For Quick Alerts
ALLOW NOTIFICATIONS  
For Daily Alerts

ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್: SBI ಬ್ಯಾಂಕ್‌ನಲ್ಲಿ ಅಪ್ಲೈ ಮಾಡುವುದು ಹೇಗೆ?

|

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಅಡಿಯಲ್ಲಿ ಭಾರತ ಸರ್ಕಾರವು ಎಲ್ಲಾ ಸಣ್ಣ ಮತ್ತು ಅಲ್ಪ ರೈತರಿಗೆ ಮೂಲ ಆದಾಯದ ಸಹಾಯಕ್ಕಾಗಿ ವರ್ಷಕ್ಕೆ 6,000 ರೂ. ನೀಡುತ್ತದೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಒಂಬತ್ತನೇ ಕಂತನ್ನು ರೈತರಿಗೆ ಕಳುಹಿಸಲಾಗಿದೆ. ಈ ಕುರಿತು ಬಹುತೇಕರು ತಿಳಿದಿರುವುದು ಸಾಮಾನ್ಯ. ಆದ್ರೆ ಇದೇ ರೀತಿ ಮತ್ತೊಂದು ಪ್ರಯೋಜನವೇ ಕಿಸಾನ್ ಕ್ರೆಡಿಟ್ ಕಾರ್ಡ್‌ (ಕೆಸಿಸಿ) ಆಗಿದೆ.

ಕೇಂದ್ರ ಸರ್ಕಾರವು 1998 ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನು ಆರಂಭಿಸಿತು. ಇದು ರೈತರಿಗೆ ಅಲ್ಪಾವಧಿ ಔಪಚಾರಿಕ ಸಾಲವನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಯೋಜನೆಯನ್ನು ಮೊದಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಚಿಸಿದೆ.

3 ಲಕ್ಷ ರೂಪಾಯಿವರೆಗೆ ಸಾಲ

3 ಲಕ್ಷ ರೂಪಾಯಿವರೆಗೆ ಸಾಲ

ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 28 ರಂದು ಟ್ವೀಟ್ ಮಾಡಿದ ಮಾಹಿತಿ ಪ್ರಕಾರ ಇದುವರೆಗೆ 2 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ. ಅವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಯೋಜನೆಗೆ ಲಿಂಕ್ ಮಾಡಿದ ನಂತರ, ರೈತರು ಈಗ 4% ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ನಿಮ್ಮ ಆಧಾರ್‌ಕಾರ್ಡ್ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?ನಿಮ್ಮ ಆಧಾರ್‌ಕಾರ್ಡ್ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?

2 ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್

2 ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್

'' ಕೋವಿಡ್-19 ಸಾಂಕ್ರಾಮಿಕದಲ್ಲಿ ಎರಡು ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ಹೆಚ್ಚಿನವುಗಳು ಸಣ್ಣ ರೈತರಿಗೆ ಸಿಕ್ಕಿದ್ದು, ಕೃಷಿ ಮೂಲಸೌಕರ್ಯ ಮತ್ತು ಸಂಪರ್ಕ ಮೂಲ ಸೌಕರ್ಯಗಳಿಂದ ಲಾಭವಾಗುತ್ತದೆ'' ಎಸ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಿಸಾನ್ ಕ್ರೆಡಿಟ್‌ ಕಾರ್ಡ್ ಅಪ್ಲೈ ಮಾಡುವುದು ಹೇಗೆ?

ಕಿಸಾನ್ ಕ್ರೆಡಿಟ್‌ ಕಾರ್ಡ್ ಅಪ್ಲೈ ಮಾಡುವುದು ಹೇಗೆ?

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ರೈತರಿಗೆ ಬ್ಯಾಂಕುಗಳ ಮೂಲಕ ಹೆಚ್ಚಿನ ಬಡ್ಡಿ ನೀಡಿ ಸಾಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕೆಸಿಸಿಗೆ ಬಡ್ಡಿದರವು 2%ರಿಂದ ಆರಂಭವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಸುಲಭ. ಹೇಗೆ ಎಂದು ಈ ಕೆಳಗೆ ತಿಳಿಯಿರಿ

* ಎಸ್‌ಬಿಐ ಯೋನೋ ಆ್ಯಪ್‌ ಡೌನ್‌ಲೋಡ್ ಮಾಡಿ
* https://www.sbiyono.sbi/index.html ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ
* ಯೋನೋ ಕೃಷಿ ಗೆ ಹೋಗಿ
* 'ಖಾತೆ' ಸೆಲೆಕ್ಟ್ ಮಾಡಿ
* ಕೆಸಿಸಿ ರಿವೀವ್ ಸೆಕ್ಷನ್‌ಗೆ ಹೋಗಿ
* ಅಪ್ಲೈ ಮೇಲೆ ಕ್ಲಿಕ್ ಮಾಡಿ ಮತ್ತು ಬಾಕಿ ಇರುವ ಪ್ರಕ್ರಿಯೆ ಪೂರ್ಣಗೊಳಿಸಿ

 

English summary

Kisan Credit Cards : How To Apply KCC Through SBI

Here the details of how to apply PM Kisan Credit cards. Explained In Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X