For Quick Alerts
ALLOW NOTIFICATIONS  
For Daily Alerts

ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..

|

ಸಾಲ ಹಾಗೂ ಕ್ರೆಡಿಟ್‌ ಕಾರ್ಡ್ ಅರ್ಜಿದಾರರಿಗೆ ಎಷ್ಟು ಸಾಲವನ್ನು ನೀಡಬಹುದು ಎಂದು ಹಣಕಾಸು ಸಂಸ್ಥೆಗಳು ಕ್ರೆಡಿಟ್ ರಿಪೋರ್ಟ್ ಆಧಾರದ ಮೇಲೆ ನಿರ್ಧಾರ ಮಾಡುತ್ತದೆ. ಸಾಲದ ಬಡ್ಡಿ ದರವನ್ನು ಹೊಂದಿಸಲು ಕೂಡಾ ಈ ಕ್ರೆಡಿಟ್ ರಿಪೋರ್ಟ್ ಮಾಹಿತಿಯನ್ನು ಸಾಲದಾತರು ಹೆಚ್ಚಾಗಿ ಬಳಸುತ್ತಾರೆ. ಯಾವುದೇ ಬ್ಯಾಂಕುಗಳಿಂದ ನೀವು ಸಾಲ ಪಡೆಯುವುದಾದರೂ ಈ ಸಂದರ್ಭದಲ್ಲೂ ನಿಮ್ಮೆ ಕ್ರೆಡಿಟ್‌ ಸ್ಕೋರ್‌ ಬಹಳ ಮುಖ್ಯವಾಗಿದೆ. ಗೃಹ ಸಾಲದಿಂದ ಕಾರು ಸಾಲದವರೆಗೂ ಎಲ್ಲಾ ಸಾಲಕ್ಕೂ ಉತ್ತಮ ಕ್ರೆಡಿಟ್‌ ಸ್ಕೋರ್‌ ಅನ್ನು ಬಹಳ ಮುಖ್ಯ ಎಂದು ಪರಿಗಣನೆ ಮಾಡಲಾಗುತ್ತದೆ.

ನಿಮಗೆ ಎಷ್ಟು ಸಾಲ ನೀಡಬಹುದು ಎಂಬ ಅರ್ಹತೆಯನ್ನು ಅಥವಾ ನಿಮಗೆ ಎಷ್ಟು ಸಾಲವನ್ನು ಪಡೆಯಲು ಸಾಧ್ಯತೆ ಇದೆ ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಸರಳವಾದ ಮಾರ್ಗವೆಂದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ನೀವು ನಿಯಮಿತವಾಗಿ ಪರಿಶೀಲನೆ ಮಾಡುವುದು.

ಹೀಗೆ ನೀವು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ನಿಯಮಿತವಾಗಿ ಪರಿಶೀಲನೆ ಮಾಡುವುದರಿಂದಾಗಿ ನಿಮಗೆ ಕ್ರೆಡಿಟ್‌ ಸ್ಕೋರ್‌ ಅನ್ನು ಕೆಳಗೆ ಇಳಿಸಲು ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಿಮ್ಮ ಕ್ರೆಡಿಟ್‌ ರಿಪೋರ್ಟ್ ಪರಿಶೀಲನೆ ಮಾಡುವಾಗ ನೀವು ಯವುದನ್ನೆಲ್ಲಾ ಪರಿಶೀಲನೆ ಮಾಡಬೇಕು ಇಲ್ಲಿದೆ ಮಾಹಿತಿ ಮುಂದೆ ಓದಿ.

 ಕ್ರೆಡಿಟ್‌ ಅಕೌಂಟ್ಸ್‌ ಪರಿಶೀಲನೆ ಮಾಡಿ

ಕ್ರೆಡಿಟ್‌ ಅಕೌಂಟ್ಸ್‌ ಪರಿಶೀಲನೆ ಮಾಡಿ

ಕ್ರೆಡಿಟ್ ರಿಪೋರ್ಟ್‌ನಲ್ಲಿ ನಿಮ್ಮ ಪ್ರತಿ ಆರ್ಥಿಕ ವ್ಯವಹಾರ ಹಾಗೂ ಇತ್ತೀಚೆಗೆ ಮುಚ್ಚಲಾದ ಕ್ರೆಡಿಟ್‌ ಅಕೌಂಟ್‌ಗಳ ಮಾಹಿತಿ ಇರುತ್ತದೆ. ನಿಮಗೆ ಸಾಲ ನೀಡುವವರು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಪರಿಶೀಲನೆ ಮಾಡುತ್ತಾರೆ. ಆದ್ದರಿಂದ ನಿಮ್ಮ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಖಾತೆಯ ವಿವರಗಳನ್ನು ನವೀಕರಿಸಲಾಗಿದೆಯೇ ಮತ್ತು ಕ್ರೆಡಿಟ್ ರಿಪೋರ್ಟ್‌ನಲ್ಲಿ ನಿಖರವಾದ ವರದಿಯನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಯಾವುದೇ ತಪ್ಪಾದ ಮಾಹಿತಿ ಅಥವಾ ದೋಷವು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿ ಉಂಟು ಮಾಡಬಹುದು. ಭವಿಷ್ಯದಲ್ಲಿ ನಿಮ್ಮ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಹತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕ್ರೆಡಿಟ್‌ ಅಕೌಂಟ್ಸ್‌ ಅನ್ನು ನೀವು ನಿರಂತರವಾಗಿ ಪರಿಶೀಲನೆ ಮಾಡಿಕೊಳ್ಳಿ.

 ಸಾಲ ಮರುಪಾವತಿ ಮಾಡಿದ ಬಗ್ಗೆಯೂ ಉಲ್ಲೇಖವಿರಲಿ

ಸಾಲ ಮರುಪಾವತಿ ಮಾಡಿದ ಬಗ್ಗೆಯೂ ಉಲ್ಲೇಖವಿರಲಿ

ನೀವು ಸಾಲ ಮರುಪವಾತಿ ಮಾಡಿರುವ ಬಗ್ಗೆಯೂ ಉಲ್ಲೇಖ ಇರುವುದು ಅತೀ ಮುಖ್ಯ. ಕ್ರೆಡಿಟ್‌ ಸ್ಕೋರ್‌ನಲ್ಲಿ ನಿಮ್ಮ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮರುಪಾವತಿ ಇತಿಹಾಸವನ್ನು ಪಟ್ಟಿ ಮಾಡುತ್ತದೆ. ಹಾಗೆಯೇ ಇದರಲ್ಲಿ ನೀವು ಸಾಲವನ್ನು ಪಾವತಿ ಮಾಡಿದ ದಿನಾಂಕಗಳು ಇರುತ್ತದೆ. ನೀವು ಸಾಲ ಪಾವತಿಯನ್ನು ವಿಳಂಬ ಮಾಡಿದರೂ ಕೂಡಾ ಇದರಲ್ಲಿ ವಿವರ ಸಹ ಇರುತ್ತದೆ. ನೀವು ಸಾಲವನ್ನು ಎಷ್ಟು ಶೀಘ್ರವಾಗಿ ಮರುಪಾವತಿ ಮಾಡಿದ್ದೀರಿ, ಸಾಲ ಮರುಪವಾತಿಯನ್ನು ಎಷ್ಟು ವಿಳಂಬ ಮಾಡಿದ್ದೀರಿ, ಎಂಬುವುದು ಇದರಲ್ಲಿ ಇರುವ ಕಾರಣ ನಿಮಗೆ ಸಾಲ ನೀಡುವವರು ಇದನ್ನು ಪರಿಶೀಲನೆ ಮಾಡುತ್ತಾರೆ. ನಿಮಗೆ ಸಾಲ ನೀಡಿದರೆ ಸುರಕ್ಷಿತವೇ ಎಂಬುವುದನ್ನು ಸಾಲದಾತರು ಈ ಎಲ್ಲಾ ಅಂಶವನ್ನು ನೀಡಿ ಪರಿಶೀಲನೆ ಮಾಡುತ್ತಾರೆ. ಆದ್ದರಿಂದ, ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ನೀವು ಸಾಲವನ್ನು ಮರುಪಾವತಿ ಮಾಡಿದ ಬಗ್ಗೆ ನಿಖರವಾಗಿ ಪಟ್ಟಿಮಾಡಲಾಗಿದೆಯೇ ಅಥವಾ ನವೀಕರಿಸಲಾಗಿದೆಯೇ ಎಂದು ನೀವು ಪರಿಶೀಲಿಸಬೇಕು.

 ವೈಯಕ್ತಿಕ ವಿವರಗಳು ಸರಿಯಾಗಿ ಇರಲಿ

ವೈಯಕ್ತಿಕ ವಿವರಗಳು ಸರಿಯಾಗಿ ಇರಲಿ

ನಿಮ್ಮ ವೈಯಕ್ತಿಕ ವಿವರಗಳ ವಿಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ನಿಮ್ಮ ಹೆಸರು, ಪ್ಯಾನ್, ಮೊಬೈಲ್ ಸಂಖ್ಯೆ, ವಿಳಾಸ ಇತ್ಯಾದಿಗಳು ಸರಿಯಾಗಿ ನಮೂದಿಸಿ. ನಿಮ್ಮ ಕ್ರೆಡಿಟ್ ಅಪ್ಲಿಕೇಶನ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಆಗಿರಲಿ, ಯಾವುದೇ ರೀತಿಯ ಸಾಲವನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ನಿಮ್ಮ ಸಾಲದಾತರು ನಿಮ್ಮ ಮಾಹಿತಿಯಲ್ಲಿನ ಯಾವುದೇ ವ್ಯತ್ಯಾಸಗಳು ಕಂಡು ಬಂದರೆ ಸಾಲ ನೀಡಲು ನಿರಾಕರಿಸಬಹುದು. ಅಥವಾ ಅಪ್ಲಿಕೇಶನ್‌ ಮೂಲಕ ಸಾಲವನ್ನು ಪಡೆಯಲು ಸಾಧ್ಯವಾಗದೆ ಇರಬಹುದು. ಆದ್ದರಿಂದ ನೀವು ವೈಯಕ್ತಿಕ ವಿವರಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ.

 ಏನಿದು ಕ್ರೆಡಿಟ್‌ ಯುಟಿಲೈಸೇಷನ್‌ ರೇಷಿಯೋ?

ಏನಿದು ಕ್ರೆಡಿಟ್‌ ಯುಟಿಲೈಸೇಷನ್‌ ರೇಷಿಯೋ?

ಕ್ರೆಡಿಟ್‌ ಯುಟಿಲೈಸೇಷನ್‌ ರೇಷಿಯೋ ಎಂಬುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವಾಗ ಕ್ರೆಡಿಟ್ ಬ್ಯೂರೋಗಳಿಂದ ಅತ್ಯಂತ ನಿರ್ಣಾಯಕ ಅಂಕವಾಗಿದೆ. ಕ್ರೆಡಿಟ್‌ ಯುಟಿಲೈಸೇಷನ್‌ ರೇಷಿಯೋ ಅಥವಾ ಸಿಯುಆರ್‌ ಎಂದರೆ ನೀವು ಬಳಸಿದ ಒಟ್ಟು ಕ್ರೆಡಿಟ್ ಮಿತಿಯ ಅನುಪಾತವಾಗಿದೆ. 30 ರಷ್ಟು ಒಳಗಿನ ಕ್ರೆಡಿಟ್ ಯುಟಿಲೈಸೇಷನ್‌ ರೇಷಿಯೋ ಹೊಂದಿರುವವರಿಗೆ ಬ್ಯಾಂಕುಗಳು ಸಾಲ ನೀಡಲು ಬಯಸುತ್ತವೆ. ಆದ್ದರಿಂದ, ಈ ಅಂಕವನ್ನು ಆಗಾಗ್ಗೆ ಮೀರುವವರು ತಮ್ಮ ಕ್ರೆಡಿಟ್‌ ಮಿತಿಯನ್ನು ಹೆಚ್ಚಿಸಲು ಅಥವಾ ಇನ್ನೊಂದು ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ವಿನಂತಿ ಮಾಡಬೇಕಾಗುತ್ತದೆ.

 ಕ್ರೆಡಿಟ್ ರಿಪೋರ್ಟ್ ವಿಚಾರಣೆಗಳು

ಕ್ರೆಡಿಟ್ ರಿಪೋರ್ಟ್ ವಿಚಾರಣೆಗಳು

ಕ್ರೆಡಿಟ್ ರಿಪೋರ್ಟ್ ವಿಚಾರಣೆ ವಿಭಾಗವು ನಿಮ್ಮ ಸಾಲದ ವಿವರವನ್ನು ಪಟ್ಟಿ ಮಾಡುತ್ತದೆ. ಹಾಗೆಯೇ ಈ ವಿಭಾಗದಲ್ಲಿ ಸಾಲ ನೀಡುವವರ ಹೆಸರು, ಅರ್ಜಿಯ ದಿನಾಂಕ, ಅರ್ಜಿ ಸಲ್ಲಿಸಿದ ಕ್ರೆಡಿಟ್ ಸೌಲಭ್ಯ ಇತ್ಯಾದಿಗಳ ಪಟ್ಟಿ ಇರುತ್ತದೆ. ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ ಪ್ರತಿ ಬಾರಿಯೂ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಬ್ಯೂರೋಗಳಿಂದ ಸಾಲದಾತರು ಪರಿಶೀಲಿಸುತ್ತಾರೆ. ಈ ವಿಚಾರಣೆಯನ್ನು 'ಕಠಿಣ ವಿಚಾರಣೆ' ಎಂದು ಕರೆಯಲಾಗುತ್ತದೆ. ಪ್ರತಿಯೊಂದನ್ನು ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮೆ ಕ್ರೆಡಿಟ್‌ ಸ್ಕೋರ್‌ ಕೆಲವು ಪಾಯಿಂಟ್‌ಗಳಷ್ಟು ಕಡಿಮೆ ಆಗಬಹುದು. ಆದ್ದ ಕಾರಣದಿಂದಾಗಿ ಅಲ್ಪಾವಧಿಯೊಳಗೆ ಸಾಲಗಾರರು ಅಥವಾ ಕ್ರೆಡಿಟ್ ಕಾರ್ಡ್ ನೀಡುವವರಿಗೆ ಎರಡೆರಡು ಅರ್ಜಿ ಸಲ್ಲಿಸುವುದು ನಿಮ್ಮೆ ಕ್ರೆಡಿಟ್ ಸ್ಕೋರ್‌ನಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಅದನ್ನು ತಪ್ಪಿಸಲು ನೀವು ಆನ್‌ಲೈನ್ ಸಾಲಗಳಿಗೆ ಅರ್ಜಿ ಸಲ್ಲಿಸುವುದ ಉತ್ತಮ.

 ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಏನು ಮಾಡುವುದು?

ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಏನು ಮಾಡುವುದು?

ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಕೂಡಲೇ ಕ್ರೆಡಿಟ್ ರಿಪೋರ್ಟ್‌ನಲ್ಲಿ ಮಾಹಿತಿಯನ್ನು ಸರಿಪಡಿಸಲು ಕ್ರೆಡಿಟ್ ಬ್ಯೂರೋ ಅಥವಾ ಸಾಲದಾತರಿಗೆ ಸರಿಪಡಿಸಲು ವರದಿ ಮಾಡಿ. ಹಾಗೆಯೇ ಕನಿಷ್ಠ ಮೂರು ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ರಿಪೋರ್ಟ್‌ ಅನ್ನು ಪರಿಶೀಲನೆ ಮಾಡುವ ಅಭ್ಯಾಸವನ್ನು ನೀವು ಮಾಡಿಕೊಳ್ಳಬೇಕು. ನೀವು ಪ್ರತಿ ನಾಲ್ಕು ಕ್ರೆಡಿಟ್ ಬ್ಯೂರೋಗಳಿಂದ ಪ್ರತಿ ವರ್ಷ ಒಂದು ಉಚಿತ ಕ್ರೆಡಿಟ್ ರಿಪೋರ್ಟ್‌ ಅನ್ನು ಪಡೆಯಬಹುದು. ಬದಲಾಗಿ ನೀವು ಆನ್‌ಲೈನ್ ಹಣಕಾಸು ಮಾರುಕಟ್ಟೆಗಳ ಮೂಲಕ ಉಚಿತ ಕ್ರೆಡಿಟ್‌ ರಿಪೋರ್ಟ್ ಅನ್ನು ಪಡೆಯಬಹುದು.

English summary

Key factors to note while reviewing your credit report, Explained in Kannada

Key factors to note while reviewing your credit report, Explained in Kannada. Read on.
Story first published: Wednesday, September 15, 2021, 20:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X