For Quick Alerts
ALLOW NOTIFICATIONS  
For Daily Alerts

2020-21ನೇ ಸಾಲಿನ ಇಪಿಎಫ್‌ ಬಡ್ಡಿ ವಿಳಂಬ: ತಾಳ್ಮೆಯಿಂದಿರಿ ಎಂದ ಇಲಾಖೆ

|

ಸಾಮಾಜಿಕ ಭದ್ರತಾ ಯೋಜನೆ ಇಪಿಎಫ್ ಅಥವಾ ಉದ್ಯೋಗಿ ಭವಿಷ್ಯ ನಿಧಿಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿರ್ವಹಿಸುತ್ತದೆ ಮತ್ತು ಇತರ ಎಲ್ಲ ಹೂಡಿಕೆ ಮಾರ್ಗಗಳಂತೆ ಬಡ್ಡಿ ಪಡೆಯುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ 2021 ರ ಅಂತ್ಯದ ಹಣಕಾಸು ವರ್ಷಕ್ಕೆ, ಇಪಿಎಫ್‌ಒ 8.5 ಪ್ರತಿಶತದಷ್ಟು ಬಡ್ಡಿದರವನ್ನು ಘೋಷಣೆ ಮಾಡಿದೆ. ಆದರೆ ಆ 8.5 ಪ್ರತಿಶತದಷ್ಟು ಬಡ್ಡಿದರವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಅರ್ಹ ಇಪಿಎಫ್ ಖಾತೆದಾರರ ಖಾತೆಗೆ ಇನ್ನೂ ಜಮಾ ಮಾಡಿಲ್ಲ.

 

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ಹಣಕಾಸು ವರ್ಷಕ್ಕೆ 2021 ರ ಜುಲೈ ತಿಂಗಳಿನ ಒಳಗೆ ಬಡ್ಡಿ ಮೊತ್ತವನ್ನು ಇಪಿಎಫ್ ಖಾತೆಗಳಿಗೆ ಜಮೆ ಮಾಡುವ ನಿರೀಕ್ಷೆಯಿತ್ತು. ಹಿಂದಿನ ಆರ್ಥಿಕ ವರ್ಷದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗ ಮತ್ತು ಹಲವಾರು ಹಿಂಪಡೆಯುವಿಕೆಗಳಿಂದಾಗಿ ಇಪಿಎಫ್‌ಒ ಚಂದಾದಾರರ ಇಪಿಎಫ್ ಖಾತೆಗಳಿಗೆ ಬಡ್ಡಿ ಮೊತ್ತವನ್ನು ಜಮಾ ಮಾಡುವುದರಲ್ಲಿ ವಿಳಂಬವನ್ನು ಎದುರಿಸಬೇಕಾಯಿತು ಎಂಬುದನ್ನು ನೆನಪಿಸಿಕೊಳ್ಳಬಹುದು.

 ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ? ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ವರದಿಯ ಪ್ರಕಾರ, ಈ ಹಿಂದೆ ಇಪಿಎಫ್‌ಒನ ಕೇಂದ್ರ ಟ್ರಸ್ಟಿಗಳ ಮಂಡಳಿಯು ಶ್ರೀನಗರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರು. ವರದಿಯನ್ನು ಖಾಸಗಿ ಸುದ್ದಿ ಚಾನೆಲ್ ಪ್ರಸಾರ ಮಾಡಿತ್ತು. ಆದರೆ ಬಡ್ಡಿ ಮೊತ್ತವನ್ನು ಯಾವಾಗ ಜಮಾ ಮಾಡಲಾಗುವುದು ಎಂಬುದರ ದಿನಾಂಕವನ್ನು ನಿರ್ದಿಷ್ಟಪಡಿಸಿಲ್ಲ.

 ಇನ್ನೂ ಖಾತೆಗೆ ಜಮೆಯಾಗದ ಇಪಿಎಫ್‌

ಇನ್ನೂ ಖಾತೆಗೆ ಜಮೆಯಾಗದ ಇಪಿಎಫ್‌

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ 2020-21ನೇ ಸಾಲಿನ ಇಪಿಎಫ್ ಮೇಲಿನ ಬಡ್ಡಿ ವಿಳಂಬವಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪೋಸ್ಟ್‌ ಮಾಡುತ್ತಿದ್ದಾರೆ. "31 ಜುಲೈರ ಒಳಗೆ ಬಡ್ಡಿ ಮೊತ್ತವನ್ನು ಇಪಿಎಫ್‌ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು 21 ರಂದು ಮಾಧ್ಯಮಗಳು ಪ್ರಕಟಿಸಿದರೂ 20-21ರ ಹಣಕಾಸು ವರ್ಷಕ್ಕೆ ಬಡ್ಡಿಯನ್ನು ಇನ್ನೂ ಕೂಡಾ ನೌಕರರ ಭವಿಷ್ಯ ನಿಧಿ ಸಂಸ್ಥೆ ಹಾಕಿಲ್ಲ," ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಇಪಿಎಫ್‌ಒ, "ತಾಳ್ಮೆಯನ್ನು ಕಾಯ್ದುಕೊಳ್ಳಿ" ಎಂದು ಮನವಿ ಮಾಡಿದೆ.

ಯಾವ ಆಧಾರ್‌ ಮಾನ್ಯ?: ವಿವಿಧ ನಮೂನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆಯಾವ ಆಧಾರ್‌ ಮಾನ್ಯ?: ವಿವಿಧ ನಮೂನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

 ದಯವಿಟ್ಟು ತಾಳ್ಮೆ ಕಾಯ್ದುಕೊಳ್ಳಿ ಎಂದ ಇಪಿಎಫ್‌ಒ
 

ದಯವಿಟ್ಟು ತಾಳ್ಮೆ ಕಾಯ್ದುಕೊಳ್ಳಿ ಎಂದ ಇಪಿಎಫ್‌ಒ

ಇಪಿಎಫ್ ಸ್ಕೀಮ್ ಚಂದಾದಾರರು ಸಂಸ್ಥೆಯ ವಿರುದ್ದವಾಗಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಇಪಿಎಫ್‌ಒ,

ಇಪಿಎಫ್ ಸ್ಕೀಮ್ ಚಂದಾದಾರರು ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. "ಈ ಬಡ್ಡಿ ಮೊತ್ತವನ್ನು ಇಪಿಎಫ್ ಸ್ಕೀಮ್ ಚಂದಾದಾರರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಬಡ್ಡಿ ಮೊತ್ತವನ್ನು ಖಾತೆಗೆ ಜಮೆ ಆಗಿರುವುದು ತಿಳಿಯಲಿದೆ. ಯಾವಾಗ ಬಡ್ಡಿಯನ್ನು ಜಮಾ ಮಾಡಲಾಗುತ್ತದೆಯೋ ಆಗ ಅದನ್ನು ಒಟ್ಟುಗೂಡಿಸಲಾಗುತ್ತದೆ ಮತ್ತು ಪೂರ್ಣವಾಗಿ ಪಾವತಿಸಲಾಗುತ್ತದೆ. ಯಾವುದೇ ಬಡ್ಡಿ ನಷ್ಟವಾಗುವುದಿಲ್ಲ. ದಯವಿಟ್ಟು ತಾಳ್ಮೆ ಕಾಯ್ದುಕೊಳ್ಳಿ," ಎಂದು ಮನವಿ ಮಾಡಿದೆ.
 ಇಪಿಎಫ್‌ಗಾಗಿ ಕಾಯುತ್ತಿರುವ 6 ಕೋಟಿ ಚಂದಾದಾರರು

ಇಪಿಎಫ್‌ಗಾಗಿ ಕಾಯುತ್ತಿರುವ 6 ಕೋಟಿ ಚಂದಾದಾರರು

ಈ ಯೋಜನೆಯ 6 ಕೋಟಿ ಚಂದಾದಾರರು ಇಪಿಎಫ್ ಬಡ್ಡಿದರಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆ, ಮಾಧ್ಯಮ ವರದಿಗಳು ಭವಿಷ್ಯ ನಿಧಿ ಸಂಸ್ಥೆಯು ಜುಲೈ ಅಂತ್ಯದ ವೇಳೆಗೆ 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್ ಬಡ್ಡಿದರವನ್ನು ಕ್ರೆಡಿಟ್ ಮಾಡುತ್ತದೆ ಎಂದು ಸೂಚಿಸಿತ್ತು. ಇಪಿಎಫ್ ಮೇಲೆ ಪ್ರಸ್ತುತ ಬಡ್ಡಿದರವು 8.5 ಶೇಕಡ ಆಗಿದ್ದು ಇದು ಕಳೆದ ಏಳು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. 2018-19ರ ಆರ್ಥಿಕ ವರ್ಷದಲ್ಲಿ ಇಪಿಎಫ್ 8.65 ಶೇಕಡ ಬಡ್ಡಿಯನ್ನು ಪಡೆದಿದೆ.

ಐಸಿಐಸಿಐ ಬ್ಯಾಂಕ್‌ನಲ್ಲಿ ಐಮೊಬೈಲ್ ಪೇ ಆಪ್ ಮೂಲಕ ಪಿಪಿಎಫ್ ಖಾತೆ ತೆರೆಯುವುದು ಹೇಗೆ?ಐಸಿಐಸಿಐ ಬ್ಯಾಂಕ್‌ನಲ್ಲಿ ಐಮೊಬೈಲ್ ಪೇ ಆಪ್ ಮೂಲಕ ಪಿಪಿಎಫ್ ಖಾತೆ ತೆರೆಯುವುದು ಹೇಗೆ?

ಬಡ್ಡಿ ಜಮೆಯಾಗಿದಯೇ ಎಂದು ತಿಳಿಯುವುದು ಹೇಗೆ?

ಇಪಿಎಫ್ ಚಂದಾದಾರರು ಇಪಿಎಫ್‌ಒ ಸೈಟ್‌ಗೆ ಭೇಟಿ ನೀಡುವ ಮೂಲಕ ಬಡ್ಡಿ ಕ್ರೆಡಿಟ್‌ನ ಅಪ್‌ಡೇಟ್ ಪಡೆಯಬಹುದು ಅಥವಾ ಬಾಕಿ ಮೊತ್ತವನ್ನು ಮಿಸ್ಡ್ ಕಾಲ್ ಮತ್ತು ಎಸ್‌ಎಂಎಸ್ ಸೌಲಭ್ಯದ ಮೂಲಕವೂ ತಿಳಿದುಕೊಳ್ಳಬಹುದು. ಗಮನಾರ್ಹವಾಗಿ ಇಪಿಎಫ್ ಚಂದಾದಾರರಾಗಿ ನಿಮ್ಮ ಯುಎಎನ್ ಅಥವಾ ಯುನಿವರ್ಸಲ್ ಅಕೌಂಟ್ ನಂಬರ್, ಅಂದರೆ ನಿಮ್ಮ ಸಂಬಳದ ಸ್ಲಿಪ್‌ನಲ್ಲಿ ಕೂಡ ಈ ಇಪಿಎಫ್‌ ಮೊತ್ತವನ್ನು ನಮೂದಿಸಿರಬೇಕು. ಬ್ಯಾಲೆನ್ಸ್ ವಿಚಾರಣೆ ಮತ್ತು ಇತರ ವಿವಿಧ ಇಪಿಎಫ್ ಸಂಬಂಧಿತ ಸೇವೆಗಳನ್ನು ಪ್ರವೇಶಿಸಲು, ನೀವು ನಿಮ್ಮ ಯುಎಎನ್ ಅನ್ನು ಸಕ್ರಿಯ ಸ್ಥಿತಿಯಲ್ಲಿ ಹೊಂದಿರಬೇಕು.

English summary

Interest On EPF For FY 2020-21 Delayed: Please maintain patience Says Department

Interest On EPF For FY 2020-21 Delayed: The process is in pipeline. There would be no loss of interest. Please maintain patience says EPFO.
Story first published: Wednesday, August 11, 2021, 15:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X