For Quick Alerts
ALLOW NOTIFICATIONS  
For Daily Alerts

ಓಣಂ ಬಂಪರ್ ಲಾಟರಿ: 40 ಕೋಟಿ ರೂಪಾಯಿ ಮೇಲೆ ಕೇರಳ ಸರ್ಕಾರ ಚಿತ್ತ

|

ಕೇರಳದಲ್ಲಿ ಲಾಟರಿ ಮೂಲಕ ಹಣವನ್ನು ಪಡೆದವರು, ಹಣವನ್ನು ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಪ್ರತಿ ವರ್ಷ ಕೇರಳದಲ್ಲಿ ಓಣಂ ಬಂಪರ್ ಲಾಟರಿಯನ್ನು ಮಾರಾಟ ಮಾಡಲಾಗುತ್ತದೆ. ಈ ವರ್ಷದಲ್ಲಿ ಓಣಂ ಬಂಪರ್ ಲಾಟರಿ ಟಿಕೆಟ್ ಮಾರಾಟದ ಮೂಲಕ ಕೇರಳ ಸರ್ಕಾರವು 40 ಕೋಟಿ ರೂಪಾಯಿಯ ಮೇಲೆ ಚಿತ್ತ ಇರಿಸಿದೆ.

 

ಸರ್ಕಾರವು ಈ ಟಿಕೆಟ್‌ನ ಪ್ರಥಮ ಬಹುಮಾನವನ್ನು ರೂಪಾಯಿ 25 ಲಕ್ಷಕ್ಕೆ ಏರಿಕೆ ಮಾಡಿದೆ. ಈ ಸಂದರ್ಭದಲ್ಲೇ ಓಣಂ ಬಂಪರ್ ಲಾಟರಿ ಟಿಕೆಟ್ ದರವನ್ನು ಕೂಡಾ ಏರಿಕೆ ಮಾಡಲಾಗಿದೆ. ಒಂದು ಟಿಕೆಟ್ ದರವು ಪ್ರಸ್ತುತ 500 ರೂಪಾಯಿ ಆಗಿದೆ. ಎಲ್ಲ ಲಾಟರಿಗಳು ಮಾರಾಟವಾಗಲಿದೆ ಎಂಬ ಭರವಸೆಯನ್ನು ಸರ್ಕಾರ ಹೊಂದಿದೆ.

ಕೇರಳ ಲಾಟರಿ: 'ಕಾರುಣ್ಯ KR 557' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಕಾರುಣ್ಯ KR 557' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಕಳೆದ ವರ್ಷ ಹಾನಿಯಾದ ಎಂಟು ಲಾಟರಿಯನ್ನು ಹೊರತುಪಡಿಸಿ ಎಲ್ಲಾ 54 ಲಕ್ಷ ಟಿಕೆಟ್ ಮಾರಾಟವಾಗಿದೆ. ಆ ಸಂದರ್ಭದಲ್ಲಿ ಒಂದು ಟಿಕೆಟ್ ಬೆಲೆ 300 ರೂಪಾಯಿ ಆಗಿತ್ತು. ಈ ವರ್ಷ ಟಿಕೆಟ್ ಬೆಲೆ ಹೆಚ್ಚಾದರೂ ಬಹುಮಾನ ಹೆಚ್ಚಾಗಿರುವ ಕಾರಣದಿಂದಾಗಿ ಎಲ್ಲ ಟಿಕೆಟ್ ಮಾರಾಟ ಆಗಬಹುದು ಎಂಬ ಭರವಸೆಯನ್ನು ಕೇರಳ ರಾಜ್ಯ ಲಾಟರಿ ಇಲಾಖೆಯು ಹೊಂದಿದೆ.

ಕೇರಳ ರಾಜ್ಯದಲ್ಲಿ ಪ್ರತಿದಿನ ಬೇರೆ ಬೇರೆ ಹೆಸರಿನಲ್ಲಿ ಮುದ್ರಣವಾಗುವ ಲಾಟರಿಯು ಮಾರಾಟವಾಗುತ್ತಿದೆ. ಆದರೆ ಇದು ಗಾಂಬ್ಲಿಂಗ್ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರವು ಪ್ರತಿ ದಿನ 1.8 ಕೋಟಿ ಟಿಕೆಟ್‌ಗಳನ್ನು ಮಾತ್ರ ಮುದ್ರಣ ಮಾಡಬೇಕು ಎಂದು ಆದೇಶಿಸಿದೆ.

 ಓಣಂ ಬಂಪರ್ ಲಾಟರಿ ಮುಖಬೆಲೆ, ಸರ್ಕಾರದ ನಿರೀಕ್ಷೆಯೇನು?

ಓಣಂ ಬಂಪರ್ ಲಾಟರಿ ಮುಖಬೆಲೆ, ಸರ್ಕಾರದ ನಿರೀಕ್ಷೆಯೇನು?

ಇನ್ನು ಮುಂಬರುವ ಓಣಂ ಬಂಪರ್ ಲಾಟರಿಯ ಮುಖಬೆಲೆಯು 396 ರೂಪಾಯಿ ಆಗಿದೆ. ಇನ್ನು ಉಳಿದವುಗಳು 109 ಅಥವಾ ಶೇಕಡ 28ರಷ್ಟು ಇರುವುದು ಜಿಎಸ್‌ಟಿ ಆಗಿದೆ. ಇದು ಸಮಾನಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಹಂಚಿಕೆ ಆಗುತ್ತದೆ. ಎಲ್ಲಾ 54 ಲಕ್ಷ ಟಿಕೆಟ್ ಮಾರಾಟವಾದರೆ ರಾಜ್ಯ ಸರ್ಕಾರವು ಕೇವಲ ಬಂಪರ್ ಲಾಟರಿ ಮೂಲಕ 30 ಲಕ್ಷ ರೂಪಾಯಿ ಪಡೆಯುವ ನಿರೀಕ್ಷೆ ಹೊಂದಿದೆ. ಬಹುಮಾನ, ಏಜೆಂಟ್ ಕಮಿಷನ್ ಎಲ್ಲಾ ಕಳೆದ ಬಳಿಕ ರಾಜ್ಯ ಸರ್ಕಾರದ ಲಾಟರಿ ಇಲಾಖೆಯು ಶೇಕಡ 5ರಿಂದ ಶೇಕಡ 8ರವರೆಗೆ ಅಂದರೆ ಸುಮಾರು 12 ಕೋಟಿ ರೂಪಾಯಿಯನ್ನು ಪಡೆಯಲಿದೆ. ಇದಕ್ಕೆ ಪ್ರತಿ ಟಿಕೆಟ್‌ನ ರೂಪಾಯಿ 30 ಸೇರ್ಪಡೆ ಮಾಡಿದಾಗ 40 ಕೋಟಿ ರೂಪಾಯಿ ಆಗಲಿದೆ. ಓಣಂ ಲಾಟರಿ ಯಶಸ್ವಿಯಾದರೆ ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿಯ ಪ್ರಥಮ ಬಹಮಾನವನ್ನು ರೂಪಾಯಿ 25 ಲಕ್ಷಕ್ಕೆ ಏರಿಕೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದ್ದರಿಂದ ಉಳಿದ ನಾಲ್ಕು ಬಂಪರ್ ಲಾಟರಿಗಳ ಬೆಲೆಯು ಕೂಡಾ ಹೆಚ್ಚಳವಾಗುವ ನಿರೀಕ್ಷೆ ಇದೆ.

ಕೇರಳ ಲಾಟರಿ: 'ನಿರ್ಮಲಾ NR 284' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ನಿರ್ಮಲಾ NR 284' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಕೇರಳದಲ್ಲಿ ಲಾಟರಿ ಇತಿಹಾಸ ಹೇಗಿದೆ?
 

ಕೇರಳದಲ್ಲಿ ಲಾಟರಿ ಇತಿಹಾಸ ಹೇಗಿದೆ?

ನವೆಂಬರ್ 1, 1967: ಮೊದಲ ಬಾರಿಗೆ ಕೇರಳ ಸರ್ಕಾರದಿಂದ ಲಾಟರಿ ಆರಂಭ, 50,000 ರೂಪಾಯಿ ಬಹುಮಾನ
1968 ಕ್ರಿಸ್‌ಮಸ್ ಬಂಪರ್: 1 ಲಕ್ಷ ಹಾಗೂ ಅಂಬಾಸಿಡರ್ ಕಾರು ಬಹುಮಾನ
ಜನವರಿ 1970: 2 ಲಕ್ಷ ರೂಪಾಯಿ ಬಹುಮಾನ
ಏಪ್ರಿಲ್ 1970: 3 ಲಕ್ಷ ರೂಪಾಯಿ ಬಹುಮಾನ
1970 ತಿರುವನಂ ಬಂಪರ್: 5 ಲಕ್ಷ ರೂಪಾಯಿ ಬಹುಮಾನ
1971 ಕ್ರಿಸ್‌ಮಸ್ ಬಂಪರ್: 10 ಲಕ್ಷ ರೂಪಾಯಿ ಬಹುಮಾನ
1977 ಬಂಪರ್: 15 ಲಕ್ಷ ರೂಪಾಯಿ ಬಹುಮಾನ
1983 ತಿರುವನಮ್ ಬಂಪರ್: 25 ಲಕ್ಷ ರೂಪಾಯಿ ಬಹುಮಾನ
1983 ಕ್ರಿಸ್‌ಮಸ್ ಬಂಪರ್: 27 ಲಕ್ಷ ರೂಪಾಯಿ ಬಹುಮಾನ
1986 ತಿರುವನಮ್ ಬಂಪರ್: 25 ಲಕ್ಷ ರೂಪಾಯಿ, ಮಾರುತಿ ಕಾರು ಬಹುಮಾನ
1991 ತಿರುವನಮ್ ಬಂಪರ್: 50 ಲಕ್ಷ ರೂಪಾಯಿ, ಮಾರುತಿ ಕಾರು ಬಹುಮಾನ
1997 ತಿರುವನಮ್ ಬಂಪರ್: 75 ಲಕ್ಷ ರೂಪಾಯಿ, ಮಾರುತಿ ಕಾರು ಬಹುಮಾನ

 

 ಓಣಕೊಡಿ ಆರಂಭವಾಗಿದ್ದು ಯಾವಾಗ?

ಓಣಕೊಡಿ ಆರಂಭವಾಗಿದ್ದು ಯಾವಾಗ?

2000 ತಿರುವನಮ್ ಬಂಪರ್: 1 ಕೋಟಿ ರೂಪಾಯಿ
2008 ತಿರುವನಮ್ ಬಂಪರ್: 2 ಕೋಟಿ ರೂಪಾಯಿ
2009 ತಿರುವನಮ್ ಬಂಪರ್: 1 ಕೋಟಿ ರೂಪಾಯಿ, 200 ಚಿನ್ನದ ನಾಣ್ಯ
2010 ತಿರುವನಮ್ ಬಂಪರ್: 2.5 ಕೋಟಿ ರೂಪಾಯಿ, 2.5 ಕೆಜಿ ಚಿನ್ನ
2011 ತಿರುವನಮ್ ಬಂಪರ್: 5 ಕೋಟಿ ರೂಪಾಯಿ
2012 ತಿರುವನಮ್ ಬಂಪರ್: 5 ಕೋಟಿ ರೂಪಾಯಿ, 1 ಕೆಜಿ ಚಿನ್ನ
2014 ತಿರುವನಮ್ ಬಂಪರ್: 6 ಕೋಟಿ ರೂಪಾಯಿ
2015 ತಿರುವನಮ್ ಬಂಪರ್: 7 ಕೋಟಿ ರೂಪಾಯಿ
2016 ತಿರುವನಮ್ ಬಂಪರ್: 8 ಕೋಟಿ ರೂಪಾಯಿ
2017 ತಿರುವನಮ್ ಬಂಪರ್: 10 ಕೋಟಿ ರೂಪಾಯಿ
2019 ತಿರುವನಮ್ ಬಂಪರ್: 12 ಕೋಟಿ ರೂಪಾಯಿ
2022 ತಿರುವನಮ್ ಬಂಪರ್: 25 ಕೋಟಿ ರೂಪಾಯಿ

English summary

Kerala Lottery: Kerala Government Eyes Rs 40 Crore through Onam Bumper Lottery Sale

Kerala Lottery: Kerela Government Eyes Rs 40 Crore through Onam Bumper Lottery Sale. Here;s History of Kerala Lottery Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X