For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರ ಎಫ್‌ಡಿ ಬಡ್ಡಿದರ ಏರಿಸಿದೆ ಈ 3 ಬ್ಯಾಂಕ್‌

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಸೆಂಬರ್ 7ರಂದು ರೆಪೋ ದರವನ್ನು ಏರಿಕೆ ಮಾಡಿದ ಬಳಿಕ ಮತ್ತೆ ಹಲವಾರು ಬ್ಯಾಂಕ್‌ಗಳು ಗೃಹ, ಮೊದಲಾದ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುತ್ತಿದೆ. ಹಾಗೆಯೇ ಫಿಕ್ಸಿಡ್ ಡೆಪಾಸಿಟ್‌ನ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡುತ್ತಿದೆ.

ಮೇ ತಿಂಗಳಿನಿಂದ ಈವರೆಗೆ ಒಟ್ಟು ಐದು ಬಾರಿ ರೆಪೋ ದರವನ್ನು ಹೆಚ್ಚಿಸಲಾಗಿದೆ. ಮೇ ತಿಂಗಳಲ್ಲಿ 40 ಮೂಲಾಂಕ, ಜೂನ್‌ನಲ್ಲಿ 50 ಮೂಲಾಂಕ, ಆಗಸ್ಟ್‌ನಲ್ಲಿ 50 ಮೂಲಾಂಕ, ಸೆಪ್ಟೆಂಬರ್‌ನಲ್ಲಿ 50 ಮೂಲಾಂಕ ಹಾಗೂ ಡಿಸೆಂಬರ್‌ನಲ್ಲಿ 35 ಮೂಲಾಂಕ ಏರಿಕೆಯಾಗಿದೆ. ಆಕ್ಸಿಸ್ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. ಮುಖ್ಯವಾಗಿ ಹಿರಿಯ ನಾಗರಿಕರ ಎಫ್‌ಡಿ ದರವನ್ನು ಹೆಚ್ಚಳ ಮಾಡಿದೆ.

Year Ender 2022: ಈ ವರ್ಷದ ಬೆಸ್ಟ್ ಬ್ಯಾಂಕ್ ಡೆಪಾಸಿಟ್‌ಗಳು, 2023ರಲ್ಲೂ ಹೂಡಿಕೆ ಉತ್ತಮವೇ?Year Ender 2022: ಈ ವರ್ಷದ ಬೆಸ್ಟ್ ಬ್ಯಾಂಕ್ ಡೆಪಾಸಿಟ್‌ಗಳು, 2023ರಲ್ಲೂ ಹೂಡಿಕೆ ಉತ್ತಮವೇ?

ಜನ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರು ಎಫ್‌ಡಿ ಮೇಲೆ ಶೇಕಡ 8.8ರಷ್ಟು ಬಡ್ಡಿದರವನ್ನು ಪಡೆಯಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರು ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 3.50ರಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಡಿಸೆಂಬರ್ 15, 2022ರಿಂದ ಜಾರಿಗೆ ಬರುವಂತೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಎಫ್‌ಡಿ ಬಡ್ಡಿದರ ಹೆಚ್ಚಾಗಿದೆ. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ 2 ವರ್ಷದಿಂದ 3 ವರ್ಷಗಳ ಎಫ್‌ಡಿ ಮೇಲೆ ಶೇಕಡ 7.85ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ 2ರಿಂದ 3 ವರ್ಷದ ಅವಧಿಯ ಎಫ್‌ಡಿ ಮೇಲೆ ಶೇಕಡ 8.80ರಷ್ಟು ಬಡ್ಡಿದರವನ್ನು ನೀಡುತ್ತದೆ. ಒಂದು ವರ್ಷದ ಅವಧಿಯ ಎಫ್‌ಡಿ ಮೇಲೆ ಶೇಕಡ 8.20ರಷ್ಟು ಬಡ್ಡಿದರವನ್ನು ನೀಡುತ್ತದೆ. 5 ವರ್ಷದ ಎಫ್‌ಡಿ ಮೇಲೆ ಶೇಕಡ 8.2ರಷ್ಟು ಬಟ್ಟಿದರ ಹಾಗೂ ಒಂದರಿಂದ 2 ವರ್ಷದ ಎಫ್‌ಡಿ ಮೇಲೆ ಶೇಕಡ 8.45ರಷ್ಟು ಬಡ್ಡಿದರವನ್ನು ಏರಿಸಿದೆ. 3-5 ವರ್ಷದ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವು ಶೇಕಡ 8.3 ಆಗಿದೆ.

RBI Repo Rate : ಎಫ್‌ಡಿ ಹೊಂದಿರುವವರಿಗೆ ಸಿಹಿಸುದ್ದಿ: ರೆಪೋ ಏರಿಕೆ, ಹೂಡಿಕೆಗೆ ಸಕಾಲವೇ?RBI Repo Rate : ಎಫ್‌ಡಿ ಹೊಂದಿರುವವರಿಗೆ ಸಿಹಿಸುದ್ದಿ: ರೆಪೋ ಏರಿಕೆ, ಹೂಡಿಕೆಗೆ ಸಕಾಲವೇ?

 ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್‌ ತನ್ನ ಎಲ್ಲ ಅವಧಿಯ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದೆ. ಡಿಸೆಂಬರ್ 15, 2022ರಿಂದ ಎಫ್‌ಡಿ ಬಡ್ಡಿದರವ ಏರಿಸಲಾಗಿದೆ. 390 ದಿನಗಳ (12 ತಿಂಗಳು 25 ದಿನಗಳ) ಎಫ್‌ಡಿ ಬಡ್ಡಿದರವನ್ನು ಶೇಕಡ 7ಕ್ಕೆ ಏರಿಸಲಾಗಿದೆ. 391 ದಿನಕ್ಕಿಂತ ಕಡಿಮೆ ಅವಧಿಯ ಅಥವಾ 23 ತಿಂಗಳ ಎಫ್‌ಡಿ ಮೇಲೆ ಶೇಕಡ 7ರಷ್ಟು ಎಫ್‌ಡಿ ದರವಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಹಿರಿಯ ನಾಗರಿಕರಿಗೆ 390, 391 ದಿನ ಅಥವಾ 23 ತಿಂಗಳ ಎಫ್‌ಡಿ ಮೇಲೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ. 365-389 ದಿನಗಳ ಡೆಪಾಸಿಟ್ ಮೇಲೆ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ.

 ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ

6 ತಿಂಗಳು ಮತ್ತು 9 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡುತ್ತದೆ. 9 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 6ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಒಂದು ವರ್ಷ, 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 7ದಿನದಿಂದ 10 ವರ್ಷದ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಶೇಕಡ 3.5ರಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡುತ್ತದೆ.

English summary

Jana, Kotak, Axis Bank Hikes Senior Citizen Fixed Deposit Interest Rate, Details in Kannada

The fixed deposit interest rates of Jana Small Finance Bank, Kotak Mahindra Bank, Axis bank have increased. Details in Kannada.
Story first published: Saturday, December 17, 2022, 11:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X