿ ಗ್ರೂಪ್ ಅಧ್ಯಕ್ಷ ಪಲ್ಲೋಂಜಿ ಮಿಸ್ತ್ರಿ. ಭಾರತೀಯ ಉದ್ಯಮಿ, ನಿರ್ಮಾಣ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಟಾಟಾ ಗ್ರೂಪ್ ನಲ್ಲಿ ಇವರನ್ನು ಫ್ಯಾಂಟಮ್ ಆಫ್ ಬಾಂಬೆ ಹೌಸ್ ಅಂತಲೇ ಕರೆಯಲಾಗುತ್ತದೆ. ಅವರ ಬಳಿ ಟಾಟಾ ಗ್ರೂಪ್ ನ ಹದಿನೆಂಟು ಪರ್ಸೆಂಟ್ ಷೇರುಗಳಿವೆ. ಶಾಪೂರ್ ಜಿ ಪಲ್ಲೋಂಜಿ ಕನ್ ಸ್ಟ್ರಕ್ಷನ್ ಲಿಮಿಟೆಡ್, ಫೋರ್ಬ್ಸ್ ಟೆಕ್ಸ್ ಟೈಲ್ಸ್, ಯುರೇಕಾ ಫೋರ್ಬ್ಸ್ ಗೆ ಅವರು ಮಾಲೀಕರೂ ಹೌದು. ತಾಜ್ ಹೋಟೆಲ್ ನ ಸ್ವಲ್ಪ ಭಾಗದ ಮಾಲೀಕತ್ವವೂ ಅವರ ಬಳಿ ಇದೆ. ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವ ನೀಡಲಾಗಿದೆ.

* ಆಸ್ತಿ ಮೌಲ್ಯ: 15.4 ಬಿಲಿಯನ್ ಅಮೆರಿಕನ್ ಡಾಲರ್

* ವಯಸ್ಸು: 90

* ಸಂಪತ್ತಿನ ಮೂಲ: ನಿರ್ಮಾಣ

* ವಾಸ್ತವ್ಯ: ಮುಂಬೈ

 

ಉದಯ್ ಕೊಟಕ್

ಉದಯ್ ಕೊಟಕ್

ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ನ ಎಂ.ಡಿ. ಮತ್ತು ಸ್ಥಾಪಕರು ಉದಯ್ ಕೊಟಕ್. ಭಾರತದ ಮೂರನೇ ಅತ್ಯಂತ ಯಶಸ್ವಿ ಬ್ಯಾಂಕ್- ಕೊಟಕ್ ಬ್ಯಾಂಕ್. ಅದರ ಮಾರುಕಟ್ಟೆ ಬಂಡವಾಳ ಮೌಲ್ಯ 1,60,152 ಕೋಟಿ. ಜಮ್ನಾಲಾಲ್ ಬಜಾಜ್ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

* ಜನ್ಮ ದಿನಾಂಕ 15 ಮಾರ್ಚ್ 1959

* ವಾಸ್ತವ್ಯ: ಮುಂಬೈ

* ಆಸ್ತಿ ಮೌಲ್ಯ: 15.2 ಬಿಲಿಯನ್ ಅಮೆರಿಕನ್ ಡಾಲರ್

* ಆಸ್ತಿ ಮೂಲ: ಬ್ಯಾಂಕಿಂಗ್

 

 

ಶಿವ್ ನಾಡಾರ್

ಶಿವ್ ನಾಡಾರ್

ಎಚ್ ಸಿಎಲ್ ಹಾಗೂ ಶಿವ್ ನಾಡಾರ್ ಫೌಂಡೇಷನ್ ನ ಸ್ಥಾಪಕ ಮತ್ತು ಅಧ್ಯಕ್ಷರು ಶಿವ್ ನಾಡಾರ್. ದಾನ ಕಾರ್ಯಗಳ ಮೂಲಕವೂ ಭಾರತದಲ್ಲಿ ಖ್ಯಾತಿ ಪಡೆದಿದ್ದಾರೆ. ಭಾರತದ ಪ್ರಭಾವಿ ವ್ಯಕ್ತಿಗಳಲ್ಲಿ ಅವರಿಗೆ ಹದಿನಾರನೇ ಸ್ಥಾನ. ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವ ಸಿಕ್ಕಿದೆ. ಸದ್ಯಕ್ಕೆ ಭಾರತದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಅವರಿಗೂ ಸ್ಥಾನ ಇದೆ. ಶಿವ್ ನಾಡಾರ್ ಪದವಿ ಪೂರ್ಣಗೊಳಿಸಿದ್ದು ಕೊಯಮತ್ತೂರಿನಲ್ಲಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿಷಯದಲ್ಲಿ. 1976ರಲ್ಲಿ 1,87,000ದೊಂದಿಗೆ HCL ಆರಂಭಿಸಿದರು. ಅಧಿಕೃತವಾಗಿ ಅವರು ಎಚ್ ಸಿಎಲ್ ಟೆಕ್ನಾಲಜೀಸ್ ಮುನ್ನಡೆಸುತ್ತಾರೆ. ಸಾಫ್ಟ್ ವೇರ್ ಸೇವೆ ಒದಗಿಸುವ ಈ ಕಂಪೆನಿಯ ಆದಾಯ 8.9 ಬಿಲಿಯನ್ ಅಮೆರಿಕನ್ ಡಾಲರ್.

* ವಯಸ್ಸು - 74

* ಆದಾಯ ಮೂಲ- ಸಾಫ್ಟ್ ವೇರ್ ಸಂಸ್ಥೆ

* ವಾಸ್ತವ್ಯ- ನವದೆಹಲಿ

* ಆಸ್ತಿ ಮೌಲ್ಯ- 16.3 ಬಿಲಿಯನ್ ಅಮೆರಿಕನ್ ಡಾಲರ್

 

ರಾಧಾಕೃಷ್ಣ ದಾಮನಿ

ರಾಧಾಕೃಷ್ಣ ದಾಮನಿ

ಡಿಮಾರ್ಟ್ ಸೂಪರ್ ಮಾರ್ಕೆಟ್ ಜಾಲವನ್ನು ಸ್ಥಾಪಿಸಿದವರು ರಾಧಾಕೃಷ್ಣ ದಾಮನಿ. ಡಿಮಾರ್ಟ್ ಗೆ ಸೇರಿದ ತೊಂಬತ್ತೊಂದು ಸ್ಟೋರ್ಸ್ ಗಳು ಭಾರತದಲ್ಲಿ ಇವೆ. ಡಿಮಾರ್ಟ್ ನ ಮಾತೃ ಸಂಸ್ಥೆಯಾದ ಅವೆನ್ಯೂ ಸೂಪರ್ ಮಾರ್ಟ್ಸ್ ನಲ್ಲಿ 52ರಷ್ಟು ಪಾಲು ಹೊಂದಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಾಧಾಕೃಷ್ಣ ಅವರಿಗೆ ಫೋರ್ಬ್ಸ್ ಹನ್ನೊಂದನೇ ಸ್ಥಾನ ನೀಡಿದೆ. ಇದರ ಜತೆಗೆ ಅವರು ಯಶಸ್ವಿ ಹೂಡಿಕೆದಾರ, ದಲ್ಲಾಳಿ ಹಾಗೂ ಟ್ರೇಡರ್ ಕೂಡ ಹೌದು. ಅವರ ಆಸ್ತಿಯಲ್ಲಿ 156 ಕೋಣೆಯ ರಾಡಿಸನ್ ಬ್ಲೂ ರೆಸಾರ್ಟ್ ಕೂಡ ಒಳಗೊಂಡಿದೆ.

* ವಯಸ್ಸು- 65

* ಸಂಪತ್ತಿನ ಮೂಲ- ಹೂಡಿಕೆ, ರೀಟೇಲ್

* ಆಸ್ತಿ ಮೌಲ್ಯ- 18.4 ಬಿಲಿಯನ್ ಅಮೆರಿಕನ್ ಡಾಲರ್

* ವಾಸ್ತವ್ಯ- ಮುಂಬೈ

 

 

ಗೋದ್ರೆಜ್ ಕುಟುಂಬ

ಗೋದ್ರೆಜ್ ಕುಟುಂಬ

ಭಾರತದ ಆರ್ಥಿಕತೆಯ ಎಲ್ಲ ಸೆಗ್ಮೆಂಟ್ ಗಳಲ್ಲೂ ಕಾಣಿಸಿಕೊಳ್ಳುವ ಕಂಪೆನಿ ಅಂದರೆ ಗೋದ್ರೆಜ್. ಪಿರೋಜ್ ಶಾ, ಅರ್ದೆಶಿರ್ ಗೋದ್ರೆಜ್ ಇವರಿಬ್ಬರು ಗೋದ್ರೆಜ್ ಕಂಪೆನಿ ಸ್ಥಾಪಕರು. ಅದಿ ಬುರ್ಜೋರ್ ಜಿ ಗೋದ್ರೆಜ್ ಗ್ರೂಪ್ ನ ಅಧ್ಯಕ್ಷರು ಮತ್ತು ಕುಟುಂಬದ ಮುಖ್ಯಸ್ಥರು. 2011ರ ಏಪ್ರಿಲ್ ನಿಂದ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ನ ಅಧ್ಯಕ್ಷರಾಗಿದ್ದಾರೆ. ಸದ್ಯಕ್ಕೆ ಗೋದ್ರೆಜ್ ಕುಟುಂಬವು ಗೋದ್ರೆಜ್ ಗ್ರೂಪ್ ಅನ್ನು 4.7 ಬಿಲಿಯನ್ ಅಮೆರಿಕನ್ ಡಾಲರ್ ಆದಾಯದೊಂದಿಗೆ ವ್ಯವಹಾರ ನಿರ್ವಹಣೆ ಮಾಡುತ್ತಿದೆ. ಈ ಕುಟುಂಬಕ್ಕೆ ಮುಂಬೈ ಉಪನಗರದಲ್ಲಿ ಭಾರೀ ದೊಡ್ಡ ಪ್ರಮಾಣದ ಭೂಮಿ ಇದೆ.

* ಆಸ್ತಿ ಮೌಲ್ಯ- 12 ಬಿಲಿಯನ್ ಅಮೆರಿಕನ್ ಡಾಲರ್

* ಸಂಪತ್ತಿನ ಮೂಲ- ಗೋದ್ರೆಜ್ ಗ್ರೂಪ್

* ವಾಸ್ತವ್ಯ- ಮುಂಬೈ

 

ಲಕ್ಷ್ಮೀ ಮಿತ್ತಲ್

ಲಕ್ಷ್ಮೀ ಮಿತ್ತಲ್

ಭಾರತೀಯ ಉಕ್ಕು ಉದ್ಯಮದ ದೊಡ್ಡ ಹೆಸರು ಲಕ್ಷ್ಮೀ ನಿವಾಸ್ ಮಿತ್ತಲ್. ಅರ್ಸೆಲಾರ್ ಮಿತ್ತಲ್ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಅದರ ಆದಾಯ 76 ಬಿಲಿಯನ್ ಅಮೆರಿಕನ್ ಡಾಲರ್ ಇದೆ. 2007ನೇ ಇಸವಿಯಲ್ಲಿ ಅವರು ಯುರೋಪ್ ನಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಹಲವು ಕಂಪೆನಿಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಇದೆ. ಸಂಪ್ರದಾಯಸ್ಥ ಮಾರವಾರಿ ಕುಟುಂಬದಲ್ಲಿ ಜನಿಸಿದ ಅವರು ಕಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿ.ಕಾಂ., ಪದವಿ ಪಡೆದಿದ್ದಾರೆ.

* ವಯಸ್ಸು- 69

* ಒಟ್ಟು ಆಸ್ತಿ ಮೌಲ್ಯ- 12.4 ಬಿಲಿಯನ್ ಅಮೆರಿಕನ್ ಡಾಲರ್

* ಆದಾಯ ಮೂಲ- ಉಕ್ಕು

* ವಾಸ್ತವ್ಯ- ಲಂಡನ್, ಯುನೈಟೆಡ್ ಕಿಂಗ್ ಡಮ್

 

English summary

India's Top 10 Famous Businessmen

Here is the list of India's top 10 famous businessmen.
Story first published: Thursday, February 13, 2020, 20:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X